HOME » NEWS » State » IPHONE MANUFACTURERER IS HIRING 10000 STAFF AT ITS KOLAR FACILITY AND SOON START PRODUCTION SNVS

IPhone Manufacturing Jobs - ಕೋಲಾರದಲ್ಲಿ ಐಫೋನ್ ತಯಾರಿಕೆ: 10,000 ಮಂದಿಗೆ ಉದ್ಯೋಗಾವಕಾಶ

ಕೋಲಾರದ ನರಸಾಪುರದಲ್ಲಿ ನೂತನವಾಗಿ ಸ್ಥಾಪಿಸಲಾಗಿರುವ ಘಟಕದಲ್ಲಿ ವಿಸ್ಟ್ರಾನ್ ಸಂಸ್ಥೆ ಐಫೋನ್ ಬಿಡಿಭಾಗಗಳ ತಯಾರಿಕೆಯ ಕಾರ್ಯ ಪ್ರಾರಂಭಿಸಲಿದೆ. 10 ಸಾವಿರ ಸಿಬ್ಬಂದಿಯ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ.

news18
Updated:August 18, 2020, 2:47 PM IST
IPhone Manufacturing Jobs - ಕೋಲಾರದಲ್ಲಿ ಐಫೋನ್ ತಯಾರಿಕೆ: 10,000 ಮಂದಿಗೆ ಉದ್ಯೋಗಾವಕಾಶ
ಐಫೋನ್
  • News18
  • Last Updated: August 18, 2020, 2:47 PM IST
  • Share this:
ಕೋಲಾರ: ತೈವಾನ್ ಮೂಲದ ವಿಸ್ಟ್ರಾನ್ ಇನ್​ಫೋಕಾಮ್ ಸಂಸ್ಥೆ ಕೋಲಾರದ ನರಸಾಪುರದಲ್ಲಿ ಹೊಸ ಘಟಕ ಸ್ಥಾಪಿಸಿದೆ. ಕೆಐಎಡಿಬಿ ಸಂಸ್ಥೆ ಇದಕ್ಕಾಗಿ 43 ಎಕರೆ ಜಾಗವನ್ನು ಸಂಸ್ಥೆಗೆ ನೀಡಿದೆ. ಇಲ್ಲಿ ಐಫೋನ್ ಮತ್ತಿತರ ಆ್ಯಪಲ್ ಸಾಧನಗಳ ತಯಾರಿಕೆ ನಡೆಯಲಿದೆ. ವಿಸ್ಟ್ರಾನ್ (Wistron Infocomm) ಸಂಸ್ಥೆಗೆ 10 ಸಾವಿರ ಮಂದಿ ನೌಕರರ ಅಗತ್ಯ ಇದೆ. ಕೆಲ ವರದಿಗಳ ಪ್ರಕಾರ ಈಗಾಗಲೇ 2,000 ಮಂದಿಯನ್ನು ನೇಮಕ ಮಾಡಲಾಗಿದೆ. ಕನ್ನಡಿಗರಿಗೆ ಶೇ. 70ರಷ್ಟು ಉದ್ಯೋಗ ನೀಡುವ ನಿಯಮ ಇರುವುದರಿಂದ 7,000 ಕನ್ನಡಿಗರಿಗೆ ಉದ್ಯೋಗಾವಕಾಶ ಇದೆ.

ತೈವಾನ್​ನ ವಿಸ್ಟ್ರಾನ್ ಇನ್​ಫೋಕಾಮ್ ಸಂಸ್ಥೆ ಆ್ಯಪಲ್ ಸಾಧನಗಳನ್ನು ತಯಾರಿಸಲು ಗುತ್ತಿಗೆ ಪಡೆದಿದೆ. ಬೆಂಗಳೂರಿನ ಪೀಣ್ಯದಲ್ಲಿ ಈಗಾಗಲೇ ಇದರ ಒಂದು ಘಟಕ ಇದ್ದು, ಅಲ್ಲಿ ಬಿಡಿಭಾಗಗಳನ್ನ ತರಿಸಿ ಅಸೆಂಬಲ್ ಕೆಲಸವನ್ನಷ್ಟೇ ಮಾಡಲಾಗುತ್ತಿದೆ. ಈಗ ನರಸಾಪುರದಲ್ಲಿ ಸ್ಥಾಪನೆಯಾಗಿರುವ ಘಟಕದಲ್ಲಿ ಐಫೋನ್ ಮ್ಯಾನುಫ್ಯಾಕ್ಚರಿಂಗ್ ನಡೆಯುತ್ತದೆ.

ನರಸಾಪುರದಲ್ಲಿ ವಿಸ್ಟ್ರಾನ್ ಸಂಸ್ಥೆಗೆ 2018ರಲ್ಲೇ 43 ಎಕರೆ ಜಾಗವನ್ನು ನೀಡಲಾಗಿತ್ತು. ಈಗಾಗಲೇ ಕಟ್ಟಡ ನಿರ್ಮಾಣ ಕಾರ್ಯ ಬಹುತೇಕ ಮುಕ್ತಾಯವಾಗಿದೆ. ನೇಮಕಾತಿ ಪ್ರಕ್ರಿಯೆ ಕೂಡ ನಡೆಯುತ್ತಿದೆ. ಶೀಘ್ರದಲ್ಲೇ ಇಲ್ಲಿ ತಯಾರಿಕೆ ಕಾರ್ಯ ಪ್ರಾರಂಭವಾಗಲಿದೆ ಎಂದು ಅಧಿಕಾರಿಗಳು ಹೇಳಿದ್ಧಾರೆಂದು ದಿ ನ್ಯೂ ಇಂಡಿಯನ್ ಎಕ್ಸ್​ಪ್ರೆಸ್ ಪತ್ರಿಕೆಯಲ್ಲಿ ವರದಿಯಾಗಿದೆ. ಐಟಿಐ ಮತ್ತು ಡಿಪ್ಲೊಮೊ ತಾಂತ್ರಿಕ ಶಿಕ್ಷಣ ಪಡೆದವರನ್ನ ಹೆಚ್ಚಾಗಿ ನೇಮಿಸಿಕೊಳ್ಳಲಾಗುತ್ತಿದೆ.

ಇದನ್ನೂ ಓದಿ: Realme C15, C12 Launch: 4 ಕ್ಯಾಮೆರಾ 6000mAh ಬ್ಯಾಟರಿ; ಮಾರುಕಟ್ಟೆಗೆ ಧಾವಿಸಿದ ಬಜೆಟ್ ಬೆಲೆಯ Realme C15, C12 ಸ್ಮಾರ್ಟ್​ಫೋನ್​

ಮಾಧ್ಯಮಗಳಿಗೆ ಸಿಕ್ಕ ಮಾಹಿತಿ ಪ್ರಕಾರ, ಕೋಲಾರದ ಈ ಘಟಕದಲ್ಲಿ ಪಿಸಿಬಿ ಅಸೆಂಬ್ಲಿ ಇರಲಿದೆ. ಐಫೋನ್​ನ ಪ್ರಮುಖ ಬಿಡಿಭಾಗಗಳೆಲ್ಲಾ ಇಲ್ಲಿಯೇ ತಯಾರಿಕೆ ಆಗಲಿವೆ. ಪ್ರೋಸೆಸರ್, ಸ್ಟೋರೇಜ್, ಮೆಮೋರಿ ಇತ್ಯಾದಿ ಚಿಪ್​​ಗಳು ಇಲ್ಲಿ ಮ್ಯಾನುಫ್ಯಾಕ್ಚರ್ ಆಗಲಿವೆ. ಇಲ್ಲಿಯೇ ತಯಾರಿಕೆ ಆಗುವುದರಿಂದ ತೆರಿಗೆ ರಿಯಾಯಿತಿಯೂ ಸಿಗಲಿದೆ. ಇದರಿಂದ ಕಡಿಮೆ ಬೆಲೆಗೆ ಐಫೋನ್ ತಯಾರಿಕೆ ಆಗಲಿದೆ.

Youtube Video


ಕಡಿಮೆ ಬೆಲೆಗಳ ಚೀನೀ ಸ್ಮಾರ್ಟ್​ಫೋನ್​ಗಳ ಹಿಡಿತದಲ್ಲಿರುವ ಭಾರತದ ಮೊಬೈಲ್ ಮಾರುಕಟ್ಟೆಗೆ ಆ್ಯಪಲ್​ನ ಐಫೋನ್​ಗಳು ಬೆಲೆ ಸಮರದಲ್ಲಿ ಗೆಲ್ಲುವುದು ಕಷ್ಟವೇ. ಈಗ ಕಡಿಮೆ ಬೆಲೆಗೆ ಸ್ಥಳೀಯವಾಗಿಯೇ ಉತ್ಪಾದನೆ ಮಾಡುವುದರಿಂದ ಐಫೋನ್​ಗಳು ಅರ್ಧಕರ್ಧದಷ್ಟು ಅಗ್ಗಗೊಳ್ಳುವ ನಿರೀಕ್ಷೆ ಇದೆ. ದಿನೇ ದಿನೇ ವೃದ್ಧಿಯಾಗುತ್ತಿರುವ ಭಾರತೀಯ ಸ್ಮಾರ್ಟ್​ಫೋನ್ ಮಾರುಕಟ್ಟೆಯಲ್ಲಿ ಹಿಡಿತ ಸಾಧಿಸಲು ಆ್ಯಪಲ್ ಸಂಸ್ಥೆಗೆ ಒಳ್ಳೆಯ ಅವಕಾಶ ಸಿಕ್ಕಿದೆ.ಇದನ್ನೂ ಓದಿ: ಪೆಟ್ರೋಲ್​ ಬೇಡ ನೀರಿನಿಂದ ಓಡುತ್ತೆ ಈ ಕಾರು;  ಪಿಯುಸಿ ಓದಿದ 44 ವರ್ಷದ ವ್ಯಕ್ತಿಯಿಂದ ಹೊಸ ಅನ್ವೇಷಣೆ

ವಿಸ್ಟ್ರಾನ್ ಅಷ್ಟೇ ಅಲ್ಲ, ಆ್ಯಪಲ್​ನ ಇತರ ಪಾಲುದಾರರಾದ ಫಾಕ್ಸ್​ಕಾನ್ ಮತ್ತು ಪೆಗಾಟ್ರಾನ್ ಸಂಸ್ಥೆಗಳೂ ಭಾರತದಲ್ಲಿ ಉತ್ಪಾದನಾ ಘಟಕಗಳ್ನ ಸ್ಥಾಪಿಸುತ್ತಿವೆ. ಫಾಕ್ಸ್​ಕಾಮ್ ಈಗಾಗಲೇ ಭಾರತದಲ್ಲಿ ಮ್ಯಾನುಫ್ಯಾಕ್ಚರಿಂಗ್ ಪ್ಲಾಂಟ್ ಹೊಂದಿದೆ. ಈಗ ಇನ್ನಷ್ಟು ಘಟಕಗಳನ್ನ ಸ್ಥಾಪಿಸುವ ಉದ್ದೇಶ ಹೊಂದಿದೆ.
Published by: Vijayasarthy SN
First published: August 18, 2020, 2:32 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories