• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Almatti Dam: ಕೊನೆಗೂ ಆಲಮಟ್ಟಿ ಡ್ಯಾಂ ಎತ್ತರಿಸುವ ಕಾಮಗಾರಿ ಶುರು- ಟೆಂಡರ್ ನೀಡಲು ಬಿಡ್ ಆಹ್ವಾನ

Almatti Dam: ಕೊನೆಗೂ ಆಲಮಟ್ಟಿ ಡ್ಯಾಂ ಎತ್ತರಿಸುವ ಕಾಮಗಾರಿ ಶುರು- ಟೆಂಡರ್ ನೀಡಲು ಬಿಡ್ ಆಹ್ವಾನ

ಆಲಮಟ್ಟಿ ಡ್ಯಾಂ

ಆಲಮಟ್ಟಿ ಡ್ಯಾಂ

ಕೆಲವು ದಿನಗಳ ಹಿಂದೆ, ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೃಷ್ಣಾ ನದಿಯ ಆಲಮಟ್ಟಿ ಅಣೆಕಟ್ಟಿಗೆ ಭೇಟಿ ನೀಡಿದ್ದರು ಮತ್ತು ಅಣೆಕಟ್ಟಿನ ಎತ್ತರವನ್ನು 519.6 ಮೀ ನಿಂದ 524 ಮೀಟರ್‌ಗೆ ಹೆಚ್ಚಿಸಲಾಗುವುದು ಎಂದು ಭರವಸೆ ನೀಡಿದ್ದರು.

  • Trending Desk
  • 4-MIN READ
  • Last Updated :
  • Karnataka, India
  • Share this:

ಆಲಮಟ್ಟಿ ಅಣೆಕಟ್ಟನ್ನು(Almatti Reservoir) ಎತ್ತರಿಸುವ ಕಾಮಗಾರಿಯನ್ನು(Work) ಕೈಗೆತ್ತಿಕೊಳ್ಳುವಂತೆ ಹಲವು ವರ್ಷಗಳಿಂದ ಒತ್ತಾಯಗಳು ಕೇಳಿಬರುತ್ತಿದ್ದು, ಪ್ರಸ್ತುತ ಕಾರ್ಯರೂಪಕ್ಕೆ ಬಂದಿದೆ. ಆಲಮಟ್ಟಿ ಅಣೆಕಟ್ಟಿನ ಎತ್ತರವನ್ನು ಹೆಚ್ಚಿಸುವ ಯೋಜನೆಯ ಟೆಂಡರ್‌ ಅನ್ನು ನೀಡಲು ಬಿಡ್(Bid)‌ ಕರೆಯಲಾಗಿದೆ.


ಟೆಂಡರ್‌ ನೀಡಲು ಬಿಡ್‌ ಆಹ್ವಾನ


ಕೃಷ್ಣಾ ಭಾಗ್ಯ ಜಲ ನಿಗಮ ಲಿಮಿಟೆಡ್ (KBJNL), ಇಲ್ಲಿ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಆಲಮಟ್ಟಿ ಜಲಾಶಯಕ್ಕೆ 26 ಹೆಚ್ಚುವರಿ ಗೇಟ್‌ಗಳನ್ನು ತ್ವರಿತವಾಗಿ ಅಳವಡಿಸಲು ಮತ್ತು ಅಲ್ಲಿರುವಂತಹ ಕಬ್ಬಿಣದ ಗೇಟ್‌ಗಳನ್ನು ತೆರುವುಗೊಳಿಸಲು ‌ತಾಂತ್ರಿಕ ಪರಿಣತಿ ಹೊಂದಿರುವ ತಂಡಕ್ಕೆ ಟೆಂಡರ್‌ಗಳನ್ನು ನೀಡಲು ಬಿಡ್‌ ಅನ್ನು ಆಹ್ವಾನಿಸಿದೆ. ಆಲಮಟ್ಟಿ ಅಣೆಕಟ್ಟಿನ ಎತ್ತರವನ್ನು 519.60 ಮೀ.ದಿಂದ 524.256 ಮೀ.ಗೆ ಎತ್ತರಿಸುವ ಕಾಮಗಾರಿ ಇದಾಗಿದೆ.


ವ್ಯರ್ಥವಾಗಿ ಬಿದ್ದಿವೆ 2000ನೇ ಸಾಲಿನಲ್ಲಿ ಹಾಕಿದ್ದ ಗೇಟ್‌ಗಳು


524.256 ಮೀಟರ್ ಎತ್ತರದ ಅಣೆಕಟ್ಟಿಗೆ ಕಬ್ಬಿಣದ ಗೇಟ್‌ಗಳನ್ನು ಖರೀದಿಸಿ 2000ನೇ ಸಾಲಿನಲ್ಲಿ ಸ್ಥಾಪಿಸಲಾಯಿತು. ತರುವಾಯ, ಸುಪ್ರೀಂ ಕೋರ್ಟ್‌ನ ಆದೇಶದಂತೆ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯದ ಎತ್ತರವನ್ನು 519.6 ಮೀಟರ್‌ಗೆ ನಿರ್ಬಂಧಿಸಲಾಯಿತು.


ಸುಪ್ರಿಂ ಆದೇಶದ ನಂತರ ಆದಾಗ್ಲೇ ಜಲಾಶಯಕ್ಕೆ ಅಳವಡಿಸಿದ್ದ ಗೇಟ್‌ಗಳನ್ನು 2001ರಲ್ಲಿ ಕಿತ್ತು ಹಾಕಬೇಕಾಯಿತು. ಅಂದಿನಿಂದ ಜಲಾಶಯದ ಸಮೀಪದಲ್ಲೇ ರಾಶಿ ರಾಶಿ ಕಬ್ಬಿಣದ ಗೇಟ್‌ಗಳು ಖಾಲಿ ಬಿದ್ದಿವೆ.


ಇದನ್ನೂ ಓದಿ: Bengaluru: ರಾಜ್ಯಾದ್ಯಂತ ಸ್ತಬ್ಧವಾಗುತ್ತಾ ಸಾರಿಗೆ ಸಂಚಾರ? ಮುಷ್ಕರಕ್ಕೆ ಸಜ್ಜಾದ ನೌಕರರು!


ಈ ಎಲ್ಲಾ ಬೆಳವಣಿಗೆಯ ನಂತರ ಕೃಷ್ಣಾ ಜಲ ವಿವಾದ ನ್ಯಾಯಮಂಡಳಿ-2ರ ತೀರ್ಪು ಜಲಾಶಯದ ಎತ್ತರವನ್ನು 524.256 ಮೀಟರ್‌ಗೆ ಹೆಚ್ಚಿಸಲು ಕರ್ನಾಟಕಕ್ಕೆ ಅನುಮತಿ ನೀಡಿತು.


ಈಗ ರಾಜ್ಯಕ್ಕೆ ಜಲಾಶಯದ ಎತ್ತರವನ್ನು ಹೆಚ್ಚಿಸಲು ಯಾವುದೇ ಅಡೆತಡೆಗಳಿಲ್ಲವಾದುದ್ದರಿಂದ ಕಬ್ಬಿಣ ಗೇಟ್‌ಗಳನ್ನು ಅಲ್ಲಿಂದ ತೆರುವುಗೊಳಿಸಲು ಮತ್ತು ಗೇಟ್‌ ನಿರ್ಮಿಸಲು ಬಿಡ್‌ ಕರೆಯಲಾಗಿದೆ.


ಗೇಟ್ ತಂತ್ರಜ್ಞಾನದ ತಜ್ಞ ಡಾ.ಕನ್ನಯ್ಯ ನಾಯ್ಡು ವರದಿ


2014 ರಲ್ಲಿ, ಜಲಾಶಯದ ಗೇಟ್ ತಂತ್ರಜ್ಞಾನದ ತಜ್ಞ ಡಾ.ಕನ್ನಯ್ಯ ನಾಯ್ಡು ನೇತೃತ್ವದ ತಂಡವು ಈ ಗೇಟ್‌ಗಳನ್ನು ಹೇಗೆ ಮತ್ತು ಯಾವ ಸಮಯದ ಚೌಕಟ್ಟಿನಲ್ಲಿ ಅಳವಡಿಸಬಹುದು ಎಂಬುದರ ಕುರಿತು ವಿವರವಾದ ಅಧ್ಯಯನವನ್ನು ನಡೆಸಿತ್ತು.


ಇದಾದ ನಂತರ 269 ​​ದಿನಗಳಲ್ಲಿ ಕೆಲಸ ಕೈಗೆತ್ತಿಕೊಳ್ಳಬಹುದು ಎಂದು ತೀರ್ಮಾನಿಸಿತ್ತು. ಆದರೆ KBJNL ತಂತ್ರಜ್ಞಾನವು ಇದನ್ನು ಇನ್ನೂ ಕಡಿಮೆ ಅವಧಿಯಲ್ಲಿ ಪೂರ್ಣಗೊಳಿಸಬಹುದು ಎಂದು ಮತ್ತೊಂದು ವರದಿ ನೀಡಿತು.


ನಾಯ್ಡು ಅವರ ತಂಡದ ವರದಿಯನ್ನು ತಜ್ಞರು ಪರಿಶೀಲಿಸಲಿದ್ದಾರೆ. ಟೆಂಡರ್‌ನಲ್ಲಿ ಆಯ್ಕೆಯಾದ ಬಿಡ್‌ದಾರರು ಜಲಾಶಯದ ಎತ್ತರವನ್ನು ಹೆಚ್ಚಿಸಲು ಡೆಕ್‌ಗಳನ್ನು ತೆರವುಗೊಳಿಸಿದ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕಾಮಗಾರಿಗಳ ಪ್ರಸ್ತಾವನೆಯನ್ನು ಸಹ ಸಿದ್ಧಪಡಿಸುತ್ತಾರೆ ಎಂದು ಕೆಬಿಜೆಎನ್‌ಎಲ್ ಮುಖ್ಯ ಎಂಜಿನಿಯರ್ ಎಚ್.ಸುರೇಶ್ ಹೇಳಿದ್ದಾರೆ.


ಮಹಾರಾಷ್ಟ್ರದ ಅಣೆಕಟ್ಟುಗಳ ಗೇಟು ತೆರೆದಾಗಲೆಲ್ಲ, ನೀರು ಹರಿದು ಕಲ್ಯಾಣ ಕರ್ನಾಟಕದ ಭಾಗದಲ್ಲಿ ಪ್ರವಾಹ ಸೃಷ್ಟಿ ಆಗುತ್ತಿದ್ದು, ಜನರು ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಈ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಡ್ಯಾಂನ ಎತ್ತರ ಹೆಚ್ಚಿಸಲು ಒತ್ತಾಯ ಕೇಳಿ ಬಂದಿತ್ತು.


ಮಹಾರಾಷ್ಟ್ರ ಸರ್ಕಾರದಿಂದ ವಿರೋಧ


ಈಗಾಗ್ಲೇ ಗಡಿ ಸಮಸ್ಯೆ ಜೊತೆ ಗುದ್ದಾಡುತ್ತಿರುವ ಕರ್ನಾಟಕ ಮತ್ತು ಮಹಾರಾಷ್ಟ್ರದ ಮಧ್ಯೆ ಮತ್ತೊಂದು ಬಿರುಕು ಉಂಟಾಗಿದೆ. ಈ ವಿಚಾರವಾಗಿ ಮಧ್ಯಪ್ರವೇಶಿಸಿ ಆಲಮಟ್ಟಿ ಅಣೆಕಟ್ಟಿನ ಎತ್ತರ ಏರಿಸುವುದನ್ನು ತಡೆಯಬೇಕು ಎಂದು ಕೊಲ್ಲಾಪುರ ಮತ್ತು ಸಾಂಗಲಿ ಜಿಲ್ಲೆಗಳ ಹೋರಾಟಗಾರರು ಮಹಾರಾಷ್ಟ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.


ಇದನ್ನೂ ಓದಿ: Elephant Balarama: ದಸರಾ ಆನೆ ಬಲರಾಮನಿಗೆ ಗುಂಡೇಟು ಹೊಡೆದವನ ಬಂಧನ


ಕೆಲವು ದಿನಗಳ ಹಿಂದೆ, ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೃಷ್ಣಾ ನದಿಯ ಆಲಮಟ್ಟಿ ಅಣೆಕಟ್ಟಿಗೆ ಭೇಟಿ ನೀಡಿದ್ದರು ಮತ್ತು ಅಣೆಕಟ್ಟಿನ ಎತ್ತರವನ್ನು 519.6 ಮೀ ನಿಂದ 524 ಮೀಟರ್‌ಗೆ ಹೆಚ್ಚಿಸಲಾಗುವುದು ಎಂದು ಭರವಸೆ ನೀಡಿದ್ದರು.


ಇನ್ನೂ ಕೆಲವರು ಜಲಾಶಯದ ಎತ್ತರದ ವಿಚಾರ ಚುನಾವಣಾ ವಿಷಯವಾಗಿ ಮಾರ್ಪಟ್ಟಿದೆ ಎಂದಿದ್ದಾರೆ. ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವುದರಿಂದ ಉತ್ತರ ಕರ್ನಾಟಕದ ರೈತರ ವೋಟ್‌ ಪಡೆಯಲು ಸರ್ಕಾರ ಈಗ ಈ ಕ್ರಮಕ್ಕೆ ಮುಂದಾಗಿದೆ ಎಂಬ ಟೀಕೆಗಳು ಸಹ ವ್ಯಕ್ತವಾಗಿವೆ.

Published by:Latha CG
First published: