• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Murugha Shri: ಮುರುಘಾ ಶ್ರೀಗಳಿಗೆ ಪುರುಷತ್ವ ಪರೀಕ್ಷೆ; ಶರಣರ ಮುಂದೆ ತನಿಖಾಧಿಕಾರಿಗಳಿಂದ ಪ್ರಶ್ನೆಗಳ ಸುರಿಮಳೆ

Murugha Shri: ಮುರುಘಾ ಶ್ರೀಗಳಿಗೆ ಪುರುಷತ್ವ ಪರೀಕ್ಷೆ; ಶರಣರ ಮುಂದೆ ತನಿಖಾಧಿಕಾರಿಗಳಿಂದ ಪ್ರಶ್ನೆಗಳ ಸುರಿಮಳೆ

ಶಿವಮೂರ್ತಿ ಮುರುಘಾ ಶರಣರು

ಶಿವಮೂರ್ತಿ ಮುರುಘಾ ಶರಣರು

ಸಂತ್ರಸ್ತ ಬಾಲಕಿಯರು ಸಿಆರ್​ಪಿಸಿ ಸೆಕ್ಷನ್ 164 ಹೇಳಿಕೆ ಅಡಿ ಸ್ವಾಮೀಜಿಗೆ ಪ್ರಶ್ನೆ ಮಾಡಿದ್ದಾರೆ. ಸುಮಾರು 100ಕ್ಕೂ ಹೆಚ್ಚು ಪ್ರಶ್ನೆಗಳನ್ನು ಶರಣರ ಮುಂದೆ ಇರಿಸಲಾಗಿದೆ ಎನ್ನಲಾಗಿದೆ.

  • Share this:

ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ (District Hospital, Chitradurha) ಮುರುಘಾ ಮಠದ (Murugha Mutt) ಶಿವಮೂರ್ತಿ ಶರಣರ (Shivamurthy Swamiji) ಪುರುಷತ್ವ ಪರೀಕ್ಷೆ ನಡೆದಿರುವ ಮಾಹಿತಿ ನ್ಯೂಸ್ 18 ಕನ್ನಡಕ್ಕೆ ಲಭ್ಯವಾಗಿದೆ. ಡಾ.ವೇಣು ಅವರ ನೇತೃತ್ವದಲ್ಲಿ ಶ್ರೀಗಳ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಆದರೆ ಇನ್ನೂ ಪುರುಷತ್ವ ಪರೀಕ್ಷೆಯ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿಲ್ಲ. ಮತ್ತೊಂದು ಕಡೆ ಶರಣದ ರಕ್ತ, ಕೂದಲು ಮತ್ತು ಉಗುರಿನ ಮಾದರಿಯನ್ನು ಸಂಗ್ರಹಿಸ ಎಫ್​ಎಸ್​​ಎಲ್​ಗೆ (FSL) ಕಳುಹಿಸಲಾಗಿದೆ. ಇಂದು ಸ್ಥಳ ಮಹಜರು ನಡೆಸಲು ಮುರುಘಾ ಶರಣರನ್ನು ಮಠಕ್ಕೆ ಕರೆದುಕೊಂಡು ಹೋಗುವ ಸಾಧ್ಯತೆಗಳಿವೆ. ಈ ಹಿನ್ನೆಲೆ ಮಠದ ಸುತ್ತಮುತ್ತ ಬ್ಯಾರಿಕೇಡ್ ಹಾಕಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.


ಇತ್ತ ಬೆಳಗ್ಗೆಯಿಂದಲೇ ಡಿವೈಎಸ್​ಪಿ ಕಚೇರಿಯಲ್ಲಿ ಮುರುಘಾ ಶರಣರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಪ್ರಕರಣದ ತನಿಖಾಧಿಕಾರಿ ಆಗಿರುವ ಡಿವೈಎಸ್​ಪಿ ಅನಿಲ್ ಕುಮಾರ್ ಪ್ರಶ್ನೆಗಳ ಪಟ್ಟಿಯನ್ನೇ ಇರಿಸಿದ್ದಾರೆ. ವಿಚಾರಣೆಯ ಕೆಲ ಮಾಹಿತಿ ನ್ಯೂಸ್ 18ಗೆ ಲಭ್ಯವಾಗಿದೆ.


ಸಂತ್ರಸ್ತ ಬಾಲಕಿಯರು ಸಿಆರ್​ಪಿಸಿ ಸೆಕ್ಷನ್ 164 ಹೇಳಿಕೆ ಅಡಿ ಸ್ವಾಮೀಜಿಗೆ ಪ್ರಶ್ನೆ ಮಾಡಿದ್ದಾರೆ. ಸುಮಾರು 100ಕ್ಕೂ ಹೆಚ್ಚು ಪ್ರಶ್ನೆಗಳನ್ನು ಶರಣರ ಮುಂದೆ ಇರಿಸಲಾಗಿದೆ ಎನ್ನಲಾಗಿದೆ.


ಇದನ್ನೂ ಓದಿ:  Murugha Shri Case: ಮುರುಘಾ ಶರಣರ ಕೇಸ್ ತನಿಖೆಯಲ್ಲಿ ಸಾಲು ಸಾಲು ವೈಫಲ್ಯಗಳು!


ತನಿಖಾಧಿಕಾರಿ: ಆರೋಗ್ಯವಾಗಿದ್ದೀರಾ? ವಿಚಾರಣೆ ನಡೆಸಬಹುದೇ?


ಸ್ವಾಮೀಜಿ : ಪರವಾಗಿಲ್ಲ , ನಡೆಸಿ


ತನಿಖಾಧಿಕಾರಿ:  ನಿಮ್ಮ ವಿರುದ್ಧ ದಾಖಲಾಗಿರೊ ಪೋಕ್ಸೊ ಕೇಸ್ ಬಗ್ಗೆ ಏನು ಹೇಳ್ತೀರಿ?


ಸ್ವಾಮೀಜಿ : ಇದೊಂದು ವ್ಯವಸ್ಥಿತ ಷಡ್ಯಂತ್ರ, ನಾನು ಯಾವುದೇ ದೌರ್ಜನ್ಯ ನಡೆಸಿಲ್ಲ.


ತನಿಖಾಧಿಕಾರಿ: ಮಠದ ಹಾಸ್ಟೆಲ್ ವಿದ್ಯಾರ್ಥಿಗಳೇ ತಮ್ಮ ಮೇಲೆ ದೂರು ನೀಡಿದ್ದಾರೆ, ಸುಮ್ಮನೆ ಯಾರಾದ್ರು ದೂರು ನೀಡ್ತಾರಾ?


ಸ್ವಾಮೀಜಿ :  ಆ ಮಕ್ಕಳಿಂದ ಸುಳ್ಳು ಹೇಳಿಸಿದ್ದಾರೆ. ಆ ಮಕ್ಕಳ ಹಿಂದೆ ದೊಡ್ಡ ಪಿತೂರಿಯ ವ್ಯವಸ್ಥಿತ ಜಾಲ ಇದೆ.


ತನಿಖಾಧಿಕಾರಿ: ಬಸವಾದಿತ್ಯ, ಪರಮಶಿವಯ್ಯ ಮಠದಲ್ಲಿ ಏನೇನು ಕೆಲಸ ಮಾಡ್ತಿದ್ರು?


ಸ್ವಾಮೀಜಿ : ಅವತ್ತಿಗೆ ವಹಿಸಿದ ಕೆಲಸಗಳನ್ನಷ್ಟೇ ಮಾಡ್ತಿದ್ರು.


ತನಿಖಾಧಿಕಾರಿ: ಅಪ್ರಾಪ್ತ ಹೆಣ್ಣುಮಕ್ಕಳು ನೀವು ವಾಸ ಮಾಡುವ ಮಠದ ಕೊಠಡಿಗೆ ಬರ್ತಿದ್ರಾ?


ಸ್ವಾಮೀಜಿ :  ನಾನು ಯಾವಾಗಲು ಒಬ್ಬನಿರುವುದಿಲ್ಲ. ಮಠದ ಸಿಬ್ಬಂದಿಗಳು ಜೊತೆಯಲ್ಲಿರ್ತಾರೆ.


ತನಿಖಾಧಿಕಾರಿ: ಮಕ್ಕಳನ್ನ ತಮ್ಮ ರೂಮ್ ಗೆ ಬರುವಂತೆ ಹೇಳ್ತಿದ್ರಾ?


ಸ್ವಾಮೀಜಿ : ನಾನು ಯಾರಿಗೂ ಹೇಳಿಲ್ಲ


ತನಿಖಾಧಿಕಾರಿ: ವಾರ್ಡನ್ ರಶ್ಮಿ, ಮಕ್ಕಳನ್ನ ತಮ್ಮ ಸೇವೆಗೆ ನಿಯೋಜಿಸ್ತಿದ್ರಂತಲ್ಲಾ?


ಸ್ವಾಮೀಜಿ : ಯಾರನ್ನೂ ಕಳಿಸ್ತಿರಲಿಲ್ಲ.


ತನಿಖಾಧಿಕಾರಿ: ವಾರ್ಡನ್ ರಶ್ಮಿ ತಮ್ಮ ಬಳಿ ಮಕ್ಕಳನ್ನ ಕಳಿಸ್ತಿದ್ದಾಗಿ ಹೇಳಿದ್ದಾರೆ.


ಸ್ವಾಮೀಜಿ :  ಅವರು ಹಾಗೆ ಯಾಕೆ ಹೇಳಿದ್ರೊ ಗೊತ್ತಿಲ್ಲ?


ತನಿಖಾಧಿಕಾರಿ: ಒಂದು ಮಗು ಮೂರುವರೆ ವರ್ಷ, ಇನ್ನೊಂದು ಮಗು ಒಂದೂವರೆ ವರ್ಷದಿಂದ ತಾವು ದೌರ್ಜನ್ಯ ನಡೆಸಿರೋದಾಗಿ ಹೇಳಿದೆ


ಸ್ವಾಮೀಜಿ :  ಇದು ಶುದ್ಧ ಸುಳ್ಳು. ನನಗೂ ಇದಕ್ಕೂ ಸಂಬಂಧವಿಲ್ಲ.. ಇದೊಂದು ವ್ಯವಸ್ಥಿತ ಷಡ್ಯಂತ್ರ, ನನ್ನನ್ನು ಸಿಲುಕಿಸಲು ದೊಡ್ಡ ವ್ಯವಸ್ಥಿತ ಪಡೆಯೇ ಇದೆ.


ತನಿಖಾಧಿಕಾರಿ: ಯಾರವರು?


ಸ್ವಾಮೀಜಿ : ಅದೆಲ್ಲಾ ನಿಮಗೆ ಗೊತ್ತಿದೆ. ನಾನು ಹೇಳೋಕೆ ಬಯಸಲ್ಲ.


ತನಿಖಾಧಿಕಾರಿ: ಎಸ್ ಕೆ ಬಸವರಾಜನ್ ನಿಮಗೂ ಇರುವ ಸಂಬಂಧ ಏನು?


ಸ್ವಾಮೀಜಿ :  ನಾನು ಮಾತೋಡಾಕೆ ಇಷ್ಟ ಪಡಲ್ಲ


ತನಿಖಾಧಿಕಾರಿ: ಟೆಕ್ನಿಕಲ್ ಹಾಗೂ ಬಯಾಲಜಿಕಲ್ ಸಾಕ್ಷಿಗಳಿವೆ ನಮ್ಮ ಬಳಿ


ಸ್ವಾಮೀಜಿ :  ಇದ್ದರೆ ಸಾಬೀತುಪಡಿಸಿ


ತನಿಖಾಧಿಕಾರಿ: ಮಕ್ಕಳಿಗೆ ಕಿರುಕುಳ , ದೌರ್ಜನ್ಯವಾಗ್ತಿದ್ದ ಬಗ್ಗೆ ತಮ್ಮ ಹೇಳಿಕೆಯನ್ನ ನಿರ್ಧಿಷ್ಟವಾಗಿ, ಬದ್ಧವಾಗಿ ಹೇಳಿವೆ


ಸ್ವಾಮೀಜಿ :  ಮಕ್ಕಳ ಬಾಯಲ್ಲಿ ಹೀಗೆ ಹೇಳಿಸಿದ್ದಾರೆ, ಮಠ ಹಾಗೂ ನನ್ನ ಹೆಸರಿಗೆ ಮಸಿ ಬಳಿಯುವ ಹುನ್ನಾರ ಇದು.


ಇದನ್ನೂ ಓದಿ:   Murugha Mutt Case: ಮುರುಘಾ ಸ್ವಾಮೀಜಿ ಬೆಂಗಳೂರು ಪ್ಲಾನ್​ ಕ್ಯಾನ್ಸಲ್, ಮೂರು ದಿನ ಪೊಲೀಸ್​ ಕಸ್ಟಡಿಗೆ


ಹೀಗೆ ನೂರಕ್ಕೂ ಹೆಚ್ಚು ಪಶ್ನೆಗಳನ್ನ ರೆಡಿ ಮಾಡಿಟ್ಟುಕೊಂಡಿರುವ ಪೊಲೀಸರು ಉತ್ತರಗಳನ್ನು ಪಡೆಯುತ್ತಿದ್ದಾರೆ. ಪ್ರತೀ ವಿಚಾರಣೆಯನ್ನ ವಿಡಿಯೋ ರೆಕಾರ್ಡಿಂಗ್ ಮಾಡಿಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ.

Published by:Mahmadrafik K
First published: