ಬಿಡಿಎ ಇಂಟರ್​​ನೆಟ್ ಕಟ್ : ಬಿಲ್ ಕಟ್ಟದಿದ್ದಕ್ಕೆ ನೆಟ್ ಸ್ಥಗಿತ ಮಾಡಿದ ಬಿಎಸ್​ಎನ್​​ಎಲ್..!

ಬಿಡಿಎ ಆರ್ಥಿಕ ಸಂಕಷ್ಟದಿಂದ BSNL ಬಿಲ್ ಕಟ್ಟಿಲ್ಲ. ಹೀಗಾಗಿ ಕಳೆದ ನಾಲ್ಕು ದಿನಗಳಿಂದ ಬಿಡಿಎ ಕಚೇರಿಯಲ್ಲಿ ಇ-ಆಡಳಿತ ವ್ಯವಸ್ಥೆ ಹದಗೆಟ್ಟಿದೆ. 2019-20 ನೇ ಸಾಲಿಗೆ ಮಾರ್ಚ್​ನಲ್ಲೇ ವಾರ್ಷಿಕ ಹಣ ಕಟ್ಟಬೇಕಿದ್ದ ಬಿಡಿಎ ಸೆಪ್ಟೆಂಬರ್ ಆದರೂ ದುಡ್ಡು ಬಾಕಿ ಉಳಿಸಿಕೊಂಡಿದ್ದಕ್ಕೆ ಬಿಎಸ್ಸೆನ್ನೆಲ್ ತನ್ನ ಸೇವೆ ಬಂದ್ ಮಾಡಿದೆ.

G Hareeshkumar | news18-kannada
Updated:September 24, 2019, 9:19 PM IST
ಬಿಡಿಎ ಇಂಟರ್​​ನೆಟ್ ಕಟ್ : ಬಿಲ್ ಕಟ್ಟದಿದ್ದಕ್ಕೆ ನೆಟ್ ಸ್ಥಗಿತ ಮಾಡಿದ ಬಿಎಸ್​ಎನ್​​ಎಲ್..!
ಬಿಡಿಎ
  • Share this:
ಬೆಂಗಳೂರು(ಸೆ.24): ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಈ ವರ್ಷದ ಏಪ್ರಿಲ್ ನಿಂದ ಇ-ಆಡಳಿತ ವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ. ಇ-ಆಡಳಿತ ವ್ಯವಸ್ಥೆ ಕಳೆದ 4 ದಿನದಿಂದ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಯಾಕೆಂದ್ರೆ 2019-20ನೇ ಸಾಲಿನ ಮುಂಗಡ ಬಿಲ್ ಕಟ್ಟಿಲ್ಲ ಎಂದು ಬಿಎಸ್​ಎನ್​ಎಲ್ ಸಂಸ್ಥೆ ಕಳೆದ ನಾಲ್ಕು ದಿನಗಳಿಂದ ಇಂಟರ್ನೆಟ್ ಕಡಿತ ಮಾಡಿದೆ.

ಮಾರ್ಚ್ ನಲ್ಲೇ  ಬೆಂಗಳೂರು ಅಭಿವೃದ್ದಿ ಪ್ರಾಧಿಕಾರವು 13 ಲಕ್ಷ ರೂಪಾಯಿಯಷ್ಟು ಇಂಟರ್​​ನೆಟ್​​ ಬಿಲ್​​​​ನ್ನು ಬಿಎಸ್​ಎನ್​ಎಲ್​ಗೆ ಕಟ್ಟಬೇಕಿತ್ತು. ಸೆಪ್ಟೆಂಬರ್ ಬಂದ್ರು ಶುಲ್ಕ ಕಟ್ಟದ ಕಾರಣ ಬಿಎಸ್​ಎನ್​ಎಲ್ ಇಂಟರ್ ನೆಟ್ ಸೇವೆ ನಿಲ್ಲಿಸಿದೆ. ಇದರಿಂದ ಬಿಡಿಎನಲ್ಲಿ ದೈನಂದಿನ‌ ಕೆಲಸ ಕಾರ್ಯಗಳು ಹಳಿ ತಪ್ಪಿದೆ.

ಈ ಬಗ್ಗೆ ಬಿಡಿಎ ಕಾರ್ಯದರ್ಶಿ ಡಾ. ವಾಸಂತಿ ಅಮರ್ ಅವರನ್ನು ಕೇಳಿದ್ರೆ ಬಿಎಸ್​ಎನ್​ಎಲ್ ಸದ್ಯ 30 MBPS ಸ್ಪೀಡ್ ನಲ್ಲಿ ಇಂಟರ್ ನೆಟ್ ಕೊಡುತ್ತಿದೆ.. ಆದರೆ ACT ಫೈಬರ್ ನೆಟ್ 100 MBPS ಸ್ಪೀಡ್ ನಲ್ಲಿ ವರ್ಷಕ್ಕೆ ಕೇವಲ 2.75 ಲಕ್ಷದಲ್ಲಿ ಸೇವೆ ಕೊಡುತ್ತಿದೆ. ಈ ಸೇವೆ ಪಡೆಯೋಕೆ ಬಿಡಿಎ ಚಿಂತನೆ ನಡೆಸಿದೆ. ಬಿಎಸ್​ಎನ್​ಎಲ್ ಸೇವೆ ಸುರಕ್ಷತೆ ಎಂಬ ಕಾರಣಕ್ಕೆ ಮುಂದುವರಿಸುತ್ತೇವೆ. ಅವರಿಗೂ ಇದೇ ಸ್ಪೀಡ್​ನಲ್ಲಿ ಇಂಟರ್ನೆಟ್ ಸೇವೆ ನೀಡಲು ಕೋರುತ್ತೇವೆ. ಸದ್ಯದಲ್ಲೇ ಬಿಲ್‌ ಕಟ್ಟುತ್ತೇವೆ ಎನ್ನುತ್ತಾರೆ.

BDA No internet
ಸ್ಥಗಿತಗೊಂಡಿರುವ ಬಿಎಸ್​ಎನ್​​ಎಲ್​​​​​​​ ಇಂಟರ್​ನೆಟ್​​


ಬಿಡಿಎ ನಲ್ಲಿ ಪ್ರತಿದಿನ 100 ಸಾರ್ವಜನಿಕರಿಗೆ ಸೇರಿದ ಫೈಲ್​ಗಳು ಸ್ಕ್ಯಾನ್ ಆಗಿ ಅಪಲೋಡ್ ಆಗುತ್ತೆ. ಸದ್ಯ ಬಿಡಿಎ ಕೇಂದ್ರ ಕಚೇರಿ, ವಿಭಾಗೀಯ ಕಚೇರಿಯಲ್ಲಿ 250 ಕ್ಕೂ ಹೆಚ್ಚು ಕಂಪ್ಯೂಟರ್ ಬಳಕೆಯಾಗುತ್ತಿದೆ. ಏಪ್ರಿಲ್ ನಿಂದ ಇ- ಆಡಳಿತ ವ್ಯವಸ್ಥೆ ಬಿಡಿಎನಲ್ಲಿ ಜಾರಿಗೆ ಬಂದಿದ್ದು ಶೇಕಡ 70 ರಿಂದ 80ರಷ್ಟು ಬಿಡಿಎ ಕಚೇರಿಗಳು ಇ- ಆಫೀಸ್ ವ್ಯವಸ್ಥೆಗೆ ಸೇರ್ಪಡೆಯಾಗಿದೆ. ಹೀಗಿರುವಾಗ ಇಂಟರ್ನೆಟ್ ಮೇಲೆ ಹೆಚ್ಚಿನ ಅವಲಂಬನೆ ಇದೆ. ಹೀಗಿದ್ದರೂ ಬಿಡಿಎ ಸರಿಯಾದ ಸಮಯಕ್ಕೆ ಬಿಲ್ ಕಟ್ಟಿಲ್ಲ.

ಇದನ್ನೂ ಓದಿ : ಟಿಕೆಟ್​ ಕೈ ತಪ್ಪಿದಲ್ಲಿ ಮೂಲ ಬಿಜೆಪಿಗರಿಂದ ಬಂಡಾಯ ಸಾಧ್ಯತೆ; ನಾಯಕರ ಮನವೊಲಿಕೆಗೆ ಪಕ್ಷದಿಂದ ತಂಡ ರಚನೆ

ಕಳೆದ 3 ತಿಂಗಳಿಂದ ಬಿಡಿಎ ಗೆ ಸರ್ಕಾರಿ ಒಡೆತನದ ಕೆಸ್ವಾನ್ ಫ್ರೀ ನೆಟ್ ವರ್ಕ್ ಇದೆ. ಆದ್ರೆ ಅಷ್ಟು ಇಂಟರ್ ನೆಟ್ ಸ್ಪೀಡ್ ಇಲ್ಲ. ಗೂಗಲ್ ಕೂಡ ಬಿಡಿಎ ಕೇಂದ್ರ ಕಚೇರಿಗೆ ಉಚಿತ ವೈಫೈ ಸೇವೆ ನೀಡಿದೆ. ಬಿಡಿಎ ಆನ್​ಲೈನ್ ಸೇವೆ, ಇ-ಆಡಳಿತ ವ್ಯವಸ್ಥೆಗೆ ಇವೆರಡು ಸೇವೆ ಸಾಕಾಗಲ್ಲ. ಆರ್ಥಿಕ ಸಂಕಷ್ಠದಿಂದ ಬಳಲುತ್ತಿರುವ ಬಿಡಿಎ ಕಡತ ಭದ್ರತೆ ದೃಷ್ಟಿಯಿಂದ ಖಾಸಗಿಯವರಿಂದ ಹೊಸ ಸೇವೆ ಪಡೆಯುತ್ತಾ? ಅಥವಾ ಬಿಎಸ್ ಎನ್ ಎಲ್ ಮನವೊಲಿಸಿ ಇರುವುದರಲ್ಲಿ ಸೇವೆ ಪಡೆದುಕೊಳ್ಳುತ್ತಾ ಕಾದು ನೋಡಬೇಕು.ವರದಿ: ಶ್ಯಾಮ್​​​ ಎಸ್​​

First published:September 24, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ