ಕೋಲಾರ: ಮಹಿಳಾ ದಿನಾಚರಣೆ (International Women's Day Holiday) ದಿನದಂದೇ ಮಹಿಳೆಯ ವಿರುದ್ಧ ಸಂಸದ ಮುನಿಸ್ವಾಮಿ (MP Muniswamy) ರೇಗಿದ್ದಾರೆ. ಹಣೆಗೆ ಕುಂಕುಮ (Sindoor) ಇಡದ ಮಹಿಳೆ ವಿರುದ್ಧ ಸಂಸದರು ರೇಗಿದ್ದಾರೆ. ಅಂಗಡಿಗೆ ವೈಷ್ಣವಿ ಅಂತ ಹೆಸರಿಟ್ಟಿದ್ದೀಯಾ? ಹಣೆಗೆ ಯಾಕೆ ಬೊಟ್ಟು ಇಟ್ಟಿಲ್ಲ? ಗಂಡ (Husband) ಬದುಕಿದ್ದಾನೆ ತಾನೇ? ಕಾಮನ್ ಸೆನ್ಸ್ ಇಲ್ವಾ ನಿನಗೆ? ಅಂತಾ ಕಿಡಿಕಾರಿದ್ದಾರೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Social Media) ಸಖತ್ ವೈರಲ್ ಆಗಿದ್ದು, ಸಂಸದರ ವರ್ತನೆಯ ಬಗ್ಗೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ವಿಡಿಯೋದಲ್ಲಿ ಏನಿದೆ?
ಇಂದು ಕೋಲಾರ ನಗರದ ಟಿ ಚನ್ನಯ್ಯ ರಂಗಮಂದಿರದಲ್ಲಿ ಮಹಿಳಾ ದಿನಾಚರಣೆ ಆಯೋಜನೆ ಮಾಡಲಾಗಿತ್ತು. ಮಹಿಳಾ ದಿನಾಚರಣೆ ಅಂಗವಾಗಿ ಮಾರಾಟ ಮಳಿಗೆ ನಿರ್ಮಾಣ ಮಾಡಿ ಮಹಿಳೆಯರಿಗಾಗಿಯೇ ಅವಕಾಶ ನೀಡಲಾಗಿತ್ತು. ಈ ವೇಳೆ ಮಳಿಗೆಗಳ ವೀಕ್ಷಣೆ ಬಂದ ಸಂಸದರು ಸ್ಟಾಲ್ ಹಾಕಿದ್ದ ಮಹಿಳೆಯರನ್ನು ಮಾತನಾಡುತ್ತಾ ಬಂದರು. ಈ ವೇಳೆ ಮಹಿಳೆಯೊಬ್ಬರು ವೈಷ್ಣವಿ ಹೆಸರಿನಲ್ಲಿ ಸ್ಟಾಲ್ ಹಾಕಿದ್ದರು. ಈ ವೇಳೆ ಮಹಿಳೆಯನ್ನು ಮಾತನಾಡಿದ ಮುನಿಸ್ವಾಮಿ ಅವರು, ಹಣೆಗೆ ಕುಂಕುಮ ಇಡದ ಮಹಿಳೆ ವಿರುದ್ದ ರೇಗಿದರು.
ಇದನ್ನೂ ಓದಿ: KR Pete: ‘ಉಸಿರು ಇರೋವರೆಗೂ ಕೆಆರ್ಪೇಟೆ ಬಿಡಲ್ಲ’- ಪಕ್ಷದ ಬ್ಯಾನರ್ ಇಲ್ಲದೆಯೇ ಸಚಿವ ನಾರಾಯಣ ಗೌಡ ಸಭೆ
ಅಲ್ಲದೆ ಗಂಡ ಬದುಕಿದ್ದಾನೆ ತಾನೇ ಕಾಮನ್ ಸೆನ್ಸ್ ಇಲ್ಲ ನಿಂಗೆ. ತಂದೆ ಹೆಸರು ಬದಲಾಯಿಸ್ತಿಯಾ ನೀನು? ಎಂದು ಪ್ರಶ್ನಿಸಿದ ಸಂಸದರಿಗೆ ಉತ್ತರಿಸಲಾಗದೆ ಮಹಿಳೆ ತಡಬಡಾಯಿಸಿ ಪೇಚೆಗೊಳಗಾದರು. ತಮ್ಮ ಅಸಮಾಧಾನ ಮಾತು ಮುಂದುವರಿಸಿದ ಸಂಸದರು, ಹಣದಾಸೆಗೆ ಮತಾಂತರ ಆಗಿದ್ದೀಯಾ? ಅಂತಲು ಪ್ರಶ್ನೆ ಮಾಡಿದರು. ಈ ವೇಳೆ ವಿಧಾನಪರಿಷತ್ ಸದಸ್ಯ ಗೋವಿಂದರಾಜು ಮುನಿಸ್ವಾಮಿ ಅವರನ್ನು ಸಮಾಧಾನಪಡಿಸಿದರು.
ಸಿಟಿ ರವಿ ವಿವಾದಾತ್ಮಕ ಹೇಳಿಕೆ?
ಸಿಂಧೂರ ಇಡುವವರು ಕಾಂಗ್ರೆಸ್‌ಗೆ ಮತ ನೀಡಬಾರದು ಅಂತಾ ಚಿಕ್ಕೋಡಿಯಲ್ಲಿ ನಡೆದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಸಿಟಿ ರವಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಒಬ್ಬ ಮಾಜಿ ಮುಖ್ಯಮಂತ್ರಿಗೆ ಸಿಂಧೂರ ಕಂದರೆ ಆಗೋದಿಲ್ಲ. ಅವರಿಗೆ ಸಿಂಧೂರ ಹಾಗೂ ಕೇಸರಿ ಪೇಟ ಅಂದರೆ ಅಲರ್ಜಿ ಎಂದಿದ್ದಾರೆ. ಈ ಮೂಲಕ ಸಿದ್ದರಾಮಯ್ಯಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.
ಅಂಕಲಿ ಗ್ರಾಮದಲ್ಲಿ ಮಾತನಾಡಿದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಅವರು, ವಿಜಯ ಸಂಕಲ್ಪ ಯಾತ್ರೆಗೆ ಅಭೂತಪೂರ್ವ ಬೆಂಬಲ ಸಿಗುತ್ತಿದೆ. ಈ ಬಾರಿ ನಿಶ್ಚಿತವಾಗಿ ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತೆ. ವಿಜಯ ಸಂಕಲ್ಪ ಯಾತ್ರೆಗೆ ಬೆಂಬಲ ವ್ಯಕ್ತವಾಯಿತು. ಕಾಂಗ್ರೆಸ್ ನವರು ಮುಖ್ಯಮಂತ್ರಿ ಕುರ್ಚಿ ಮೇಲೆ ಟವಲ್ ಹಾಕಿಕೊಂಡು ಕುಳಿತಿದ್ದರೂ ಅವರಿಗೆ ಸೋಲು ಖಚಿತ ಅಂತ ಗೊತ್ತಾದ ಬಳಿಕ ಬಾಯಿಗೆ ಬಂದ ಹಾಗೇ ಮಾತನಾಡಲು ಶುರು ಮಾಡಿದ್ದಾರೆ. ಒಂದೊಂದೇ ರಾಜ್ಯಗಳಲ್ಲಿ ಸೋಲಿನ ಮೇಲೆ ಸೋಲು ಕಾಂಗ್ರೆಸ್‌ಗೆ ಬರ್ತಿದೆ.
ಇದನ್ನೂ ಓದಿ: Women's Day: ಅಮೆರಿಕಾ ಬ್ಯಾಂಕ್ vs ಮಹಿಳೆಯರ ಜೀರಿಗೆ ಡಬ್ಬಿ; ಯಾರಿಗೆ ಗೆಲುವು ಅಂತ ವಿವರಿಸಿದ ಸಿಎಂ ಬೊಮ್ಮಾಯಿ!
ರಾಹುಲ್ ಗಾಂಧಿ ವಿದೇಶಿ ನೆಲದಲ್ಲಿ ನಿಂತು ಪ್ರಜಾಪ್ರಭುತ್ವ ಅಪಾಯದಲ್ಲಿದೆ ಅಂತಿದ್ದಾರೆ. ನೆಹರು ಕುಟುಂಬದ ಅಧಿಕಾರದಲ್ಲಿದ್ದರೆ ಪ್ರಜಾಪ್ರಭುತ್ವ ಸುಸ್ಥಿರದಲ್ಲಿರುತ್ತೆ ಅಂದುಕೊಂಡಿದ್ದಾರೆ. ಇಂದಿರಾ ಗಾಂಧಿ 56 ಬಾರಿ ವಿವಿಧ ಚುನಾಯಿತ ಸರ್ಕಾರ ಕಿತ್ತು ಒಗೆದಿದ್ದಾರೆ. ಅವರು ಈಗ ಪ್ರಜಾಪ್ರಭುತ್ವದ ಬಗ್ಗೆ ಮಾತಾಡುತ್ತಿದ್ದಾರೆ ಅಂತ ಅಂತ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಎಂದರೆ ಪ್ರಜಾಪ್ರಭುತ್ವಕ್ಕೆ ಒಂದು ಕಳಂಕ, ಕಾಂಗ್ರೆಸ್ ಒಳಗೆ ಪ್ರಜಾಪ್ರಭುತ್ವ ತರಲಿ. ವಿದೇಶಿ ನೆಲದಲ್ಲಿ ನಿಂತುಕೊಂಡು ವಿದೇಶಿಯರ ಸಹಾಯದಿಂದ ಏನಾದರೂ ಮಾಡಿ ಅಧಿಕಾರ ಹಿಡಿಯಬೇಕು ಅಂತ ಸಂಚು ರೂಪಿಸುತ್ತಿರುವುದು ದೇಶದ್ರೋಹಕ್ಕೆ ಸಮ. ಈ ದೇಶದ್ರೋಹವನ್ನು ರಾಜ್ಯದ, ದೇಶದ ಜನ ಸಹಿಸುವುದಿಲ್ಲ. ವಿದೇಶಿ ನೆಲದಲ್ಲಿ ನಿಂತು ಭಾರತದ ವ್ಯವಸ್ಥೆ ಬಗ್ಗೆ ಅಪಹಾಸ್ಯ ಮಾಡುವುದನ್ನ ಜನ ಸಹಿಸುವುದಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಸಿಟಿ ರವಿ ಹಿಗ್ಗಾಮಗ್ಗಾ ವಾಗ್ದಾಳಿ ನಡೆಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ