ಪೊಲೀಸರ ಎದುರೇ ಹ್ಯಾಕಿಂಗ್​ ಬಿಡಲ್ಲ ಎಂದ ಕುಖ್ಯಾತ ಹ್ಯಾಕರ್ ಶ್ರೀಕಿ; ಏಕಾಗ್ರತೆ ಹೆಚ್ಚಿಸಿಕೊಳ್ಳೋಕೆ ಮಾಡ್ತಿದ್ದ ಧ್ಯಾನ!

ನಾನು ಸ್ಥಳೀಯ ವೆಬ್ ಸೈಟ್​ಗಳನ್ನು ಹ್ಯಾಕ್ ಮಾಡುವುದಿಲ್ಲ. ಚೀನಾ ಮತ್ತು ವಿದೇಶದ ಆನ್ ಲೈನ್ ಗೇಮ್ ಹ್ಯಾಕ್ ಮಾಡುತ್ತೇನೆ. ಈ ಕೆಲಸ ಬಿಟ್ಟು ನನಗೆ ಬೇರೆ ಏನೂ ಬರುವುದಿಲ್ಲ. ಹೀಗಾಗಿ, ನಾನು ಹ್ಯಾಕಿಂಗ್ ಬಿಡಲ್ಲ ಎಂದಿದ್ದಾನೆ ಶ್ರೀಕಿ.

news18-kannada
Updated:November 21, 2020, 2:18 PM IST
ಪೊಲೀಸರ ಎದುರೇ ಹ್ಯಾಕಿಂಗ್​ ಬಿಡಲ್ಲ ಎಂದ ಕುಖ್ಯಾತ ಹ್ಯಾಕರ್ ಶ್ರೀಕಿ; ಏಕಾಗ್ರತೆ ಹೆಚ್ಚಿಸಿಕೊಳ್ಳೋಕೆ ಮಾಡ್ತಿದ್ದ ಧ್ಯಾನ!
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು (ನವೆಂಬರ್ 21): ಡಾರ್ಕ್ ವೆಬ್ ಮೂಲಕ ಅಕ್ರಮ ಹಣ ಸಂಪಾದನೆ ಮಾಡುತ್ತಿದ್ದ ಅಂತಾರಾಷ್ಟ್ರೀಯ ಕುಖ್ಯಾತಿಯ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿಯನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಇತ್ತೀಚೆಗೆ ಬಂಧಿಸಿದ್ದರು. ಸಿಸಿಬಿ ಕಸ್ಟಡಿಯಲ್ಲಿರುವ ಶ್ರೀಕಿ ಶಾಕಿಂಗ್​ ಉತ್ತರವೊಂದನ್ನು ನೀಡಿದ್ದು, ನನಗೆ ಹ್ಯಾಕಿಂಗ್​ ಬಿಟ್ಟು ಬೇರೆ ಕೆಲಸ ಬರುವುದಿಲ್ಲ. ಹೀಗಾಗಿ, ಇಲ್ಲಿಂದ ಹೊರಬಂದರೂ ಹ್ಯಾಕಿಂಗ್​ ಮಾತ್ರ ನಿಲ್ಲಿಸುವುದಿಲ್ಲ ಎಂದಿದ್ದಾನೆ.

ವಿಚಾರಣೆ ವೇಳೆ ಕೆಲವು ವಿಚಾರಗಳನ್ನು ಶ್ರೀಕಿ ಹೇಳಿದ್ದಾನೆ. ನಾನು ಸ್ಥಳೀಯ ವೆಬ್ ಸೈಟ್​ಗಳನ್ನು ಹ್ಯಾಕ್ ಮಾಡುವುದಿಲ್ಲ. ಚೀನಾ ಮತ್ತು ವಿದೇಶದ ಆನ್ ಲೈನ್ ಗೇಮ್ ಹ್ಯಾಕ್ ಮಾಡುತ್ತೇನೆ. ಈ ಕೆಲಸ ಬಿಟ್ಟು ನನಗೆ ಬೇರೆ ಏನೂ ಬರುವುದಿಲ್ಲ. ಹೀಗಾಗಿ, ನಾನು ಹ್ಯಾಕಿಂಗ್ ಬಿಡಲ್ಲ ಎಂದಿದ್ದಾನೆ.

ಅಚ್ಚರಿ ವಿಚಾರ ಎಂದರೆ, ಶ್ರೀಕಿ ಈ ಮೊದಲು ಶ್ರೀಕೃಷ್ಣೋಪದೇಶ ಪಠಣೆ ಮಾಡುತ್ತಿದ್ದನಂತೆ.  ಈತ ಗಂಟೆಗೆ ಒಂದು ಬಾರಿ ಭಗವದ್ಗೀತೆ ಪಠಣೆ ಮಾಡಿ ಬಳಿಕ ಧ್ಯಾನ ಮಾಡುತ್ತಾನೆ. ಸ್ವಾಮಿ ವಿವೇಕಾನಂದ ,ಓಷೋ ಸೇರಿದಂತೆ ಆಧ್ಯಾತ್ಮ ಚಿಂತಕರ ಜೀವನ ಚರಿತ್ರೆ ಪುಸ್ತಕವನ್ನೂ ಆತ ಓದುತ್ತಿದ್ದನಂತೆ.  ಹ್ಯಾಕಿಂಗ್  ಮಾಡಲು ಏಕಾಗ್ರತೆ ಬೇಕು. ಅದಕ್ಕೋಸ್ಕರ ಧ್ಯಾನ ಮತ್ತು ಆಧ್ಯಾತ್ಮರ ಪುಸ್ತಕ ಓದುತ್ತೇನೆ ಎಂದು ಶ್ರೀಕಿ  ಹೇಳಿಕೊಂಡಿದ್ದಾನೆ.

ಸರ್ಕಾರಿ ವೆಬ್​ಸೈಟ್​ ಹ್ಯಾಕ್​ ಮಾಡುತ್ತಿದ್ದ ಭೂಪ!

ಡಾರ್ಕ್ ವೆಬ್ ಮೂಲಕ ಅಂತರರಾಷ್ಟ್ರೀಯ ಡ್ರಗ್ಸ್ ವ್ಯವಹಾರ ನಡೆಸಲು ಶ್ರೀಕಿ ದಾರಿ ಮಾಡಿಕೊಟ್ಟಿದ್ದ. ಆನ್​ಲೈನ್ ಬಿಟ್ ಕಾಯಿನ್ ಮೂಲಕ ಬ್ಯುಸಿನೆಸ್ ಶುರು ಮಾಡಿದ್ದ ಶ್ರೀಕಿ ಮಾದಕ ವ್ಯಸನಿಯೂ ಆಗಿದ್ದ. ಡ್ರಗ್ಸ್ ಕೇಸ್​ನಲ್ಲಿ ಬಂಧಿತನಾಗಿರುವ ಸುನೀಶ್ ಹೆಗ್ಡೆಗೆ ಡಾರ್ಕ್ ವೆಬ್ ಜಾಲವನ್ನು ಪರಿಚಯಿಸಿದ್ದು ಇದೇ ಶ್ರೀಕಿ. 2019ರಲ್ಲಿ ಗೇಮಿಂಗ್ ವೆಬ್​ಸೈಟ್​ಗಳಲ್ಲಿ ನಿಪುಣನಾಗಿದ್ದ ಶ್ರೀಕಿಯನ್ನು ಬಳಸಿಕೊಂಡು ಸುನೀಶ್ ಹೆಗ್ಡೆ ಡಾರ್ಕ್ ವೆಬ್ ಮೂಲಕ ಡ್ರಗ್ಸ್ ದಂಧೆ ಮಾಡುತ್ತಿದ್ದನೆಲ್ಲಾಗಿದೆ. ಈತನನ್ನು ದೇವನಹಳ್ಳಿ ಹಾಗೂ ಗೋವಾದ ಪಂಚತಾರಾ ಹೋಟೆಲ್​ಗಳಲ್ಲಿ ಇರಿಸಿ ಹ್ಯಾಕಿಂಗ್ ಕೆಲಸ ಮಾಡಿಸಲಾಗುತ್ತಿತ್ತು.

ಶ್ರೀಕಿ ಸರ್ಕಾರಿ ವೆಬ್​ಸೈಟ್​ಗಳನ್ನ ಹ್ಯಾಕ್ ಮಾಡುತ್ತಿದ್ದ. ಅಲ್ಲಿ ಟೆಂಡರ್​ಗೆ ಸಂಬಂಧಪಟ್ಟ ಮಾಹಿತಿಯನ್ನು ಹ್ಯಾಕ್ ಮಾಡಿ ಪಡೆಯುತ್ತಿದ್ದ. ಅಂತರರಾಷ್ಟ್ರೀಯ ವೆಬ್ ಸೈಟ್​ಗಳನ್ನೂ ಹ್ಯಾಕ್ ಮಾಡಿ ಅಕ್ರಮ ಮಾರ್ಗದಲ್ಲಿ ಹಣ ಸಂಪಾದನೆ ಮಾಡುತ್ತಿದ್ದ. ಈ ಹಿಂದೆ ಯುಬಿ ಸಿಟಿಯ ಸ್ಕೈ ಬಾರ್​ನಲ್ಲಿ ನಡೆದಿದ್ದ ಗಲಾಟೆ ಪ್ರಕರಣದಲ್ಲೂ ಈತನಿದ್ದನೆನ್ನಲಾಗಿದೆ. ವಿದ್ವತ್ ಮೇಲೆ ಯುಬಿ ಸಿಟಿಯಲ್ಲಿ ಹಲ್ಲೆ ಎಸಗಿದ್ದ ನಲಪಾಡ್ ಮತ್ತವನ ತಂಡದಲ್ಲಿ ಶ್ರೀಕಿಯೂ ಇದ್ದ. ಆ ಪ್ರಕರಣದಲ್ಲಿ ಈತ ಮೂರನೇ ಆರೋಪಿ. ಹಲವು ವರ್ಷಗಳಿಂದ ತಲೆ ಮರೆಸಿಕೊಂಡು ಓಡಾಡುತ್ತಿದ್ದ ಈತ ಈಗ ಸಿಕ್ಕಿಬಿದ್ದಿದ್ದಾನೆ.
Published by: Rajesh Duggumane
First published: November 21, 2020, 11:38 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading