ಕಸಾಯಿಖಾನೆಯಲ್ಲಿದ್ದ ಎತ್ತು ರಸ್ತೆಯಲ್ಲಿ ಹೋಗುತ್ತಿದ್ದ ಹಳೆ ಮಾಲೀಕನನ್ನು ಕಂಡು ಹಂಬಲಿಸಿತ್ತು: ಅದೃಷ್ಟ ತಂದ ಎತ್ತಿನ ಕಥೆ

ಆಕಸ್ಮಿಕವಾಗಿ ನಾನು ಜಾನುವಾರ ಮಾರುಕಟ್ಟೆಗೆ ಹೋಗಿದ್ದೆ. ಆಗ ಎತ್ತು ನನ್ನನ್ನು ನೋಡಿ ತನ್ನದೇ ಧ್ವನಿಯಲ್ಲಿ ಒದರಿತ್ತು. ಆಗ ಅದನ್ನು ಕಂಡಾಗ ನನ್ನ ‌ಕಣ್ಣಲ್ಲೂ ಸಹ ನೀರು ಬಂತು.

ಮೈಲಾರಿಗೆ ಹುಟ್ಟುಹಬ್ಬದ ಸಂಭ್ರಮ

ಮೈಲಾರಿಗೆ ಹುಟ್ಟುಹಬ್ಬದ ಸಂಭ್ರಮ

  • Share this:
ಧಾರವಾಡ: ಇಲ್ಲೊಬ್ಬ ರೈತ ತನ್ನ ಎತ್ತಿನ ಹುಟ್ಟುಹಬ್ಬವನ್ನು ವಿಜೃಂಭಣೆಯಿಂದ ಮಾಡುವ ಮೂಲಕ ತನ್ನ ಪ್ರೀತಿಯನ್ನು ತೋರಿದ್ದಾರೆ. ಖಸಾಯಿಖಾನೆಗೆ ಹೋಗುತ್ತಿದ್ದ ಎತ್ತನ್ನು ಕಂಡ ರೈತ ಮಮ್ಮಲು ಮರಗಿ ಮನೆಗೆ ತಂದು ಸಾಕಿ ಸಲುಹುತ್ತಿದ್ದಾನೆ. ಅಲ್ಲದೇ ಕಸಾಯಿಖಾನೆಯಿಂದ ತಂದ ದಿನದಂದೇ ಈ ಎತ್ತಿನ ಹುಟ್ಟುಹಬ್ಬ ಆಚರಣೆ ಮಾಡಿದ್ದಾರೆ. ಧಾರವಾಡ ತಾಲೂಕಿನ ದೇವರಹುಬ್ಬಳ್ಳಿ ಗ್ರಾಮದ ನಾಗಪ್ಪ ಓಮಗಣ್ಣವರ ಎಂಬಾತ ತನ್ನ ಮೆಚ್ಚಿನ ಎತ್ತು ಮೈಲಾರನ ಬರ್ತಡೇ ಮಾಡಿದ್ದಾನೆ.

ಎರಡು ವರ್ಷದ ಹಿಂದೆ ರೈತ ನಾಗಪ್ಪ ಸಂಕಷ್ಟದಲ್ಲಿದ್ದರು. ಎತ್ತನ್ನು ಸಾಕಲು ಕಷ್ಟವಾಗಿ ಹೋಗಿತ್ತು. ಆಗ ನಾಗಪ್ಪ ಈ ಎತ್ತನ್ನು ಪಕ್ಕದೂರಿನ ರೈತನಿಗೆ ಕೊಟ್ಟು ಮರೆತೇ ಬಿಟ್ಟಿದ್ದರು. ಆದ್ರೆ ಮಾರಿದ ಎರಡು ವರ್ಷದ ಬಳಿಕ ಧಾರವಾಡ ಜಾನುವಾರ ಮಾರ್ಕೆಟ್ನಲ್ಲಿರುವ ಕಸಾಯಿ ಖಾನೆ ಪಕ್ಕ ಹಾದು ಹೋಗುವಾಗ ಎತ್ತಿನ ಧ್ವನಿ ಕೇಳಿಸಿದೆ. ಹತ್ತಿರ ಹೋಗಿ ನೋಡಿದ್ರೆ ತನ್ನದೇ ಮೈಲಾರ ಅಲ್ಲಿ ಕಣ್ಣಿರಾಕುತ್ತಾ ನಿಂತಿದ್ದ. ತನ್ನ ಎತ್ತಿಗೆ ಸಾವಿನ ಹಂಚಿನಲ್ಲಿರುವುದನ್ನು ಕಂಡ ರೈತ ನಾಗಪ್ಪ ಕೂಡಲೇ ಅದನ್ನು ಬಿಡಿಸಲು ಮುಂದಾಗಿದ್ದರು. ಕಾಸಾಯಿಖಾನೆ ಅವರು ಹಸುವನ್ನು ಬಿಡಲು 52 ಸಾವಿರ ಹೇಳಿದ್ದಾರೆ. ಎತ್ತಿನ ಮೇಲಿನ ಪ್ರೀತಿಗೆ ನಾಗಪ್ಪ ಅರ್ಧ ಲಕ್ಷ ಕೊಡಲು ಮುಂದಾದರು.

ಕಷ್ಟ ಇದೇ ಎಂದು ನಾಗಪ್ಪ ಎತ್ತು ಮಾರಿದ್ದ, ಆದ್ರೆ ಯಾವಾಗ ತನ್ನದೇ ಎತ್ತು ಹೀಗೆ ಕಣ್ಣೀರು ಹಾಕಿ ಬಿಟ್ಟಿತ್ತು. ಆಗ ನಾಗಪ್ಪ ಅಕ್ಷರಷಃ ಕರಗಿ ಹೋಗಿ ಬಿಟ್ಟಿದ್ದ. 52 ಸಾವಿರಕ್ಕೆ ದರ ನಿಗದಿಯೇನೋ ಮಾಡಿಕೊಂಡು ಬಿಟ್ಟ. ಆದ್ರೆ ಹಣ ಬೇಕಲ್ಲ. ಗ್ರಾಮಕ್ಕೆ ಬಂದವನೇ ಅವರಿವರ ಬಳಿ ಸಾಲವನ್ನು ಮಾಡಿ ಅದೇ ಎತ್ತು ಬೇಕು ಅಂತಾ ಹಠಕ್ಕೆ ಬಿದ್ದು ಮರಳಿ ಮನೆಗೆ ತಂದಿದ್ದಾನೆ. ಮನೆಗೆ ತಂದ ಬಳಿಕ ಈ ಎತ್ತು ಮೊದಲಿನಂತೆ ದುಡಿಯೋಕೆ ಶುರು ಮಾಡಿದ್ದು, ಆರ್ಥಿಕವಾಗಿಯೂ ನಾಗಪ್ಪನ ಕುಟುಂಬ ಸಬಲವಾಗುತ್ತಾ ಬಂದಿದೆ. ಹೀಗಾಗಿ ಅದು ತನ್ನದೇ ಮನೆಯಲ್ಲಿ ಹುಟ್ಟಿ ಬೆಳದಿದ್ದ ಕಾರಣಕ್ಕೆ ಅದರ ಜನ್ಮ ದಿನಾಂಕವೂ ಗೊತ್ತಿತ್ತು. ಹೀಗಾಗಿ ಪುನರ್ ಜನ್ಮ ಪಡೆದುಕೊಂಡು ಬಂದ ತನ್ನ ಮೆಚ್ಚಿನ ಮೈಲಾರಿಯ ಬರ್ತಡೇಯನ್ನು ಭರ್ಜರಿಯಾಗಿ ಮಾಡಿದ್ದಾನೆ.

ತನ್ನಗೆ ಬಂದ ಕಷ್ಟದಿಂದ ದೂರವಾಗಲು ಎತ್ತು ಮಾರಿದ್ದೆ, ಆದ್ರೆ ನನ್ನಿಂದ ಮಾರಾಟವಾದ ಎತ್ತು ಕಟುಕನ ಬಾಯಿಗೆ ಸಿಲುಕಿತ್ತು. ಆಕಸ್ಮಿಕವಾಗಿ ನಾನು ಜಾನುವಾರ ಮಾರುಕಟ್ಟೆಗೆ ಹೋಗಿದ್ದೆ. ಆಗ ಎತ್ತು ನನ್ನನ್ನು ನೋಡಿ ತನ್ನದೇ ಧ್ವನಿಯಲ್ಲಿ ಒದರಿತ್ತು. ಆಗ ಅದನ್ನು ಕಂಡಾಗ ನನ್ನ ‌ಕಣ್ಣಲ್ಲೂ ಸಹ ನೀರು ಬಂತು. ಬಳಿಕ‌ ಕಟುನಿಗೆ ಹಣ ನೀಡಿ ಮರಳಿ ಮನೆಗೆ ತಂದೆ. ಇದೇ ಕಾರಣಕ್ಕೆ ಮತ್ತೊಮ್ಮೆ ಮೈಲಾರಿ ಹುಟ್ಟಿ ಬಂದಿದ್ದಾನೆ‌ ಎಂದು ಹುಟ್ಟುಹಬ್ಬ ಆಚರಣೆ ಮಾಡುತ್ತಿದ್ದೇವೆ ಎನ್ನುತ್ತಾರೆ ನಾಗಪ್ಪ.

ಇದನ್ನೂ ಓದಿ: ಕೊರೊನಾದಿಂದ ತಾಯಿ ಸತ್ತಿದ್ದೇ ಇಡೀ ಕುಟುಂಬ ನಾಶ: ನೊಂದ ಇಬ್ಬರು ಹೆಣ್ಣು ಮಕ್ಕಳು-ಪತಿ ಆತ್ಮಹತ್ಯೆ!

ಈ ಕಾಲದಲ್ಲಿ ಜಾನುವಾರ ಸಾಕುವುದು ಬಹಳ ಕಷ್ಟ ಇಂತಹ ಪರಿಸ್ಥಿತಿಯಲ್ಲಿ ನಾಗಪ್ಪ ತಾನು ಸಾಕಿದ ಎತ್ತು ಕಟುಕನ‌ಬಾಯಿಂದ ಪಾರು ಮಾಡಿ ತಂದಿದ್ದಾನೆ. ಅಲ್ಲದೇ ಜಾನುವಾರುಗಳು ಅಂದ್ರೆ ನಾಗಪ್ಪನಿಗೆ ಬಹಳ ಪ್ರೀತಿ. ಇದನ್ನು ನೋಡಿದರೆ ನಾವು ಎತ್ತುಗಳನ್ನು ಸಾಕಬೇಕು ಎನಿಸುತ್ತದೆ ಎನ್ನುತ್ತಾರೆ ನಾಗಪ್ಪನ ಸ್ನೇಹಿತ ರವಿ.
ಎತ್ತುಗಳು ರೈತನ‌ ಬೆನ್ನೆಲುಬು ಎನ್ನುತ್ತಾರೆ. ಅದೇ ಎತ್ತುಗಳು ದುಡಿಯೋದು ನಿಲ್ಲಿಸಿದ ತಕ್ಷಣವೇ ಅದನ್ನು ಕಸಾಯಿಖಾನೆಯ ಕಟುಕರಿಗೆ ಮಾರಿ ಬಿಡೋರೆ ಕೆಲವರಿದ್ದಾರೆ. ಆದ್ರೆ ತನಗಾಗಿ ದುಡಿದ ಎತ್ತಿಗೂ ಒಂದು ಜೀವ ಇದೆ ಎಂದು ಕೊಂಡು ರೈತ ನಾಗಪ್ಪ ಮಾಡಿರೊ ಕಾರ್ಯ ಮಾತ್ರ ಇತರ ರೈತರಿಗೆ ಮಾದರಿಯಾಗಿದೆ.
Published by:Kavya V
First published: