• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಬಿಜೆಪಿಯಲ್ಲಿರುವ ಗುರುವಿನ ಮಾತು ಮೀರದ ಡಿಕೆಶಿ, ಒಂದೇ ಕರೆಗೆ ನೀಡಿದ್ರು ಪರಿಷತ್ ಟಿಕೆಟ್

ಬಿಜೆಪಿಯಲ್ಲಿರುವ ಗುರುವಿನ ಮಾತು ಮೀರದ ಡಿಕೆಶಿ, ಒಂದೇ ಕರೆಗೆ ನೀಡಿದ್ರು ಪರಿಷತ್ ಟಿಕೆಟ್

ದಿನೇಶ್ ಗೂಳಿಗೌಢ ಮತ್ತು ರಾಮಕೃಷ್ಣ

ದಿನೇಶ್ ಗೂಳಿಗೌಢ ಮತ್ತು ರಾಮಕೃಷ್ಣ

Dinesh Guli Gowda getting Congress ticket irks party leaders- ಕಾಂಗ್ರೆಸ್​ನ ಅಧಿಕೃತ ಅಭ್ಯರ್ಥಿ ಎಂದು ನಿಗದಿಯಾಗಿದ್ದ ರಾಮಕೃಷ್ಣ ಬದಲು ದಿನೇಶ್ ಗೂಳಿಗೌಡ ಅವರಿಗೆ ಮಂಡ್ಯ ಪರಿಷತ್ ಟಿಕೆಟ್ ಕೊಡಲಾಗಿದೆ. ಇದಕ್ಕೆ ಎಸ್ ಎಂ ಕೃಷ್ಣ ಶಿಫಾರಸು ಕಾರಣ ಎನ್ನಲಾಗುತ್ತಿದೆ.

  • Share this:

ಬೆಂಗಳೂರು, ನ. 18: ಕಾಂಗ್ರೆಸ್​ನ ಪರಿಷತ್ ಸ್ಥಾನಕ್ಕೆ ರಾಮಕೃಷ್ಣ (Ramakrishna) ಅವರ ಹೆಸರು ಬಹುತೇಕ ಫಿಕ್ಸ್ ಆಗಿತ್ತು. ಅಧಿಕೃತ ಘೋಷಣೆ ಅಷ್ಟೇ ಬಾಕಿ ಇತ್ತು. ಆದರೆ, ದಿಢೀರ್ ಬೆಳವಣಿಗೆಯಲ್ಲಿ ದಿನೇಶ್ ಗೂಳಿಗೌಡ (Dinesh Guli Gowda) ಎಂಬುವರಿಗೆ ಮಂಡ್ಯದ ಪರಿಷತ್ ಟಿಕೆಟ್ ನೀಡಲಾಗಿರುವುದು ತಿಳಿದುಬಂದಿದೆ. ಸಹಕಾರ ಸಚಿವ ಎಸ್ ಟಿ ಸೋಮಶೇಖರ್ (Minister S T Somashekhar) ಅವರ ವಿಶೇಷಾಧಿಕಾರಿಯಾದ ದಿನೇಶ್ ಗೂಳಿಗೌಡಗೆ ಕಾಂಗ್ರೆಸ್ ಟಿಕೆಟ್ ನೀಡುತ್ತಿರುವುದು ಪಕ್ಷದ ಹಲವರನ್ನ ರೊಚ್ಚಿಗೆಬ್ಬಿಸಿದೆ. ಈ ಸಂಬಂಧ ವರಿಷ್ಠರಿಗೆ ದೂರು ಕೊಡುವ ಚಿಂತನೆ ನಡೆದಿದೆ.


ದಿನೇಶ್​ಗೆ ಟಿಕೆಟ್ ಸಿಗಲು ಏನು ಕಾರಣ?: ದಿನೇಶ್ ಗೂಳಿಗೌಡ ಅವರು ಎಸ್ ಎಂ ಕೃಷ್ಣ (SM Krishna) ಅವರಿಗೆ ಭಾರೀ ಆಪ್ತರಾಗಿದ್ದಾರೆ. ತಮಗೆ ಕಾಂಗ್ರೆಸ್​ನಿಂದ ಪರಿಷತ್ ಟಿಕೆಟ್ ಕೊಡಿಸಿ ಎಂದು ಎಸ್​ಎಂಕೆ ಅವರಿಗೆ ದಿನೇಶ್ ದುಂಬಾಲು ಬಿದ್ದಿದ್ದರಂತೆ. ಆಗ ಎಸ್ ಎಂ ಕೃಷ್ಣ ಅವರು ತಮ್ಮ ಶಿಷ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ (D K Shivakumar) ಅವರಿಗೆ ಒಂದು ಫೋನ್ ಕರೆ ಮಾಡಿ ದಿನೇಶ್ ಗೂಳಿಗೌಡಗೆ ಪರಿಷತ್ ಟಿಕೆಟ್ ಕೊಡಿಸುವಂತೆ ಹೇಳಿದರು ಎಂದು ಮೂಲಗಳು ತಿಳಿಸಿವೆ.


ದಿನೇಶ್​ಗೆ ಟಿಕೆಟ್ ಕೊಡುವ ಮುನ್ನ ಡಿಕೆಶಿ ಮುನ್ನೆಚ್ಚರಿಕೆ ಕ್ರಮ: 


ತಮ್ಮ ಗುರುವಿನ ಮಾತನ್ನ ತಳ್ಳಿಹಾಕಲಾಗದ ಡಿಕೆ ಶಿವಕುಮಾರ್ ಕೂಡಲೇ ದಿನೇಶ್​ಗೆ ಟಿಕೆಟ್ ನೀಡುವ ಮುನ್ನ ಮಾಡಬೇಕಾದ ಕೆಲ ಮುನ್ನೆಚ್ಚರಿಕೆ ಕ್ರಮಗಳನ್ನ ಕೈಗೊಂಡಿದ್ದಾರೆ. ಮಂಡ್ಯದ ಜಿಲ್ಲಾ ಕಾಂಗ್ರೆಸ್ ಘಟಕವನ್ನು ಸಂಪರ್ಕಿಸಿ ಈ ವಿಚಾರ ಚರ್ಚಿಸಿ ಒಪ್ಪಿಸಿದ್ದಾರೆ. ಮಂಡ್ಯ ನಾಯಕರಾದ ಚಲುವರಾಯಸ್ವಾಮಿ ಮತ್ತು ನರೇಂದ್ರಸ್ವಾಮಿ ಅವರಿಗೂ ಕರೆ ಮಾಡಿ ತಿಳಿಸಿ, ಸಿದ್ದರಾಮಯ್ಯರನ್ನ ಇದಕ್ಕೆ ಒಪ್ಪಿಸುವಂತೆ ಕೇಳಿಕೊಂಡಿದ್ದಾರೆ. ಅದರಂತೆ ಚಲುವರಾಯಸ್ವಾಮಿ ಅವರು ಸಿದ್ದರಾಮಯ್ಯರನ್ನ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.


ಹಾಗೆಯೇ, ಅಧಿಕೃತ ಅಭ್ಯರ್ಥಿ ಆಗುವ ನಿರೀಕ್ಷೆಯಲ್ಲಿದ್ದ ರಾಮಕೃಷ್ಣ ಅವರಿಗೂ ಡಿಕೆ ಶಿವಕುಮಾರ್ ಕರೆ ಮಾಡಿ ಮಾತನಾಡಿದ್ದಾರೆ. ದಿನೇಶ್ ಗೂಳಿಗೌಡಗೆ ಟಿಕೆಟ್ ಕೊಡಲಾಗುವುದು ಎಂದು ಹೇಳಿ ಅವರನ್ನೂ ಒಪ್ಪಿಸಿದರಂತೆ. ಆ ಬಳಿಕ ದಿನೇಶ್ ಗೂಳಿಗೌಡಗೆ ಕಾಂಗ್ರೆಸ್ ಟಿಕೆಟ್ ನೀಡಲಾಯಿತು ಎಂದು ಹೇಳಲಾಗುತ್ತಿದೆ.


ವಿಶೇಷಾಧಿಕಾರಿ ಹುದ್ದೆಗೆ ರಾಜೀನಾಮೆ: ಟಿಕೆಟ್ ಸಿಗುವುದು ಖಚಿತ ಎನಿಸುತ್ತಿದ್ದಂತೆಯೇ ದಿನೇಶ್ ಗೂಳಿಗೌಡ ಅವರು ಸಹಕಾರ ಇಲಾಖೆಯ ವಿಶೇಷಾಧಿಕಾರಿ ಹುದ್ದೆಗೆ ರಾಜೀನಾಮೆ ಕೂಡ ಕೊಟ್ಟಿದ್ಧಾರೆ.


ಹಿರಿಯ ನಾಯಕರ ಅಸಮಾಧಾನ: 


ಇದೇ ವೇಳೆ, ದಿನೇಶ್ ಅವರಿಗೆ ಟಿಕೆಟ್ ನೀಡುತ್ತಿರುವುದಕ್ಕೆ ಕಾಂಗ್ರೆಸ್ ಪಕ್ಷದ ಕೆಲ ನಾಯಕರು ಅಸಮಾಧಾನಗೊಂಡಿದ್ದಾರೆ. ಈ ಸಂಬಂಧ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರಿಗೆ ದೂರು ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.


ಇದನ್ನೂ ಓದಿ: ನಮ್ಮ ಕಾಲದ ಅವಧಿಯನ್ನೂ ಸೇರಿಸಿಯೇ ನ್ಯಾಯಾಂಗ ತನಿಖೆಗೆ ಕೊಡಿ; Siddaramaiah ಆಗ್ರಹ


ದಿನೇಶ್ ಅವರು ಎಸ್ ಟಿ ಸೋಮಶೇಖರ್ ಮತ್ತು ಬಳಗದ ಜೊತೆ ಗುರುತಿಸಿಕೊಂಡವರು. ಮೈತ್ರಿ ಸರ್ಕಾರ ಪತನಗೊಳ್ಳಲು ಅವರ ಪಾತ್ರ ಇದೆ. ಅವರಿಂದ ಕಾಂಗ್ರೆಸ್ ಪಕ್ಷಕ್ಕೆ ನಯಾ ಪೈಸೆಯ ಕೊಡುಗೆಯೂ ಇಲ್ಲ. ಪಕ್ಷದ ಒಂದು ಬಾವುಟವನ್ನೂ ಅವರು ಕಟ್ಟಿಲ್ಲ. ಹಣ ಮತ್ತು ಪ್ರಭಾವ ಇದೆ ಎಂದರೆ ಎಂಥವರೂ ಕೂಡ ಟಿಕೆಟ್ ಪಡೆಯಬಹುದು ಎನ್ನುವಂತಾಗಿದೆ ಎಂದು ಕಾಂಗ್ರೆಸ್​ನ ಕೆಲ ನಾಯಕರು ಕುದ್ದುಹೋಗಿ ವರಿಷ್ಠರಿಗೆ ದೂರು ಕೊಡಬಹುದು.


ಡಿಕೆ ಶಿವಕುಮಾರ್-ಎಸ್ಎಂ ಕೃಷ್ಣ ಗುರು ಶಿಷ್ಯ ಜೋಡಿ:


ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಮತ್ತು ಡಿ ಕೆ ಶಿವಕುಮಾರ್ ನಡುವೆ ಗುರು ಶಿಷ್ಯರ ಸಂಬಂಧ ಇರುವುದು ಎಲ್ಲರಿಗೂ ಗೊತ್ತಿರುವುದೇ. ಎಸ್​ಎಂ ಕೃಷ್ಣ ಸಿಎಂ ಆಗಿದ್ದಾಗ ಡಿಕೆ ಶಿವಕುಮಾರ್ ಅವರಿನ್ನೂ ಯುವಕ. ಆಗಲೇ ಒಳ್ಳೆಯ ಸಚಿವ ಸ್ಥಾನ ಪಡೆದಿದ್ದರು. ಕೃಷ್ಣ ಅವರನ್ನ ತಮ್ಮ ರಾಜಕೀಯ ಗುರು ಎಂದು ಈಗಲೂ ಡಿಕೆಶಿ ಪರಿಗಣಿಸುತ್ತಾರೆ.


ಇದನ್ನೂ ಓದಿ: ಪ್ರಿಯಾಂಕ ಅಂದರೆ ಮಹಿಳೆಯರೆಲ್ಲಾ ತಿರುಗಿ ನೋಡ್ತಾರೆ: ‘ಪೇಪರ್ ಸಿಂಹ’ ಹೇಳಿಕೆಗೆ Pratap Simha ತಿರುಗೇಟು


ಬಿಜೆಪಿಗೆ ವಲಸೆ ಹೋಗಿರುವ ತಮ್ಮ ಗುರು ಎಸ್ ಎಂ ಕೃಷ್ಣ ಅವರನ್ನ ವಾಪಸ್ ಕಾಂಗ್ರೆಸ್​ಗೆ ಕರೆ ತರಲು ಡಿಕೆ ಶಿವಕುಮಾರ್ ಹಲವು ಬಾರಿ ಪ್ರಯತ್ನ ಮಾಡಿ ಕೈ ಚೆಲ್ಲಿದ್ದೂ ಗೊತ್ತಿರುವುದೇ. ಅದೇನೇ ಇದ್ದರೂ ಈಗಲೂ ಅವರಿಬ್ಬರ ಮಧ್ಯೆ ಸಂಬಂಧ ಅಷ್ಟೇ ಆಪ್ತವಾಗಿದೆ. ಎಸ್ ಎಂ ಕೃಷ್ಣ ಅವರ ಮೊಮ್ಮಗನನ್ನು ಡಿಕೆ ಶಿವಕುಮಾರ್ ತನ್ನ ಅಳಿಯನನ್ನಾಗಿ ಮಾಡಿಕೊಂಡಿದ್ದಾರೆ.


ಯಾವಾಗ ಪರಿಷತ್ ಚುನಾವಣೆ?


20 ಜಿಲ್ಲೆಗಳಿಂದ 25 ಪರಿಷತ್ ಸ್ಥಾನಗಳಿಗೆ ಡಿಸೆಂಬರ್ 10ರಂದು ಚುನಾವಣೆ ನಡೆಯಲಿದೆ. ನವೆಂಬರ್ 23ಕ್ಕೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ನ. 26 ರವರೆಗೆ ನಾಮಪತ್ರ ಹಿಂಪಡೆಯಲು ಅವಕಾಶ ಇದೆ. ಡಿ. 10ಕ್ಕೆ ಚುನಾವಣೆ ನಡೆದರೆ ಡಿಸೆಂಬರ್ 14ಕ್ಕೆ ಫಲಿತಾಂಶ ಪ್ರಕಟವಾಗುವ ಸಾಧ್ಯತೆ ಇದೆ.


ವರದಿ: ಚಿದಾನಂದ ಪಟೇಲ್

top videos
    First published: