HOME » NEWS » State » INTEREST IS HIGER THAN PRINCEPLE AMOUNT IN PLD BANK IN RAICHUR SRBH HK

ಪಿಎಲ್​ಡಿ ಬ್ಯಾಂಕುಗಳಲ್ಲಿ ಅಸಲು ಕಟ್ಟಿದರೆ ಮಾತ್ರ ಬಡ್ಡಿ ಮನ್ನಾ; ಗೊಂದಲದಲ್ಲಿ ರೈತರು

ಮಾರ್ಚ್ ಅಂತ್ಯದೊಳಗೆ ರೈತರು ಸಾಲದ ಅಸಲು ಪಾವತಿಸಬೇಕಾಗಿದೆ. ಆದರೆ ಹಳೆಯ ಸಾಲಕ್ಕೆ ಹಣ ಹೊಂದಿಸಬೇಕಾಗಿದೆ. ಅಲ್ಲದೆ ಈಗ ಬಂದಿರುವ ಫಸಲು ಮಾರಾಟದ ಹಣ ಇನ್ನೂ ರೈತರ ಕೈಗೆ ಸೇರಿಲ್ಲ

news18-kannada
Updated:March 9, 2020, 9:42 PM IST
ಪಿಎಲ್​ಡಿ ಬ್ಯಾಂಕುಗಳಲ್ಲಿ ಅಸಲು ಕಟ್ಟಿದರೆ ಮಾತ್ರ ಬಡ್ಡಿ ಮನ್ನಾ; ಗೊಂದಲದಲ್ಲಿ ರೈತರು
ಸಾಂದರ್ಭಿಕ ಚಿತ್ರ
  • Share this:
ರಾಯಚೂರು(ಮಾ.09): ಕಳೆದ ಸಮ್ಮಿಶ್ರ ಸರಕಾರದಲ್ಲಿ ಕುಮಾರಸ್ವಾಮಿ ಘೋಷಣೆ ಮಾಡಿದ್ದ ರೈತರ ಸಾಲಮನ್ನಾ ಪ್ರಕ್ರಿಯೆ ಇನ್ನೂ ನಡೆಯುತ್ತಿದೆ. ಈ ಸಂದರ್ಭದಲ್ಲಿ ದೀರ್ಘಾವಧಿ ಸಾಲಮನ್ನಾ ಮಾಡಬೇಕೆನ್ನುವ ಒತ್ತಾಯವೂ ಇತ್ತು. ಈಗಿನ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಈಗ ಸಹಕಾರಿ ಬ್ಯಾಂಕ್​ನಲ್ಲಿನ ದೀರ್ಘಾವಧಿ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಇದರಿಂದ ಸಾಲದ ಮೂರು ಪಟ್ಟು ಅಧಿಕವಾಗಿರುವ ಬಡ್ಡಿ ಮನ್ನಾ ಆಗಲಿದೆ. ಆದರೆ ಅಸಲು ಕಟ್ಟಲು ರೈತರು ಪರದಾಡುವಂತಾಗಿದೆ.

ಕಳೆದ ಸರಕಾರದ ಅವಧಿಯಲ್ಲಿ ಅತೀ ಹೆಚ್ಚು ಚರ್ಚೆಯಾಗಿದ್ದು ರೈತರ ಸಾಲಮನ್ನಾ. ಸಹಕಾರಿ ಹಾಗು ವಾಣಿಜ್ಯ ಬ್ಯಾಂಕುಗಳಲ್ಲಿದ್ದ ಅಲ್ಪಾವಧಿಯ ಸಾಲವನ್ನು ಕುಮಾರಸ್ವಾಮಿ ಸರಕಾರ ಮನ್ನಾ ಘೋಷಣೆ ಮಾಡಿ ಆ ಪ್ರಕ್ರಿಯೆ ಇನ್ನೂ ನಡೆಯುತ್ತಿದೆ. ಈ ಮಧ್ಯೆ  ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ರೈತರ ದೀರ್ಘಾವಧಿಯ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡುವುದಾಗಿ ಘೋಷಿಸಿದ್ದಾರೆ. ಅದರಲ್ಲಿ ಮುಖ್ಯವಾಗಿ ಕರ್ನಾಟಕ ರಾಜ್ಯ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕುಗಳಲ್ಲಿಯೇ ದೀರ್ಘಾವಧಿ ಸಾಲಗಳು ಅಧಿಕವಿವೆ. ಒಂದೊಂದು ಬ್ಯಾಂಕಿನಲ್ಲಿ ರೈತರು 30-35 ವರ್ಷದ ಹಿಂದೆಯೇ ತೆಗೆದುಕೊಂಡ ಸಾಲವನ್ನು ಮರುಪಾವತಿ ಮಾಡಲು ಆಗದೇ ಇರುವುದರಿಂದ ಸಾಲದ ಮೊತ್ತಕ್ಕೆ ನಾಲ್ಕು‌ಪಟ್ಟು ಅಧಿಕ ಬಡ್ಡಿಯಾಗಿದೆ.

ಇದಕ್ಕೆ ಉದಾಹರಣೆಯಾಗಿ ರಾಯಚೂರು ಜಿಲ್ಲೆಯ ಐದು ಪಿಎಲ್​ಡಿ ಬ್ಯಾಂಕುಗಳಲ್ಲಿ 2,335 ರೈತರು ಒಟ್ಟು 4.43 ಕೋಟಿ (443.41 ಲಕ್ಷ ರೂ) ಸಾಲ ಪಡೆದಿದ್ದು, ಅದಕ್ಕೆ 12 ಕೋಟಿ ರೂಪಾಯಿ ಬಡ್ಡಿಯೇ ಆಗಿದೆ. ಈಗ ರೈತರು ಮಾರ್ಚ್ ಅಂತ್ಯದೊಳಗೆ ಅಸಲು ಪಾವತಿಸಿದರೆ ಬಡ್ಡಿ ಮನ್ನಾ ಆಗುತ್ತದೆ. ಇದಕ್ಕಾಗಿ ಈಗ ಪಿಎಲ್​ಡಿಬಿ ಅಧಿಕಾರಿಗಳು ಅಸಲು ಪಾವತಿಸಿದರೆ ಬಡ್ಡಿ ಮನ್ನಾ ಆಗುತ್ತದೆ. ಮತ್ತೆ ಮರುಸಾಲ ನೀಡುವ ಯೋಜನೆ ಇದೆ ಎಂದು ರೈತರ ಮನವೊಲಿಸಲು ಯತ್ನಿಸುತ್ತಿದ್ದಾರೆ.

pld bank
ಸುಸ್ತಿ ಸಾಲದ ಮಾಹಿತಿ


ಮಾರ್ಚ್ ಅಂತ್ಯದೊಳಗೆ ರೈತರು ಸಾಲದ ಅಸಲು ಪಾವತಿಸಬೇಕಾಗಿದೆ. ಆದರೆ ಹಳೆಯ ಸಾಲಕ್ಕೆ ಹಣ ಹೊಂದಿಸಬೇಕಾಗಿದೆ. ಅಲ್ಲದೆ ಈಗ ಬಂದಿರುವ ಫಸಲು ಮಾರಾಟದ ಹಣ ಇನ್ನೂ ರೈತರ ಕೈಗೆ ಸೇರಿಲ್ಲ. ಅಸಲು ಪಾವತಿಸಲು ರೈತರಿಗೆ ಕಾಲಾವಕಾಶ ನೀಡಬೇಕು. ಇಲ್ಲಿ ಬಡ್ಡಿ ಮನ್ನಾ ಮಾಡಿ, ನಂತರದ ಅವಧಿಯಲ್ಲಿ ಅಸಲು ಪಾವತಿಸಲು ಅವಕಾಶ ನೀಡಬೇಕೆಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ : ರಾಜ್ಯದಲ್ಲಿ ಮೊದಲ ಬಾರಿಗೆ ಚಾಮರಾಜನಗರ ಜಿಲ್ಲೆಯ ದೇವಸ್ಥಾನಗಳಲ್ಲಿ ಮೊಳಗಲಿದೆ ಕನ್ನಡ ಡಿಂಡಿಮ

ಈಗ ರಾಯಚೂರು ಜಿಲ್ಲೆಯಲ್ಲಿ 2,335 ರೈತರ ಸಾಲ ಪಡೆದವರಲ್ಲಿ ಸುಮಾರು 150 ರೈತರು ಸುಮಾರು 23 ಲಕ್ಷದಷ್ಟು ಅಸಲು ಪಾವತಿಸಿದ್ದಾರೆ. ಈ ಮಧ್ಯೆ, ಈಗಿರುವ ಅವೈಜ್ಞಾನಿಕ‌ ಬೆಲೆಯಿಂದಾಗಿ ಫಸಲು ಮಾರಾಟದ ನಂತರ ರೈತರ ಕೈಯಲ್ಲಿ ಹಣವು ಉಳಿಯುತ್ತಿಲ್ಲ. ಇದರಿಂದಾಗಿ ಅಸಲು ಎಷ್ಟು ಜನರು ಪಾವತಿಸುತ್ತಾರೆ ಎಂಬುದನ್ನು ನೋಡಬೇಕು, ಈ ಹಿಂದೆಯೂ ಇದೇ ರೀತಿ ಬಡ್ಡಿ ಮನ್ನಾ ಘೋಷಣೆ ಮಾಡಿದಾಗಲೂ ರೈತರು ಅಸಲು ಪಾವತಿಸಲು ಮುಂದಾಗಿಲ್ಲ ಎನ್ನುವುದು ಗಮನಾರ್ಹ.
First published: March 9, 2020, 8:47 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories