ಅಂತರ್ಜಾತಿ ಮದುವೆಯಾದ ಪ್ರೇಮಿಗಳಿಗೆ ಪೋಷಕರಿಂದ ಬೆದರಿಕೆ; ಪ್ರಾಣರಕ್ಷಣೆ ಕೋರಿ ಎಸ್ಪಿ ಕಚೇರಿ ಮೆಟ್ಟಿಲೇರಿದ ನವದಂಪತಿ

ವಿವಾಹದ ಬಳಿಕ ಬೆಂಗಳೂರಿನಲ್ಲಿ ಕೆಲಸ ಮಾಡ್ತಿದ್ದ, ನವ ಜೋಡಿಗೆ ಯುವತಿಯ ಮನೆಯವರು ವಿಲನ್ ಆಗಿದ್ರು. ಇವರಿಬ್ಬರು ಮದುವೆ ಆಗಿರುವ ವಿಷ ತಿಳಿದಿದ್ದರೂ ಕೂಡಾ ಮಗಳು ಕಾಣೆಯಾಗಿದ್ದಾಳೆ ಅಂತ ದೂರು ದಾಖಲಿಸಿದ್ದಾರೆ.  ಅಲ್ಲದೇ ಈ ಇಬ್ಬರಿಗಾಗಿ ಹುಡುಕಾಟ ನಡೆಸಿದ್ದು, ನೀವು ಎಲ್ಲೇ ಸಿಕ್ಕಿದರೂ ಬಿಡುವುದಿಲ್ಲ, ಅದು ಹೇಗೆ ಜೀವನ ಮಾಡುತ್ತಿರೀ ಅಂತ ಯುವತಿಯ ಪೋಷಕರು ಬೆದರಿಸಿದ್ದಾರೆ.

ಅಂತರ್ಜಾತಿ ವಿವಾಹವಾದ ಪ್ರೇಮಿಗಳು

ಅಂತರ್ಜಾತಿ ವಿವಾಹವಾದ ಪ್ರೇಮಿಗಳು

  • Share this:
ಚಿತ್ರದುರ್ಗ(ನ.25): ಅವರಿಬ್ಬರು  ಜಾತಿಯ ಎಲ್ಲೆ ಮೀರಿ ಅಂತರ್ಜಾತಿ ವಿವಾಹ ಆಗಿದ್ದ ಪ್ರೇಮಿಗಳು. ಅವರ ಪ್ರೀತಿಯನ್ನ ಒಪ್ಪದ ಪೊಷಕರು ಜಾತಿ ನೆಪವೊಡ್ಡಿ ಪ್ರೇಮಿಗಳಿಬ್ಬರನ್ನ  ದೂರ ಮಾಡಿದ್ದರು. ಪೊಲೀಸರು ಇದಕ್ಕೆ ಕುಮ್ಮಕ್ಕು ನೀಡಿದ್ದಾರೆ ಎಂಬ ಆರೋಪ ಇದೆ. ಭಾಂದವ್ಯ ಬಿಡದ ನಿಜವಾದ ಪ್ರೇಮಿಗಳು ಮತ್ತೆ ಹೊಂದಾಗಿದ್ದಾರೆ. ಆದರೆ  ಈ ಯುವಪ್ರೇಮಿಗಳ ದಾಂಪತ್ಯಕ್ಕೆ ಹೆತ್ತವರೇ ಶತ್ರುಗಳಾಗಿ ಜೀವ ಬೆದರಿಕೆ ಹಾಕಿದ್ದಾರಂತೆ. ಹೀಗಾಗಿ ನವದಂಪತಿ ಜೀವ ರಕ್ಷಣೆಗಾಗಿ ಎಸ್ಪಿ ಕಚೇರಿ ಮೆಟ್ಟಿಲೇರಿದ್ದಾರೆ. ಹೀಗೆ ರಕ್ಷಣೆಗಾಗಿ ಎಸ್ಪಿ ಕಚೇರಿ ಮೆಟ್ಟಿಲು ಹತ್ತಿರುವ ಈ ಯುವ ಪ್ರೇಮಿಗಳು ಕೋಟೆನಾಡು ಚಿತ್ರದುರ್ಗದ ಗೌತಮಿ ಮತ್ತು ಅಮಿತ್. ಕಳೆದ ನಾಲ್ಕು ವರ್ಷಗಳ ಹಿಂದೆ ಈ ಇಬ್ಬರಿಗೆ ಪ್ರೇಮಾಂಕುರವಾಗಿತ್ತು. ಅಲ್ಲದೇ ಇವರ ಪ್ರೀತಿ ಮದುವೆಯವರೆಗೂ ಬಂದು ತಲುಪಿತ್ತು. ಇವರ ಮೇಲೆ ಅದ್ಯಾವ ಕೆಟ್ಟ ಕಣ್ಣು ಬಿತ್ತೋ ಏನೋ, ಈ ಮುಗ್ದ ಪ್ರೇಮಿಗಳ ಪ್ರೀತಿಗೆ ಜಾತಿಯೊಂದು ಅಡ್ಡ ಬಂದಿತ್ತು.  ಜಾತಿಯ ನೆಪವೊಡ್ಡಿ ಎರಡು ಮನೆಯವರು ಕೂಡ ಇವರ ಪ್ರೀತಿಯನ್ನ ವಿರೋಧಿಸಿದ್ದರು.

ಇನ್ನು, ಯುವಕ ಅಮಿತ್​​​ ಪ.ಜಾತಿಗೆ ಸೇರಿದ್ದು, ಕೆಳ ಜಾತಿ ಎನ್ನುವ ಕಾರಣಕ್ಕೆ, ಯುವತಿಯ ಮನೆಯವರು ಭಾರೀ ವಿರೋಧ ವ್ಯಕ್ತಪಡಿಸಿದ್ದರು. ಅದರಂತೆ ಅಮಿತ್ ಪೋಷಕರೂ ಕೂಡಾ ಇವರ ಮದುವೆಗೆ ಒಪ್ಪಿರಲಿಲ್ಲ. ಇಷ್ಟೆಲ್ಲಾ  ಪೋಷಕರ ವಿರೋಧದ ನಡುವೆಯೂ ಕೂಡಾ ಚನ್ನಪಟ್ಟಣದ ಸಮೀಪ ದೇವಸ್ಥಾನದಲ್ಲಿ ಗೌತಮಿ ಮತ್ತು ಅಮಿತ್ ಪ್ರೇಮವಿವಾಹವಾಗಿದ್ದಾರೆ. ಇನ್ನು ಮದುವೆಗೂ ಮುನ್ನವೇ ಎರಡು ಬಾರಿ ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದ ಗೌತಮಿ ಮತ್ತು ಅಮಿತ್ ಗೆ ಪೊಲೀಸರು ಎರಡು ಬಾರಿ ದೂರ ಮಾಡಿದ್ದರು ಎನ್ನುವ ಆರೋಪ ಕೇಳಿ ಬಂದಿದೆ.

ಇದರಿಂದ ಬೇಸತ್ತು ಹೋಗಿದ್ದ ಪ್ರೇಮಿಗಳು ಕೆಲ ದಿನಗಳ ಕಾಲ ದೂರವಾಗಿ ಅವರವರ ಮನೆಗೆ ತೆರಳಿದ್ದರು.  ಅಲ್ಲದೇ ಮದುವೆ ಆಗೋಕೆ ಬರುವ ಕಷ್ಟಗಳನ್ನ ನಿಭಾಯಿಸುವ ಕುರಿತು ಪ್ಲಾನ್ ಕೂಡಾ ಮಾಡಿದ್ದರು. ಅದರಂತೆ ಪೋಷಕರು ಇವರನ್ನ ಬೇರೆ ಮಾಡಿದ್ದೇವೆ ಅಂತ ನೆಮ್ಮದಿಯಾಗಿದ್ರು. ಆದರೆ ಒಬ್ಬರನ್ನೊಬ್ಬರು ಪ್ರಾಣಕಿಂತ ಹೆಚ್ಚಾಗಿ ಪ್ರೀತಿಸಿದ್ದ ಇವರು ತಮ್ಮ ಪ್ರೀತಿಯನ್ನ ಮರೆತಿರಲಿಲ್ಲ. ಹಾಗಾಗಿ  ಇಬ್ಬರೂ  ಮನೆ ಬಿಟ್ಟು ಹೋಗಿ ಮದುವೆಯಾಗಿದ್ದಾರೆ.

ನ.26ರಿಂದ ದೆಹಲಿಯಲ್ಲಿ ರೈತರ ಅನಿರ್ದಿಷ್ಟಾವಧಿ ಧರಣಿ; ರಾಷ್ಟ್ರ ರಾಜಧಾನಿಗೆ ಮುತ್ತಿಗೆ ಹಾಕಲು ಅನ್ನದಾತರ ನಿರ್ಧಾರ

ಇನ್ನು, ವಿವಾಹದ ಬಳಿಕ ಬೆಂಗಳೂರಿನಲ್ಲಿ ಕೆಲಸ ಮಾಡ್ತಿದ್ದ, ನವ ಜೋಡಿಗೆ ಯುವತಿಯ ಮನೆಯವರು ವಿಲನ್ ಆಗಿದ್ರು. ಇವರಿಬ್ಬರು ಮದುವೆ ಆಗಿರುವ ವಿಷ ತಿಳಿದಿದ್ದರೂ ಕೂಡಾ ಮಗಳು ಕಾಣೆಯಾಗಿದ್ದಾಳೆ ಅಂತ ದೂರು ದಾಖಲಿಸಿದ್ದಾರೆ.  ಅಲ್ಲದೇ ಈ ಇಬ್ಬರಿಗಾಗಿ ಹುಡುಕಾಟ ನಡೆಸಿದ್ದು, ನೀವು ಎಲ್ಲೇ ಸಿಕ್ಕಿದರೂ ಬಿಡುವುದಿಲ್ಲ, ಅದು ಹೇಗೆ ಜೀವನ ಮಾಡುತ್ತಿರೀ ಅಂತ ಯುವತಿಯ ಪೋಷಕರು ಬೆದರಿಸಿದ್ದಾರೆ. ಇದರಿಂದ ಆತಂಕಕ್ಕೆ ಒಳಗಾಗಿರುವ ಯುವ ಪ್ರೇಮಿಗಳು ಪೋಷಕರು  ಕೊಲೆ ಬೆದರಿಕೆ ಹಾಕಿದ್ದಾರೆ ಎನ್ನುವ ಆರೋಪ ಕೂಡ ಮಾಡುತ್ತಿದ್ದಾರೆ.

ಈ ಸಂಬಂಧ ನವಜೋಡಿ ಚಿತ್ರದುರ್ಗ ಎಸ್ಪಿ ಜಿ.ರಾಧಿಕಾ ಅವರನ್ನು ಭೇಟಿ ಆಗಿದ್ದು, ಪ್ರಾಣ ರಕ್ಷಣೆಗಾಗಿ ಮನವಿ ಮಾಡಿದ್ದಾರೆ. ಈ ವೇಳೆ ಮಾತನಾಡಿದ ಅಮಿತ್, ಜಾತಿ ಕಾರಣಕ್ಕೆ ನಮ್ಮ ಪ್ರೀತಿಗೆ ಬಡಾವಣೆ ಮತ್ತು ಕೋಟೆ ಪೊಲೀಸರು ಕೂಡಾ  ವಿರೋಧ ಮಾಡುತ್ತಿದ್ದಾರೆ. ಪೋಷಕರಿಗೆ ಬೆಂಬಲ ನೀಡ್ತಿದ್ದಾರೆಂಬ ಗಂಭೀರ ಆರೋಪ ಮಾಡಿದ್ದಾರೆ. ನ್ಯಾಯಕ್ಕಾಗಿ ಚಿತ್ರದುರ್ಗ ಎಸ್ಪಿ ಕಚೇರಿ ಮೆಟ್ಟಿಲು ಹತ್ತಿರುವ ನವದಂಪತಿಗೆ ರಕ್ಷಣೆ ನೀಡುವ ಕುರಿತು ಎಸ್ಪಿ ಜಿ. ರಾಧಿಕ ಭರವಸೆ ನೀಡಿದ್ದಾರೆ.

ಒಟ್ಟಾರೆ  ಜಾತಿ ಎಲ್ಲೆ ಮೀರಿ ಮದುವೆಯಾಗಿದ್ದ ಯುವ ಪ್ರೇಮಿಗಳಿಗೆ ಪೊಷಕರು ಹಾಗೂ ರಕ್ಷಣೆ ನೀಡಬೇಕಿದ್ದ ಪೊಲೀಸರೇ ವಿಲನ್ ಆಗಿದ್ದಾರೆ. ಚಿತ್ರದುರ್ಗ ಎಸ್ಪಿ ರಾಧಿಕಾ ಈ ಯುವ ಪ್ರೇಮಿಗಳ ರಕ್ಷಣೆ ಮಾಡುವ ಭರವಸೆ ನೀಡಿದ್ದಾರೆ. ಇನ್ನಾದ್ರೂ ಕಾನೂನು ಇವರನ್ನ ರಕ್ಷಿಸುತ್ತಾ?  ಪೋಷಕರು ನೆಮ್ಮದಿಯ ಜೀವನಕ್ಕೆ ಅವಕಾಶ ಮಾಡಿಕೊಡ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.
Published by:Latha CG
First published: