• Home
  • »
  • News
  • »
  • state
  • »
  • Buffalo: ಕಿತ್ತೋದ ಬಸ್ ನಿಲ್ದಾಣದ ಅದ್ಧೂರಿ ಉದ್ಘಾಟನೆ; ಚೀಫ್ ಗೆಸ್ಟ್ ಆಗಿ ಬಂದಿದ್ದು ಎಂಎಲ್ಎ ಅಲ್ಲ, ಎಮ್ಮೆ!

Buffalo: ಕಿತ್ತೋದ ಬಸ್ ನಿಲ್ದಾಣದ ಅದ್ಧೂರಿ ಉದ್ಘಾಟನೆ; ಚೀಫ್ ಗೆಸ್ಟ್ ಆಗಿ ಬಂದಿದ್ದು ಎಂಎಲ್ಎ ಅಲ್ಲ, ಎಮ್ಮೆ!

ಎಂಎಲ್‌ಎ ಬದಲು ಎಮ್ಮೆಯೇ ಗೆಸ್ಟ್

ಎಂಎಲ್‌ಎ ಬದಲು ಎಮ್ಮೆಯೇ ಗೆಸ್ಟ್

ಉದ್ಗಾಟನಾ ಸಮಾರಂಭಕ್ಕೆ ಬರೋದಂದ್ರೆ ಬಹುತೇಕ ಎಂಎಲ್ಎಗಳಿಗೆ ಉಲ್ಲಾಸ, ಉತ್ಸಾಹ. ಆದ್ರೆ ಇಲ್ಲಿ ಬಸ್ ನಿಲ್ದಾಣದ ಉದ್ಘಾಟನೆಗೆ ಬಂದಿದ್ದು ಎಂಎಲ್ಎ ಅಲ್ಲ. ಬದಲಾಗಿ ಭಾರೀ ಭದ್ರತೆಯೊಂದಿಗೆ, ಗಜ ಗಾಂಭಿರ್ಯದಿಂದ ನಡೆದು ಬಂದಿದ್ದು ಎಮ್ಮೆ!

  • News18 Kannada
  • Last Updated :
  • Gadag-Betigeri (Gadag-Betageri)
  • Share this:

ಗದಗ: ಕಾಮಗಾರಿ (Work) ಪೂರ್ಣಗೊಂಡಿದ್ದು ಉದ್ಘಾಟನೆಗೆ ಸಿದ್ಧವಾಗಿತ್ತು. ಈ ಬಸ್ ನಿಲ್ದಾಣ (Bus Stand) ಕಟ್ಟಡದ ಉದ್ಘಾಟನೆ (Inauguration) ಯಾವಾಗ ಎಂದು ಎದುರು ನೋಡುತ್ತಿದ್ದ ಜನ ಅದಕ್ಕೊಂದು ಶುಭ ಮುಹೂರ್ತವನ್ನು ನಿಗದಿ ಮಾಡಿಯೇಬಿಟ್ಟರು. ಅವರೆಲ್ಲ ಎದುರು ನೋಡುತ್ತಿದ್ದ ಶುಭ ಸಮಯ ಬಂದೇಬಿಟ್ಟಿತು. ಗ್ರಾಮಸ್ಥರೆಲ್ಲರೂ (Villagers) ಸೇರಿ ಉದ್ಘಾಟಕರನ್ನು ಬಿಗಿ ಭದ್ರತೆಯೊಂದಿಗೆ, ದೊಡ್ಡ ಸ್ವರದ ಮೈಕ್ ಸ್ವಾಗತದೊಂದಿಗೆ, ಹೂಮಾಲೆಗಳಿಂದ, ಬ್ಯಾನರ್ ಗಳಿಂದ ಸಿಂಗಾರಗೊಂಡಿದ್ದ ಬಸ್ ನಿಲ್ದಾಣದ ಬಳಿ ಕರೆತಂದು ರಿಬ್ಬನ್ (Ribbon) ಕಟ್ ಮಾಡಿಸಿ ಉದ್ಘಾಟಿಸಿದ್ರು. ಪ್ರಸ್ತುತ ಲೋಕಾರ್ಪಣೆಗೊಂಡಿದ್ದು ತೆಂಗಿನ ಗರಿಗಳಿಂದ ಸಿದ್ಧಪಡಿಸಿದ್ದ ಬಸ್ ನಿಲ್ದಾಣ ಹಾಗೂ ಉದ್ಘಾಟಿಸಿದ್ದು ಯಾವುದೋ ರಾಜಕಾರಣಿ (Politician) ಅಥವಾ ಜನಪ್ರತಿನಿಧಿಯಲ್ಲ. ಎಂಎಲ್‌ಎ (MLA) ಬದಲಾಗಿ ಉದ್ಘಾಟನೆಗೆಂದು ಆಹ್ವಾನಿಸಿದ್ದು ಒಂದು ಎಮ್ಮೆಯನ್ನು (Buffalo).




ಎಂಎಲ್‌ಎ ಬದಲು ಎಮ್ಮೆಯೇ ಚೀಫ್ ಗೆಸ್ಟ್


ಹೌದು ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಬಾಲೇಹೊಸೂರು ಗ್ರಾಮದಲ್ಲಿ ಬಿದ್ದುಹೋಗಿರುವ ಬಸ್ ನಿಲ್ದಾಣದ ಎದುರು ತೆಂಗಿನ ಗರಿಯ ಮೂಲಕ ಚಪ್ಪರ ಕಟ್ಟಿ, ಚಪ್ಪರದ ಬಸ್ ನಿಲ್ದಾಣವನ್ನ ಉದ್ಘಾಟನೆ ಮಾಡಲಾಯ್ತು. ಕಿತ್ತೋಗಿರೋ ಬಸ್ ನಿಲ್ದಾಣದ ಉದ್ಘಾಟನೆಗೆ ಎಮ್ ಎಲ್ ಎ ಬದಲು ಎಮ್ಮೆಯನ್ನ ಚೀಫ್ ಗೆಸ್ಟ್ ಮಾಡಲಾಗಿತ್ತು.


ಎಮ್ಮೆಯಿಂದ ಉದ್ಘಾಟನೆ


ಶಾಸಕರು, ಸಂಸದರಿಂದ ಸಿಗದ ಸ್ಪಂದನೆ


ದಶಕದ ಹಿಂದೆಯೇ ಬಾಲೇಹೊಸೂರು ಗ್ರಾಮದ ಬಸ್ ನಿಲ್ದಾಣ ಬಿದ್ದು ಹೋಗಿವೆ.. ಈ ಬಗ್ಗೆ ಸ್ಥಳೀಯ ಶಾಸಕ ರಾಮಪ್ಪ ಲಮಾಣಿ, ಸಂಸದ ಶಿವಕುಮಾರ್ ಉದಾಸಿಯವರಿಗೆ ಮನವಿ ಸಲ್ಲಿಸಲಾಗಿತ್ತು. ಆದ್ರೆ ಸೂಕ್ತ ಭರವಸೆ ಸಿಕ್ಕಿರಲಿಲ್ವಂತೆ.. ಹೀಗಾಗಿ ಗ್ರಾಮಸ್ಥರು ಸೇರ್ಕೊಂಡು ಚಪ್ಪರದ ಬಸ್ ನಿಲ್ದಾಣ ಮಾಡಿ, ಉದ್ಘಾಟನೆಯನ್ನೂ ಮಾಡಿದಾರೆ.


ಇದನ್ನೂ ಓದಿ: Thief: ಮಹಿಳೆಯರಂತೆ ಡ್ರೆಸ್ ತೊಟ್ಟು ದೇವಸ್ಥಾನಕ್ಕೆ ಬರ್ತಾನೆ, ಆಮೇಲೆ ಮಾಡೋದು ಖತರ್ನಾಕ್ ಕೆಲ್ಸ!


 10 ವರ್ಷದ ಹಿಂದೆ ಹಾಳಾದ ಬಸ್ ನಿಲ್ದಾಣ


ಬಾಲೇಹೊಸೂರು ಗ್ರಾಮದಲ್ಲಿ ಸುಮಾರು 40 ವರ್ಷದ ಹಿಂದೆ ಬಸ್ ನಿಲ್ದಾಣ ನಿರ್ಮಾಣವಾಗಿತ್ತು. ಸುಮಾರು 10 ವರ್ಷದ ಹಿಂದೆಯೇ ಛಾವಣಿ ಕುಸಿದು ಬಸ್ ನಿಲ್ದಾಣದ ಕಟ್ಟಡ ಸಂಪೂರ್ಣವಾಗಿ ಹಾಳಾಗಿದೆ. ಕಟ್ಟಡದ ಆವರಣದಲ್ಲಿ ಕಸ ಚೆಲ್ಲುವ ಮೂಲಕ ಡಂಪಿಂಗ್ ಯಾರ್ಡ್ ಆಗಿ ಪರಿಣಮಿಸಿದೆ. ಗ್ರಾಮದ ಮಹಿಳೆಯರು ಬಸ್ ನಿಲ್ದಾಣದ ಪಕ್ಕದ ಕಟ್ಟೆ ಮೇಲೆ ಕೂತು ಬಸ್ ಗೆ ಕಾಯಬೇಕಾದ ಪರಿಸ್ಥಿತಿ ಇದೆ.


ಉದ್ಘಾಟನೆಗೊಂಡ ಬಸ್ ನಿಲ್ದಾಣ!


ಜನಪ್ರತಿನಿಧಿಗಳಿಗೆ ಬಿಸಿ ಮುಟ್ಟಿಸಿದ ಜನ


ಶಾಸಕ ರಾಮಪ್ಪ ಲಮಾಣಿ, ಸಂಸದ ಶಿವಕುಮಾರ್ ಉದಾಸಿ ಅವರಿಗೆ ಬಸ್ ನಿಲ್ದಾಣದ ದುರಸ್ಥಿ ಬಗ್ಗೆ ಮನವರಿಕೆ ಮಾಡಲಾಗಿತ್ತು. ಮನವಿಯನ್ನೂ ಸಲ್ಲಿಸಲಾಗಿದೆ ಅಂತಾ ರೈತ ಮುಖಂಡ ಲೋಕೇಶ್ ಜಾಲವಾಡಗಿ ಅವರು ಹೇಳ್ತಿದಾರೆ. ಸ್ಪಂದನೆ ಸಿಗದ ಕಾರಣ ವಿಶೇಷ ಪ್ರತಿಭಟನೆ ಮಾಡಿ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದಾರೆ.


ಎಮ್ಮೆಗೆ ಅದ್ಧೂರಿ ಸ್ವಾಗತ!


ಸೂಕ್ತ ಬಸ್ ನಿಲ್ದಾಣ ಇಲ್ಲದೇ ಜನರ ಪರದಾಟ


ಗ್ರಾಮದಲ್ಲಿ ಸುಮಾರು 5 ಸಾವಿರ ಜನ ಸಂಖ್ಯೆ ಇದೆ. ವಿದ್ಯಾಭ್ಯಾಸದ ನಿಮಿತ್ತ ನಿತ್ಯ 100 ವಿದ್ಯಾರ್ಥಿಗಳು ಲಕ್ಷ್ಮೇಶ್ವರ ಹಾಗೂ ಗುತ್ತಲ ಗ್ರಾಮಕ್ಕೆ ಹೋಗ್ತಾರೆ. ಬಸ್ ಗಾಗಿ ಕಾಯಲು ಬಸ್ ನಿಲ್ದಾಣದ ಪಕ್ಕದ ಹೋಟೆಲ್ ಕಟ್ಟೆ ಆಶ್ರಯಸಬೇಕಾಗಿದೆ ಅಂತಾ ಗ್ರಾಮಸ್ಥ ವಿರೂಪಾಕ್ಷ ಇಟಗಿ ಹೇಳಿದ್ದಾರೆ. ಮನವಿ ಸಲ್ಲಿಸಿ ರೋಸಿ ಹೋಗಿದ್ರಿಂದ ರೈತ್ರು ವಿನೂತನ ಕಾರ್ಯಕ್ರಮ ಮಾಡಿದ್ದಾರೆ. ಸ್ಪಂದನೆ ಸಿಗದಿದ್ದರೆ ಹೋರಾಟ ಮಾಡೋದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.


ಇದನ್ನೂ ಓದಿ: Blackmail: ಕೇಳಿ ಪ್ರೇಮಿಗಳೇ, ಖಾಸಗಿ ಕ್ಷಣ ಕಳೆಯೋ ಮುನ್ನ ಹುಷಾರ್! ಸಿಡಿ ಮಾಡಿ ಬ್ಲ್ಯಾಕ್‌ಮೇಲ್ ಮಾಡಬಹುದು ಖದೀಮರು


ಒಟ್ಟಿನಲ್ಲಿ ಸರ್ಕಾರ ಹಾಗೂ ಜನಪ್ರತಿ‌ನಿಧಿಗಳು ಇನ್ನಾದ್ರು ಎಚ್ಚೆತ್ತಗೊಂಡು ಬಾಲೆಹೋಸೂರು ಗ್ರಾಮಕ್ಕೆ ಬಸ್ ನಿಲ್ದಾಣ ನಿರ್ಮಾಣ ಮಾಡಿಕೊಡುವ ಕೆಲಸ ಮಾಡುತ್ತಾ ಕಾದು ನೋಡಬೇಕಿದೆ.

Published by:Annappa Achari
First published: