Raichur: ಕಣ್ಣು ಕಾಣದ ವಿಶೇಷಚೇತನ ಕೆಎಎಸ್​​ ಅಧಿಕಾರಿಯಾದ ಸ್ಪೂರ್ತಿದಾಯಕ ಕಥೆ

ಗ್ಯಾನಪ್ಪ ಹುಟ್ಟಿನಿಂದಲೇ ಚರ್ಮವು ತೊನ್ನು ಬಂದಂತೆ ಇದೆ. ಇದರೊಂದಿಗೆ ಅವರಿಗೆ ಶೇ.90ರಷ್ಡು ದೃಷ್ಠಿ ದೋಷವಿದೆ. ತೀರಾ ಮುಸುಕುಮುಸುಕಾಗಿ ಕಾಣುವ ಅವರು ಓದಲು ತಿರುಗಾಡಲು ಸಹ ಇನ್ನೊಬ್ಬರು ಸಹಾಯಬೇಕಾಗುತ್ತದೆ. ಹೀಗಿರುವ ಗ್ಯಾನಪ್ಪ ದುರ್ಗಪ್ಪ ದಂಪತಿಗೆ ಜನಿಸಿದವರು. ಇವರು ವಿಕಲಚೇತನರಾಗಿದ್ದು ಮಾತ್ರ ಇಡೀ ಕುಟುಂಬವನ್ನ ಚಿಂತೆಗೀಡು ಮಾಡಿತ್ತು.

news18-kannada
Updated:December 31, 2019, 4:13 PM IST
Raichur: ಕಣ್ಣು ಕಾಣದ ವಿಶೇಷಚೇತನ ಕೆಎಎಸ್​​ ಅಧಿಕಾರಿಯಾದ ಸ್ಪೂರ್ತಿದಾಯಕ ಕಥೆ
ಕೆಎಎಸ್​​ ಪರೀಕ್ಷೆ ಉತ್ತೀರ್ಣರಾದ ಗ್ಯಾನಪ್ಪ
  • Share this:
ರಾಯಚೂರು(ಡಿ.31): ಹುಟ್ಟಿನಿಂದಲೂ ಮೈ ಬಣ್ಣ ಅತ್ಯಂತ ಕೆಂಪು. ಬಿಸಿಲಿಗೆ ನಿಲ್ಲಲು ಆಗುವುದಿಲ್ಲ. ಅದರಲ್ಲೂ ಬಹುದೃಷ್ಠಿ ದೋಷವಿದೆ. ಇಂತಹ ವಿಶೇಷ ಚೇತನ ಈಗ ಕೆಎಎಸ್ ಪರೀಕ್ಷೆ ಪಾಸಾಗಿದ್ದಾರೆ. ಈ ಮೂಲಕ ರಾಜ್ಯ ಸಹಕಾರ ಇಲಾಖೆಯ ಉಪನಿಬಂಧಕ(ಡೆಪ್ಯುಟಿ ರಿಜಿಸ್ಟ್ರಾರ್​) ಹುದ್ದೆಗೇರುತ್ತಿದ್ದಾರೆ.

ಹೌದು, ಈ ವಿಶೇಷ ಚೇತನ ಅಂಗವೈಕಲತೆಯನ್ನು ಮೆಟ್ಟಿ ನಿಂತು ಉನ್ನತ ಹುದ್ದೆಗೇರುತ್ತಿದ್ದಾರೆ. ಶೈಕ್ಷಣಿಕವಾಗಿ ಹಿಂದುಳಿದಿರುವ ರಾಯಚೂರು ಜಿಲ್ಲೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಬರೆದು ಉನ್ನತ ಹುದ್ದೆಗೇರಿದ್ದವರ ಸಂಖ್ಯೆ ಕಡಿಮೆ. ಆದರೂ ಈ ಬಾರಿ ಕೆಪಿಎಸ್​​​ಸಿ ಪರೀಕ್ಷೆಯಲ್ಲಿ ಜಿಲ್ಲೆಯ 24 ಜನ ಪಾಸಾಗಿದ್ದಾರೆ. ಇವರ ಪೈಕಿ ಸಿಂಧನೂರು ತಾಲೂಕಿನ ಮಲ್ಲದಗುಡ್ಡದ ಗ್ಯಾನಪ್ಪ ಮುರಸಾಲ್ಗಿ ಎಂಬುವವರು ಒಬ್ಬರು. 

ಗ್ಯಾನಪ್ಪ ಹುಟ್ಟಿನಿಂದಲೇ ಚರ್ಮವು ತೊನ್ನು ಬಂದಂತೆ ಇದೆ. ಇದರೊಂದಿಗೆ ಅವರಿಗೆ ಶೇ.90ರಷ್ಡು ದೃಷ್ಠಿ ದೋಷವಿದೆ. ತೀರಾ ಮುಸುಕುಮುಸುಕಾಗಿ ಕಾಣುವ ಅವರು ಓದಲು ತಿರುಗಾಡಲು ಸಹ ಇನ್ನೊಬ್ಬರು ಸಹಾಯಬೇಕಾಗುತ್ತದೆ. ಹೀಗಿರುವ ಗ್ಯಾನಪ್ಪ ದುರ್ಗಪ್ಪ ದಂಪತಿಗೆ ಜನಿಸಿದವರು. ಇವರು ವಿಕಲಚೇತನರಾಗಿದ್ದು ಮಾತ್ರ ಇಡೀ ಕುಟುಂಬವನ್ನ ಚಿಂತೆಗೀಡು ಮಾಡಿತ್ತು.

ತನ್ನ ತಂದೆ-ತಾಯಿ ಚಿಂತೆ ದೂರ ಮಾಡುವಂತೆ ಈಗ ಗ್ಯಾನಪ್ಪ ಇತ್ತೀಚಿಗೆ ಪ್ರಕಟವಾದ ಕೆಪಿಎಸ್​​ಸಿ ಪರೀಕ್ಷೆ ಫಲಿತಾಂಶದಲ್ಲಿ 853  ರ್‍ಯಾಂಕ್ ಗಳಿಸಿದ್ದಾರೆ. 1994ರಲ್ಲಿ ಗಂಗಾವತಿ ಎಆರ್​​​ಡಿ ಸಂಸ್ಥೆಯ ಸಮನ್ವಯ ಶಿಕ್ಷಣ ಯೋಜನೆಯಡಿ ಮೆಟ್ರಿಕ್​​​ವರೆಗೂ ಓದಿದ್ದ ಗ್ಯಾನಪ್ಪ, ನಂತರ ಗಂಗಾವತಿಯ ಕೊಟ್ಟೂರೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದರು. ಮುಂದೆ ಗದಗಿನ ವೀರೇಶ್ವರ ಪುಣ್ಯಾಶ್ರಮದಲ್ಲಿದ್ದು, ಕಾಳಿದಾಸ ಶಿಕ್ಷಣ ಸಂಸ್ಥೆಯಲ್ಲಿ ಬಿಎಸ್​​ಡಬ್ಲ್ಯೂ ಪದವಿ ವ್ಯಾಸಂಗ ಮಾಡಿದರು. ಬಳಿಕ ಸ್ನಾತಕೋತ್ತರ ಪದವಿಗಾಗಿ ಕರ್ನಾಟಕ ವಿವಿಗೆ ಆಯ್ಕೆಯಾಗಿದ್ದರು.

ಇದನ್ನೂ ಓದಿ: ಸಬ್ಸಿಡಿ ದರದಲ್ಲಿ ಮದ್ಯ, ರಾತ್ರಿ 2 ಗಂಟೆವರೆಗೆ ಬಾರ್​​​: 21 ಸಾವಿರ ಕೋಟಿ ಆದಾಯ ಸಂಗ್ರಹದ ಟಾರ್ಗೆಟ್​; ಸಚಿವ ನಾಗೇಶ್​

ನಂತರ ಮುಂದೆ ಓದಲಾಗದೆ ತನ್ನೂರಿಗೆ ಮರಳಿ ಕೃಷಿ ಮಾಡಿಕೊಂಡಿದರು. ತಮ್ಮ ಹಿರಿಯರಿಂದ ಬಂದ 16 ಎಕರೆ ಭೂಮಿಯಲ್ಲಿ ಭತ್ತ ಬೆಳೆಯುವುದರೊಂದಿಗೆ ಹೈನೂಗಾರಿಕೆ, ಕುರಿ ಸಾಕಾಣಿಕೆ ಮಾಡುತ್ತಿದ್ದರು. ಅವರ ಪತ್ನಿ ಮೀನಾಕ್ಷಮ್ಮ ಸಹಕಾರ ನೀಡುತ್ತಿದ್ದಾರೆ. ಈ ಮಧ್ಯೆ ಬಾಲ್ಯದಿಂದಲೂ ಕೆಎಎಸ್ ಅಧಿಕಾರಿಯಾಗಬೇಕೆಂಬ ಕನಸು ಕಂಡಿದ್ದರು. ಆದರೆ ಕಣ್ಣು ಕಾಣದ ತಮಗೆ ಸಾಧ್ಯವೇ ಎಂದು ಸುಮ್ಮನೆ ಕುಳಿತುಕೊಳ್ಳದೇ ಬ್ರೈಲ್ ಲಿಪಿಯ ಮುಖಾಂತರ ಓದಿ ಪದವಿ ಪಡೆದರು. ಅಧುನಿಕ ಮಾಧ್ಯಮವಾದ ಯುಟ್ಯೂಬ್ ಸೇರಿದಂತೆ ವಿವಿಧ ಮಾಧ್ಯಮಗಳ ಮುಖಾಂತರ ಪ್ರಸ್ತುತ ವಿದ್ಯಾಮಾನಗಳ ಬಗ್ಗೆ ಅರಿತುಕೊಳ್ಳುತ್ತಿದ್ದರು. 

ಇನ್ನು ಪಿಯುಸಿ ಮುಗಿಸಿರುವ ಪತ್ನಿ ಮೀನಾಕ್ಷಮ್ಮ ಸಹ ಓದಿಗೆ ಸಹಾಯ ಮಾಡಿದ್ದಾರೆ. 2014ರಲ್ಲಿ ಕೆಪಿಎಸ್​​ಸಿ ಪರೀಕ್ಷೆ ಬರೆಯಲು ಮುಂದಾಗಿದ್ದರು. ಆದರೆ ಅವರಿಗೆ ವೈದ್ಯಕೀಯ ಪ್ರಮಾಣ ಪತ್ರ ಬರುವುದು ತಡವಾದ್ದರಿಂದ ಪರೀಕ್ಷೆ ಬರೆಯಲು ಆಗಿರಲಿಲ್ಲ. ಬಳಿಕ 2017ರಲ್ಲಿ ಕೆಪಿಎಸ್​​ಸಿ ಪರೀಕ್ಷೆ ಬರೆದು ಪಾಸ್​ ಮಾಡಿದ್ದಾರೆ. ಅಂತೆಯೇ ಈಗ ರಾಜ್ಯ ಸಹಕಾರ ಇಲಾಖೆಯ ಉಪನಿಬಂಧಕರಾಗುತ್ತಿದ್ದಾರೆ. ವಿಕಲಚೇತನರಿಂದ ಏನು ಆಗುವುದಿಲ್ಲ ಎಂದು ಕುಳಿತುಕೊಳ್ಳದೆ ಸರ್ಕಾರ ನೀಡುವ ಸೌಲಭ್ಯ ಬಳಸಿಕೊಂಡು ಕಷ್ಟಪಟ್ಟು ಓದಿದರೆ ಏನಾದರೂ ಸಾಧಿಸಬಹುದು. ನಾವು ಸಮಾಜಕ್ಕೆ ಹೊರೆ ಎಂಬ ಭಾವನೆಯಿಂದ ಹೊರಬಹುದು ಎನ್ನುತ್ತಾರೆ. ಮುಂದೆ ಅಧಿಕಾರಿಯಾಗಿ ಸಮಾಜಕ್ಕೆ ಒಳಿತಾಗುವ ಕೆಲಸ ಮಾಡುವುದರೊಂದಿಗೆ ತಮ್ಮಂಥ ವಿಕಲ ಚೇತನರಿಗೆ ಸಹಾಯವಾಗುವಂತೆ ಕೆಲಸ ಮಾಡುತ್ತೇನೆ ಎನ್ನುತ್ತಾರೆ ಗ್ಯಾನಪ್ಪ‌ ಮುರಸಾಲ್ಗಿ.
First published:December 31, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading