• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Bengaluru: ಕದ್ದ ಚಿನ್ನ ವಾಪಸ್ ಮಾಡು ಅಂದ್ರೆ ಹೈಡ್ರಾಮಾ! ವೈರಲ್​ ವಿಡಿಯೋ ಹಿಂದಿನ ಸೀಕ್ರೆಟ್ ರಿವೀಲ್

Bengaluru: ಕದ್ದ ಚಿನ್ನ ವಾಪಸ್ ಮಾಡು ಅಂದ್ರೆ ಹೈಡ್ರಾಮಾ! ವೈರಲ್​ ವಿಡಿಯೋ ಹಿಂದಿನ ಸೀಕ್ರೆಟ್ ರಿವೀಲ್

ವೈರಲ್​ ವಿಡಿಯೋ ದೃಶ್ಯಗಳು

ವೈರಲ್​ ವಿಡಿಯೋ ದೃಶ್ಯಗಳು

ಈ ವಿಡಿಯೋ ನೋಡಿದ ಯಾರೇ ಆಗಲಿ ಏನಪ್ಪಾ ಇದು, ಪೊಲೀಸರೇ ದೌರ್ಜನ್ಯ ಮಾಡ್ತಿದ್ದಾರಾ ಅಂತ ಕೆಲ ಸಮಯ ಅನುಮಾನ ಪಡುವುದರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ ವೈರಲ್​ ವಿಡಿಯೋ ಹಿಂದಿನ ಅಸಲಿ ಕಹಾನಿ ಕೇಳಿದ್ರೆ ಖಂಡಿತ ಶಾಕ್ ಆಗ್ತೀರಾ!

  • News18 Kannada
  • 4-MIN READ
  • Last Updated :
  • Bangalore [Bangalore], India
  • Share this:

ಬೆಂಗಳೂರು: ಕಳ್ಳ ಬಂಗಾರ ಕಡಿಮೆ ಕಾಸಿಗೆ ಸಿಗುತ್ತೆ ಅಂತ ಇಲ್ಲೊಬ್ಬ ಖರೀದಿದಾರ ಹಣ ಕೊಟ್ಟು ಖರೀದಿ ಮಾಡಿದ್ದ. ಆದರೆ ಇತ್ತ ಪೊಲೀಸರ (Police) ಕೈಗೆ ಸಿಕ್ಕಿಬಿದ್ದಿದ್ದ ಕಳ್ಳ ಖಾಕಿ ಬೂಟೇಟು ತಿಂದು, ಗಿರವಿಯವನ ಹೆಸರು ಹೇಳಿದ್ದ. ಕಳ್ಳತನವಾಗಿದ್ದ ಚಿನ್ನದ ರಿಕವರಿಗೆ ಮುಂದಾಗಿದ್ದ ಪೊಲೀಸರು ಅಂಗಡಿ ಮಾಲೀಕನಿಗೆ (Jewellery Shop Owner) ನೋಟಿಸ್ (Notice)​ ನೀಡಿದ್ದರು. ಆದರೆ ಪೊಲೀಸರ ನೋಟಿಸ್​​ಗೆ ಕ್ಯಾರೆ ಎನ್ನದ ಆತ ಪೊಲೀಸರು ವಿಚಾರಣೆಗೆ ಬಂದ ಸಂದರ್ಭದಲ್ಲಿ ಹೈಡ್ರಾಮಾ ಕ್ರಿಯೇಟ್ ಮಾಡಿದ. ಇದರಿಂದ ಅಸಮಾಧಾನಗೊಂಡ ಪೊಲೀಸರು ಮಾಲೀಕನನ್ನು ಎತ್ತಾಕೊಂಡ್ ಹೋಗಿದ್ದು, ಈ ವೇಳೆ ಅಂಗಡಿ ಮಾಲೀಕನ ಕುಟುಂಬಸ್ಥರು (Family) ಅಡ್ಡಪಡಿಸಿ, ಆಕ್ರೋಶ ವ್ಯಕ್ತಪಡಿಸಿದ್ದರು.


ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Social Media) ಸಖತ್ ವೈರಲ್ ಆಗಿತ್ತು. ಅಂಗಡಿ ಮಾಲೀಕನ ಕುಟುಂಸ್ಥರು ಪೊಲೀಸರ ವಿರುದ್ಧ ಆರೋಪ ಮಾಡಲು ವಿಡಿಯೋ ವೈರಲ್ ಮಾಡಿದ್ದರು ಎನ್ನಲಾಗಿದೆ. ಅಂದಹಾಗೇ, ನಾವು ಹೇಳ್ತಿರುವುದು ಬೆಂಗಳೂರಿನಲ್ಲಿ (Bengaluru) ನಡೆದ ಘಟನೆಯೊಂದರ ವಿವರಗಳಾಗಿದ್ದು, ಏನಿದು ವೈರಲ್ ವಿಡಿಯೋ (Viral Video) ಹಿಂದಿನ ಸೀಕ್ರೆಟ್​ ಅಂತ ಹೇಳ್ತೀವಿ ಕೇಳಿ.


ವೈರಲ್​ ವಿಡಿಯೋದಲ್ಲಿ, ಅಯ್ಯೋ ನನ್ನನ್ನನು ಪೊಲೀಸರು ಹೊತ್ತೊಯ್ತಿದ್ದಾರೆ ಕಾಪಾಡಿ ಕಾಪಾಡಿ ಅಂತ ಓರ್ವ ಬೊಬ್ಬೆ ಹೊಡಿತಿದ್ದಾರೆ. ಈ ವಿಡಿಯೋ ನೋಡಿದ ಯಾರೇ ಆಗಲಿ ಏನಪ್ಪಾ ಇದು, ಪೊಲೀಸರೇ ದೌರ್ಜನ್ಯ ಮಾಡ್ತಿದ್ದಾರಾ ಅಂತ ಕೆಲ ಸಮಯ ಅನುಮಾನ ಪಡುವುದರಲ್ಲಿ ಯಾವುದೇ ಸಂದೇಹವಿಲ್ಲ.


ವೈರಲ್​ ವಿಡಿಯೋ ದೃಶ್ಯಗಳು


ಇದನ್ನೂ ಓದಿ: Crime News: ಮದುವೆ ಮಾಡುತ್ತಿಲ್ಲ, ಪಿತ್ರಾರ್ಜಿತ ಆಸ್ತಿ ಹಂಚುತ್ತಿಲ್ಲ ಎಂದು ಅಣ್ಣನನ್ನೇ ಕೊಲೆಗೈದಿದ್ದ ತಮ್ಮ ಅರೆಸ್ಟ್​!


ಪೊಲೀಸರೇ ದೌರ್ಜನ್ಯ ಎಸಗಿದವರ ರೀತಿ ವೀಡಿಯೋ


ವಿಷಯಕ್ಕೆ ಬರೋದಾದರೆ, ವಿಡಿಯೋದಲ್ಲಿ ಬೊಬ್ಬೆ ಹೊಡಿತಿರುವ ವ್ಯಕ್ತಿಯ ಹೆಸರು ಬವರ್ ಲಾಲ್ ಅಂತ. ಬೆಂಗಳೂರಿನ ಡಿಜೆ ಹಳ್ಳಿಯ ಪಿಳ್ಳಪ್ಪ ಗಾರ್ಡನ್ ನಿವಾಸಿಯಾದ ಬವರ್ ಲಾಲ್ ನನ್ನು ಪೊಲೀಸರು ಯಾಕೆ ಎತ್ತಾಕ್ಕೊಂಡ್ ಹೋಗ್ತಿದ್ದಾರೆ ಅಂತ ಎಂದರೆ, ಈ ಪುಣ್ಯಾತ್ಮ ಬವರ್ ಲಾಲ್ ಮನೆಗಳ್ಳತನ ಮಾಡಿದ್ದ ಕಳ್ಳನಿಂದ ಚಿನ್ನವನ್ನ ಗಿರಿವಿ ಇಟ್ಕೊಂಡು ಪೊಲೀಸರು ಬಂದು ಕೇಳಿದಾಗ ನನಗೆ ಏನು ಗೊತ್ತಿಲ್ಲ ಅಂತ ಉಡಾಫೆ ಉತ್ತರ ನೀಡಿದ್ದನಂತೆ. ಪೊಲೀಸರು ಮಹಜರು ಕಾಪಿ ಹಿಡಿದು ತಾಳ್ಮೆಯಿಂದ ಕೇಳಿದರು ಪೊಲೀಸರೇ ದೌರ್ಜನ್ಯ ಎಸಗಿದವರ ರೀತಿ ವೀಡಿಯೋ ಮಾಡಿ ಹರಿಬಿಟ್ಟಿದ್ದಾನೆ.


ಇತ್ತೀಚಿಗೆ ವಿವೇಕ್ ನಗರ ಪೊಲೀಸರು ಶ್ರೀನಿವಾಸ ಅಲಿಯಾಸ್ ಅಪ್ಪು ಎಂಬಾತನ್ನು ಮನೆಗಳ್ಳತನ ಕೇಸ್ ನಲ್ಲಿ ಕರೆದುಕೊಂಡು ಬಂದಿದ್ದರು. ಈ ವೇಳೆ ಕಳ್ಳ ಶ್ರೀನಿವಾಸ ಅಶೋಕ್ ನಗರ, ಜೆಬಿ ನಗರ, ಹೆಚ್​​ಎಎಲ್ ಸೇರಿದಂತೆ ಹಲವು ಭಾಗದಲ್ಲಿ 8ಕ್ಕೂ ಹೆಚ್ಚು ಮನೆಗಳನ್ನ ದೋಚಿರುವುದಾಗಿ ತಪ್ಪೊಪ್ಪಿಕೊಂಡಿದ್ದ. ಕದ್ದ ಚಿನ್ನಾಭರಣವನ್ನು ಹತ್ತಾರು ಕಡೆ ಅಡವಿಟ್ಟಿರುವುದಾಗಿಯೂ ಬಾಯ್ಬಿಟ್ಟಿದ್ದ.




ಅದರಂತೆ ತನಿಖೆ ಶುರು ಹಚ್ಚಿಕೊಂಡ ಪೊಲೀಸರಿಗೆ ಈ ಬವರ್ ಲಾಲ್​​ನ ಅಂಗಡಿಯಲ್ಲೂ ಕಳ್ಳ 54 ಗ್ರಾಂ ನಷ್ಟು ಚಿನ್ನವನ್ನ ಅಡವಿಟ್ಟಿರುವುದು ವಿಚಾರಣೆ ವೇಳೆ ತಿಳಿದು ಬಂದಿತ್ತು. ಮಹಜರು ಕಾಪಿ ಹಿಡಿದು ಪೊಲೀಸರು ಚಿನ್ನಾಭರಣ ರಿಕವರಿ ಮಾಡಲು ಬಂದಿದ್ದರು. ಈ ವೇಳೆ ಬವರ್ ಲಾಲ್ ಪೊಲೀಸರೊಂದಿಗೆ ಕಿರಿಕ್ ತೆಗೆದಿದ್ದಾನೆ ಎನ್ನಲಾಗಿದೆ. ಪೊಲೀಸರ ನೋಟಿಸ್ ಗೆ ಡೋಂಟ್ ಕೇರ್ ಅಂದಿದ್ದ ಬವರ್ ಲಾಲ್ ನನ್ನ ಅಂಗಡಿಯಿಂದಲೇ ಪೊಲೀಸರು ಎತ್ತಾಕ್ಕೊಂಡು ಹೋಗಿದ್ದಾರೆ.


ಇದನ್ನೂ ಓದಿ: Crime News: ಪ್ರೀತಿಸಿ ಕೈ ಕೊಟ್ಟ ಯುವತಿ; ಹಾಸನ ಯುವಕ ಚೆನ್ನೈ ಲಾಡ್ಜ್​ನಲ್ಲಿ ನೇಣಿಗೆ ಶರಣು, ಅಸಲಿಗೆ ಆಗಿದ್ದೇನು?


ಕಳ್ಳ ಪೊಲೀಸರ ವಿಚಾರಣೆಯಲ್ಲಿ ಸತ್ಯ ಬಾಯ್ಬಿಟ್ಟಿದ್ದ. ಆದರೆ, ಈ ಬವರ್ ಲಾಲ್ ಪೊಲೀಸರಿಗೆ ನಾಟಕದ ಪಾಠ ಮಾಡೋಕೆ ಹೋಗಿ ಇದೀಗ ಜೈಲೂಟಕ್ಕೆ ರೆಡಿಯಾಗಿ ಕುಂತಿದ್ದಾನೆ.

Published by:Sumanth SN
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು