ಮೈಸೂರು ದಸರಾ 2019: ದಸರಾ ಭದ್ರತೆಗೆ 8407 ಪೊಲೀಸರ ನಿಯೋಜನೆ ; ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ

ಅರಮನೆ ಒಳ ಹಾಗೂ ಹೊರ ಆವರಣ, ಜಂಬೂ ಸವಾರಿ ಮಾರ್ಗ, ಪಂಜಿನ ಕವಾಯತು ಮೈದಾನ, ಚಾಮುಂಡಿಬೆಟ್ಟ ಸೇರಿದಂತೆ ಪ್ರಮುಖ ಪ್ರವಾಸಿ ತಾಣಗಳ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

G Hareeshkumar | news18-kannada
Updated:September 24, 2019, 2:14 PM IST
ಮೈಸೂರು ದಸರಾ 2019: ದಸರಾ ಭದ್ರತೆಗೆ 8407 ಪೊಲೀಸರ ನಿಯೋಜನೆ ; ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ
ಸಾಂದರ್ಭಿಕ ಚಿತ್ರ
  • Share this:
ಮೈಸೂರು(ಸೆ.24): ಈ ಬಾರಿ ದಸರಾ ಮಹೋತ್ಸವಕ್ಕೆ 212 ಸಿಸಿ ಕ್ಯಾಮರಾಗಳನ್ನು ಅಳವಡಿಸಿದ್ದು, ಯಾವುದೇ ಅಹಿಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಜಂಬೂ ಸವಾರಿ ಮೆರವಣಿಗೆ ಸಾಗುವ ಮಾರ್ಗದಲ್ಲಿ ಡ್ರೋಣ್ ಕ್ಯಾಮರಾ ಮೂಲಕ ಹದ್ದಿನ ಕಣ್ಣು ಇರಿಸಲಾಗಿದೆ ಎಂದು ಎಂದು ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ತಿಳಿಸಿದ್ದಾರೆ.

ಅರಮನೆ ಒಳ ಹಾಗೂ ಹೊರ ಆವರಣ, ಜಂಬೂ ಸವಾರಿ ಮಾರ್ಗ, ಪಂಜಿನ ಕವಾಯತು ಮೈದಾನ, ಚಾಮುಂಡಿಬೆಟ್ಟ ಸೇರಿದಂತೆ ಪ್ರಮುಖ ಪ್ರವಾಸಿ ತಾಣಗಳ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡುವ ಜೊತೆಗೆ ದಸರಾ ಕಾರ್ಯಕ್ರಮಗಳು ನಡೆಯುವ ಸ್ಥಳಗಳಿಗೆ ಹೆಚ್ಚುವರಿ ಸಿಬ್ಬಂದಿ ಒದಗಿಸಿ, ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗುವುದು ಎಂದು ತಿಳಿಸಿದರು.

ಮೆರೆವಣಿಗೆ ಮಾರ್ಗದಲ್ಲಿ 212 ಸಿಸಿಟಿವಿ ಅಳವಡಿಕೆ

ಮೆರವಣಿಗೆ ಮಾರ್ಗದಲ್ಲಿ 212 ಸಿಸಿ ಕ್ಯಾಮಾರ ಅಳವಡಿಕೆ ಮಾಡಲಾಗಿದ್ದು,  ಮೈಸೂರಿನಾದ್ಯಂತ ಒಟ್ಟು ಸಾರ್ವಜನಿಕರು ಅಳವಡಿಸಿರುವ 11,917 ಸಿಸಿ ಕ್ಯಾಮರಾಗಳ‌ ದೃಶ್ಯಗಳ ಸಹಕಾರ ಪಡೆಯಲು ನಿರ್ಧಾರ ಮಾಡಲಾಗಿದ್ದು, ಅರಮನೆ ಹಾಗೂ ಬನ್ನಿಮಂಟಪ ಗೇಟ್‌ನಲ್ಲಿ ಬಾಡಿಗೆ ಕ್ಯಾಮರಾ ಇರುವ ಸಿಬ್ಬಂದಿಗಳ‌ ನಿಯೋಜನೆ ಮಾಡಲಾಗುವುದು. ಈ ಬಾರಿ ದಸರಾ ಮೆರವಣಿಗೆಯಂದು 15 ಲಕ್ಷ ಜನರು ಬರುವ ನಿರೀಕ್ಷೆ ಇದೆ. ಮುಂಜಾಗ್ರತಾ ಕ್ರಮವಾಗಿ ಮೈಸೂರು ನಗರದಾದ್ಯಂತ ವ್ಯಾಪಕ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗುವುದು ಎಂದು ಹೇಳಿದರು.

ಭದ್ರತೆಗೆ 8407 ಪೊಲೀಸರ ನಿಯೋಜನೆ

ಈ ಬಾರಿ ದಸರಾಗಾಗಿ ಎರಡು ಹಂತಗಳಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಸೆಪ್ಟೆಂಬರ್ 29 ರಿಂದ ಅಕ್ಟೋಬರ್​ 5 ರವರೆಗೆ ಮೊದಲ ಹಂತ,  ಅಕ್ಟೋಬರ್ 6 ರಿಂದ ಅಕ್ಟೋಬರ್​ 8 ರವೆಗೆ ಎರಡನೆ ಹಂತದ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಯನ್ನು ಮಾಡಲಾಗಿದೆ. ಇಡೀ ದಸರಾಗೆ 8407‌ ಮಂದಿ ಸಿಬ್ಬಂದಿಗ:ಳನ್ನು ನಿಯೋಜನೆ ಮಾಡಲಾಗುವುದು. ಇದರಲ್ಲಿ ಮೈಸೂರು ನಗರದ 2978 ಪೊಲೀಸರು.
ಹೊರ ಜಿಲ್ಲೆಗಳಿಂದ 4429 ಪೊಲೀಸರು ಹಾಗೂ 1000 ಮಂದಿ ಹೋಂ ಗಾರ್ಡ್ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗುವುದು ಎಂದರುಇದನ್ನೂ ಓದಿ:  ದಸರಾ ಉದ್ಘಾಟಕರಾಗಿ ಸಾಹಿತಿ ಎಸ್​.ಎಲ್​.ಭೈರಪ್ಪ ಅವರಿಗೆ ಸರ್ಕಾರದಿಂದ ಅಧಿಕೃತ ಆಹ್ವಾನ

ಎಸ್​​ಪಿ/ಡಿಸಿಪಿ ಹುದ್ದೆಯ 14, ಎಸಿಪಿ/ಡಿವೈಎಸ್ಪಿ ಹುದ್ದೆಯ 54, ಪಿಎಸ್​ಐ/ಆರ್​ಪಿಐ ಹುದ್ದೆಯ 153, ಪಿಎಸ್​ಐ/ಆರ್​ಎಸ್​ಎ ಹುದ್ದೆಯ 336, ಎಎಸ್​ಐ/ಎಆರ್​ಎಸ್ಐ ಹುದ್ದೆಯ 703, ಹೆಡ್​​ ಕಾನ್ಸಸ್ಟೇಬಲ್​​​ / ಕಾನ್ಸಸ್ಟೇಬಲ್​​ ಹುದ್ದೆಯ 6147  ಹಾಗೂ  ಗೃಹರಕ್ಷಕ ದಳದ 1000 ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗುವುದು ಎಂದು ತಿಳಿಸಿದರು.

ವರದಿ : ಪುಟ್ಟಪ್ಪ

First published:September 24, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ