ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಗಂಗಮ್ಮ ದೇವಾಲಯದಲ್ಲಿ (Gangamma Temple, Malleshwaram) ಪೂಜೆ ಮುಗಿಸಿ ಹಿಂದಿರುಗುತ್ತಿದ್ದ ಕಾಳಿ ಮಠದ ರಿಷಿ ಕುಮಾರ ಸ್ವಾಮೀಜಿ (Rishikumar Swamiji, Bengaluru) ಮೇಲೆ ಗುಂಪೊಂದು ದಾಳಿ ನಡೆಸಿ ಮುಖಕ್ಕೆ ಮಸಿ ಬಳಿದಿದೆ. ರಿಷಿ ಕುಮಾರ ಸ್ವಾಮೀಜಿ ನಾಡಪ್ರಭು ಕೆಂಪೇಗೌಡ (Nadaprabhu Kempegowda) ಮತ್ತು ರಾಷ್ಟ್ರಕವಿ ಕುವೆಂಪು (Kuvempu) ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಆರೋಪಿಸಿದೆ. ನಿನ್ನೆ ಬೆಂಗಳೂರಿಗೆ ದೇವಸ್ಥಾನಕ್ಕೆ ಕಾಳಿ ಸ್ವಾಮಿ (Kali Swamy) ಬಂದಿರುವ ವಿಷಯ ತಿಳಿದ ಕರ್ನಾಟಕ ರಕ್ಷಣಾ ವೇದಿಕೆ ತಂಡ ದಾಳಿ ನಡೆಸಿ ಮುಖಕ್ಕೆ ಮಸಿ ಎರಚಿದೆ. ಈ ವೇಳೆ ತಳ್ಳಾಟ ನೂಕಾಟ ನಡೆದಿದ್ದರಿಂದ ರಿಷಿ ಕುಮಾರ ಸ್ವಾಮೀಜಿ ಗಾಯಗೊಂಡಿದ್ದರು. ಖಾಸಗಿ ಆಸ್ಪತ್ರೆಗೆ ತೆರಳಿ ಪ್ರಾಥಮಿಕ ಚಿಕಿತ್ಸೆ ಪಡೆದುಕೊಂಡಿದ್ದಾರೆ ಎಂದು ಟಿವಿ 9 ಕನ್ನಡ ವರದಿ ಮಾಡಿದೆ.
ಇನ್ನು ತಮ್ಮ ಮೇಲೆ ಕಪ್ಪು ಮಸಿ ಎರಚಿರುವ ಕುರಿತು ಕಾಳಿ ಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಕುವೆಂಪು ಮತ್ತು ಕೆಂಪೇಗೌಡರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿಲ್ಲ. ಒಂದು ವೇಳೆ ನಾನು ಆ ರೀತಿಯ ಹೇಳಿಕೆ ನೀಡಿದ್ರೆ ಸಾಬೀತು ಮಾಡಲಿ ಎಂದು ಕಾಳಿ ಸ್ವಾಮಿ ಬಹಿರಂಗ ಸವಾಲು ಹಾಕಿದ್ದಾರೆ.
ದೂರು ದಾಖಲಿಸಲು ನಿರ್ಧಾರ
ಈ ಘಟನೆ ಸಂಬಂಧ ಕಾನೂನು ಹೋರಾಟ ನಡೆಸುತ್ತೇನೆ. ಮುಖಕ್ಕೆ ಮಸಿ ಬಳಿದಿರುವ ಕುರಿತು ಕಾಳಿಕಾ ಸೇನೆಯ ಕಾರ್ಯದರ್ಶಿಗಳು ಅನಾಮಧೇಯರ ವಿರುದ್ಧ ದೂರು ನೀಡಲಿದ್ದಾರೆ ಎಂದು ಹೇಳಿದ್ದಾರೆ. ಇದೊಂದು ಪೂರ್ವಯೋಜಿತ ದಾಳಿ ಎಂದು ಕಾಳಿ ಸ್ವಾಮಿ ಆರೋಪಿಸಿದ್ದಾರೆ.
ಇದನ್ನೂ ಓದಿ: Bengaluru: ಕೋವಿಡ್ ಸೋಂಕಿತರ ಆರೈಕೆಗಾಗಿ ಮದುವೆ ಮುಂದೂಡಿದ್ದ ನರ್ಸ್ ಗೆ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿ
ನಾನು ನಿಮ್ಮನ್ನು ತಲುಪಿದ್ದೇನೆ
ನಾನು ಇದನ್ನು ಮಸಿ ಎಂದು ತಿಳಿದುಕೊಳ್ಳಲು. ಬದಲಾಗಿ ಇದೊಂದು ಮೆಟ್ಟಿಲು ಎಂದು ಅರ್ಥ ಮಾಡಿಕೊಳ್ಳುತ್ತೇನೆ. ನಮ್ಮ ಹೋರಾಟದ ವೇಗ ಹೆಚ್ಚಾಗಿದ್ದರಿಂದ ಕೆಲವರಿಗೆ ಆತಂಕವಾಗಿದೆ. ಆದ್ದರಿಂದ ಈ ಘಟನೆ ನಡೆದಿದೆ. ಇದರಿಂದ ಮುಸ್ಲಿಮರಿಗೆ ಖುಷಿ ಆಗಿರುತ್ತೆ. ಮಸಿ ಬಳೆದ ಎಡಚರೇ ಖುಷಿ ಆಗಬೇಡಿ. ನೀವು ಮಸಿ ಬಳೆಯಲು ಬಂದಿದ್ದೀರಿ ಎಂದ್ರೆ ನಾನು ನಿಮ್ಮನ್ನು ತಲುಪಿದ್ದೇನೆ ಎಂದರ್ಥ ಎಂದು ತಿರುಗೇಟು ನೀಡಿದರು.
ಗಂಗಮ್ಮ ದೇವಾಲಯದಲ್ಲಿ ವಿಶೇಷ ಪೂಜೆ
ಮಲ್ಲೇಶ್ವರಂನ ಗಂಗಮ್ಮ ದೇವಾಲಯದಲ್ಲಿ ಕಾಳಿಕಾ ಸಂಘಟನೆಯಿಂದ ವಿಶೇಷ ಪೂಜೆ ಆಯೋಜಿಸಲಾಗಿತ್ತು. ಈ ಪೂಜೆ ಕಾಳಿ ಸ್ವಾಮಿ ಆಗಮಿಸಿದ್ದರು. ಪೂಜೆ ನಂತರ ಹಿಂದಿರುಗುತ್ತಿದ್ದ ವೇಳೆ ಈ ಘಟನೆ ನಡೆದಿದೆ.
BJPಗೂ- ಶ್ರೀರಾಮಸೇನೆಗೂ ಸಂಬಂಧವಿಲ್ಲ; ಪ್ರಮೋದ್ ಮುತಾಲಿಕ್
ಬಿಜೆಪಿಗೂ ಶ್ರೀರಾಮಸೇನೆಗೂ (Sri Ram sene) ಸಂಬಂಧವಿಲ್ಲ. ಬಿಜೆಪಿಯಲ್ಲಿ ಆರ್ಎಸ್ಎಸ್ (RSS), ಬಜರಂಗದಳ ಇದೆ. ನಾವು ಯಾವುದೇ ಪಕ್ಷಕ್ಕೆ ಸೇರಿದವರಲ್ಲ, ಶ್ರೀ ರಾಮ ಸೇನೆ ಸ್ವತಂತ್ರರು ಎಂದು ಶ್ರೀರಾಮಸೇನೆ ಮುಖಂಡ ಪ್ರಮೋದ್ ಮುತಾಲಿಕ್ ತಿಳಿಸಿದ್ದಾರೆ.
ಶ್ರೀ ರಾಮ ಸೇನೆ ಬಿಜೆಪಿ ಎರಡೂ ಒಂದೇ ಎಂದು ಹರಿಹಾಯ್ದ ಎಚ್ಡಿ ಕುಮಾರಸ್ವಾಮಿ ಟೀಕೆ ವಿಚಾರವಾಗಿ ಆಕ್ರೋಶ ವ್ಯಕ್ತಪಡಿಸಿ ಮಾತನಾಡಿದ ಪ್ರಮೋದ್ ಮುತಾಲಿಕ್ (Pramod Muthalik), ಕುಮಾರಸ್ವಾಮಿಯವರೇ ನಾನು ಯಾರ ಮುಲಾಜಿನಲ್ಲಿಲ್ಲ. ನನಗೆ ದೇಶ ಮುಖ್ಯ,ಹಿಂದುತ್ವ ಮುಖ್ಯ. ಬಿಜೆಪಿಯವರ ಬಾಲ ಹಿಡಿದುಕೊಂಡು ಓಡಾಡುವವನು ನಾನಲ್ಲ ಎಂದು ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ: ಮೂರೇ ದಿನದಲ್ಲಿ ಸಿಗಲಿದೆ SSLC ಉತ್ತರ ಪತ್ರಿಕೆ: ನಕಲು ಪ್ರತಿ ಪಡೆಯೋದು ಹೇಗೆ?
ದೇಗುಲ ಒಡೆದು ಮಸೀದಿ ನಿರ್ಮಾಣ
ಕಾಶಿಯ ದೇಗುಲದ ಒಡೆದು ಮೀಸಿದಿ ಕಟ್ಟಿದ್ದಾರೆ. ಈಗ ನ್ಯಾಯಾಲಯ ವಿಡಿಯೋ ಮಾಡಲು ಸೂಚನೆ ನೀಡಿರುವುದರಿಂದ ಇವರಿಗೆ ಭಯ ಆಗಿದೆ. ಮೇ 17ರಂದು ಏನಿದೆ ಎಂಬುದು ತಿಳಿಯಲಿದೆ. ದೇಶದ್ರೋಹಿ, ಮತಾಂಧ ಔರಂಗಜೇಬ ಏನೇನು ಮಾಡಿದ್ದಾನೆ ಎನ್ನುವುದು ಬಯಲಾಗಿದೆ. ಜ್ಞಾನವಾಪಿ ದೇಗುಲ ನಮ್ಮದಾಗಲಿದೆ ಎಂಬ ಭರವಸೆ ನಮಗೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ