CET Result: ಸಿಇಟಿ ಫಲಿತಾಂಶದಲ್ಲಿ ರಿಪೀಟರ್ಸ್​ಗೆ ಅನ್ಯಾಯ; ಸಚಿವರ ಮನೆ ಮುಂದೆ ಪ್ರತಿಭಟನೆ​

ಸಿಇಟಿ ಪರೀಕ್ಷೆ ಫಲಿತಾಂಶದ (CET Result) ಬೆನ್ನಲ್ಲೇ ಕೆಇಎ ಬೋರ್ಡ್ ಮುಂದೆ ರಿಪೀಟರ್ ವಿದ್ಯಾರ್ಥಿ ಹಾಗೂ ಪೋಷಕರು (Parents) ಆಕ್ರೋಶ ಹೊರಹಾಕಿದ್ದಾರೆ. 

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು (ಜು. 30): ಸಿಇಟಿ ಪರೀಕ್ಷೆ ಫಲಿತಾಂಶದ (CET Result) ಬೆನ್ನಲ್ಲೇ ಕೆಇಎ ಬೋರ್ಡ್ ಮುಂದೆ ರಿಪೀಟರ್ಸ್​ ಹಾಗೂ ಪೋಷಕರು (Parents) ಆಕ್ರೋಶ ಹೊರಹಾಕಿದ್ದಾರೆ.  ಸಿಇಟಿ ರಿಪೀಟರ್ಸ್​ಗಳಿಗೆ (Repeaters) ಫಲಿತಾಂಶದಲ್ಲಿ ಅನ್ಯಾಯವಾಗಿದೆ ಎನ್ನುವ ಕೂಗು ಕೇಳಿ ಬಂದಿದೆ. ಪ್ರತಿ ವರ್ಷ CET ಮಾರ್ಕ್ಸ್ ಜೊತೆ ಪಿಯು ಮಾರ್ಕ್ಸ್ (PUC Markes) ಸೇರಿಸಿ ರಿಸಲ್ಟ್ ನೀಡಲಾಗ್ತಿತ್ತು. ಆದ್ರೆ ಕಳೆದ ಬಾರಿ ಕೋವಿಡ್ ಹಿನ್ನೆಲೆ ಪಿಯು ಪರೀಕ್ಷೆ ರದ್ದಾಗಿದೆ. ಕೇವಲ ಸಿಇಟಿ ಪರೀಕ್ಷೆಯ ಅಂಕವನ್ನ ಮಾತ್ರ ಪರಿಗಣನೆಗೆ ತೆಗೆದುಕೊಳ್ಳಲಾಗಿತ್ತು. ಈ ಬಾರಿ ಪರೀಕ್ಷೆ ಬರೆದ ರಿಪೀಟರ್​ ವಿದ್ಯಾರ್ಥಿಗಳಿಗೆ ಕೇವಲ ಸಿಇಟಿ ಅಂಕ ಪರಿಗಣನೆಗೆ ಮಾಡಲಾಗಿದೆ. ಆದ್ರೆ ಈ ಬಾರಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಪಿಯು+CET ಮಾರ್ಕ್ಸ್ ಸೇರಿಸಿ ಫಲಿತಾಂಶ ನೀಡಲಾಗಿದೆ ಎಂದ್ರು. 

ರಿಪೀಟರ್​ ವಿದ್ಯಾರ್ಥಿಗಳಿಗೆ ಅನ್ಯಾಯ

CBSC ಹಾಗೂ ಪಿಯು ವಿದ್ಯಾರ್ಥಿಗಳ 2 ಅಂಕ ಗಣನೆಗೆ ತೆಗೆದುಕೊಂಡಿರುವ ಕೆಇಎ ರಿಪೀಟರ್ಸ್​CET ಅಂಕ ಮಾತ್ರ ಗಣನೆಗೆ ತೆಗೆದುಕೊಂಡಿರೋದು ಅನ್ಯಾಯ ಎಂದು ಪೋಷಕರು ಕಿಡಿಕಾರಿದ್ದಾರೆ. ಕಳೆದ ಬಾರಿ 90 ಅಂಕ ಪಡೆದವರಿಗೂ 15,000 ಒಳಗೆ ರ್ಯಾಂಕ್​ ದೊರೆತಿತ್ತು. ಆದ್ರೆ ಈ ಬಾರಿ 98 ಅಂಕ ಪಡೆದಿದ್ರೂ ಸಹ 1 ಲಕ್ಷದ ಮೇಲೆ ರ್ಯಾಂಕಿಂಗ್​ ದೊರೆತಿದೆ. ಈ ಸಮಸ್ಯೆಯನ್ನು ಬಗೆಹರಿಸುವಂತೆ ಪೋಷಕರು ಹಾಗೂ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ. ಕೆಇಎ ಮುಂದೆ ಪೋಷಕರು ಹಾಗೂ ರಿಪೀಟರ್ ವಿದ್ಯಾರ್ಥಿಗಳು ಅಸಮಧಾನ ಹೊರಹಾಕಿದ್ದಾರೆ

ಸಚಿವ ಅಶ್ವತ್ಥ ನಾರಾಯಣ ಮನೆ ಮುಂದೆ ಪ್ರತಿಭಟನೆ

ಸಚಿವ ಅಶ್ವತ್ಥ ನಾರಾಯಣ ಮನೆ ಮುಂದೆ ಸಹ ಪೋಷಕರ, ವಿದ್ಯಾರ್ಥಿಗಳ ಪ್ರೊಟೆಸ್ಟ್ ಮಾಡಿದ್ದಾರೆ. ಸಿಇಟಿ ಫಲಿತಾಂಶದಲ್ಲಿ ಗೊಂದಲಗಳು ಇವೆ. ರ್ಯಾಂಕ್ ವಿಚಾರದಲ್ಲಿ ತುಂಬಾ ತಾರತಮ್ಯ ಆಗಿದೆ. ಇದನ್ನು ಸರಿಪಡಿಸಿ, ನಮ್ಮ ಮಕ್ಕಳ ಭವಿಷ್ಯ ರೂಪಿಸಿಕೊಡಿ ಎಂದು ಪೋಷಕರು ಆಕ್ರೋಶ ಹೊರಹಾಕಿದ್ದಾರೆ.

25 ಲಕ್ಷ ಪೋಷಕರ ನಿಯೋಜನೆ

ಪೋಷಕರ ಪ್ರತಿಭಟನೆ ಹಿನ್ನೆಲೆ ಪೊಲೀಸರು ನಿಯೋಜನೆ
ಅಶ್ವಥ್ ನಾರಾಯಣ ಮನೆ ಮುಂದೆ ಬ್ಯಾರಿಕೇಟ್ ಹಾಕಿರುವ ಪೋಲೀಸರು
ಸುಮಾರು 25ಕ್ಕೂ ಹೆಚ್ಚು ಪೋಲಿಸರು ನಿಯೋಜನೆ

ಈ ಬಾರಿ ಹುಡುಗರು ಮೇಲುಗೈ

ಈ ಬಾರಿ ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆಯಲ್ಲಿ ಮೇಲುಗೈ ಸಾಧಿಸಿ ವಿದ್ಯಾರ್ಥಿನಿಯರನ್ನು ಹಿಂದಿಕ್ಕಿದ್ದಾರೆ. 2.16 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದು, 2.1 ಲಕ್ಷ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. 1.74 ಲಕ್ಷ ಅಭ್ಯರ್ಥಿಗಳು BPharma ಮತ್ತು Pharma-D, 1.71 ಲಕ್ಷ ಅಭ್ಯರ್ಥಿಗಳು ಇಂಜಿನಿಯರಿಂಗ್, 1.42 ಲಕ್ಷ ಅಭ್ಯರ್ಥಿಗಳು BNYS (ಬ್ಯಾಚುಲರ್ ಆಫ್ ನ್ಯಾಚುರೋಪತಿ ಮತ್ತು ಯೋಗಿಕ್ ಸೈನ್ಸಸ್) ಮತ್ತು BVSc (ಪಶುವೈದ್ಯಕೀಯ ವಿಜ್ಞಾನ ಪದವಿ) ಮತ್ತು 1.39 ಲಕ್ಷ ಅಭ್ಯರ್ಥಿಗಳು BSc (Agri) ಗೆ ಅರ್ಹರಾಗಿದ್ದಾರೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಟಾಪರ್‌ಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ, ಇದರಲ್ಲಿ ಎಲ್ಲಾ ಮೊದಲ ರ್ಯಾಂಕ್ ಬೆಂಗಳೂರಿಗರಿಗೆ ಈ ಬಾರಿ ಸಿಕ್ಕಿದೆ.

ಅಪೂರ್ವ್ ಟಾಪರ್​

ಯಲಹಂಕದ ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನ ಅಪೂರ್ವ್ ರಾಂಡಮ್, ಇಂಜಿನಿಯರಿಂಗ್ ಕೋರ್ಸ್ ಶ್ರೇಯಾಂಕದಲ್ಲಿ ಒಟ್ಟು ಶೇಕಡಾ 98.611 ರೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ನ್ಯಾಷನಲ್ ಸೆಂಟರ್ ಆಫ್ ಎಕ್ಸಲೆನ್ಸ್‌ನ ಹೃಷಿಕೇಶ್ ನಾಗಭೂಷಣ್ ಅವರು ಕ್ರಮವಾಗಿ 99.167 ಮತ್ತು 98.333 ರ ಒಟ್ಟು ಶೇಕಡಾವಾರು ಅಂಕಗಳೊಂದಿಗೆ BNYS ಮತ್ತು BVSc ಕೋರ್ಸ್ ಶ್ರೇಯಾಂಕಗಳಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಎಚ್‌ಎಎಲ್ ಪಬ್ಲಿಕ್ ಸ್ಕೂಲ್‌ನ ಅರ್ಜುನ್ ರವಿಶಂಕರ್ ಒಟ್ಟು ಶೇಕಡಾ 96.292 ರೊಂದಿಗೆ ಬಿಎಸ್ಸಿ(ಅಗ್ರಿ) ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ವಿದ್ಯಾರಣ್ಯಪುರದ ನಾರಾಯಣ ಇ-ಟೆಕ್ನೋ ಶಾಲೆಯ ಶಿಶಿರ್ ಆರ್ ಕೆ ಬಿ.ಫಾರ್ಮಾದಲ್ಲಿ ಒಟ್ಟು ಶೇಕಡಾ 98.889 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದಿದ್ದಾರೆ.
Published by:Pavana HS
First published: