• Home
  • »
  • News
  • »
  • state
  • »
  • ಪಾಳು ಬಿದ್ದ ಕಡಬ ಎಪಿಎಂಸಿ ಪ್ರಾಂಗಣ ; ಕೋಟ್ಯಂತರ ರೂಪಾಯಿ ವ್ಯಯಿಸಿದರೂ ರೈತರಿಗೆ ಸಿಗದ ಪ್ರಯೋಜನ

ಪಾಳು ಬಿದ್ದ ಕಡಬ ಎಪಿಎಂಸಿ ಪ್ರಾಂಗಣ ; ಕೋಟ್ಯಂತರ ರೂಪಾಯಿ ವ್ಯಯಿಸಿದರೂ ರೈತರಿಗೆ ಸಿಗದ ಪ್ರಯೋಜನ

ಪಾಳು ಬಿದ್ದಿರುವ ಕಡಬ ಎಪಿಎಂಸಿ

ಪಾಳು ಬಿದ್ದಿರುವ ಕಡಬ ಎಪಿಎಂಸಿ

ಈ ಸುಸಜ್ಜಿತ ಕಟ್ಟಡದ ಸುತ್ತಲೂ ಕಾಡು ಆವರಿಸಿದೆ. ಚರಂಡಿ ವ್ಯವಸ್ಥೆ ನಿರ್ವಹಣೆ ಮಾಡದೇ ಗಬ್ಬು ನಾರುತ್ತಾ ಸೊಳ್ಳೆ ಉತ್ಪತ್ತಿ ಕೇಂದ್ರವಾಗಿದೆ. ಇದು ಸ್ವತಃ ತಾಲೂಕು ದಂಡಾಧಿಕಾರಿಗಳ ಕಣ್ಣೆದುರೇ ಎಂಬುದು ವಿಪರ್ಯಾಸ.

  • Share this:

ಪುತ್ತೂರು(ಡಿಸೆಂಬರ್​.15): ದೇಶದೆಲ್ಲೆಡೆ ಇದೀಗ ಭಾರೀ ಚರ್ಚೆಯಲ್ಲಿರುವ ರೈತ ಮಸೂದೆಯಲ್ಲಿ ಎಪಿಎಂಸಿ ಕಾಯ್ದೆ ತಿದ್ದುಪಡಿಯ ಬಗ್ಗೆಯೂ ಉಲ್ಲೇಖವಿದೆ. ಈ ತಿದ್ದುಪಡಿಯಿಂದ ಎಪಿಎಂಸಿ ವ್ಯವಸ್ಥೆಯೇ ಕೊನೆಗೊಳ್ಳಲಿದೆ ಎನ್ನುವ ಆತಂಕವೂ ರೈತರದ್ದಾಗಿದೆ. ಆದರೆ, ಇರುವ ಎಪಿಎಂಸಿಗಳು ಎಷ್ಟರ ಮಟ್ಟಿಗೆ ಬಳಕೆಯಾಗುತ್ತದೆ ಎನ್ನುವ ಪ್ರಶ್ನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬದ ಎಪಿಎಂಸಿ ಪ್ರಾಂಗಣವನ್ನೊಮ್ಮೆ ನೋಡಿದಲ್ಲಿ ಮೂಡುವುದು ಸಹಸವೇ. ಕಡಬ ತಾಲೂಕು ತಹಶೀಲ್ದಾರ್​ ಕಚೇರಿಯ ಮುಂದೆಯೇ ಗಬ್ಬು ನಾರುತ್ತಾ, ಕಟ್ಟಿಗೆ ಸಂಗ್ರಹಿಸಲು, ಗುಜರಿ ವಸ್ತುಗಳನ್ನು ಹಾಕಲು ಸರಕಾರದ ಎಪಿಎಂಸಿ ಕಟ್ಟಡ ಬಳಕೆಯಾಗುತ್ತಿದೆ. ಕೋಟಿಗಟ್ಟಲೆ ಖರ್ಚು ಮಾಡಿ ಸುಸಜ್ಜಿತವಾದ ಈ ಕಟ್ಟಡ ನಿರ್ಮಾಣವಾದರೂ ಸಾರ್ವಜನಿಕರ ಉಪಯೋಗಕ್ಕೆ ಬಾರದೇ ಗಬ್ಬು ನಾರುವ ಸ್ಥಿತಿಗೆ ತಲುಪುತ್ತಿದೆ. ಹತ್ತು ವರ್ಷಗಳ ಹಿಂದೆ ಈ ಎಪಿಎಂಸಿ ಪ್ರಾಂಗಣವನ್ನು ನಿರ್ಮಿಸಲಾಗಿದ್ದ, ಇಲ್ಲಿರುವ ಎರಡೂ ಪ್ರಾಂಗಣಗಳನ್ನೂ ರೈತರು ಸೇರಿ ವ್ಯಾಪಾರಿಗಳೂ ಉಪಯೋಗಿಸುತ್ತಿಲ್ಲ. ಸಂತೆ ಮಾರುಕಟ್ಟೆ ನಡೆಸುವ ಸಲುವಾಗಿ ಈ ಕಟ್ಟಡ ನಿರ್ಮಾಣ ಮಾಡಲಾಗಿತ್ತು. ಆದರೆ, ಇದೀಗ ಈ ಕಟ್ಟಡ ಕಟ್ಟಿಗೆ ಸಂಗ್ರಹಿಸಿ ಇಡಲು, ಗುಜರಿ ವಸ್ತುಗಳನ್ನು ತಂದು ಹಾಕಲು, ಬಳಕೆಯಾಗುತ್ತಿದೆ.


ಈ ಸುಸಜ್ಜಿತ ಕಟ್ಟಡದ ಸುತ್ತಲೂ ಕಾಡು ಆವರಿಸಿದೆ. ಚರಂಡಿ ವ್ಯವಸ್ಥೆ ನಿರ್ವಹಣೆ ಮಾಡದೇ ಗಬ್ಬು ನಾರುತ್ತಾ ಸೊಳ್ಳೆ ಉತ್ಪತ್ತಿ ಕೇಂದ್ರವಾಗಿದೆ. ಇದು ಸ್ವತಃ ತಾಲೂಕು ದಂಡಾಧಿಕಾರಿಗಳ ಕಣ್ಣೆದುರೇ ಎಂಬುದು ವಿಪರ್ಯಾಸ. ಅತ್ಯಾಧುನಿಕ ಸುಸಜ್ಜಿತ ಕಟ್ಟಡ ಇದ್ದರೂ ಕಡಬದ ಸಂತೆಗೆ ಬರುವ ವ್ಯಾಪಾರಿಗಳು ರಸ್ತೆ ಬದಿಯಲ್ಲೇ ವ್ಯಾಪಾರ ಮಾಡುತ್ತಾರೆ.


ಇದಕ್ಕೆ ಕಾರಣ ಈ ಕಟ್ಟಡದಲ್ಲಿ ವ್ಯಾಪಾರ ಮಾಡಲು ಕಡಬ ಪಟ್ಟಣ ಪಂಚಾಯತ್ ಅವಕಾಶ ಕಲ್ಪಿಸದೇ ಇರುವುದು. ರಸ್ತೆ‌ ಬದಿಯಲ್ಲಿ ವ್ಯಾಪಾರ ಮಾಡುವ ವ್ಯಾಪಾಗಳಿಂದ ಸುಂಕ ವಸೂಲಿ‌ ಮಾಡುವುದರ ಮೂಲಕ ಹೆಚ್ಚಿನ ಆದಾಯ ಗಳಿಸುವ ಒಂದೇ ಕಾರಣಕ್ಕಾಗಿ ಎಪಿಎಂಸಿ ಪ್ರಾಂಗಣವನ್ನು ಯಾವುದೇ‌ ವ್ಯಾಪಾರಿ ಚಟುವಟಿಕೆಗೆ ಬಳಕೆಯಾಗದ ರೀತಿಯಲ್ಲಿ ವ್ಯವಸ್ಥೆ ಮಾಡಲಾಗಿದೆ ಎನ್ನುವ ಆರೋಪ ಕೇಳಿ ಬರುತ್ತಿದೆ.


ಇದನ್ನೂ ಓದಿ : ಮುಗಿದ ಸರ್ಕಾರ-ಸಾರಿಗೆ ನೌಕರರ ಹಗ್ಗಜಗ್ಗಾಟ; ನಿಟ್ಟುಸಿರು ಬಿಟ್ಟ ಪ್ರಯಾಣಿಕರು


ಒಂದು ವೇಳೆ ಇದೇ ವ್ಯಾಪಾರ ಎಪಿಎಂಸಿ ಪ್ರಾಂಗಣ ಮೂಲಕ‌ ನಡೆದಲ್ಲಿ ಕಡಬ ಪಟ್ಟಣ ಪಂಚಾಯತ್ ನ ಆದಾಯಕ್ಕೆ ಕುತ್ತು ಬೀಳಲಿದೆ ಎನ್ನುವ ಲೆಕ್ಕಾಚಾರವೂ ಎಪಿಎಂಸಿ ಪ್ರಾಂಗಣ ಬಳಕೆಯಾಗದೇ ಉಳಿದಿರುವ ಹಿಂದೆ ಇದೆ ಎನ್ನಲಾಗುತ್ತಿದೆ. ಕಡಬದಲ್ಲಿರುವ ಎಪಿಎಂಸಿ ಪ್ರಾಂಗಣದಲ್ಲಿ ರಾಜ್ಯದಲ್ಲಿ ಹಲವು ಇದೇ ರೀತಿ ಅವ್ಯವಸ್ಥೆಯಲ್ಲಿರುವ ಎಪಿಎಂಸಿ ವ್ಯವಸ್ಥೆಗಳಿವೆ. ಒಂದೆಡೆ ಎಪಿಎಂಸಿ ವ್ಯವಸ್ಥೆ ನಾಶವಾಗಲಿದೆ ಎಂದು ಬೊಬ್ಬಿಡುವ ಜನ ತಮ್ಮ ಕಾಲ ಬುಡದಲ್ಲೇ ಈ ರೀತಿ ಎಪಿಎಂಸಿಗಳು ಹಾಳಾಗುತ್ತಿರುವುದ ಬಗ್ಗೆ ಚಕಾರವೆತ್ತದಿರುವುದು ಮಾತ್ರ ವಿಪರ್ಯಾಸವೇ ಸರಿ.


ಕೂಡಲೇ ಸಂಬಂಧಿಸಿದ ಇಲಾಖೆ, ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಅವನತಿಯತ್ತ ಸಾಗುತ್ತಿರುವ ಈ ಎಪಿಎಂಸಿ ಕಟ್ಟಡವನ್ನು ಉಳಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಬೇಕಿದೆ ಎನ್ನುವ ಒತ್ತಾಯ ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.

Published by:G Hareeshkumar
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು