Jayadeva Hospital: ಬಡವರಿಗೆ ಮಿಡಿದ ಇನ್ಫೋಸಿಸ್ ಪ್ರತಿಷ್ಠಾನ: 103 ಕೋಟಿ ರೂ.ಗಳ ಹೊಚ್ಚ ಹೊಸ ಆಸ್ಪತ್ರೆ ಕೊಡುಗೆ

350 ಬೆಡ್ ಗಳ ಮಲ್ಟಿ ಸ್ಪೆಷಾಲಿಟಿ ಹೃದ್ರೋಗ ಆಸ್ಪತ್ರೆ ಇದಾಗಲಿದ್ದು. 100 ಐಸಿಯು ಬೆಡ್, 250 ಜನರಲ್ ವಾರ್ಡ್ ಬೆಡ್, 2 ಆಪರೇಷನ್ ಥಿಯೇಟರ್ , 1 ಹೈ ಬ್ರಿಡ್ ಆಪರೇಷನ್ ಥಿಯೇಟರ್, 2 ಕಾರ್ಡಿಕಲ್ ಕ್ಯಾಥ್ ಲ್ಯಾಬ್ ಗಳನ್ನು ನೂತನ ಆಸ್ಪತ್ರೆ ಹೊಂದಿರಲಿದೆ.

ಸುಧಾಮೂರ್ತಿ

ಸುಧಾಮೂರ್ತಿ

  • Share this:
ಬೆಂಗಳೂರು: ಇನ್ಫೋಸಿಸ್ ಪ್ರತಿಷ್ಟಾನ (Infosys Foundation) ಬಡವರಿಗಾಗಿ ಹೊಸ ಕೊಡುಗೆ ನೀಡುತ್ತಿದೆ  ಬಡವರಿಗೆ ವರದಾನ ಆಗಲಿರುವ ನೂತನ ಹೈಟೆಕ್ ಜಯದೇವ ಆಸ್ಪತ್ರೆಯ (Sri Jayadeva Institute of Cardiovascular Sciences and Research) ಬಲ ಹೆಚ್ಚಿಸಲು ಇನ್ಫೋಸಿಸ್ ಪ್ರತಿಷ್ಠಾನ ಮುಂದಾಗಿದೆ. ಜಯದೇವ ಆಸ್ಪತ್ರೆಗೆ ೧೦೩ ಕೋಟಿ ರೂಗಳ ಹೊಚ್ಚ ಹೊಸ ಆಸ್ಪತ್ರೆ ಕೊಡುಗೆ ನೀಡುತ್ತಿದೆ. 350 ಬೆಡ್ ಗಳ ಮಲ್ಟಿ ಸ್ಪೆಷಾಲಿಟಿ ಹೃದ್ರೋಗ ಆಸ್ಪತ್ರೆ ಇದಾಗಲಿದ್ದು. 100 ಐಸಿಯು ಬೆಡ್, 250 ಜನರಲ್ ವಾರ್ಡ್ ಬೆಡ್, 2 ಆಪರೇಷನ್ ಥಿಯೇಟರ್ , 1 ಹೈ ಬ್ರಿಡ್ ಆಪರೇಷನ್ ಥಿಯೇಟರ್, 2 ಕಾರ್ಡಿಕಲ್ ಕ್ಯಾಥ್ ಲ್ಯಾಬ್ ಗಳನ್ನು ನೂತನ ಆಸ್ಪತ್ರೆ ಹೊಂದಿರಲಿದೆ.

ಇದೇ ನವೆಂಬರ್ ೧೭ ರಿಂದ ನೂತನ ಆಸ್ಪತ್ರೆ ಕಾರ್ಯಾರಂಭವಾಗಲಿದೆ. ತುರ್ತು ಚಿಕಿತ್ಸೆಗೆ ಪ್ರತಿ ೫ ನಿಮಿಷಕ್ಕೆ( ರಾತ್ರಿ ವೇಳೆ) ಆಸ್ಪತ್ರೆಯತ್ತ ಹೃದ್ರೋಗಿಗಳು ಆಗಮಿಸುತ್ತಿರುವ  ಹಿನ್ನೆಲೆ ಆಸ್ಪತ್ರೆ ಮೇಲಿನ ಒತ್ತಡ ತಗ್ಗಿಸಲು ೩೫೦ ಬೆಡ್ ನ ಆಸ್ಪತ್ರೆ ನಿರ್ಮಾಣ ಮಾಡಿಕೊಡಲಿದೆ. ಇಂದು ನೂತನ ಆಸ್ಪತ್ರೆ ಕಾರ್ಯಾರಂಭ ಕುರಿತು ಜಯದೇವ ಆಸ್ಪತ್ರೆ ನಿರ್ದೇಶಕ ಡಾ.ಸಿ‌.ಎನ್.ಮಂಜುನಾಥ್ (Dr CN Manjunarth)ಮಾಹಿತಿ ಹಂಚಿಕೊಂಡರು.

ಇದನ್ನೂ ಓದಿ: Hamsalekha ಅವರೇ Muslim ಸ್ನೇಹಿತರನ್ನ ಕರೆಸಿ ಹಂದಿಮಾಂಸದ ಊಟ ಹಾಕಿ, ಅವರು ತಿನ್ನುತ್ತಾರಾ ನೋಡಿ: ಪ್ರತಾಪ್ ಸಿಂಹ

ಹಾಸಿಗೆ ಸಾಮಾರ್ಥ್ಯ 1,050ಕ್ಕೆ ಏರಿಕೆ

ಇನ್ಫೋಸಿಸ್ ಪ್ರತಿಷ್ಠಾನದಿಂದ  350 ಹಾಸಿಗೆಗಳ ಸಾಮರ್ಥ್ಯದ ನೂತನ ಕಟ್ಟಡ ನಿರ್ಮಾಣವಾದ ಹಿನ್ನೆಲೆ ಜಯದೇವ ಆಸ್ಪತ್ರೆಯ ಹಾಸಿಗೆ ಸಾಮರ್ಥ್ಯ 1,050ಕ್ಕೆ ಏರಿಕೆಯಾಗಲಿದೆ. ನಗರದ ಪ್ರತಿಷ್ಠಿತ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಆವರಣದಲ್ಲಿ ನೂತನ ಘಟಕ ನಿರ್ಮಾಣವಾಗಿದೆ.

ನವೆಂಬರ್ 17ರಂದು ಉದ್ಘಾಟನೆ

ಇದೇ ತಿಂಗಳು 17ರಂದು ನೂತನ ಘಟಕ ಉದ್ಘಾಟನೆಯಾಗಲಿದೆ. ಜಯದೇವ ಆಸ್ಪತ್ರೆಯ ಆವರಣವು 1,050 ಹಾಸಿಗೆಗಳ ಸಾಮರ್ಥ್ಯ ಹೆಚ್ಚಳಗೊಂಡ ಹಿನ್ನೆಲೆ ದಕ್ಷಿಣ ಏಷ್ಯಾದ ಅತಿ ದೊಡ್ಡ ಹೃದ್ರೋಗ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

2018ರಲ್ಲಿ ಜಯದೇವ ಆಸ್ಪತ್ರೆಗೆ ಭೇಟಿ

ಹೊಸ ಜಯದೇವ ಆಸ್ಪತ್ರೆಯ ಘಟಕ ನಿರ್ಮಾಣವಾದ ಸಂಗತಿಯೇ ರೋಚಕ.  ಸುಧಾಮೂರ್ತಿಯ ಕೊಡುಗೈ ದಾನಕ್ಕೆ ಜಯದೇವ ಹೊಸ ಘಟಕ ಸಾಕ್ಷಿ. ಜಯದೇವಕ್ಕೆ ಬರುವ ಬಡ ರೋಗಿಗಳನ್ನ ನೋಡಿ ಆಸ್ಪತ್ರೆ ನಿರ್ಮಾಣದ ಸಾಹಸಕ್ಕೆ ಸುಧಾಮೂರ್ತಿ ಮುಂದಾಗಿದ್ದರು.  ೨೦೧೮ರಲ್ಲಿ ಜಯದೇವ ಆಸ್ಪತ್ರೆಗೆ ನಾರಾಯಣ ಮೂರ್ತಿ  ಹಾಗೂ ಸುಧಾ ಮೂರ್ತಿ (N.R.Narayana Murthy And Sudha Murty) ಭೇಟಿ ನೀಡಿದ್ದರು. ಜಯದೇವ ರೋಗಿಗಳ ಸಂಖ್ಯೆ ಹಾಗು ಸ್ಥಿತಿಗತಿ ನೋಡಿದ್ರು. ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಚಿಕಿತ್ಸೆಗೆ ಬರುವುದನ್ನು ನೋಡಿ ಹೋಗಿದ್ದರು ಜಯದೇವ ಹೃದ್ರೋಗ ಆಸ್ಪತ್ರೆ ನಿರ್ದೇಶಕ ಡಾ ಮಜುನಾಥ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಇದನ್ನೂ ಓದಿ:  ಠಾಣೆಯ ಮುಂದೆ ಭಿಕ್ಷೆ ಬೇಡುತ್ತಿದವನ ಜೀವನ ಬದಲಿಸಿದ Inspector

ಭೇಟಿ ನೀಡಿದ ಎರಡೇ ದಿನದಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಒಪ್ಪಿಗೆ

ರೋಗಿಗಳ ಊರು ಮತ್ತು ಆರ್ಥಿಕ ಸ್ಥಿತಿ ಗತಿ ತಿಳಿದುಕೊಂಡಿದ್ರು. ಕಡು ಬಡವರಿಗೂ ಅತಿ ಕಡಿಮೆ ದರದಲ್ಲಿ ಚಿಕಿತ್ಸೆ ಸಿಗುತ್ತಿರುವು ಬಗ್ಗೆ ಮಾಹಿತಿ ಪಡೆದು. ಬೆಂಗಳೂರು ಜಯದೇವದಲ್ಲಿ ಹಾಸಿಗೆಗಳ ಕೊರತೆ ಇರುವುದನ್ನು ಗಮನಿಸಿದರು.  ಭೇಟಿ ನೀಡಿ ಎರಡೇ ದಿನದಲ್ಲಿ ಇನ್ಫೋಸಿಸ್‌ ಪ್ರತಿಷ್ಠಾನದ ಸುಧಾ ಮೂರ್ತಿ ಕರೆ ಮಾಡಿ ಆಸ್ಪತ್ರೆಗೆ ಹೊಸ ಕಟ್ಟಡ ಕಟ್ಟಿಸಿಕೊಡುವುದಾಗಿ ಹೇಳಿದ್ದರು. ಮೂರನೇ ದಿನವೇ ಜಯದೇವಕ್ಕೆ ಇನ್ಫೋಸಿಸ್ ಎಂಜಿನಿಯರ್ಸ್ ಭೇಟಿ ನೀಡಿ ಪ್ಲಾನ್ ಮಾಡಿದ್ರು ಎಂದು ತಿಳಿಸಿದರು.

ಕೇಳಿದ್ದು 200 ಹಾಸಿಗೆ ಆಸ್ಪತ್ರೆ

ನಾವು 200 ಹಾಸಿಗೆ ಆಸ್ಪತ್ರೆಗೆ ಮನವಿ ಮಾಡಿದ್ದೀವಿ. ಆದ್ರೆ ಸುಧಾಮೂರ್ತಿ ಅವರು 350 ಹಾಸಿಗೆ ಆಸ್ಪತ್ರೆ ಕಟ್ಟುವುದಾಗಿ ಹೇಳಿದ್ರು. ವಿಶಾಲಹೃದಯಿ ಸುಧಾಮೂರ್ತಿ ಅವರಿಗೆ ಜಯದೇವ ಹೃದ್ರೋಗ ಆಸ್ಪತ್ರೆ ನಿರ್ದೇಶಕ ಡಾ ಮಂಜುನಾಥ್ ಕೃತಜ್ಞತೆ ಸಲ್ಲಿಸಿದರು.
Published by:Mahmadrafik K
First published: