ಟೀ ಕ್ಯಾಂಟೀನ್ ಯುವಕನಿಗೆ ಕರೆ ಮಾಡಿ ಮಾತನಾಡಿದ ಇನ್ಪೋಸಿಸ್ ಸುಧಾ ಮೂರ್ತಿ; ಕಾರಣವೇನು ಗೊತ್ತಾ?

ಇತ್ತೀಚೆಗೆ ಮದ್ದೂರಿಗೆ ಬಂದಿದ್ದ ಶಿಕ್ಷಣ ಸಚಿವ ಸುರೇಶ್ ಕುಮಾರ್, ಈ ಟೀ ಅಂಗಡಿಯ ನೇಮ್ ಬೋರ್ಡ್ ಗಮನಿಸಿ, ಅದನ್ನು ತಮ್ಮ ಫೇಸ್ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿದ್ರು. ಇದನ್ನು ಗಮನಿಸಿದ  ಇನ್ಫೋಸಿಸ್ ಅಧ್ಯಕ್ಷೆ ಸುಧಾಮೂರ್ತಿ ಸಚಿವರ ಮೂಲಕ ಯುವಕನ ನಂಬರ್ ಪಡೆದು ಆ ಯುವಕನಿಗೆ ಕರೆ ಮಾಡಿ ಅಭಿನಂಧಿಸಿ ಶುಭ ಹಾರೈಸಿದ್ದಾರೆ.

ಸುಧಾ ಮೂರ್ತಿ

ಸುಧಾ ಮೂರ್ತಿ

  • Share this:
ಮಂಡ್ಯ(ಸೆ.17): ಆತ ಹೆದ್ದಾರಿ ಬದಿಯಲ್ಲಿ ಟೀ ಕ್ಯಾಂಟೀನ್ ಮಾಡಿಕೊಂಡಿದ್ದ ಸಾಮಾನ್ಯ ಯುವಕ. ಈ ಯುವಕ ತನ್ನ ಟೀ ಕ್ಯಾಂಟೀನ್ ಗೆ ಇಟ್ಟಿದ್ದ ಹೆಸರು ಇಂದು ಆತನಿಗೆ ವಿಶ್ವದ ಪ್ರಸಿದ್ದ ದೈತ್ಯ ಕಂಪನಿಯೊಂದರ  ಮಾಲೀಕರನ್ನು ಪರಿಚಯಿಸಿಕೊಟ್ಟಿದೆ. ಅಲ್ಲದೇ ಅವರ ಶುಭ ಹಾರೈಕೆಯೂ ಕೂಡ ಈ ಟೀ ಕ್ಯಾಂಟೀನ್ ಯುವಕನಿಗೆ ಸಿಕ್ಕಿದೆ. ಇದೇಗೆ ಸಾಧ್ಯ?  ವಿಶ್ವದ ಪ್ರಸಿದ್ದ ಕಂಪನಿ ಮಾಲೀಕರು ಎಲ್ಲಿ . ಈ ಸಾಮಾನ್ಯ ಟೀ ಕ್ಯಾಂಟೀನ್ ಯುವಕ ಎಲ್ಲಿ? ಎಂದು ಪ್ರಶ್ನೆ ಮಾಡಿಕೊಳ್ತಿದ್ದೀರಾ, ಅದಕ್ಕೆಲ್ಲ ಉತ್ತರ ‌ ಇಲ್ಲಿದೆ ನೋಡಿ. ಹೌದು! ಸುನೀಲ್ ಕುಮಾರ್ ಎಂಬ ಯುವಕ ಬೀದಿ ಬದಿ ಟೀ ಕ್ಯಾಂಟೀನ್ ಇಟ್ಟುಕೊಂಡಿದ್ದಾನೆ. ಈತ ಮದ್ದೂರಿನ ಗೆಜ್ಜಲಗೆರೆಯ ನಿವಾಸಿ. ಈ ಯುವಕ ವಿಶ್ವದ‌ ಪ್ರಮುಖ ದೈತ್ಯ ಸಾಫ್ಟ್‌ವೇರ್  ಕಂಪನಿಯಾದ ಇನ್ಫೋಸಿಸ್​​ನ ಮುಖ್ಯಸ್ಥೆ ಸುಧಾ ಮೂರ್ತಿ ಹೆಸರನ್ನು ತನ್ನ ಟೀ ಕ್ಯಾಂಟಿ ನ್ ಗೆ ಇಟ್ಟಿದ್ದ. ಈ ಯುವಕ ಇಟ್ಟಿದ್ದ ಆ ಹೆಸರು ಇಂದು ಆ ಯವಕನ ಅಚ್ಚರಿಗೆ ಕಾರಣವಾಗಿತ್ತು. ಯಾಕೆಂದರೆ ಆ‌ ಯುವಕ ತನ್ನ ಹೆಸರು ಇಟ್ಟಿದ್ದನ್ನು ಗಮನಿಸಿ ಆ ಯುವಕನ ಮೊಬೈಲ್ ಗೆ‌ ವಿಶ್ವದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿರೋ ಹಾಗೂ ಪ್ರಮುಖ ಸಾಫ್ಟ್‌ ವೇರ್ ಕಂಪನಿಯ ಮಾಲೀಕರಾಗಿರೋ‌ ಸುಧಾಮೂರ್ತಿಯವರು ಕರೆ ಮಾಡಿ ಮಾತನಾಡಿಸಿ ಹೃದಯ ವೈಶ್ಯಾಲತೆ ಮೆರೆದಿದ್ದಾರೆ.

ಅಲ್ಲದೇ ಆತನಿಗೆ ಅಭಿನಂಧಿಸಿದ್ದು,ಯುವಕನ ಉದ್ಯೋಗಕ್ಕೆ ಶುಭಕೋರಿದ್ದಾರೆ. ಬಳಿಕ ಯುವಕ ತನ್ನ ಟೀ ಕ್ಯಾಂಟೀನ್ ಗೆ ಒಮ್ಮೆ ಬರುವಂತೆ ಆಮಂತ್ರಿಸಿದ  ಆಹ್ವಾನಕ್ಕೆ ಒಪ್ಪಿ ಆ ಕಡೆ ಬಂದಾಗ ಖಂಡಿತ ಬರುವುದಾಗಿ  ಸುಧಾಮೂರ್ತಿ ತಿಳಿಸಿದ್ದಾರೆ‌. ಇನ್ನು ಈ ಯುವಕ  ಕಳೆದ ಒಂದು ವರ್ಷದ ಹಿಂದೇ ಮದ್ದೂರಿನ ಕೊಲ್ಲಿ ವೃತ್ತದ ಮೈಸೂರು-ಬೆಂಗಳೂರು ಹೆದ್ದಾರಿ ಬದಿಯಲ್ಲಿ ಈ ಟೀ ಅಂಗಡಿಯನ್ನು ತೆರೆದಿದ್ದ.

ಇಂದು ಹೈದ್ರಾಬಾದ್-ಕರ್ನಾಟಕ ವಿಮೋಚನಾ ದಿನ; ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಸಿಎಂ ಯಡಿಯೂರಪ್ಪ ಭಾಗಿ

ಇತ್ತೀಚೆಗೆ ಮದ್ದೂರಿಗೆ ಬಂದಿದ್ದ ಶಿಕ್ಷಣ ಸಚಿವ ಸುರೇಶ್ ಕುಮಾರ್, ಈ ಟೀ ಅಂಗಡಿಯ ನೇಮ್ ಬೋರ್ಡ್ ಗಮನಿಸಿ, ಅದನ್ನು ತಮ್ಮ ಫೇಸ್ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿದ್ರು. ಇದನ್ನು ಗಮನಿಸಿದ ಇನ್ಫೋಸಿಸ್ ಅಧ್ಯಕ್ಷೆ ಸುಧಾಮೂರ್ತಿ ಸಚಿವರ ಮೂಲಕ ಯುವಕನ ನಂಬರ್ ಪಡೆದು ಆ ಯುವಕನಿಗೆ ಕರೆ ಮಾಡಿ ಅಭಿನಂಧಿಸಿ ಶುಭ ಹಾರೈಸಿದ್ದಾರೆ. ಇದು ಸಾಮಾನ್ಯ ಯುವಕನ ಸಂತಸಕ್ಕೆ ಪಾರವಿಲ್ಲದಂತಾಗಿದೆ.

ಸಾಮಾನ್ಯ ವ್ಯಕ್ತಿಗೆ ಕರೆ ಮಾಡಿ ಮಾತನಾಡಿದ ಸುಧಾ ಅಮ್ಮನ ಸರಳತೆ ಮತ್ತು ಹೃದಯ ವೈಶ್ಯಾಲತೆ ಟೀ ಅಂಗಡಿ ಯುವಕ  ಮೆಚ್ಚುಗೆ ವ್ಯಕ್ತಪಡಿಸಿದ್ದಾನೆ. ಅಲ್ಲದೇ ಸ್ಥಳೀಯರು ಕೂಡ ಶ್ರೀಮಂತಿಕೆಯ ಎತ್ತರದಲ್ಲಿದ್ದರೂ ಅಮ್ಮನ  ಸಾಮಾನ್ಯ ಯುವಕನ ಬಗ್ಗೆ ತೋರಿರೋ ಕಾಳಜಿ ಮತ್ತು ಸರಳತೆಯನ್ನು ಹಾಗೂ ಹೃದಯ ವೈಶ್ಯಾಲತೆಯನ್ನು  ಕೊಂಡಾಡಿದ್ದಾರೆ.

ಒಟ್ಟಾರೆ ಇನ್ಫೋಸಿಸ್ ಮುಖ್ಯಸ್ಥೆಯಾಗಿದ್ದರೂ, ಸುಧಾಮೂರ್ತಿ ಮಾತ್ರ ಸದಾ ಸರಳತೆಯಿಂದಲೇ  ಜನರ ಬಾಯಲ್ಲಿ ಅಮ್ಮ ಆಗಿದ್ದಾರೆ. ಮಂಡ್ಯದ ಸಾಮಾನ್ಯ ಯುವಕನೋರ್ವ ತನ್ನ ಹೆಸರನ್ನು ಕ್ಯಾಂಟೀನ್ ಗೆ ಇಟ್ಟಿದ್ದನ್ನು ಕಂಡು ಆತನಿಗೆ ಕರೆ ಮಾಡಿ ಶುಭಕೋರಿದ್ದು, ಅವರ  ಸರಳತೆಗೆ ಸಾಕ್ಷಿಯಾಗಿದೆ. ಅವರ ಹೃದಯ ವೈಶಾಲ್ಯತೆಯನ್ನು ತೋರಿಸಿಕೊಟ್ಟಿದೆ.
Published by:Latha CG
First published: