Suspected Terrorist: ರಾಜಧಾನಿಯಲ್ಲಿ ಸೆರೆ ಸಿಕ್ಕ ಶಂಕಿತ ಉಗ್ರನ ಸ್ಫೋಟಕ ಮಾಹಿತಿ

ಆರಿಫ್, ಶಂಕಿತ ಉಗ್ರ

ಆರಿಫ್, ಶಂಕಿತ ಉಗ್ರ

ಖಾಸಗಿ ಕಂಪನಿಯಲ್ಲಿ ಸಾಫ್ಟ್​​ವೇರ್ ಇಂಜಿನಿಯರ್ ಆಗಿದ್ದ ಆರಿಫ್ ಬೆಂಗಳೂರಿಗೆ ಶಿಫ್ಟ್​ ಆಗಿದ್ದನು. ಕೋವಿಡ್ ಸಮಯದಿಂದ ವರ್ಕ್​ ಫ್ರಂ ಹೋಮ್ ಕೆಲಸ ಮಾಡಿಕೊಂಡಿದ್ದ ಆರಿಫ್ ತಿಂಗಳಿಗೆ ಒಂದೂವರೆ ಲಕ್ಷ ಸಂಬಳ ಪಡೆಯುತ್ತಿದ್ದನು.

  • Share this:

ಬೆಂಗಳೂರು: ಸೆರೆಸಿಕ್ಕ ಶಂಕಿತ ಉಗ್ರ (Suspected Terrorist) ಮೊಹಮ್ಮದ್ ಆರಿಫ್ ಬಂಧನ ಕೇಸ್ ಸಂಬಂಧ ತನಿಖೆ ತೀವ್ರಗೊಂಡಿದೆ. ಶಂಕಿತ ಉಗ್ರ ಆರಿಫ್‌ನ ಮೊಬೈಲ್ (Mobile), ಲ್ಯಾಪ್‌ಟಾಪ್‌ (Laptop) ಜಾಲಾಡಲಾಗಿದೆ. ಮಾರ್ಚ್​ 10ರಂದು ಆರಿಫ್​​ ಇರಾನ್ (Iran) ಮೂಲಕ ಸಿರಿಯಾಗೆ (Syria) ತೆರಳುವ ಪ್ಲ್ಯಾನ್ ಮಾಡಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ಒನ್ ಸೈಡ್​ ಟಿಕೆಟ್ ಬುಕ್ ಮಾಡಿದ್ದರಿಂದ ಆರಿಫ್ ವಿಸಾ ರದ್ದುಗೊಳಿಸಲಾಗಿತ್ತು. ಇತ್ತ ಕುಟುಂಬವನ್ನು ಉತ್ತರ ಪ್ರದೇಶದ ಅಲಿಘಡ್​ಗೆ (Aligarh, Uttar Pradesh) ಶಿಫ್ಟ್ ಮಾಡಲು ಮುಂದಾಗಿದ್ದ ಆರಿಫ್ ಮನೆಯ ಸಾಮಾನುಗಳನ್ನು OLXನಲ್ಲಿ ಸೇಲ್​ಗೆ ಹಾಕಿದ್ದನು. ಕಳೆದ ಮೂರು ವರ್ಷಗಳಿಂದ ಐಎಸ್​ಡಿ ಮತ್ತು ಎನ್​ಐಎ ಕಣ್ಣಿಟ್ಟಿತ್ತು ಎಂಬ ಮಾಹಿತಿ ಲಭ್ಯವಾಗಿದೆ.


ಯಾರ ಜೊತೆಯಲ್ಲಿ ನಂಟು?


2022ರ ಸೆಪ್ಟೆಂಬರ್​ನಲ್ಲಿ ಬಂಧನಕ್ಕೊಳಗಾಗಿದ್ದ ಅಖ್ತರ್ ಹುಸೇನ್ ಮತ್ತು ಜುಬಾ ಜೊತೆ ನಂಟು ಹೊಂದಿದ್ದ ಎನ್ನಲಾಗಿದೆ. ಟೆಲಿಗ್ರಾಂ ಮೂಲಕ ಇವರನ್ನು ಆರಿಫ್ ಸಂಪರ್ಕಿಸಿದ್ದ ಎಂದು ತಿಳಿದು ಬಂದಿದೆ.  ಅಖ್ತರ್ ಹುಸೇನ್ ಮತ್ತು ಜುಬಾ ಸೋಶಿಯಲ್ ಮೀಡಿಯಾ ಮೂಲಕ ಯುವಕರನ್ನು ಉಗ್ರ ಕೃತ್ಯಗಳಿಗೆ ಸೆಳೆಯುತ್ತಿದ್ದರು.


ಅಖ್ತರ್ ಹುಸೇನ್ ಮತ್ತು ಜುಬಾ ಸೋಶಿಯಲ್ ಮೀಡಿಯಾದಲ್ಲಿ ಚಾಟಿಂಗ್ ನಡೆಸಿ ಪ್ರಚೋದನೆ ನೀಡುತ್ತಿದ್ದರು ಎಂಬ ಆರೋಪಗಳು ಕೇಳಿ ಬಂದಿವೆ. ಇಬ್ಬರಿಗೂ ಆರಿಫ್​ ಜೊತೆಯೂ ನಂಟಿತ್ತಾ ಎಂದು ಎನ್​ಐಎ ಹಾಗೂ ISD ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.


ಆರಿಫ್ ಫ್ಯಾಮಿಲಿ ಬ್ಯಾಕ್​ಗ್ರೌಂಡ್​ ರೋಚಕ


ಆರಿಫ್ ಮೂಲತಃ ಉತ್ತರ ಪ್ರದೇಶ ಮೂಲದವನು. ಆರಿಫ್ ತಂದೆ-ತಾಯಿ, ಅಣ್ಣ-ತನ್ನ ಉತ್ತರಪ್ರದೇಶದಲ್ಲಿ ನೆಲೆಸಿದ್ದಾರೆ. ಆರಿಫ್​ ತಂದೆ ಡಾಕ್ಟರ್​, ಅಣ್ಣ ಚಾರ್ಟೆಡ್ ಅಕೌಂಟೆಂಟ್​ ಆಗಿದ್ದಾರೆ.​​ ತಮ್ಮ ಉತ್ತರಪ್ರದೇಶದಲ್ಲಿ ಅರ್ಕಿಟೆಕ್​ ಆಗಿ ಕೆಲಸ ಮಾಡುತ್ತಿದ್ದು, ಎಲ್ಲರೂ ತಿಂಗಳಿಗೆ ಲಕ್ಷ ಲಕ್ಷ ಸಂಪಾದನೆ ಮಾಡುತ್ತಿದ್ದಾರೆ. ಒಳ್ಳೆಯ ಕುಟುಂಬದಿಂದ ಬಂದಿದ್ದರೂ ಆರಿಫ್​ಗೆ ಅತಿಯಾದ ಧರ್ಮದ ಹುಚ್ಚಿತ್ತು.


ಖಾಸಗಿ ಕಂಪನಿಯಲ್ಲಿ ಸಾಫ್ಟ್​​ವೇರ್ ಇಂಜಿನಿಯರ್ ಆಗಿದ್ದ ಆರಿಫ್ ಬೆಂಗಳೂರಿಗೆ ಶಿಫ್ಟ್​ ಆಗಿದ್ದನು. ಕೋವಿಡ್ ಸಮಯದಿಂದ ವರ್ಕ್​ ಫ್ರಂ ಹೋಮ್ ಕೆಲಸ ಮಾಡಿಕೊಂಡಿದ್ದ ಆರಿಫ್ ತಿಂಗಳಿಗೆ ಒಂದೂವರೆ ಲಕ್ಷ ಸಂಬಳ ಪಡೆಯುತ್ತಿದ್ದನು.


ಕುಟುಂಬಸ್ಥರಿಗೆ ವಿಷಯ ಗೊತ್ತಿರಲಿಲ್ಲ


ಒಳ್ಳೆಯ ಕುಟುಂಬದಿಂದ ಬಂದಿದ್ದ ಆರಿಫ್​​ಗೆ ಧರ್ಮದ ಹುಚ್ಚು, ಉಗ್ರಸಂಘಟನಯತ್ತ ಆಸಕ್ತಿ ಇತ್ತು. ಇಷ್ಟು ದಿನಗಳಿಂದ ಉಗ್ರಸಂಘಟನೆ ಜೊತೆ ಸಂಪರ್ಕವಿದ್ರೂ, ತಂದೆ, ಅಣ್ಣ ಹಾಗೂ ಪತ್ನಿಗೂ ಯಾವುದೇ ವಿಚಾರ ಗೊತ್ತಿರಲಿಲ್ಲ.


ಕೋವಿಡ್ ಸಮಯದಲ್ಲಿ ಉಗ್ರ ಸಂಘಟನೆಗೆ ಸಂಬಂಧಿಸಿದ ವಿಡಿಯೋಗಳನ್ನು ಶೇರ್ ಮಾಡುತ್ತಿದ್ದನು. ಅಫ್ಘಾನಿಸ್ತಾನದ ಮೇಲೆ ತಾಲಿಬಾನ್ ನಡೆಸಿದ ದಾಳಿಯ ವಿಡಿಯೋಗಳನ್ನ ಶೇರ್ ಮಾಡಿಕೊಂಡಿದ್ದನು. ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರಿಯನಾಗಿದ್ದ ಆರೀಫ್ ಅದೇ ಗುಂಗಿನಲ್ಲಿದ್ದನು.
ಟೆಲಿಗ್ರಾಂನಲ್ಲಿ ಗ್ರೂಪ್ ರಚನೆ


ಯಾರು ಧರ್ಮದ ಪರವಾಗಿ ಹೆಚ್ಚು ಪೋಸ್ಟ್ ಗಳನ್ನ ಹಾಕ್ತಾರೋ ಅಂತವರನ್ನು ಲಿಸ್ಟ್ ಮಾಡಿಕೊಳ್ಳುತ್ತಿದ್ದನು. ಮೂರ್ನಾಲ್ಕು ತಿಂಗಳ ಕಾಲ ಅಬ್ಸರ್ವ್ ಮಾಡಿ ಆ ಬಳಿಕ ತಾನೇ ಪ್ರಚೋದನೆ ಕೊಟ್ಟು ತನ್ನತ್ತ ಸೆಳೆಯುತ್ತಿದ್ದನು. ಅಂತವರನ್ನು ಟೆಲಿಗ್ರಾಂ ಗ್ರೂಪ್ ಮಾಡಿ ಅದರಲ್ಲಿ ಪ್ರಚೋದನೆಗೊಳಗಾದ ಅವರನ್ನು ಪ್ರತ್ಯೇಕ ಲಿಸ್ಟ್ ಮಾಡುತ್ತಿದ್ದನು.


ಇದನ್ನೂ ಓದಿ:  Belagavi Politics: ಒಂದು ಕ್ಷೇತ್ರ, 10 ಟಿಕೆಟ್ ಆಕಾಂಕ್ಷಿಗಳು; ಅಮಿತ್ ಶಾ ಭೇಟಿಯಾದ ಬಿಜೆಪಿ ನಾಯಕಿ; ದೆಹಲಿ ಅಂಗಳ ತಲುಪಿದ ಬಿಗ್ ಫೈಟ್!


ಒಂದು ತಿಂಗಳ ಹಿಂದೆ ಆರಿಫ್ ಮನೆಗೆ ಐಎಸ್​ಡಿ ಅಧಿಕಾರಿಗಳು ಬಂದಿದ್ದರು. ಬಾಡಿಗೆ ಮನೆ ಕೇಳುವ ನೆಪದಲ್ಲಿ ಬಂದಿದ್ದ ಅಧಿಕಾರಿಗಳು, ತಾವು ಹಣ್ಣು ವ್ಯಾಪಾರಿಗಳು  ಎಂದು ಹೇಳಿಕೊಂಡಿದ್ದರು. ಆದ್ರೆ ಒಳ್ಳೆಯ ಹುದ್ದೆಯಲ್ಲಿರೋರಿಗೆ ಮನೆ ನೀಡಲಾಗುತ್ತೆ ಎಂದು ಹೇಳಿದ್ದರು. ಹೀಗಾಗಿ ಮನೆಯ ರಸ್ತೆಯಲ್ಲಿಯೇ ನಿಂತು ಆರಿಫ್ ಮೇಲೆ ನಿಗಾ ಇರಿಸಲಾಗಿತ್ತು

Published by:Mahmadrafik K
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು