ಅನರ್ಹ ಶಾಸಕರು ರಾಜ್ಯದ ಮತದಾರರನ್ನು ಮುಂಬೈನಲ್ಲಿ ಮಾರಾಟ ಮಾಡಿದ್ದಾರೆ; ಮಾಜಿ ಸಚಿವ ಎಂ ಬಿ ಪಾಟೀಲ್

ವಧು-ವರರ ಅನ್ವೇಷಣೆ ಜಾಹೀರಾತು, ನಾನಾ ಹುದ್ದೆಗಳ ನೇಮಕಾತಿಯಲ್ಲಿ ಅರ್ಹತೆ ಮಾನದಂಡವಾಗಿರುತ್ತೆ. ಆದರೆ, ಇಲ್ಲಿ ಸುಪ್ರೀಂ ಕೋರ್ಟ್ ಅನರ್ಹ ಎಂದು ಹೇಳಿದೆ. ಇಂಥ ಅನರ್ಹರಿಗೆ ಮತ ಹಾಕುವ ಕುರಿತು ಅಥಣಿ ಮತದಾರರು ಯೋಚಿಸಬೇಕು

news18-kannada
Updated:December 3, 2019, 6:41 PM IST
ಅನರ್ಹ ಶಾಸಕರು ರಾಜ್ಯದ ಮತದಾರರನ್ನು ಮುಂಬೈನಲ್ಲಿ ಮಾರಾಟ ಮಾಡಿದ್ದಾರೆ; ಮಾಜಿ ಸಚಿವ ಎಂ ಬಿ ಪಾಟೀಲ್
ಎಂ.ಬಿ. ಪಾಟೀಲ್
  • Share this:
ಬೆಳಗಾವಿ(03): ಅನರ್ಹ ಶಾಸಕರು ರಾಜ್ಯದ ಮತದಾರರನ್ನುಮುಂಬೈನಲ್ಲಿ ಮಾರಾಟ ಮಾಡಿದ್ದರಿಂದ ಈಗ ಉಪ ಚುನಾವಣೆ ಬಂದಿದೆ. ಈ ಚುನಾವಣೆಯಲ್ಲಿ ಅಥಣಿ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗಜಾನನ ಮಂಗಸೂಳಿ ಪರ ಭಾರಿ ಬೆಂಬಲ ವ್ಯಕ್ತವಾಗಿದೆ ಎಂದು ಮಾಜಿ ಸಚಿವ ಎಂ ಬಿ ಪಾಟೀಲ್​​​​ ತಿಳಿಸಿದರು.

ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಮಾತನಾಡಿದ ಅವರು, ವಧು-ವರರ ಅನ್ವೇಷಣೆ ಜಾಹೀರಾತು, ನಾನಾ ಹುದ್ದೆಗಳ ನೇಮಕಾತಿಯಲ್ಲಿ ಅರ್ಹತೆ ಮಾನದಂಡವಾಗಿರುತ್ತೆ. ಆದರೆ, ಇಲ್ಲಿ ಸುಪ್ರೀಂ ಕೋರ್ಟ್ ಅನರ್ಹ ಎಂದು ಹೇಳಿದೆ. ಇಂಥ ಅನರ್ಹರಿಗೆ ಮತ ಹಾಕುವ ಕುರಿತು ಅಥಣಿ ಮತದಾರರು ಯೋಚಿಸಬೇಕು ಎಂದು ಎಂ.ಬಿ.ಪಾಟೀಲ್ ಕರೆ ನೀಡಿದರು.

ಅವಿವೇಕಿ ಶಾಸಕ, ರಾಜಕಾರಣಿ ಮಹೇಶ ಕುಮಟಳ್ಳಿ. ಅಪಹಾಸ್ಯ ಮಾಡಿದಾಗ ಮಹೇಶ ಕುಮಟಳ್ಳಿ ಸಂವೇದನಶೀಲ ಪೋಸ್ಟ್ ಹಾಕಿದ್ದರು ಆದರೆ, ಅಥಣಿ ಮತಕ್ಷೇತ್ರದ ಜನರನ್ನು ಅಪಹಾಸ್ಯ ಮಾಡಿದ್ದೀರಿ. ಇದೆಂಥ ವಿಪರ್ಯಾಸ. ಮಹೇಶ ಕುಮಟಳ್ಳಿ ಅವರಿಗೆ ಪ್ರವಾಹ ಸಂತ್ರಸ್ತರ ಶಾಪ ಹಾಕುತ್ತಿದ್ದಾರೆ. ಈ ಚುನಾವಣೆಗೆ 30 ಕೋಟಿ ರೂ ಖರ್ಚು ಮಾಡುತ್ತಿದ್ದಾರೆ. ಪ್ರತಿಯೊಂದು ಮತಕ್ಕೆ  ಒಂದು ಸಾವಿರ ರೂಪಾಯಿ ನೀಡುತ್ತಿದ್ದಾರೆ ಎಂದರು.

ಇದನ್ನೂ ಓದಿ : ಉಪಚುನಾವಣೆ ಬಳಿಕ ನಾವೇ ಕಿಂಗ್ ಮೇಕರ್ಸ್: ಜೆಡಿಎಸ್ ಮಾಜಿ ಶಾಸಕ ಕೋನರೆಡ್ಡಿ 

ಮಹೇಶ್ ಕುಮಟಳ್ಳಿಗೆ ಸ್ವಂತ ಬುದ್ದಿ ಇಲ್ಲ. ಇವರ ರಿಮೋಟ್ ಕಂಟ್ರೋಲ್ ಗೋಕಾಕಿನಲ್ಲಿದೆ. ಲಿಂಗಾಯಿತ ಮತದಾರರು ಮಹೇಶ್ ಕುಮಟಳ್ಳಿಗೆ ಮತ ಹಾಕಬೇಡಿ. ಇದು ಮಾರಾಟವಾಗುವ ಜಾತಿ. ಅಥಣಿ ಮತದಾರರು ಮಹೇಶ್ ಕುಮಟಳ್ಳಿಯನ್ನು ಆಯ್ಜೆ ಮಾಡಿದರೆ ರಿಪಬ್ಲಿಕ್ ಆಫ್ ಗೋಕಾಕ್ ವಶವಾಗಬೇಕಾಗುತ್ತೆ. ಮತ್ತೆ ಸ್ವಾತಂತ್ರ್ಯ ಹೋರಾಟ ಪಡೆಯುವುದು ಕಷ್ಟವಾಗುತ್ತದೆ ಎಂದು ತಿಳಿಸಿದರು

ಯತ್ನಾಳ ನನ್ನ ಒಳ್ಳೆಯ ಸ್ನೇಹಿತರು. ಮಾಜಿ ಕೇಂದ್ರ ಸಚಿವರಾಗಿದ್ದವರು. ಮುಖ್ಯಮಂತ್ರಿ ಸ್ಥಾನ ರೇಸ್ ನಲ್ಲಿದ್ದವರು. ನಿಮ್ಮ ಬಾಯಿ ನಿಮ್ಮನ್ನು ಹಾಳು ಮಾಡಿದೆ. ಲಕ್ಷ್ಮಿ ಹೆಬ್ಬಾಳ್ಕರ್​​ ಬಗ್ಗೆ ಪ್ರತಿ ಭಾಷಣದಲ್ಲಿ ಬೇಕಾಬಿಟ್ಟಿ ಯಾಕೆ ಮಾತನಾಡುತ್ತಿದ್ದೀರಿ?. ಲಕ್ಷ್ಮಿ ಹೆಬ್ಬಾಳ್ಕರ್​​ ಕೂಡ ನಿಮ್ಮದೇ ಸಮಾಜದ ಪಂಚಮಸಾಲಿ ಸಮಾಜದ ಮಹಿಳೆ. ಅವರ ಬಗ್ಗೆ ಗೌರವ ತೋರಿಸಬೇಕು. ಇಡೀ ಮಹಿಳೆಯರು ಯತ್ನಾಳ ಭಾಷಣ, ಮಾತುಗಳಿಂದ ನೋವು ಮಾಡಿಕೊಂಡಿದ್ದಾರೆ ಬಹುಸಂಖ್ಯೆಯಲ್ಲಿ ನಿಮ್ಮ ವಿರುದ್ಧ ಮತ ಚಲಾಯಿಸಲಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ : ಉಪಚುನಾವಣೆ: ಬಹಿರಂಗ ಪ್ರಚಾರಕ್ಕೆ ತೆರೆ; ನಾಳೆ ಮನೆಮನೆ ಪ್ರಚಾರ; ಮತದಾನಕ್ಕೆ ಒಂದೂವರೆ ದಿನ ಬಾಕಿಉಪ ಚುನಾವಣೆ ಬಳಿಕ ಸರಕಾರ ಬದಲಾಗಲಿದ್ದು, ಯಾರು ನೇತೃತ್ವ ವಹಿಸಬೇಕು ಎಂಬುದನ್ನು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸುತ್ತಿದೆ. ಕಾಂಗ್ರೆಸ್-ಜೆಡಿಎಸ್ ಈ ಉಪಚುನಾವಣೆಯಲ್ಲಿ 12 ರಿಂದ 13 ಸ್ಥಾನಗಳಲ್ಲಿ ಗೆಲ್ಲಲಿವೆ.  ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದಿರುವ ಯಡಿಯೂರಪ್ಪನವರು ಬೈ ಎಲೆಕ್ಷನ್ ನಂತರ ಹಿಂಬಾಗಿಲಿನ ಮೂಲಕವೇ ಹೋಗಲಿದ್ದಾರೆ ಎಂದು ತಿಳಿಸಿದರು.
First published:December 3, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading