• Home
  • »
  • News
  • »
  • state
  • »
  • Anekal: ಸಾರ್ವಜನಿಕ ಸ್ಥಳಗಳಲ್ಲಿ ಹಾನಿಕಾರಕ ತ್ಯಾಜ್ಯ; ಸ್ಥಳೀಯರಿಂದ ಆಕ್ರೋಶ

Anekal: ಸಾರ್ವಜನಿಕ ಸ್ಥಳಗಳಲ್ಲಿ ಹಾನಿಕಾರಕ ತ್ಯಾಜ್ಯ; ಸ್ಥಳೀಯರಿಂದ ಆಕ್ರೋಶ

ತ್ಯಾಜ್ಯ ತುಂಬಿದ ಟ್ಯಾಂಕರ್

ತ್ಯಾಜ್ಯ ತುಂಬಿದ ಟ್ಯಾಂಕರ್

ಟ್ಯಾಂಕರ್ ವಾಹನ ಸ್ಥಳೀಯರಾದ ವೀರಭದ್ರಪ್ಪ ಎಂಬವರಿಗೆ ಸೇರಿದ್ದು, ಸ್ಥಳೀಯರು ಈ ಬಗ್ಗೆ ಮಾತನಾಡಲು ಹಿಂದೇಟು ಸಹ ಹಾಕುತ್ತಿದ್ದು, ಒಂದು ವೇಳೆ ದೂರು ನೀಡಿದರೆ ಗೂಂಡಾಗಿರಿ ನಡೆಸುತ್ತಾರೆ ಎನ್ನುತ್ತಾರೆ ಸಾರ್ವಜನಿಕರಾದ ಸಂತೋಷ್.

  • Share this:

ಬೆಂಗಳೂರು ಹೊರವಲಯ ಆನೇಕಲ್ (Anekal, Bengaluru) ತಾಲ್ಲೂಕಿನ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶಕ್ಕೆ (Bommasandra Industrial Area) ಹೊಂದಿಕೊಂಡಂತಿರುವ ಯಾರಂಡಹಳ್ಳಿ ಗ್ರಾಮದ ಸ್ಮಶಾನ (Burial Ground) ಅಕ್ರಮವಾಗಿ ಕಸ ಸುರಿಯುವ ತಾಣವಾಗಿದೆ. ಸುತ್ತಲೂ ಜನವಸತಿ ಮತ್ತು ಕೈಗಾರಿಕಾ ಪ್ರದೇಶವಿದೆ. ಜೊತೆಗೆ ಇದರ ನಡುವೆ ಕಸದ (Garbage) ರಾಶಿಯಿಂದ ಸ್ಮಶಾನ ಗಬ್ಬುನಾರುತ್ತಿದ್ದು, ರಾತ್ರಿ ಸ್ಮಶಾನದಲ್ಲಿ ಕೈಗಾರಿಕಾ ತ್ಯಾಜ್ಯ (Industrial waste)ಸುರಿಯುತ್ತಿದ್ದ ಟ್ಯಾಂಕರ್ ಅಡ್ಡಗಟ್ಟಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಾರಂಡಹಳ್ಳಿ ಗ್ರಾಮಸ್ಥರ ಅಂತ್ಯಸಂಸ್ಕಾರಕ್ಕಾಗಿ ಸರ್ಕಾರ ಸ್ಮಶಾನವನ್ನು ಮೀಸಲಿಟ್ಟಿದೆ. ಆದ್ರೆ ಸ್ಮಶಾನ ಜಾಗವನ್ನು ಶವಸಂಸ್ಕಾರಕ್ಕೆ ಬದಲು ಕೆಲ ಕಸದ ಮಾಫಿಯಾದವರು ಅಕ್ರಮವಾಗಿ ಕೈಗಾರಿಕೆಗಳ ಹಾನಿಕಾರಕ ತ್ಯಾಜ್ಯ ಸುರಿಯುವ ಡಸ್ಟ್ ಬಿನ್ ಆಗಿ ಮಾಡಿದ್ದಾರೆ.


ಸುತ್ತಲೂ ಜನವಸತಿ ಪ್ರದೇಶ ಮತ್ತು ಕೈಗಾರಿಕಾ ಪ್ರದೇಶವಿದ್ದು, ದುರ್ವಾಸನೆಗೆ ಸಾರ್ವಜನಿಕರು ಅಸಹ್ಯಪಡುವಂತಾಗಿದೆ. ಹಣಕ್ಕಾಗಿ ಕಸದ ಮಾಫಿಯಾದವರಯ ಸಾರ್ವಜನಿಕ ಆಸ್ತಿಗಳನ್ನು ಕಸದ ತೊಟ್ಟಿಗಳಾಗಿ ಮಾಡುತ್ತಿದ್ದಾರೆ. ಇದರಿಂದ ಪರಿಸರ ಮಾಲಿನ್ಯ ಪ್ರಮಾಣ ಹೆಚ್ಚಾಗುತ್ತಿದೆ. ಸಾರ್ವಜನಿಕರಿಗೆ ಅನಾರೋಗ್ಯ ಸಮಸ್ಯೆ ಹೆಚ್ಚಾಗುತ್ತದೆ ಎಂದು ಸಾರ್ವಜನಿಕರಾದ ಸಂತೋಷ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಕೆರೆ, ಕುಂಟೆ, ಸ್ಮಶಾನಗಳಲ್ಲಿ ತ್ಯಾಜ್ಯ


ಇನ್ನೂ ರಾತ್ರಿ ವೇಳೆ ಕೈಗಾರಿಕೆಗಳಲ್ಲಿನ ಹಾನಿಕಾರಕ ತ್ಯಾಜ್ಯವನ್ನು ಟ್ಯಾಂಕರ್ಗಳಲ್ಲಿ ತುಂಬಿ ಕೆರೆ, ಕುಂಟೆ, ಸ್ಮಶಾನಗಳಲ್ಲಿ ಸುರಿದು ಹೋಗುತ್ತಾರೆ. ಯಾರಂಡಹಳ್ಳಿ ಸ್ಮಶಾನದಲ್ಲಿ ಕಳೆದ ಐದಾರು ತಿಂಗಳಿನಿಂದ ಕೈಗಾರಿಕೆಗಳ ಕೆಮಿಕಲ್ ನೀರನ್ನು ಸ್ಮಶಾನ ಜಾಗದಲ್ಲಿ ಸುರಿಯುತ್ತಿರುವ ಬಗ್ಗೆ ಮಾಹಿತಿ ಇತ್ತು.


ನಿತ್ಯ ರಾತ್ರಿ ವೇಳೆ ಗಮನಿಸುತ್ತಿದ್ದು, ನಿನ್ನೆ ರಾತ್ರಿ ಸಿಕ್ಕಿ ಬಿದ್ದಿದ್ದಾರೆ. ಸ್ಥಳೀಯರೆಂದು ಎಚ್ಚರಿಕೆ ನೀಡಿ ದೂರು ನೀಡಿಲ್ಲ ಎನ್ನುವ ಪಕ್ಕದ ಜಮೀನಿನವರು, ಸುಮ್ಮನೆ ಸಮಸ್ಯೆಯಾಗಬಾರದು ಎನ್ನುತ್ತಾರೆ.


ದೂರು ನೀಡಿದ್ರೆ ಗೂಂಡಾಗಿರಿ


ಟ್ಯಾಂಕರ್ ವಾಹನ ಸ್ಥಳೀಯರಾದ ವೀರಭದ್ರಪ್ಪ ಎಂಬವರಿಗೆ ಸೇರಿದ್ದು, ಸ್ಥಳೀಯರು ಈ ಬಗ್ಗೆ ಮಾತನಾಡಲು ಹಿಂದೇಟು ಸಹ ಹಾಕುತ್ತಿದ್ದು, ಒಂದು ವೇಳೆ ದೂರು ನೀಡಿದರೆ ಗೂಂಡಾಗಿರಿ ನಡೆಸುತ್ತಾರೆ ಎನ್ನುತ್ತಾರೆ ಸಾರ್ವಜನಿಕರಾದ ಸಂತೋಷ್.


ಇದನ್ನೂ ಓದಿ:  Bengaluru: ಸ್ವರ್ಗದಂತಿದೆ ಬೆಂಗಳೂರು, ವಿಶ್ವದಲ್ಲೇ ಬೆಸ್ಟ್​ ಎಂದ ನೆಟ್ಟಿಗ: ಇಂಟರ್‌ನೆಟ್‌ನಲ್ಲಿ ಅಚ್ಚರಿಯ ಪ್ರತಿಕ್ರಿಯೆ!


ತ್ಯಾಜ್ಯ ವೈಜ್ಞಾನಿಕವಾಗಿ ವಿಲೇವಾರಿಗೆ ಆಗ್ರಹ


ಒಟ್ಟಿನಲ್ಲಿ ಕಸದ ಕೂಪ ದೊಡ್ಡ ಮಟ್ಟದ ದಂಧೆ ಜೊತೆಗೆ ಅಪಾಯಕಾರಿಯಾದದ್ದು, ಎನ್ನುವ ಸ್ಥಳೀಯರು, ಕಸದಿಂದ ಯಾರಂಡಹಳ್ಳಿ ಸ್ಮಶಾನ ಮುಕ್ತಗೊಳಿಸಬೇಕು. ಕೈಗಾರಿಕಾ ತ್ಯಾಜ್ಯ ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಸೂಕ್ತ ಕ್ರಮ ವಹಿಸಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದ್ದು, ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಯಾವ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.


ರಸ್ತೆಗಳ ಬದಿಯಲ್ಲಿ ಅಂಗಡಿ ಮಾಡಿಕೊಂಡವರಿಗೆ ಬಿಬಿಎಂಪಿ ಶಾಕ್


ಬೆಂಗಳೂರಿನ ಬೀದಿ ಉದ್ದಕ್ಕೂ ತಳ್ಳೋಗಾಡಿ, ಸಣ್ಣಪುಟ್ಟ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದವರಿಗೆ ಈ ಮೂಲಕ ಬಿಬಿಎಂಪಿ ಶಾಕ್ ನೀಡಿದೆ. ಬೀದಿ ಬದಿ ಜಾಗ ಒತ್ತುವರಿಯನ್ನು ತೆರವು ಮಾಡೊಕೆ ಪಾಲಿಕೆ ಮುಂದಾಗಿದೆ ರಸ್ತೆಯುದ್ದಕ್ಕೂ ತಳ್ಳುವ ಗಾಡಿ ಹಾಕಿ ಜಾಗ ಒತ್ತುವರಿ ಮಾಡಿಕೊಂಡ ಸ್ಥಳದ ತೆರವು ಮಾಡಲು ಬಿಬಿಎಂಪಿ ತೆರೆ ಮರೆಯಲ್ಲಿ ಸಿದ್ಧತೆ ಮಾಡಿಕೊಳ್ಳುತ್ತಿದೆ.


ಈ ಬಗ್ಗೆ ಹೊಸ ಸರ್ವೇ (Survey) ನಡೆಸುವಂತೆ ಬಿಬಿಎಂಪಿ ಮುಖ್ಯ ಆಯುಕ್ತರಿಂದ ರಸ್ತೆ ಮೂಲಭೂತ ಸೌಕರ್ಯ ವಿಭಾಗದ ಅಧಕಾರಿಗಳಿಗೆ ಸೂಚನೆ ನೀಡಿದ್ದಾರೆ. 2017ರಲ್ಲಿ ಬೀದಿಬದಿ ವ್ಯಾಪಾರಿಗಳ ಸರ್ವೇ ನಡೆಸಿದ ಬಿಬಿಎಂಪಿ ನಗರದಲ್ಲಿ ಎಷ್ಟು ಬೀದಿಬದಿ ವ್ಯಾಪಾರಿಗಳಿದ್ದಾರೆ ಅಂತ ಮಾಹಿತಿ ಕಲೆ ಹಾಕಿತ್ತು.


ಇದನ್ನೂ ಓದಿ:  Bank Scam: ಬೆಂಗಳೂರಿನಲ್ಲಿ 100 ಕೋಟಿ ಬ್ಯಾಂಕ್ ಹಗರಣ; ಐವರು ಅರೆಸ್ಟ್


ಈ ಪ್ರಕಾರ ನಗರದಲ್ಲಿ ಒಂದು ಲಕ್ಷಕ್ಕೂ ಅಧಿಕ ಬೀದಿಬದಿ ವ್ಯಾಪಾರಿಗಳು ಇರೋದು ಗೊತ್ತಾಗಿದೆ. ಈ ಪೈಕಿ 25 ಸಾವಿರ ಬೀದಿಬದಿ ವ್ಯಾಪಾರಿಗಳಿಗೆ ಪಾಲಿಕೆಯಿಂದ ಅಧಿಕೃತ ಗುರುತಿನ ಚೀಟಿ ನೀಡಲಾಗಿದೆ.

Published by:Mahmadrafik K
First published: