ಸ್ಯಾಂಡಲ್ವುಡ್ನಲ್ಲಿ ಡ್ರಗ್ಸ್ ಸೇವನೆಗೂ ಕೋಡ್ವರ್ಡ್; ಆತಂಕಕಾರಿ ವಿಚಾರಗಳನ್ನು ಬಿಚ್ಚಿಟ್ಟ ಇಂದ್ರಜಿತ್ ಲಂಕೇಶ್
ಶೂಟಿಂಗ್ ವೇಳೆ ಕೆಲವರು ಕೋಡ್ವರ್ಡ್ ಬಳಸಿ ಡ್ರಗ್ಸ್ ಸೇವನೆಗೆ ಹಾಜರ್ ಆಗುತ್ತಿದ್ದರು. ಈ ವಿಚಾರ ತಿಳಿದು ಕೆಲ ಹಿರಿಯ ನಟರು ಬೈದಿದ್ದು ಉಂಟು. ಎಲ್ಲರನ್ನೂ ಹಾಳು ಮಾಡ್ತಿರಾ ಅಂತಾ ಗದರಿಸಿದ್ದ ಪ್ರಸಂಗಗಳು ನಡೆದಿವೆ ಎಂದು ಪೊಲೀಸ್ ವಿಚಾರಣೆ ವೇಳೆ ಇಂದ್ರಜಿತ್ ಲಂಕೇಶ್ ತಿಳಿಸಿದ್ದಾರೆ.
news18-kannada Updated:August 31, 2020, 4:22 PM IST

ಇಂದ್ರಜಿತ್ ಲಂಕೇಶ್.
- News18 Kannada
- Last Updated: August 31, 2020, 4:22 PM IST
ಬೆಂಗಳೂರು (ಆಗಸ್ಟ್ 31); ಸ್ಯಾಂಡಲ್ವುಡ್ನ ಡ್ರಗ್ಸ್ ಜಾಲದ ನಂಟಿನ ಕುರಿತು ಚಿತ್ರ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ಪೊಲೀಸರ ಎದುರು ಬಿಚ್ಚಿಟ್ಟಿರುವ ಆತಂಕಕಾರಿ ಮಾಹಿತಿಗಳಿಗೆ ಸ್ವತಃ ಪೊಲೀಸ್ ಅಧಿಕಾರಿಗಳೇ ಬೆಚ್ಚಿ ಬಿದ್ದಿದ್ದಾರೆ ಎಂದು ಹೇಳಲಾಗುತ್ತಿದೆ.
ಬೆಂಗಳೂರಿನಲ್ಲಿ ಎನ್ಸಿಬಿ ಅಧಿಕಾರಿಗಳು ಗುರುವಾರ ಕೋಟ್ಯಂತರ ರೂ. ಮೌಲ್ಯದ ಮಾದಕ ವಸ್ತುಗಳನ್ನು ವಶಕ್ಕೆ ಪಡೆದಿದ್ದರು. ಈ ಬಗ್ಗೆ ವಿಚಾರಣ ವೇಳೆ ಅನೇಕ ಅಚ್ಚರಿಯ ಮಾಹಿತಿಗಳು ಹೊರಬಿದ್ದಿದ್ದವು. ಇವರು ನಟ, ನಟಿಯರು, ಸಂಗೀತ ನಿರ್ದೇಶಕರು ಸೇರಿದಂತೆ ಅನೇಕ ಗಣ್ಯರಿಗೂ ಡ್ರಗ್ ಪೂರೈಸುತ್ತಿದ್ದ ವಿಷಯ ಬೆಳಕಿಗೆ ಬಂದಿತ್ತು. ಇದರ ಬೆನ್ನಿಗೆ ಸ್ಯಾಂಡಲ್ವುಡ್ ಡ್ರಗ್ಸ್ ಜಾಲದ ಬಗ್ಗೆ ತುಟಿ ಬಿಚ್ಚಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್, "ಸ್ಯಾಂಡಲ್ವುಡ್ ಕೊಕೇನ್ವರೆಗೆ ಬೆಳದಿದೆ. ಇತ್ತೀಚೆಗೆ ಕೆಲವು ನಟ-ನಟಿಯರು ಈ ಮಾದಕ ವಸ್ತುಗಳಿಗೆ ದಾಸರಾಗಿದ್ದಾರೆ. ನನಗೆ ರಕ್ಷಣೆ ನೀಡುವುದಾದರೆ ಅವರ ಹೆಸರುಗಳನ್ನು ನಾನು ಬಹಿರಂಗಪಡಿಸಲು ಸಿದ್ಧ" ಎಂದು ಮಾಧ್ಯಮಗಳ ಮೂಲಕ ಹೇಳಿಕೆ ನೀಡಿದ್ದರು.
ಇದರ ಬೆನ್ನಿಗೆ ಅಪರಾಧ ವಿಭಾಗದ ಅಧಿಕಾರಿಗಳು ಇಂದ್ರಜಿತ್ ಲಂಕೇಶ್ ವಿಚಾರಣೆಗೆ ನೊಟೀಸ್ ಜಾರಿ ಮಾಡಿದ್ದರು. ಹೀಗಾಗಿ ಇಂದ್ರಜಿತ್ ಇಂದು ವಿಚಾರಣೆಗೂ ಹಾಜರಾಗಿದ್ದರು. ಆದರೆ, ವಿಚಾರಣೆ ವೇಳೆ ಅವರು ಹೊರಗೆಡವಿರುವ ಮಾಹಿತಿ ಮಾತ್ರ ಆತಂಕಕ್ಕೆ ಕಾರಣವಾಗಿದೆ.
ಇಂದ್ರಜಿತ್ ನೀಡಿದ ಮಾಹಿತಿ ಏನು?
ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಎದುರು ಇಂದ್ರಜಿತ್ ಲಂಕೇಶ್ ನೀಡಿರುವ ಮಾಹಿತಿ ಬೆಚ್ಚಿ ಬೀಳಿಸುವಂತಿದೆ. ಇಂದ್ರಜಿತ್ ನೀಡಿರುವ ಮಾಹಿತಿಯ ಪ್ರಕಾರ, “ಸ್ಯಾಂಡಲ್ವುಡ್ನಲ್ಲಿ ಡ್ರಗ್ಸ್ ಹೊಡೆಯೋಕು ಕೋಡ್ವರ್ಡ್ ಇದೆ. ಸ್ಯಾಂಡಲ್ ವುಡ್ ನಲ್ಲಿ ಕೋಡ್ವರ್ಡ್ ಮೂಲಕವೇ ಡ್ರಗ್ಸ್ ಪಾರ್ಟಿಗಳು ನಡೆಯುತ್ತವೆ.
ಡ್ರಗ್ಸ್ ಸೇವನೆಗಾಗಿಯೇ ಆ ಕೋಡ್ ವರ್ಡ್ ಬಳಕೆ ಮಾಡಲಾಗುತ್ತದೆ.ಶೂಟಿಂಗ್ ವೇಳೆ ಕೆಲವರು ಕೋಡ್ವರ್ಡ್ ಬಳಸಿ ಡ್ರಗ್ಸ್ ಸೇವನೆಗೆ ಹಾಜರ್ ಆಗುತ್ತಿದ್ದರು. ಈ ವಿಚಾರ ತಿಳಿದು ಕೆಲ ಹಿರಿಯ ನಟರು ಬೈದಿದ್ದು ಉಂಟು. ಎಲ್ಲರನ್ನೂ ಹಾಳು ಮಾಡ್ತಿರಾ ಅಂತಾ ಗದರಿಸಿದ್ದ ಪ್ರಸಂಗಗಳು ನಡೆದಿವೆ.
ನಗರದ ಐಷಾರಾಮಿ ಅಪಾರ್ಟ್ಮೆಂಟ್ವೊಂದರಲ್ಲಿ ಸ್ಯಾಂಡಲ್ವುಡ್ ಸೆಲೆಬ್ರಿಟಿಗಳು ಸೇರುತ್ತಿದ್ದರು. ಚಿತ್ರರಂಗದ ದೊಡ್ಡ ದೊಡ್ಡ ಗಣ್ಯ ವ್ಯಕ್ತಿಗಳ ಪುತ್ರರು ಇಲ್ಲಿಗೆ ಆಗಮಿಸುತ್ತಿದ್ದರು. ಕಟ್ಟಡದ ಒಳಗೆ ಎಂಟ್ರಿಯಾದ್ರೆ ಒಳಗೆಲ್ಲಾ ನಶೆಯ ಸಾಮ್ರಾಜ್ಯ. ಆಹ್ವಾನಿತರಿಗಷ್ಟೆ ಅಲ್ಲಿಗೆ ಎಂಟ್ರಿ, ಉಳಿದವರಿಗೆ ಅಲ್ಲಿಗೆ ಯಾರಿಗೂ ನೋ ಎಂಟ್ರಿ. ಆ ಐಷಾರಾಮಿ ಅಪಾರ್ಟ್ಮೆಂಟ್ನಲ್ಲಿ ನಡೆಯೋದೆಲ್ಲಾ ಖುಲ್ಲಂಖುಲ್ಲ" ಎಂದು ಇಂದ್ರಜಿತ್ ಲಂಕೇಶ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಪೊಲೀಸ್ ರಕ್ಷಣೆ ನೀಡಿದರೆ ಸ್ಯಾಂಡಲ್ವುಡ್ ಡ್ರಗ್ ಮಾಫಿಯಾ ಹೆಸರು ಬಹಿರಂಗ ಪಡಿಸುತ್ತೇನೆ; ಇಂದ್ರಜಿತ್ ಲಂಕೇಶ್
ವಿಚಾರಣೆ ವೇಳೆ ಸ್ಯಾಂಡಲ್ವುಡ್ನಲ್ಲಿ ಡ್ರಗ್ಸ್ ಬಳಸುವ ಹಲವರ ಹೆಸರನ್ನು ಇಂದ್ರಜಿತ್ ಲಂಕೇಶ್ ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಈ ವೇಳೆ ಇಂದ್ರಜಿತ್ ಲಂಕೇಶ್ ಅವರಿಗೆ ಅಭಯ ನೀಡಿರುವ ಪೊಲೀಸ್ ಅಧಿಕಾರಿಗಳು, "ಯಾವುದೇ ಕಾರಣಕ್ಕೂ ಭಯ ಪಡಬೇಡಿ ನಾವಿದ್ದೇವೆ. ನಿಮ್ಮ ಆತ್ಮರಕ್ಷಣೆಗೆ ಗನ್ ಲೈಸೆನ್ಸ್ ಪಡೆಯಲು ಅಪ್ಲಿಕೇಷನ್ ಹಾಕಿ. ಅಲ್ಲದೆ, ಡ್ರಗ್ಸ್ ಸೇವನೆ ಮಾಡಿದವರ ಹೆಸರನ್ನು ಸಾರ್ವಜನಿಕವಾಗಿ ರಿವೀಲ್ ಮಾಡಬೇಡಿ. ಇದರಿಂದ ಅವರು ಕಣ್ಮರೆಯಾಗುವ ಸಾಧ್ಯತೆಯೂ ಇದೆ" ಎಂದು ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಇನ್ನೂ ಇಂದ್ರಜಿತ್ ಲಂಕೇಶ್ ವಿಚಾರಣೆಯನ್ನು ಮುಗಿಸಿರುವ ಪೊಲೀಸರು ಡ್ರಗ್ಸ್ ದಾಸರ ಬಗ್ಗೆ ಸಾಕ್ಷಿ ಸಂಗ್ರಹಿಸಿ ಬಳಿಕ ವಿಚಾರಣೆಗೆ ಕರೆಸೋ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಅಲ್ಲದೆ, ವಿಚಾರಣೆ ಸಂದರ್ಭದಲ್ಲಿ ಆರೋಪಿಗಳನ್ನು ಡೋಪಿಂಗ್ ಪರೀಕ್ಷೆಗೂ ಒಳಪಡಿಸಲಾಗುವುದು ಎಂದು ತಿಳಿದುಬಂದಿದೆ.
ಬೆಂಗಳೂರಿನಲ್ಲಿ ಎನ್ಸಿಬಿ ಅಧಿಕಾರಿಗಳು ಗುರುವಾರ ಕೋಟ್ಯಂತರ ರೂ. ಮೌಲ್ಯದ ಮಾದಕ ವಸ್ತುಗಳನ್ನು ವಶಕ್ಕೆ ಪಡೆದಿದ್ದರು. ಈ ಬಗ್ಗೆ ವಿಚಾರಣ ವೇಳೆ ಅನೇಕ ಅಚ್ಚರಿಯ ಮಾಹಿತಿಗಳು ಹೊರಬಿದ್ದಿದ್ದವು. ಇವರು ನಟ, ನಟಿಯರು, ಸಂಗೀತ ನಿರ್ದೇಶಕರು ಸೇರಿದಂತೆ ಅನೇಕ ಗಣ್ಯರಿಗೂ ಡ್ರಗ್ ಪೂರೈಸುತ್ತಿದ್ದ ವಿಷಯ ಬೆಳಕಿಗೆ ಬಂದಿತ್ತು.