HOME » NEWS » State » INDRAJIT LANKESH SAYS HE WANT SANDALWOOD TO BE CLEANED UP SNVS

ನಾನು ಮೆಸೆಂಜರ್ ಅಷ್ಟೇ, ಚಿತ್ರರಂಗ ಸ್ವಚ್ಛಗೊಳ್ಳುವುದು ಮುಖ್ಯ: ಇಂದ್ರಜಿತ್ ಲಂಕೇಶ್

ತನಿಖಾಧಿಕಾರಿಗಳು ಗಟ್ಟಿ ಇದ್ದಾರೆ. ನನಗೆ ಏನೇನು ಗೊತ್ತೋ ಅದನ್ನು ತಿಳಿಸಿದ್ದೇನೆ. ನಾನೊಂದು ಪಾರಿವಾಳದ ರೀತಿ ಮಾಹಿತಿ ಕೊಟ್ಟಿದ್ದೇನೆ ಎಂದು ಸಿನಿಮಾ ನಿರ್ದೇಶಕರೂ ಪತ್ರಕರ್ತರೂ ಆದ ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ.

news18-kannada
Updated:September 3, 2020, 1:45 PM IST
ನಾನು ಮೆಸೆಂಜರ್ ಅಷ್ಟೇ, ಚಿತ್ರರಂಗ ಸ್ವಚ್ಛಗೊಳ್ಳುವುದು ಮುಖ್ಯ: ಇಂದ್ರಜಿತ್ ಲಂಕೇಶ್
ಇಂದ್ರಜಿತ್​ ಲಂಕೇಶ್​.
  • Share this:
ಬೆಂಗಳೂರು(ಸೆ. 03): ಸಿಸಿಬಿ ಪೊಲೀಸರ ಸೂಚನೆಯಂತೆ ಇಂದ್ರಜಿತ್ ಲಂಕೇಶ್ ಇಂದು ವಿಚಾರಣೆಗೆ ಹಾಜರಾದರು. ಅದಾದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಲಂಕೇಶ್, ತಾನು 40 ನಿಮಿಷಗಳ ಕಾಲ ನಡೆದ ವಿಚಾರಣೆಯ ಕೆಲ ವಿವರಗಳನ್ನ ನೀಡಿದರು. ವಿಚಾರಣೆಯಲ್ಲಿ ಕೆಲ ಸ್ಪಷ್ಟೀಕರಣ ಕೇಳಿದಾಗ ನಾನು ಕೊಟ್ಟಿದ್ದೇನೆ. ಹೇಳಿಕೆ, ಸಾಕ್ಷಿ ಅಂತಲ್ಲ, ನನಗೆ ಗೊತ್ತಿರುವ ಎಲ್ಲಾ ಮಾಹಿತಿ ನೀಡಿದ್ದೇನೆ. ನಾನು ಮೆಸೆಂಜರ್ ಅಷ್ಟೇ. ಮೆಸೆಂಜರ್ ಅನ್ನು ಕೊಲ್ಲಬೇಡಿ ಎಂದು ಕೇಳಿಕೊಳ್ಳುತ್ತೇನೆ ಎಂದು ಇಂದ್ರಜಿತ್ ಮನವಿ ಮಾಡಿಕೊಂಡರು.

ನನಗೆ ಇನ್ಮುಂದೆ ಏನೇ ಮಾಹಿತಿ ಸಿಕ್ಕರೂ ಎಲ್ಲವನ್ನೂ ನೀಡುತ್ತೇನೆ. ನನ್ನ ಬಳಿ ಸಮರ್ಥ ತಂಡವಿದೆ. ಸಮಾಜಕ್ಕೆ ಒಂದು ಸಂದೇಶ ಹೋಗಬೇಕು. ಒಂದು ಡಿಸಿಪ್ಲಿನ್ ಬರಬೇಕು. ನಮ್ಮ ಕನ್ನಡ ಚಿತ್ರರಂಗ ಡ್ರಗ್ ಮುಕ್ತವಾಗಬೇಕು, ಸ್ವಚ್ಛಗೊಳ್ಳಬೇಕು…. ನನಗೆ ರಿಸಲ್ಟ್ ಬೇಕು. ಅದೀಗ ಸಿಗುತ್ತಿದೆ ಎಂದು ಇಂದ್ರಜಿತ್ ಸಮಾಧಾನ ವ್ಯಕ್ತಪಡಿಸಿದರು.

ಈಗ ನಾನು ಮಾಧ್ಯಮಗಳಿಗೆ ಹೆಚ್ಚು ವಿವರ ನೀಡಿದರೆ ತನಿಖೆಗೆ ಅಡ್ಡವಾಗುತ್ತದೆ. ತನಿಖಾಧಿಕಾರಿಗಳ ಬಳಿ ನನಗಿಂತ ಹೆಚ್ಚು ಮಾಹಿತಿ ಇದೆ. ಬೇಕಾದರೆ ನೀವು ಅವರನ್ನೇ ಕೇಳಿ ಎಂದು ಮಾಧ್ಯಮಗಳಿಗೆ ಅವರು ತಿಳಿಸಿದರು.

ಇದನ್ನೂ ಓದಿ: ಡ್ರಗ್ ಕೇಸ್​ನಲ್ಲಿ ಸಂಜನಾ ಆಪ್ತ ರಾಹುಲ್; ವಿಚಾರಣೆ ವೇಳೆ ಪೊಲೀಸರಿಗೆ ಮಹತ್ವದ ಸುಳಿವು?

ತನಿಖಾಧಿಕಾರಿಗಳು ಗಟ್ಟಿ ಇದ್ದಾರೆ. ನನಗೆ ಏನೇನು ಗೊತ್ತೋ ಅದನ್ನು ತಿಳಿಸಿದ್ದೇನೆ. ನಾನೊಂದು ಪಾರಿವಾಳದ ರೀತಿ ಮಾಹಿತಿ ಕೊಟ್ಟಿದ್ದೇನೆ ಎಂದು ಸಿನಿಮಾ ನಿರ್ದೇಶಕರೂ ಪತ್ರಕರ್ತರೂ ಆದ ಇಂದ್ರಜಿತ್ ಲಂಕೇಶ್ ಹೇಳಿದರು.

ಅಕ್ಕ ಗೌರಿಯನ್ನು ನೆನೆದು ಭಾವುಕರಾದ ಇಂದ್ರಜಿತ್:

ಸಿಸಿಬಿ ಕಚೇರಿಗೆ ಹೋಗುವ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡುವಾಗ ಇಂದ್ರಜಿತ್ ತಮ್ಮ ತಂದೆ ಪಿ. ಲಂಕೇಶ್ ಹಾಗೂ ಅಕ್ಕ ಗೌರಿ ಲಂಕೇಶ್ ಅವರನ್ನ ನೆನಪಿಸಿಕೊಂಡು ಭಾವುಕರಾದರು. ಗೌರಿ ಲಂಕೇಶ್ ಅವರೂ ಡ್ರಗ್ ಅಡಿಕ್ಟ್ ಆಗಿದ್ದರು ಎಂದು ಮಾಧ್ಯಮದವರೊಬ್ಬರು ಪ್ರಶ್ನೆ ಮಾಡಿದಾಗ ಈ ಘಟನೆ ನಡೆಯಿತು.ತಮ್ಮ ಅಕ್ಕ ಹೀಗೆ ಮಾಡಿದ್ದರು ಅಂತ ಮಾತನಾಡಿದ್ದಾರೆ. ಅಕ್ಕನ ಸಾವು ಸಾವಲ್ಲವಾ? ನಮ್ಮ ತಂದೆ ಮತ್ತು ನಮ್ಮ ಅಕ್ಕ ಕೊನೆಯ ಗಳಿಗೆಯವರೆಗೂ ಮಾಧ್ಯಮಕ್ಕೆ ಸೇವೆ ಮಾಡಿ್ದಾರೆ. ನಮ್ಮ ಅಕ್ಕ ಒಂದು ಸಿದ್ಧಾಂತಕ್ಕಾಗಿ ಸಾವು ಅನಿಸಬೇಕಿತ್ತಾ ಅನಿಸುತ್ತದೆ ಎಂದು ಇಂದ್ರಜಿತ್ ಬೇಸರ ವ್ಯಕ್ತಪಡಿಸಿದರು.

ಇದನ್ನೂ ಓದಿ: ಬೆಂಗಳೂರಲ್ಲಿ 2 ದಿನದಲ್ಲಿ 20 ಡ್ರಗ್ ಪೆಡ್ಲರ್ಸ್ ಬಂಧನ; ಕೋಟ್ಯಂತರ ಮೌಲ್ಯದ ಗಾಂಜಾ ಜಪ್ತಿ

ಗೌರಿ ಲಂಕೇಶ್ ಅವರ ಹಂತಕರು ಬಂಧಿತರಾಗಿದ್ದಾರೆ. ಇದಕ್ಕೆ ಎಸ್​ಐಟಿಗೆ ಹ್ಯಾಟ್ಸ್ ಆಫ್ ಹೇಳುತ್ತೇನೆ. ಹಾಗೆಯೇ, ನರೇಂದ್ರ ದಾಬೋಲ್ಕರ್, ಎಂಎಂ ಕಲಬುರ್ಗಿ ಅವರ ಹಂತಕರೂ ಅರೆಸ್ಟ್ ಆಗಬೇಕು ಎಂದು ಅವರು ಒತ್ತಾಯಿಸಿದರು.

ಹಲವು ಜನರು ನನ್ನ ಹೋರಾಟದಲ್ಲಿ ಜೊತೆಯಲ್ಲಿದ್ದಾರೆ. ಇಂಡಸ್ಟ್ರಿಯಲ್ಲಿ ಮೂರನೇ ಪೀಳಿಗೆಯಿಂದ ಕೆಟ್ಟದಾಗುತ್ತಿದೆ. ಮೂರ್ನಾಲ್ಕು ಘಟನೆಗಳು ನಡೆದರೂ ಯಾವುದೇ ಜಾಗೃತಿ ಆಗಿರಲಿಲ್ಲ. ಅದಕ್ಕೆ ನಾನು ಈಗ ಮುಂದೆ ಬಂದಿದ್ದೇನೆ. ನನ್ನ ವಿರುದ್ಧ ವಾಣಿಜ್ಯ ಮಂಡಳಿ ನೋಟೀಸ್ ಕೊಟ್ಟರೆ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುತ್ತೇನೆ. ವಾಣಿಜ್ಯ ಮಂಡಳಿಯವರು ಚಿತ್ರರಂಗದ ಹಣಕಾಸು ವಿಷಯಗಳಲ್ಲಿ ಮಾತ್ರ ಸಮಸ್ಯೆ ಇದ್ದರೆ ಬಗೆಹರಿಸಬೇಕು. ಅದು ಅವರ ವ್ಯಾಪ್ತಿ ಬರುತ್ತದೆ. ಇದು ಡ್ರಗ್ ಮಾಫಿಯಾ ವೈಯಕ್ತಿಕವಾಗಿ ಹೇಳುವ ವಿಚಾರ. ಚಿತ್ರರಂಗದಲ್ಲಿ ನನಗೆ ಗೊತ್ತಿದ್ದ ವಿಚಾರವನ್ನು ಹೇಳಿದ್ದೇನೆ ಎಂದು ಇಂದ್ರಜಿತ್ ಲಂಕೇಶ್ ತಿಳಿಸಿದರು.

ಇದೇ ವೇಳೆ, ಬೆಂಗಳೂರಿನಲ್ಲಿ ವ್ಯಾಪಕವಾಗಿರುವ ಡ್ರಗ್ ಜಾಲವನ್ನು ಪೊಲೀಸರು ಭೇದಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಕಳೆದ 2 ದಿನಗಳಿಂದ 20ಕ್ಕು ಹೆಚ್ಚು ಡ್ರಗ್ ಪೆಡ್ಲರ್​ಗಳನ್ನ ಬಂಧಿಸಿದ್ದಾರೆ. ನಟಿಯರಾದ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್​ರಾಣಿ ಅವರ ಇಬ್ಬರು ಆಪ್ತರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಇಂದ್ರಜಿತ್ ಲಂಕೇಶ್ ನೀಡಿದ ಮಾಹಿತಿ ಆಧರಿಸಿಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Published by: Vijayasarthy SN
First published: September 3, 2020, 1:23 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories