HOME » NEWS » State » INDIRA GANDHI 103 BIRTHDAY CELEBRATION AR KPCC OFFICE RH SHM

ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ 103ನೇ ಜನ್ಮದಿನಾಚರಣೆ

ನೆಹರು ಚಿಂತನೆ, ಇಂದಿರಾಗಾಂಧಿ ಕೆಲಸ, ರಾಜೀವ್ ಗಾಂಧಿ ಯುವಕರಿಗಾಗಿ ಮಾಡಿದ ಕೆಲಸ ಅರಿಯಬೇಕಿದೆ. ಒಡೆದು ಆಳುವ ಬಿಜೆಪಿ ಕಾರ್ಯವನ್ನು ಜನ ಅರಿಯಬೇಕು. ನಾವು ಕೊಟ್ಟ ಕೆಲಸವನ್ನು ತಮ್ಮದೆಂದು ಹೇಳಿಕೊಳ್ಳುವ ಬಿಜೆಪಿ ನಾಯಕರ ಷಡ್ಯಂತ್ರ ಅರಿಯಬೇಕು. ನಮ್ಮ ಪಕ್ಷದ ತತ್ವ ಅತ್ಯಂತ ವಿಭಿನ್ನವಾದದ್ದು ಅದನ್ನು ಅರಿತು ಜನರಿಗೆ  ಮನದಟ್ಟು ಮಾಡಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ಸಲಹೆ ನೀಡಿದರು.

news18-kannada
Updated:November 19, 2020, 2:52 PM IST
ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ 103ನೇ ಜನ್ಮದಿನಾಚರಣೆ
ಇಂದಿರಾ ಗಾಂಧಿಗೆ ಪುಷ್ಪನಮನ ಸಲ್ಲಿಸಿದ ಕಾಂಗ್ರೆಸ್ ಮುಖಂಡರು.
  • Share this:
ಬೆಂಗಳೂರು; ನಗರದ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಇಂದು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ 103ನೇ ಜನ್ಮ ದಿನೋತ್ಸವ ಆಚರಿಸಲಾಯಿತು. ಕಾಂಗ್ರೆಸ್ ರಾಜ್ಯ ನಾಯಕರಾದ, ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ, ಮಾಜಿ ಸಚಿವ ಆರ್.ವಿ. ದೇಶಪಾಂಡೆ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ, ಸಲೀಂ ಅಹಮದ್ ಮತ್ತಿತರ ನಾಯಕರು ಪಾಲ್ಗೊಂಡು ಇಂದಿರಾ ಗಾಂಧಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

ರಾಜ್ಯಸಭೆ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಇಂದಿರಾಗಾಂಧಿ ಕುಟುಂಬ ದೇಶಕ್ಕೆ ನೀಡಿದ ಕೊಡುಗೆ ಇಂದು ದೇಶದಲ್ಲಿ ಆಗಿರುವ ಕ್ರಾಂತಿಗೂ ಕಾರಣವಾಗಿದೆ.  ಆದರೆ ಇದನ್ನು ಅಳಿಸಿ ಹಾಕಲು ಬಿಜೆಪಿ ಪ್ರಯತ್ನ ಮಾಡುತ್ತಿದೆ. ದೇಶಕ್ಕಾಗಿ ತ್ಯಾಗ ಮಾಡಿದವರನ್ನು ಹೀಯಾಳಿಸುವ ಹಾಗೂ ಹೆಸರು ಅಳಿಸಿ ಹಾಕುವ ಕಾರ್ಯ ಮಾಡುತ್ತಿದೆ. ಬಿಜೆಪಿ ಇಂದು ಆರ್ ಎಸ್ ಎಸ್ ಹಿಡಿತದಲ್ಲಿದೆ. ಬಿಜೆಪಿ ಅಭ್ಯರ್ಥಿ ಆಯ್ಕೆಯನ್ನು ಆರ್ ಎಸ್ ಎಸ್ ಮಾಡುತ್ತಿದೆ. ಬಿಜೆಪಿಯದ್ದು ಏನೂ ಇಲ್ಲ. ಬಿಜೆಪಿ ಮುಂದಿಟ್ಟು ಆರೆಸ್ಸೆಸ್ ಆಟವಾಡುತ್ತಿದೆ ಮುಂದಿನ ದಿನಗಳಲ್ಲಿ ಬಿಜೆಪಿ ಅರ್ ಎಸ್ ಎಸ್ ಪಕ್ಷ ಆಗಬಹುದು. ಹಿಂದೆ ವಿವೇಕಾನಂದ, ಸರ್ದಾರ್ ವಲ್ಲಭಭಾಯ್ ಪಟೇಲ್ ಬಗ್ಗೆ ನಿರ್ಲಕ್ಷ್ಯ ತೋರಿಸಿದ್ದ ಬಿಜೆಪಿಯವರು ಇಂದು ಅವರ ಪ್ರತಿಮೆ ಸ್ಥಾಪಿಸುತ್ತಿದ್ದಾರೆ. ಇವೆಲ್ಲಾ ತೋರಿಕೆ ಗೌರವ ಎಂದರು.

ಇದನ್ನು ಓದಿ: BTS 2020 - ತಂತ್ರಜ್ಞಾನವೇ ಭವಿಷ್ಯದ ಶಕ್ತಿ: ಬೆಂಗಳೂರು ಟೆಕ್ ಸಮಿಟ್​ನಲ್ಲಿ ಪ್ರಧಾನಿ ನರೇಂದ್ರ ಮೋದಿ

ದೇಶದ ಬಗ್ಗೆ, ರಾಷ್ಟ್ರೀಯತೆ ಬಗ್ಗೆ ಇಂದು ಬಿಜೆಪಿ ನಮಗೆ ಪಾಠ ಹೇಳುತ್ತಿದೆ. ಪಶ್ಚಿಮ ಬಂಗಾಳದಲ್ಲಿದ್ದ ವಿವೇಕಾನಂದರ ಮನೆ ಮುರಿದು ಬಿದ್ದಿದ್ದನ್ನು ಕಂಡ ಇಂದಿರಾಗಾಂಧಿ ಕಾಳಜಿ ತೋರಿಸಿ ಮನೆ ಪುನರುಜೀವನ ಮಾಡಿಸಿದರು. ಇಂದು ಬಿಜೆಪಿಯವರು
ತೋರಿಸುತ್ತಿರುವುದು ತೋರಿಕೆ ಗೌರವ. ನಾಗಪುರ ಹಿಂದುತ್ವದ ತತ್ವವನ್ನು ವಿವೇಕಾನಂದರು ಒಪ್ಪಿರಲಿಲ್ಲ. ಆದರೆ ಇಂದು ಅವರನ್ನು ಬಿಜೆಪಿಯವರು ಸ್ವಾರ್ಥಕ್ಕಾಗಿ ಆರಾಧಿಸುತ್ತಿದ್ದಾರೆ. ಇದನ್ನು ಗಮನಿಸಿ ನಾವು ಎಚ್ಚರಿಕೆಯಿಂದ ಇರಬೇಕು. ನೆಹರು ಚಿಂತನೆ, ಇಂದಿರಾಗಾಂಧಿ ಕೆಲಸ, ರಾಜೀವ್ ಗಾಂಧಿ ಯುವಕರಿಗಾಗಿ ಮಾಡಿದ ಕೆಲಸ ಅರಿಯಬೇಕಿದೆ. ಒಡೆದು ಆಳುವ ಬಿಜೆಪಿ ಕಾರ್ಯವನ್ನು ಜನ ಅರಿಯಬೇಕು. ನಾವು ಕೊಟ್ಟ ಕೆಲಸವನ್ನು ತಮ್ಮದೆಂದು ಹೇಳಿಕೊಳ್ಳುವ ಬಿಜೆಪಿ ನಾಯಕರ ಷಡ್ಯಂತ್ರ ಅರಿಯಬೇಕು. ನಮ್ಮ ಪಕ್ಷದ ತತ್ವ ಅತ್ಯಂತ ವಿಭಿನ್ನವಾದದ್ದು ಅದನ್ನು ಅರಿತು ಜನರಿಗೆ  ಮನದಟ್ಟು ಮಾಡಬೇಕು ಎಂದು ಸಲಹೆ ನೀಡಿದರು.

ಜಾತಿ ಒಡೆದು ರಾಜಕಾರಣ ಮಾಡುವ ಕಾರ್ಯವನ್ನು ಬಿಜೆಪಿ ಮಾಡುತ್ತಿದೆ. ಜಾತಿಗೊಂದು ನಿಗಮ ಮಾಡುವ ಬಿಜೆಪಿ ಸರ್ಕಾರ ಯಾರಿಗೆ ಎಷ್ಟು ಹಣ ನೀಡಲಿದೆ. ಎಲ್ಲಿಂದ ಬಜೆಟ್ ತರುತ್ತೀರಿ. ಆದಾಯ ಕಡಿಮೆ ಇರುವವರು ಯಾವುದೇ ಜಾತಿ, ಧರ್ಮ ಅಥವಾ ಸಮುದಾಯದವರಿರಲಿ ಅವರಿಗೆ ಸವಲತ್ತು ನೀಡಿ, ಜಾತಿಗೊಂದು, ಧರ್ಮಕ್ಕೊಂದು ಸವಲತ್ತು ಕೊಡುವುದು ಯಾವಾಗ? ಸಾಕಷ್ಟು ಜಾತಿ ಬಿಟ್ಟು ಹೋಗಿದೆ. ಜಾತಿಗಳಲ್ಲಿ  ಉಪಜಾತಿ ಇದೆ, ಅವರಿಗೆ ಅವಕಾಶ ಸಿಗುವುದು ಯಾವಾಗ? ತಮ್ಮ ರಾಜಕೀಯ ಚುನಾವಣೆ ಗೆಲುವು ಗುರಿಯಾಗಿಟ್ಟುಕೊಂಡು ನಿಗಮ ಸ್ಥಾಪಿಸುವುದು ಸರಿಯಲ್ಲ. ಆರ್ ಎಸ್ ಎಸ್ ವಿಚಾರವಾದಿಗಳಿಗೆ ಹೇರಳ ಅವಕಾಶ ಸಿಗುತ್ತಿದೆ. ಅಸ್ಪೃಶ್ಯತೆಗೆ ನೀಡಿದ ಸವಲತ್ತನ್ನು ಬಿಜೆಪಿ ಜಾತಿ ಒಡೆಯಲು ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದರು.
Published by: HR Ramesh
First published: November 19, 2020, 2:52 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories