Vegan Hostel: ಬೆಂಗಳೂರಲ್ಲಿ ಶುರುವಾಗಿದೆ ಭಾರತದ ಮೊದಲ ವೀಗನ್ ಹಾಸ್ಟೆಲ್; ಏನಿದರ ವಿಶೇಷತೆ?

ಬೆಂಗಳೂರಿನಲ್ಲಿ ದಿನಕ್ಕೊಂದು ವಿಧ-ವಿಧವಾದ ಆಹಾರ ಮಳಿಗೆಗಳು ತೆರೆಯುತ್ತಲೆ ಇರುತ್ತವೆ. ಬೆಂಗಳೂರಿನಲ್ಲಿ ಈಗ ಹೊಸದಾಗಿ ತೆರೆದಿರುವ ಆಹಾರ ಮಳಿಗೆಯೊಂದನ್ನು ಹ್ಯಾಪಿನೆಸ್‌ ಕೆಫೆ ಎಂದು ಕರೆಯಲಾಗಿದೆ. ಇದು ಬೆಂಗಳೂರಿನ ಕೋರಮಂಗಲದ ಡೌನ್‌ಟೌನ್‌ನಲ್ಲಿ ಆರಂಭಗೊಂಡಿದೆ. ಈ ಕೆಫೆಯು ಬೆಚ್ಚಗಿನ ವಾತಾವರಣದ ಜೊತೆ ಒಳ್ಳೆಯ ರುಚಿಯನ್ನು ಸಹ ನೀಡುತ್ತದೆ.

ಹ್ಯಾಪಿನೆಸ್‌ ಕೆಫೆ

ಹ್ಯಾಪಿನೆಸ್‌ ಕೆಫೆ

  • Share this:
ಬೆಂಗಳೂರಿನಲ್ಲಿ ದಿನಕ್ಕೊಂದು ವಿಧ-ವಿಧವಾದ ಆಹಾರ (Food) ಮಳಿಗೆಗಳು ತೆರೆಯುತ್ತಲೆ ಇರುತ್ತವೆ. ಬೆಂಗಳೂರಿನಲ್ಲಿ (Bengaluru) ಈಗ ಹೊಸದಾಗಿ ತೆರೆದಿರುವ ಆಹಾರ ಮಳಿಗೆಯೊಂದನ್ನು ಹ್ಯಾಪಿನೆಸ್‌ ಕೆಫೆ (Happiness Cafe) ಎಂದು ಕರೆಯಲಾಗಿದೆ. ಇದು ಬೆಂಗಳೂರಿನ ಕೋರಮಂಗಲದ ಡೌನ್‌ಟೌನ್‌ನಲ್ಲಿ ಆರಂಭಗೊಂಡಿದೆ. ಈ ಕೆಫೆಯು (Cafe) ಬೆಚ್ಚಗಿನ ವಾತಾವರಣದ (Weather) ಜೊತೆ ಒಳ್ಳೆಯ ರುಚಿಯನ್ನು ಸಹ ನೀಡುತ್ತದೆ. ಇದು ನಗರದಲ್ಲಿರುವ ಎಲ್ಲ ಬಾಯ್ಲರ್‌ಪ್ಲೇಟ್ ಸ್ವಾಂಕಿ ಕೆಫೆ ತರ ಆಗಿರದೇ ಹೊಸ ಐಡಿಯಾಗಳನ್ನು ಇಲ್ಲಿ ಬಳಸಲಾಗಿದೆ. ಹ್ಯಾಪಿನೆಸ್ ಕೆಫೆ ಎಂಬುದು ಸಸ್ಯಾಹಾರಿ (Vegetarian) ಬ್ಯಾಕ್‌ಪ್ಯಾಕರ್‌ಗಳ ಹಾಸ್ಟೆಲ್‌ನಲ್ಲಿರುವ (Hostel) ಸಸ್ಯಾಹಾರಿ ಕೆಫೆಯಾಗಿದ್ದು, ಭಾರತದ ಮೊಟ್ಟ ಮೊದಲ ವಿಹಾರ ಸ್ಥಳವಾಗಿದೆ.

ಉದ್ಯಾನನಗರಿಯಲ್ಲಿ ಸಸ್ಯಾಹಾರದ ಕೆಫೆ
ಈ ಹಾಸ್ಟೆಲ್ ಮೂರು ವರ್ಷಗಳಷ್ಟು ಹಳೆಯದಾಗಿದೆ, ಮತ್ತು ಇದಕ್ಕೆ ಎರಡು ತಿಂಗಳ ಹಿಂದಷ್ಟೇ ಈ ಕೆಫೆಯು ಅದರಲ್ಲಿ ಹೊಸದಾಗಿ ಸೇರ್ಪಡೆಗೊಂಡಿದೆ. ಉದ್ಯಾನನಗರಿಯಲ್ಲಿ ಸಸ್ಯಾಹಾರದ ಪ್ರವೃತ್ತಿ ಬೆಳೆಯುತ್ತಿರುವುದಕ್ಕೆ ಈ ಕೆಫೆ ಒಂದು ಸ್ಪಷ್ಟ ನಿದರ್ಶನವಾಗಿದೆ.

ಈ ಹಾಸ್ಟೆಲ್‌ನ ಸ್ಥಾಪಕರಾದ 30 ವರ್ಷದ ಲಕ್ಷ್ಮಣ್ ಬಾದಾಮಿ ಮತ್ತು 26 ವರ್ಷದ ವನೆಸ್ಸಾ ಜ್ವಿಕ್ ಅವರು 2016 ರಲ್ಲಿ ಬೆಂಗಳೂರಿನಲ್ಲಿ ನಡೆದ ಸಂಗೀತ ಉತ್ಸವದಲ್ಲಿ ಭೇಟಿಯಾದ ಇಬ್ಬರು ಪ್ರಸ್ತುತ ಈ ಕೆಫೆಯ ಶಿಲ್ಪಿಗಳಾಗಿದ್ದಾರೆ.

ಈ ಕೆಫೆ ಆರಂಭಿಸಲು ಕಾರಣವೇನು?
2018 ರಲ್ಲಿ, ಅವರು ಸಸ್ಯಾಹಾರಿ ಹಾಸ್ಟೆಲ್ ಅನ್ನು ಆರಂಭಿಸುವ ಮೊದಲು ಸಣ್ಣ ಸುಸ್ಥಿರತೆ ಆಧಾರಿತ ಪ್ರಯಾಣದ ಕಂಪನಿಯನ್ನು ಪ್ರಾರಂಭಿಸಿದ್ದರು. ಅವರ ಒಂದು ಪ್ರವಾಸದ ಸಮಯದಲ್ಲಿ, ವಿದೇಶಿ ಪ್ರಯಾಣಿಕರು “ನಾವು ಸಸ್ಯಹಾರಿಗಳು, ಆದರೆ ಉತ್ತಮ ಸಸ್ಯಹಾರದ ಆಯ್ಕೆಗಳನ್ನು ಪೂರೈಸುವ ಉತ್ತಮ ಹಾಸ್ಟೆಲ್‌ಗಳ ಕೊರತೆಯ ಬಗ್ಗೆ ದೂರು ನೀಡುವುದನ್ನು ಅವರು ಗಮನಿಸಿದರು. ಇದರ ಪರಿಣಾಮವೇ ಈ ಸಸ್ಯಾಹಾರಿ ಹಾಸ್ಟೆಲ್ ಆರಂಭಕ್ಕೆ ಕಾರಣ."

ಇದನ್ನೂ ಓದಿ:  Tourist Spots: ನೀವು ಪಕ್ಕಾ ವೆಜಿಟೆರಿಯನ್ ಟೂರಿಸ್ಟ್​​ಗಳಾ? ಹಾಗಿದ್ರೆ ಈ 5 ದೇಶಗಳಿಗೆ ಹೋಗಿ ಬನ್ನಿ

ಈ ಹಾಸ್ಟೆಲ್‌ಗೆ ಇವರು ವ್ಯಂಗ್ಯವಾಗಿ ʼಬಿ ಅನಿಮಲ್‌ʼ ಎಂದು ನಾಮಕರಣ ಮಾಡಿದರು. “ಇದು ಸಸ್ಯಾಹಾರಿ ಆಹಾರ ಮಳಿಗೆಗೆ ವಿಚಿತ್ರವಾದ ಹೆಸರಲ್ಲವೇ? "ನಾವು ಪರಿಸರ ವ್ಯವಸ್ಥೆಯ ಭಾಗವಾಗಿದ್ದೇವೆ ಮತ್ತು ಸೂರ್ಯನ ಬೆಳಕು, ತಾಜಾ ಗಾಳಿ, ಉತ್ತಮ ಆಹಾರ ಮತ್ತು ಶುದ್ಧ ನೀರು, ಇದೇ ವಿಷಯಗಳೆ ಅಲ್ಲವೇ ಪ್ರಾಣಿಗಳನ್ನು ಜೀವಂತವಾಗಿಡುವುದು! ಅದನ್ನು ನೆನಪಿಸಿಕೊಳ್ಳಲು ಇದು ಸೂಕ್ತ ಹೆಸರು” ಎಂದು ಹಾಸ್ಟೆಲ್‌ ಸ್ಥಾಪಕರಾದ ಜ್ವಿಕ್ ವಿವರಿಸುತ್ತಾರೆ.

ಈ ಹಾಸ್ಟೆಲ್‌ನಲ್ಲಿ 30 ಅತಿಥಿಗಳು ಇರಬಹುದಾಗಿದೆ. ಒಂದು ರಾತ್ರಿಗೆ ರೂ 550 ಮತ್ತು ರೂ 120 ಕ್ಕೆ ಮಿನಿ-ಮೀಲ್ಸ್ ಕೊಡುವ ವ್ಯವಸ್ಥೆ ಇದೆ. ಇದು ಅನೇಕ ಪ್ರವಾಸಿಗರಿಗೆ ಕೈಗೆಟುಕುವ ಬಜೆಟ್‌ ಸ್ನೇಹಿ ಆಯ್ಕೆಯಾಗಿದೆ.

ಆದರೆ ಸಸ್ಯಾಹಾರಿ ಹಾಸ್ಟೆಲ್ ಎಂದು ಹೇಳಿದರೆ ಸಾಕೇ ಅದು ಸಸ್ಯಾಹಾರಿ ಆಹಾರ ಮಳಿಗೆ ಆಗಬಹುದೇ?
ಅದಕ್ಕೆ ಅವರ ಉತ್ತರ "ನಮ್ಮ ಕೆಫೆ ಕೂಡ ಕ್ಲೈಮೇಟ್ ವೇವ್ ಕಾಫಿ ಎಂಬ ಬ್ರಾಂಡ್‌ ಮೂಲವಾಗಿದೆ, ಇದರ ಸಂಸ್ಥಾಪಕರು ದೇಶದಾದ್ಯಂತ ಕಾಫಿ ಎಸ್ಟೇಟ್‌ಗಳಿಗೆ ಭೇಟಿ ನೀಡಿ ಅತ್ಯಂತ ಸಮರ್ಥನೀಯ ವಿಧಾನಗಳನ್ನು ಬಳಸಿ ಉತ್ಪಾದಿಸಿದ ಕಾಫಿ ಬೀಜಗಳನ್ನು ಆಯ್ಕೆ ಮಾಡುತ್ತಾರೆ" ಎಂದು ಲಕ್ಷ್ಮಣ್‌ ಬಾದಾಮಿ ಹೇಳುತ್ತಾರೆ. ಸಾವಯವ ತ್ಯಾಜ್ಯ ಮತ್ತು ಮರುಬಳಕೆಯ ತ್ಯಾಜ್ಯನೀರನ್ನು ಪ್ರತ್ಯೇಕಿಸುವಿಕೆಯಿಂದ ಎಲ್ಲ ಕೆಲಸಗಳು ಇಲ್ಲಿ ಪರಿಸರ ಸ್ನೇಹಿಯಾಗಿವೆ.

ನೀವು ಸವಿಯಬೇಕಾದ ಇಲ್ಲಿನ ಆಹಾರಗಳು
ಒಂದು ವರ್ಷದ ಹಿಂದೆ ವಿವಾಹವಾದ ದಂಪತಿಗಳು, ಈ ಕೆಫೆಯು ಬೆಂಗಳೂರಿನಲ್ಲಿ 10 ಸಸ್ಯಾಹಾರಿ ಬ್ರ್ಯಾಂಡ್‌ಗಳನ್ನು ಹೊಂದಿದೆ ಎಂದು ಹೇಳುತ್ತಾರೆ. ಬಿ ಅನಿಮಲ್‌ನಲ್ಲಿರುವ ಭಾನುವಾರದ ಬ್ರಂಚ್‌ಗಳು ಸಸ್ಯಾಹಾರಿ ಸ್ವರ್ಗವೆಂದೇ ಹೇಳಬಹುದು. ಇಲ್ಲಿಗೆ ಬರುವ ಅತಿಥಿಗಳು ತಮ್ಮ ಪುಡ್ಡು ಕೇಕ್ ಡಾರ್ಕ್ ಚಾಕೊಲೇಟ್ ಮತ್ತು ಉಪ್ಪುಸಹಿತ ಕ್ಯಾರಮೆಲ್ ಅನ್ನು ಆಸ್ವಾದಿಸುತ್ತಾರೆ.

ಇದನ್ನೂ ಓದಿ:  The Hemp Cafe: ಸೆಣಬಿನಿಂದ ತಯಾರಾದ ಆರೋಗ್ಯಕರ ಖಾದ್ಯಗಳನ್ನು ನೀವೂ ಸವಿಯಬೇಕಾ? ಹಾಗಿದ್ರೆ ಈ ಕೆಫೆಗೆ ಭೇಟಿ ಕೊಡಿ

ಇದು ಸಾವಯವ ಗೋಡಂಬಿ, ತಾಜಾ ತೆಂಗಿನಕಾಯಿ, ಸಮೃದ್ಧ ಕೋಕೋ ಪೌಡರ್, ಬಾದಾಮಿ ಮತ್ತು ಪೆಕನ್ ಬೀಜಗಳಿಂದ ತಯಾರಿಸಿದ ವಿಶೇಷ ಖಾದ್ಯ ಇದಾಗಿದೆ. ಚಾಕೊಲೇಟ್ ಪ್ರೇಮಿಗಳಿಗಂತೂ ಇದು ಅಚ್ಚು ಮೆಚ್ಚಿನ ತಿಂಡಿ ಎಂದೇ ಹೇಳಬಹುದು. ಇಲ್ಲಿ ಮಾಡುವ ಬ್ರೂ ಕಾಫಿಯನ್ನು ಒಮ್ಮೆ ಕುಡಿದರೆ ಮತ್ತೆ ಮತ್ತೆ ಕುಡಿಯಬೇಕು ಅನಿಸುವುದರಲ್ಲಿ ಯಾವುದೇ ಸಂಶಯವಿಲ್ಲ.

ನೀವು ಕೋರಮಂಗಲದ ಕಡೆ ಹೋದರೆ ಒಮ್ಮೆ ಈ ಹ್ಯಾಪಿನೆಸ್‌ ಕೆಫೆ ಕಡೆಗೆ ಹೋಗಿ ಅಲ್ಲಿರುವ ವಿವಿಧ ಸಸ್ಯಹಾರಿ ಖಾದ್ಯಗಳನ್ನು ಆಸ್ವಾದಿಸಿ ಬನ್ನಿ.
Published by:Ashwini Prabhu
First published: