ಬೆಂಗಳೂರು: ಇಡೀ ದೇಶದಲ್ಲೇ ಕರ್ನಾಟಕ ಮತ್ತೊಂದು ಪ್ರಪ್ರಥಮ ಸಾಧನೆ ಮಾಡಿದೆ. ಇದೇ ಮೊದಲ ಬಾರಿಗೆ ಡಿಜಿಟಲ್ ವಾಟರ್ ಬ್ಯಾಂಕ್ (Digital Water Bank) ಕರ್ನಾಟಕದ ಬೆಂಗಳೂರಿನಲ್ಲಿ ಸ್ಥಾಪನೆಯಾಗಿದೆ. ಬೆಂಗಳೂರಿನಲ್ಲಿ ವಾಟರ್ ಬ್ಯಾಂಕ್ ಅನ್ನು ಉದ್ಘಾಟಿಸಿದ ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ ಸಿಎನ್ ಅಶ್ವಥ್ ನಾರಾಯಣ್ (C N Ashwath Narayan) ಉದ್ಘಾಟಿಸಿದ್ದಾರೆ. ಎಲ್ಲರಿಗೂ ಕುಡಿಯುವ ನೀರು ಮತ್ತು ನೈರ್ಮಲ್ಯವನ್ನು ಒದಗಿಸಲು ಸುಸ್ಥಿರ ಉಪಕ್ರಮಗಳಲ್ಲಿ ಪರಿಣತಿ ಹೊಂದಿರುವ ಅಕ್ವಾಕ್ರಾಫ್ಟ್ ವೆಂಚರ್ಸ್ (AQVERIUM) ಕಂಪನಿಯು ಕೈಗೊಂಡಿರುವ ಉಪಕ್ರಮಕ್ಕೆ ರಾಜ್ಯ ಸರ್ಕಾರದ ಸಂಪೂರ್ಣ ಬೆಂಬಲ ನೀಡುವುದಾಗಿ ಅವರು ಘೋಷಿಸಿದ್ದಾರೆ. ಇದು ಒಂದೇ ವೇದಿಕೆಯಡಿಯಲ್ಲಿ ಜಲ ಸಂಪನ್ಮೂಲಗಳನ್ನು ಒಟ್ಟುಗೂಡಿಸುವ ಯೋಜನೆಯಾಗಿದೆ.
ಬೆಂಗಳೂರಿನಲ್ಲಿ ಸ್ಥಾಪನೆಯಾದ ಡಿಜಿಟಲ್ ವಾಟರ್ಬ್ಯಾಂಕ್ ಬ್ಲಾಕ್ಚೈನ್ ತಂತ್ರಜ್ಞಾನವನ್ನು ಆಧರಿಸಿ ಕಾರ್ಯನಿರ್ವಹಿಸಲಿದೆ. ಕುಡಿಯುವ ನೀರಿನ ಕೊರತೆ ನಾವು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳಲ್ಲಿ ಒಂದಾಗಿದೆ.
ಕರ್ನಾಟಕ ಸರ್ಕಾರದಿಂದ ಸಂಪೂರ್ಣ ಬೆಂಬಲ ಭಾರತ ಮಾತ್ರವಲ್ಲದೆ ಜಗತ್ತು ದಿಟ್ಟಿಸುತ್ತಿರುವ ಬಿಕ್ಕಟ್ಟಿಗೆ ಹೆಚ್ಚು ಅಗತ್ಯವಿರುವ ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಈ ಉಪಕ್ರಮವು ಸಮಗ್ರ ಮತ್ತು ಸುಸ್ಥಿರ ವಿಧಾನವಾಗಿದೆ.
ನಾವು ಈ ಉಪಕ್ರಮವನ್ನು ಪೂರ್ಣ ಹೃದಯದಿಂದ ಸ್ವಾಗತಿಸುತ್ತೇವೆ ಮತ್ತು ಇದನ್ನು ಸಮರ್ಥನೀಯತೆ ಮತ್ತು ಪ್ರಭಾವದ ಯುನಿಕಾರ್ನ್ ಮಾಡಲು ಎಲ್ಲಾ ಬೆಂಬಲವನ್ನು ನೀಡುತ್ತೇವೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ ಸಿಎನ್ ಅಶ್ವಥ್ ನಾರಾಯಣ್ ತಿಳಿಸಿದ್ದಾರೆ.
ನೀರಿನ ಸಮಸ್ಯೆಗೆ ಪರಿಹಾರ ವಿಶೇಷವಾಗಿ ಕೃಷಿ ದೇಶವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಅಂತರ್ಜಲ ಮಟ್ಟ ಕುಸಿತವಾಗಿದೆ. ನೀರಿನ ಕೊರತೆಯು ರೈತರಿಗೆ ಹಲವಾರು ಸವಾಲುಗಳಿಗೆ ಕಾರಣವಾಗುತ್ತದೆ. ಇದರ ಪರಿಣಾಮವಾಗಿ ಆತ್ಮಹತ್ಯೆಗಳು ಮತ್ತು ಇತರ ಸಮಸ್ಯೆಗಳು ಉಂಟಾಗುತ್ತವೆ. ಈ ಸಮಸ್ಯೆಗಳಿಗೆ ಡಿಜಿಟಲ್ ವಾಟರ್ ಬ್ಯಾಂಕ್ ಪರಿಹಾರ ಒದಗಿಸಲಿದೆ ಎಂದು ಅವರು ಹೇಳಿದರು.
ಹೇಗೆ ಕಾರ್ಯನಿರ್ವಹಿಸಲಿದೆ? ವಾಟರ್ಬ್ಯಾಂಕ್ ಎಲ್ಲರಿಗೂ ಮುಕ್ತವಾಗಿರುತ್ತದೆ. ಅಲ್ಲಿ ಬಳಕೆದಾರರು ತಮ್ಮ ಖಾತೆಯನ್ನು ರಚಿಸಿಕೊಳ್ಳಬಹುದು. ತಮ್ಮ ಉಳಿತಾಯದ ಹೆಚ್ಚುವರಿ ನೀರಿನ ಪ್ರಮಾಣವನ್ನು ವರದಿ ಮಾಡಬಹುದು. ಹೆಚ್ಚುವರಿ ನೀರನ್ನು ಬ್ಲಾಕ್ಚೈನ್ನಲ್ಲಿ ಹೋಗುವ ಟೋಕನ್ ಆಗಿ ಪರಿವರ್ತಿಸಲಾಗುತ್ತದೆ. ಷೇರು ಮಾರುಕಟ್ಟೆಯಂತೆಯೇ, ಟೋಕನ್ನ ಮೌಲ್ಯವು ಬೇಡಿಕೆ ಮತ್ತು ಪೂರೈಕೆಯನ್ನು ಅವಲಂಬಿಸಿ ಹೆಚ್ಚಾಗುತ್ತದೆ.
ಇದಲ್ಲದೆ ಈ ಉಪಕ್ರಮವು ಗ್ರಾಮೀಣ ಪ್ರದೇಶಗಳಲ್ಲಿ ದೇಶಾದ್ಯಂತ ಕೌಶಲ ನಿರ್ಮಾಣ ಉಪಕ್ರಮಗಳನ್ನು ಕೈಗೊಳ್ಳಲು ಡಿಜಿಟಲ್ ವಿಶ್ವವಿದ್ಯಾನಿಲಯ, ನಾವೀನ್ಯತೆ, ಸುಸ್ಥಿರತೆ ಮತ್ತು ಸಾಮಾಜಿಕ ಉದ್ಯಮಶೀಲತೆಯ ಕೇಂದ್ರವನ್ನಾಗಿ ರೂಪಿಸಲಿದೆ.
ಡಿಜಿಟಲ್ ವಾಟರ್ ಡೇಟಾ ಬ್ಯಾಂಕ್ ಎಲ್ಲಾ ಸಂಸ್ಥೆಗಳು ಮತ್ತು ಮೂಲಗಳಿಂದ ನೀರಿನ ಬಳಕೆಯ ಮಾಹಿತಿಯನ್ನು ಸಂಗ್ರಹಿಸಲಿದೆ.ಡಿಜಿಟಲ್ ವಾಟರ್ ಡೇಟಾ ಬ್ಯಾಂಕ್ ಸಂಶೋಧನೆ ಮತ್ತು ವಿಶ್ಲೇಷಣೆಗಳಿಂದ ಒಳನೋಟಗಳನ್ನು ಒದಗಿಸುತ್ತದೆ ಮತ್ತು ನೀರಿನ ಮಾಲಿನ್ಯವನ್ನು ನಿಭಾಯಿಸಲು ಸಹಕರಿಸುತ್ತದೆ.
10 ಲಕ್ಷಕ್ಕೂ ಹೆಚ್ಚು ಯುವಕರಿಗೆ ತರಬೇತಿ 2030 ರ ವೇಳೆಗೆ ಭಾರತದಲ್ಲಿ ನೀರಿನ ಕುರಿತು ಧನಾತ್ಮಕ ದೃಷ್ಟಿಕೊನವನ್ನು ಬೆಳೆಸುವ ಉದ್ದೇಶದೊಂದಿಗೆ ಯುವಕರನ್ನು ನೀರಿನ ಉದ್ಯಮಿಗಳನ್ನಾಗಿ ಪರಿವರ್ತಸಲಿದೆ. ಇದನ್ನು ಮಾಡಲು ಕಂಪನಿಯು ವಿಶಿಷ್ಟವಾದ ಸಾಮಾಜಿಕ ಫ್ರ್ಯಾಂಚೈಸಿಂಗ್ ಮಾದರಿಯನ್ನು ರೂಪಿಸಲಿದೆ.
AQVERIUM 10 ಲಕ್ಷಕ್ಕೂ ಹೆಚ್ಚು ಯುವಕರಿಗೆ ನೀರು, ನೈರ್ಮಲ್ಯ, ಜಲ-ಭೂವೈಜ್ಞಾನಿಕ ವಿಜ್ಞಾನ ಮತ್ತು ದತ್ತಾಂಶ ವಿಜ್ಞಾನಗಳಲ್ಲಿ ತರಬೇತಿ ನೀಡಲು ಮುಂದಾಗಲಿದೆ ಎಂದು ಅಕ್ವಾಕ್ರಾಫ್ಟ್ ಗ್ರೂಪ್ ವೆಂಚರ್ಸ್ನ ಸಂಸ್ಥಾಪಕ ಅಧ್ಯಕ್ಷ ಮತ್ತು ಸಿಇಒ ಡಾ ಸುಬ್ರಹ್ಮಣ್ಯ ಕುಸ್ನೂರ್, ಎಂದು ಅವರು ತಿಳಿಸಿದ್ದಾರೆ.
Published by:guruganesh bhat
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ