ಎಲ್ಲರನ್ನೊಳಗೊಂಡ ಭಾರತೀಯತೆಯನ್ನು ಕೊಲ್ಲಲಾಗದು; ಕೊಲೆ ಬೆದರಿಕೆ ಪತ್ರಕ್ಕೆ ಪ್ರಕಾಶ್ ರಾಜ್ ತಿರುಗೇಟು

ಕಳೆದ ಜನವರಿ 24ರಂದು ಬೆಳಗಾವಿಯ ಬೈಲೂರು ಮಠದ ನಿಜಗುಣಾನಂದ ಸ್ವಾಮೀಜಿ ಅವರ ಮಠಕ್ಕೆ ದಾವಣಗೆರೆಯ ಅಪರಿಚಿತ ವ್ಯಕ್ತಿಯೋರ್ವ ಬೆದರಿಕೆ ಪತ್ರ ರವಾನಿಸಿದ್ದ. ಈ ಪತ್ರದಲ್ಲಿ ನಿಜಗುಣಾನಂದ ಸ್ವಾಮಿ ಸೇರಿದಂತೆ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ, ನಟ ಪ್ರಕಾಶ್ ರಾಜ್ ಸೇರಿದಂತೆ 15 ಜನರನ್ನು ಈ ತಿಂಗಳ ಅಂತ್ಯದ ಒಳಗಾಗಿ ಸಂಹಾರ ಮಾಡಲಾಗುವುದು ಎಂದು ಬೆದರಿಕೆ ಹಾಕಲಾಗಿತ್ತು.

MAshok Kumar | news18-kannada
Updated:January 29, 2020, 10:20 AM IST
ಎಲ್ಲರನ್ನೊಳಗೊಂಡ ಭಾರತೀಯತೆಯನ್ನು ಕೊಲ್ಲಲಾಗದು; ಕೊಲೆ ಬೆದರಿಕೆ ಪತ್ರಕ್ಕೆ ಪ್ರಕಾಶ್ ರಾಜ್ ತಿರುಗೇಟು
ಪ್ರಕಾಶ್ ರಾಜ್.
  • Share this:
ಬೆಂಗಳೂರು(ಜ.29): ತನ್ನ ವಿರುದ್ಧ ಕೊಲೆ ಬೆದರಿಕೆ ಹಾಕಿರುವವರಿಗೆ ಟ್ವಿಟರ್ ಮೂಲಕ ಇಂದು ಉತ್ತರ ನೀಡಿರುವ ನಟ ರಾಜಕಾರಣಿ ಪ್ರಕಾಶ್ ರಾಜ್, “ಗಾಂಧಿ, ಗೌರಿಯನ್ನು ಕೊಂದವರೆ ನೀವು ನನ್ನನ್ನೂ ಕೊಲ್ಲಬಲ್ಲರಿ. ಆದರೆ, ನನ್ನಂತ ಇನ್ನೂ ಹಲವರನ್ನು, ಎಲ್ಲರನ್ನೊಳಗೊಂಡ ಭಾರತೀಯತೆಯನ್ನು ಕೊಲ್ಲಲಾರಿರಿ” ಎಂದು ಕಿಡಿಕಾರಿದ್ದಾರೆ.

ಕಳೆದ ಜನವರಿ 24ರಂದು ಬೆಳಗಾವಿಯ ಬೈಲೂರು ಮಠದ ನಿಜಗುಣಾನಂದ ಸ್ವಾಮೀಜಿ ಅವರ ಮಠಕ್ಕೆ ದಾವಣಗೆರೆಯ ಅಪರಿಚಿತ ವ್ಯಕ್ತಿಯೋರ್ವ ಬೆದರಿಕೆ ಪತ್ರ ರವಾನಿಸಿದ್ದ. ಈ ಪತ್ರದಲ್ಲಿ ನಿಜಗುಣಾನಂದ ಸ್ವಾಮಿ ಸೇರಿದಂತೆ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ, ನಟ ಪ್ರಕಾಶ್ ರಾಜ್ ಸೇರಿದಂತೆ 15 ಜನರನ್ನು ಈ ತಿಂಗಳ ಅಂತ್ಯದ ಒಳಗಾಗಿ ಸಂಹಾರ ಮಾಡಲಾಗುವುದು ಎಂದು ಬೆದರಿಕೆ ಹಾಕಲಾಗಿತ್ತು.

ಈ ಪಟ್ಟಿಯಲ್ಲಿ ಬಜರಂಗದಳದ ಮಾಜಿ ನಾಯಕ ಮಹೇಂದ್ರ ಕುಮಾರ್, ನಿಡುಮಾಮಿಡಿ ಶ್ರೀ ಮಠದ ವೀರಭದ್ರ ಸ್ವಾಮೀಜಿ, ನಟ ಚೇತನ್ ಕುಮಾರ್, ಬಿ.ಟಿ ಲಲಿತಾ ನಾಯಕ್, ಮಹೇಶ್ ಚಂದ್ರಗುರು, ಪ್ರೊ. ಭಗವಾನ್, ಮಾಜಿ ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ದಿನೇಶ್ ಅಮಿನ್ ಮಟ್ಟು, ಪತ್ರಕರ್ತ ಅಗ್ನಿ ಶ್ರೀಧರ್, ಬೃಂದಾ ಕಾರಟ್ ಹೆಸರು ಸಹ ಇತ್ತು.
ಆದರೆ, ಈ ಬೆದರಿಕೆ ಪತ್ರಕ್ಕೆ ಇಂದು ಪ್ರತಿಕ್ರಿಯೆ ನೀಡಿರುವ ಪ್ರಕಾಶ್ ರಾಜ್, “ಗಾಂಧಿಯನ್ನು ಕೊಂದವರೆ.. ಗೌರಿಯನ್ನು ಕೊಂದವರೆ.. ಕೊಲ್ಲಬಲ್ಲಿರಿ ನನ್ನನ್ನೂ. ಕೊಲ್ಲಬಲ್ಲಿರಿ ನನ್ನನ್ನೂ..ನನ್ನಂತ ಇನ್ನೂ ಹಲವರನ್ನೂ. ಆದರೆ, ಕೊಲ್ಲಲಾರಿರಿ.. ನಮ್ಮ ಮನಃಸಾಕ್ಷಿಯನ್ನು..ನಮ್ಮ ಸಂವಿಧಾನವನ್ನು..ಎಲ್ಲರನ್ನೊಳಗೊಂಡ ಭಾರತೀಯತೆಯನ್ನು..” ಎಂದು ಟ್ವಿಟ್ ಮಾಡುವ ಮೂಲಕ ಬೆದರಿಕೆ ಪತ್ರಕ್ಕೆ ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ : ಎಚ್​​ಡಿಕೆ, ಪ್ರಕಾಶ್​​​ ರಾಜ್​​​, ನಿಜಗುಣಾನಂದ ಸ್ವಾಮಿ ಸೇರಿದಂತೆ 15 ಮಂದಿಗೆ ಕೊಲೆ ಬೆದರಿಕೆ
First published:January 29, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ