Russia-Ukraine War: ಹಿಮದ ಗಡ್ಡೆ ಕರಗಿಸಿ ನೀರು ಕುಡಿದು ಬಂಕರ್​ನಲ್ಲಿ ಬದುಕು; ಉಕ್ರೇನ್​ ಸುಮಿ ನಗರದಲ್ಲಿ ವಿದ್ಯಾರ್ಥಿಗಳ ಪರದಾಟ

ಕಾರ್ಕೀವ್ ನಗರದಿಂದ ಈಗಾಗಲೇ ಸಾವಿರಾರು ಭಾರತೀಯ ವಿದ್ಯಾರ್ಥಿಗಳು ಆಗಮಿಸಿದ್ದಾರೆ. ಆದರೆ ಸುಮಿ ನಗರದಲ್ಲಿರುವ ಸಾವಿರಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ಹೊರಬರಲಾಗದೆ ಪರದಾಡುತ್ತಿದ್ದಾರೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ರಷ್ಯಾ, ಉಕ್ರೇನ್ (Russia-Ukraine) ನಡುವೆ ಯುದ್ಧ ಸದ್ಯಕ್ಕಂತೂ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಈಗಾಗಲೇ ಸಾವಿರಾರು ಭಾರತೀಯ  ವಿದ್ಯಾರ್ಥಿಗಳು (Students) ಬಂದಿದ್ದಾರೆ. ಆದರೆ ಸುಮಿ ನಗರದಿಂದ ಇದುವರೆಗೆ ಯಾರೂ ಬಂದಿಲ್ಲ. ಯುದ್ಧ ನಡೆಯುತ್ತಿರುವ ನಗರದಲ್ಲಿ ಹಿಮದ‌ ಗಡ್ಡೆ ಕರಗಿಸಿ ನೀರು ಕುಡಿದು, ಬಂಕರ್ ನಲ್ಲಿ (Bunker) ಜೀವನ ನಡೆಸುತ್ತಿದ್ದಾರೆ. ಉಕ್ರೇನ್ ದೇಶದಲ್ಲಿ ಸಿಲುಕಿರುವ ಕನ್ನಡಿಗರ ಪರದಾಟ ಮುಂದುವರೆದಿದೆ. ಕೀವ್, ಕಾರ್ಕೀವ್ (Kharkiv) ನಗರದಿಂದ ಈಗಾಗಲೇ ಸಾವಿರಾರು ಭಾರತೀಯ ವಿದ್ಯಾರ್ಥಿಗಳು ಆಗಮಿಸಿದ್ದಾರೆ. ಆದರೆ ಸುಮಿ ನಗರದಲ್ಲಿರುವ ಸಾವಿರಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ಇನ್ನೂ ಹೊರಬರಬೇಕಾಗಿದೆ. ಇವರೆಲ್ಲಾ ಸುಮಿ ನಗರದ ಬಂಕರ್ ನಲ್ಲಿ ಜೀವನ ನಡೆಸುತ್ತಿದ್ದಾರೆ.

ಸುಮಿ ನಗರದಲ್ಲಿ ವಿದ್ಯಾರ್ಥಿಗಳ ಪರದಾಟ

ಉಕ್ರೇನ್​ನಲ್ಲಿ ಯುದ್ಧದ ಭೀಕತೆ ಜೋರಾಗಿದೆ. ಯುದ್ಧದ ವೇಳೆ ಜೀವ ಉಳಿಸಿಕೊಳ್ಳಲು ಭಾರತೀಯ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ.  ಕುಡಿಯಲು ನೀರಿಲ್ಲದೇ ಸುಮಿಯಲ್ಲಿ ವೈದ್ಯಕೀಯ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ಬೀಳುತ್ತಿರುವ ಹಿಮವನ್ನ ಶೇಖರಿಸಿ, ಅದನ್ನೇ ಕರಗಿಸಿ ಕುಡಿಯಲು ನೀರಿನ ವ್ಯವಸ್ಥೆ ಮಾಡುತ್ತಿದ್ದಾರೆ. ಇನ್ನೂ ಎಂಬೆಸಿಯಿಂದ ಮುಂದಿನ ಮಾಹಿತಿ ಬಂದಿಲ್ಲ. ಮುಂದಿನ ಮಾಹಿತಿಗಾಗಿ ಕಾಯುತ್ತಿದ್ದೇವೆ ಎಂದು ಉಕ್ರೇನ್ ನಲ್ಲಿರುವ ವೈದ್ಯಕೀಯ ವಿದ್ಯಾರ್ಥಿಗಳು ಅಲವತ್ತುಕೊಳ್ಳುತ್ತಾರೆ. ಹೇಗಾದ್ರೂ  ಸರಿ ಪ್ರಾಣ ಉಳಿಸಿಕೊಂಡು ಮನೆಗೆ ಮರಳಿದ್ರೆ ಸಾಕಪ್ಪಾ ಅಂತಿದ್ದಾರೆ ಅಲ್ಲಿ ಸಿಲುಕಿರೋ ವಿದ್ಯಾರ್ಥಿಗಳು.

11 ವಿಮಾನಗಳಲ್ಲಿ ಬರ್ತಿದ್ದಾರೆ ವಿದ್ಯಾರ್ಥಿಗಳು

ಇಂದು ಉಕ್ರೇನ್ ‌ನಿಂದ 11 ವಿಮಾನಗಳಲ್ಲಿ ವಿದ್ಯಾರ್ಥಿಗಳು ‌ಬರಲಿದ್ದಾರೆ. ಹಂಗೇರಿ, ಪೋಲೆಂಡ್ ನಿಂದ ವಿದ್ಯಾರ್ಥಿಗಳು ಭಾರತಕ್ಕೆ ಬರಲಿದ್ದಾರೆ.‌ ಈಗಾಗಲೇ ಭಾರತದ ಯುದ್ಧ ವಿಮಾನಗಳಲ್ಲಿ ವಿದ್ಯಾರ್ಥಿಗಳನ್ನ ಕರೆತರಲಾಗುತ್ತಿದೆ. ಯುದ್ಧ ಪೀಡಿತ ಉಕ್ರೇನ್​​ನಿಂದ ಈವರೆಗೆ 47 ಬ್ಯಾಚ್​​ಗಳಲ್ಲಿ ಕರ್ನಾಟಕಕ್ಕೆ 448 ವಿದ್ಯಾರ್ಥಿಗಳು ಬಂದಿದ್ದಾರೆ.

ಇದನ್ನೂ ಓದಿ: ಇನ್ನೂ Ukraineನಲ್ಲೇ ಸಿಲುಕಿರುವವರಿಗೆ ಮಹತ್ವದ ಸೂಚನೆ: ಆಪರೇಷನ್ ಗಂಗಾ ಕೊನೆ ಹಂತಕ್ಕೆ ಬಂತಾ..?

40 ಬ್ಯಾಚ್ ದೆಹಲಿಯಿಂದ, 7 ಬ್ಯಾಚ್ ಮುಂಬೈನಿಂದ ಬಂದಿದ್ದಾರೆ. ನಿನ್ನೆ ಬೆಳಗಿನ ಜಾವದಿಂದ ರಾತ್ರಿ ತನಕ 12 ವಿಮಾನಗಳು ಬಂದಿದ್ದು, ಇದರಲ್ಲಿ 76 ಜನ ಕನ್ನಡಿಗರು ಇಂದು ದೆಹಲಿಗೆ ಬಂದಿದ್ದಾರೆ. ನಾಳೆ 9 ವಿಮಾನಗಳು ಬರುತ್ತಿದ್ದು, ಅದರಲ್ಲಿ ಎಷ್ಟು ಜನ ಬರ್ತಾರೆ ಎಂಬುದನ್ನು ನೋಡಬೇಕು.

ಅಲ್ಲೇ ಸಿಲುಕಿದ್ದಾರೆ  236 ಜನ ಕನ್ನಡಿಗರು 

ಕಂಟ್ರೋಲ್ ರೂಂ ಮಾಹಿತಿ ಪ್ರಕಾರ ಇನ್ನೂ 236 ಜನ ಕನ್ನಡಿಗರು ವಾಪಸ್ ಬರಬೇಕಿದೆ ಎಂದು ನೋಡಲ್ ಅಧಿಕಾರಿ ಮನೋಜ್ ರಾಜನ್ ತಿಳಿಸಿದರು. ಎರಡು ಕಡೆ ಕರ್ನಾಟಕದ ಹೆಲ್ಪ್ ಡೆಸ್ಕ್ ಇದ್ದು, ವಿದ್ಯಾರ್ಥಿಗಳು ಲ್ಯಾಂಡ್ ಆದ ಕೂಡಲೇ ಮಾಹಿತಿ ಪಡೆದು ಟಿಕೆಟ್ ಬುಕ್ ಮಾಡಿ ಹತ್ತುವ ತನಕ ಅವರೊಂದಿಗೆ ನಮ್ಮ‌ ಸಿಬ್ಬಂದಿ ಇರುತ್ತಾರೆ. ನಿನ್ನೆ ಬೆಳಗಿನ ಜಾವದಿಂದ ರಾತ್ರಿ ತನಕ 12 ವಿಮಾನಗಳು ಬಂದಿದ್ದು, ಇದರಲ್ಲಿ 76 ಜನ ಕನ್ನಡಿಗರು ಇಂದು ದೆಹಲಿಗೆ ಬಂದಿದ್ದಾರೆ. ನಾಳೆ 9 ವಿಮಾನಗಳು ಬರುತ್ತಿದ್ದು, ಅದರಲ್ಲಿ ಎಷ್ಟು ಜನ ಬರ್ತಾರೆ ಎಂಬುದನ್ನು ನೋಡಬೇಕು.

ಇದನ್ನೂ ಓದಿ: Ukraine Crisis: ನ್ಯೂಕ್ಲಿಯರ್ ಡರ್ಟಿ ಬಾಂಬ್ ತಯಾರಿಸ್ತಿದ್ಯಂತೆ ಉಕ್ರೇನ್, ಹೌದಾ?

ನವೀನ್​ ಮೃತ ದೇಹತರಲು ಶತಪ್ರಯತ್ನ

ಕಂಟ್ರೋಲ್ ರೂಂ ಮಾಹಿತಿ ಪ್ರಕಾರ ಇನ್ನೂ 236 ಜನ ಕನ್ನಡಿಗರು ವಾಪಸ್ ಬರಬೇಕಿದೆ ಎಂದು ಅವರು ಹೇಳಿದ್ರು. ಉಕ್ರೇನ್​​ನಲ್ಲಿ ಮೃತಪಟ್ಟ ನವೀನ್ ಮೃತದೇಹ ತರುವ ವಿಚಾರವಾಗಿ ಎಲ್ಲಾ ಪ್ರಯತ್ನ ನಡೆಯುತ್ತಿದೆ. ಸಿಎಂ ಬೊಮ್ಮಾಯಿ ಈ ಬಗ್ಗೆ ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ ಎಂದು ಮಾಹಿತಿ ನೀಡಿದರು.ಉಕ್ರೇನ್ ದೇಶದ ಹಲವು ನಗರಗಳಿಂದ ಭಾರತೀಯರನ್ನು ಕೇಂದ್ರ ಸರ್ಕಾರ ಕರೆತರಲಾಗುತ್ತಿದೆ. ಆದರೆ ಸುಮಿ ನಗರದಲ್ಲಿ ಇನ್ನೂ ಯುದ್ಧದ ಪರಿಸ್ಥಿತಿಯಿದೆ. ಅಲ್ಲಿರುವ ಏಳು ಜನ ಕನ್ನಡಿಗರು, ಏಳು ನೂರಕ್ಕೂ ಹೆಚ್ಚು ಭಾರತೀಯರನ್ನು ಬರಬೇಕಿದೆ.
Published by:Pavana HS
First published: