Indian Railways Bonus: ರೈಲ್ವೆ ಉದ್ಯೋಗಿಗಳಿಗೆ ಗುಡ್​​​ನ್ಯೂಸ್​​; ಬೋನಸ್ ರೂಪದಲ್ಲಿ ಸಿಗಲಿದೆ 78 ದಿನದ ಸಂಬಳ

Bonus for Railway Employees: ಈ ವರ್ಷ ಉದ್ಯೋಗಿಗಳು ಪಡೆಯುವ 78 ದಿನದ ಸಂಬಳ ಬೋನಸ್ ರೂಪದಲ್ಲಿ ದೊರಕಲಿದೆ. ರೈಲ್ವೇ ಇಲಾಖೆಯ ಸುಮಾರು 11.56 ಲಕ್ಷ ನಾನ್ ಗೆಜೆಟೆಟ್ ಉದ್ಯೋಗಿಗಳು ಬೋನಸ್ ಲಾಭ ಪಡೆಯಲಿದ್ದಾರೆ.

ಭಾರತೀಯ ರೈಲ್ವೆ

ಭಾರತೀಯ ರೈಲ್ವೆ

  • Share this:
    ನವದೆಹಲಿ: ದೀಪಾವಳಿಗೂ ಮೊದಲೇ ಭಾರತೀಯ ರೈಲ್ವೆ ಉದ್ಯೋಗಿಗಳಿಗೆ ಕೇಂದ್ರ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಕಳೆದ ವರ್ಷದಂತೆ ರೈಲ್ವೆ ಉದ್ಯೋಗಿಗಳಿಗೆ ದೊಡ್ಡ ಮೊತ್ತದ ಬೋನಸ್ ಜೇಬು ಸೇರಲಿದೆ. ಈ ವರ್ಷ ಉದ್ಯೋಗಿಗಳು ಪಡೆಯುವ 78 ದಿನದ ಸಂಬಳ ಬೋನಸ್ ರೂಪದಲ್ಲಿ ದೊರಕಲಿದೆ. ರೈಲ್ವೇ ಇಲಾಖೆಯ ಸುಮಾರು 11.56 ಲಕ್ಷ ನಾನ್ ಗೆಜೆಟೆಟ್ ಉದ್ಯೋಗಿಗಳು ಬೋನಸ್ ಲಾಭ ಪಡೆಯಲಿದ್ದಾರೆ. ಕೇಂದ್ರ ಮಂತ್ರಿ ಅನುರಾಗ್ ಠಾಕೂರ್ (Union minister Anurag Thakur) ಇಂದು ಸಂಪುಟ ಸಭೆಯ (Union Cabinet) ನಿರ್ಣಯಗಳನ್ನು ಸುದ್ದಿಗೋಷ್ಠಿಯಲ್ಲಿ ಸವಿವರವಾಗಿ ತಿಳಿಸಿದರು.

    78 ದಿನದ ಸಂಬಳ ಬೋನಸ್

    ಇಂದು ನಡೆದ ಕ್ಯಾಬಿನೆಟ್ ಸಭೆಯಲ್ಲಿ ಎರಡು ವಲಯಗಳಿಗೆ ಸಂಬಂಧಿಸಿದಂತೆ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ. ವರ್ಷಗಳಿಂದ ಪ್ರೊಡೆಕ್ಟಿವಿಟಿ ಲಿಂಕ್ ಬೋನಸ್ ( productivity-linked bonus )ರೈಲ್ವೇಯ ನಾನ್-ಗೆಜೆಟೆಡ್ ಉದ್ಯೋಗಿಗಳಿಗೆ (non-gazetted railway employees) ಸಿಗುತ್ತಿದೆ. ಪ್ರತಿವರ್ಷದಂತೆ ಈ ಬಾರಿಯೂ ರೈಲ್ವೇಯ ನಾನ್ ಗೆಜೆಟೆಡ್ ಉದ್ಯೋಗಿಗಳಿಗೆ 78 ದಿನದ ಸಂಬಳಕ್ಕೆ ಸಮವಾದ ಬೋನಸ್ ಸಿಗಲಿದೆ ಎಂದು ಮಾಹಿತಿ ನೀಡಿದರು. 2019-20ರಲ್ಲಿ ನೀಡಲಾದ ಬೋನಸ್ 11.58 ಲಕ್ಷ ಜನ ಪಡೆದುಕೊಂಡಿದ್ದರು. ಸರ್ಕಾರ ಬೋನಸ್ ರೂಪದಲ್ಲಿ ಒಟ್ಟು 2,081.68 ಕೋಟಿ ರೂಪಾಯಿ ಮೀಸಲಿರಿತ್ತು. ಈ ವರ್ಷ 1984.73  ಕೋಟಿ ರೂ. ಖರ್ಚು ಮಾಡಲಿದೆ.

    ಕೋವಿಡ್ ಹೊಡೆತದ ನಡುವೆಯೂ ಉತ್ಪಾದನಾ ವಲಗಳಲ್ಲಿ ಹೊಸ ಹೊಸ ಸುಧಾರಣೆಗಳನ್ನು ತರಲಾಗುತ್ತಿದೆ. ಕೇವಲ ಟೆಕ್ಸಟೈಲ್ ಅಲ್ಲದೇ ಎಲ್ಲ ವಲಯಗಳಲ್ಲಿ ಉತ್ಪಾದನೆ ಹೆಚ್ಚಾಗುತ್ತಿದೆ. ಉತ್ಪಾದನ ವಲಯಗಳಿಗೆ ಉತ್ತೇಜನ ಮತ್ತು ರಫ್ತು ಹೆಚ್ಚಿಸುವ ಉದ್ದೇಶದಿಂದ ಪ್ರೊಡೆಕ್ಷನ್ ಲಿಂಕ್ ಬೋನಸ್ ನೀಡಲಾಗುತ್ತಿದೆ. ಕಳೆದ ಆರು ತಿಂಗಳಲ್ಲಾದ ರಫ್ತು ಇದುವರೆಗಿನ ದಾಖಲೆಯಾಗಿದೆ ಎಂದು ಅನುರಾಗ್ ಠಾಕೂರ್ ಹೇಳಿದ್ದಾರೆ.

    ಶೀಘ್ರದಲ್ಲಿಯೇ ಪಿಎಂ ಮಿತ್ರ ಯೋಜನೆ

    ಶೀಘ್ರದಲ್ಲಿಯೇ ಪಿಎಂ ಮಿತ್ರ (MITRA- Mega Investment Textiles Region and Apparel Park) ಯೋಜನೆಯನ್ನು ಆರಂಭಿಸಲಾಗುವುದು. ಇದರಿಂದ ಟೆಕ್ಸಟೈಲ್ ಮತ್ತು ಗಾರ್ಮೆಂಟ್ ಕ್ಷೇತ್ರಗಳಿಗೆ ದೊಡ್ಡ ಯೋಗದಾನ ಸಿಗಲಿದೆ. ಈ ಯೋಜನೆಯಿಂದ ಲಕ್ಷಾಂತರ ಜನರಿಗೆ ಉದ್ಯೋಗ ಸಿಗಲಿದೆ. ಈ ಯೋಜನೆಗೆ ಕೇಂದ್ರ ಸರ್ಕಾರ ಐದು ವರ್ಷದಲ್ಲಿ 445 ಕೋಟಿ ರೂಪಾಯಿ ಖರ್ಚು ಮಾಡಲಿದೆ. ಈ ಅನುದಾನದಲ್ಲಿಯೇ ಮೆಗಾ ಇಂಟ್ರಿಗ್ರೆಟೆಡ್ ಟೆಕ್ಸಟೈಲ್ ರೀಜನಲ್ ಆ್ಯಂಡ್ ಅಪರೈಲ್ ಸಿದ್ಧಗೊಳ್ಳಲಿದೆ.

    ಇದನ್ನೂ ಓದಿ: Eastern Railway Recruitment 2021: ಪೂರ್ವ ಮಧ್ಯ ರೈಲ್ವೆಇಲಾಖೆಯಲ್ಲಿ 3366 ಹುದ್ದೆಗಳು ಖಾಲಿ- ಅರ್ಜಿ ಸಲ್ಲಿಸಲು ಹೀಗೆ ಮಾಡಿ...

    ಇದೇ ವೇಳೆ ಮಾತನಾಡಿದ ಕೇಂದ್ರ ಸಚಿವ ಪಿಯೂಷ್ ಗೋಯಲ್ (Union Minister Piyush Goyal), ಸರ್ಕಾರ ಎರಡು ಪ್ರಮುಖ ವಲಯಗಳಿಗೆ ಸಂಬಂಧಿಸಿದ ನಿರ್ಣಯಗಳನ್ನು ಪ್ರಕಟಿಸಿದೆ. ಇದರಲ್ಲಿಯ ಆರು ನಿರ್ಣಯಗಳನ್ನು ಈ ಹಿಂದೆಯೇ ಪ್ರಕಟಿಸಲಾಗಿತ್ತು.  ಸದ್ಯ ಆ ನಿರ್ಣಯಗಳನ್ನು ಮುಂದುವರಿಸಿಕೊಂಡು ಹೋಗಲಾಗುತ್ತಿದೆ. ಟೆಕ್ಸಟೈಲ್ ಪಾರ್ಕ್ ನಿರ್ಮಾಣಕ್ಕೆ 10 ರಾಜ್ಯಗಳು ಆಸಕ್ತಿ ತೋರಿಸಿವೆ. ಈ ಪಾರ್ಕ್ ನಿರ್ಮಾಣದಿಂದ ನೇರವಾಗಿ 7 ಲಕ್ಷ ಮತ್ತು ಪರೋಕ್ಷವಾಗಿ 14 ಲಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ. ಆರ್ ಓಎಸ್‍ಸಿಟಿಎಲ್ (Rebate of State and Central Levies and Taxes (RoSCTL) Scheme) ಯೋಜನೆ 2019ರಲ್ಲಿ ಆರಂಭಿಸಲಾಗಿತ್ತು. ಈ ಯೋಜನೆಯನ್ನು 2024ರವರೆಗೆ ಮುಂದುವರಿಸಲು ನಿರ್ಧರಿಸಲಾಗಿದೆ. ಈ ಂಯೋಜನೆಯಿಂದ ಟೆಕ್ಸಟೈಲ್ ಕ್ಷೇತ್ರ ನಿರ್ಯಾತಕ್ಕೆ ಉತ್ತೇಜನ ನೀಡಿದಂತಾಗುತ್ತದೆ ಎಂದು ಹೇಳಿದರು.

    ವರದಿ: ಮೊಹ್ಮದ್​ ರಫೀಕ್​ ಕೆ 
    Published by:Kavya V
    First published: