• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Indian Post Food Delivery: ಮನೆ ಬಾಗಿಲಿಗೆ ಫುಡ್ ಡೆಲಿವರಿ ನೀಡುತ್ತೆ ಅಂಚೆ ಇಲಾಖೆ! ಬೆಂಗಳೂರಲ್ಲಿ ಹೊಸ ಸಾಹಸ ಶುರು!

Indian Post Food Delivery: ಮನೆ ಬಾಗಿಲಿಗೆ ಫುಡ್ ಡೆಲಿವರಿ ನೀಡುತ್ತೆ ಅಂಚೆ ಇಲಾಖೆ! ಬೆಂಗಳೂರಲ್ಲಿ ಹೊಸ ಸಾಹಸ ಶುರು!

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ದೋಸೆ ಹಿಟ್ಟು ಬಿಸಿಬೇಳೆ ಬಾತ್, ಖಾರಾಬಾತ್, ಕೇಸರಿಬಾತ್ ಮತ್ತು ತುಪ್ಪದ ಪೊಂಗಲ್‌ನ ರೆಡಿ ಟು ಈಟ್ ಮಿಕ್ಸ್‌ಗಳು, ಚಟ್ನಿ ಪುಡಿಯನ್ನು ಇದುವರೆಗೆ ವಿತರಿಸಲಾಗಿದೆ. 

  • Share this:

    ಬೆಂಗಳೂರು: ಬೆಂಗಳೂರು ಅಂಚೆ ವಿಭಾಗವು ಹೊಸ ಸಾಹಸಕ್ಕೆ ಕೈಹಾಕಿದೆ! ಈವರೆಗೆ ನಡೆಸದ ಹೊಸ ಸೇವೆಯನ್ನು ಆರಂಭಿಸಿದ್ದು ಸಂಪೂರ್ಣವಾಗಿ ಅಸಾಂಪ್ರದಾಯಿಕ ವ್ಯಾಪಾರ ಉದ್ಯಮಕ್ಕೆ ಕಾಲಿಟ್ಟಿದೆ. ಇಡ್ಲಿ ಮತ್ತು ದೋಸೆ ಹಿಟ್ಟು ಸೇರಿದಂತೆ ಇನ್​ಸ್ಟಂಟ್​ ಆಹಾರ ತಯಾರಿಕಾ ವಸ್ತುಗಳನ್ನು ಮನೆ ಬಾಗಿಲಿಗೆ ತಲುಪಿಸುವ (Indian Post Food Delivery)ಸೇವೆ ಆರಂಭಿಸಿದೆ. ಕಳೆದ ಸೋಮವಾರ ಬೆಂಗಳೂರಿನ ಕೆಲವು ಮನೆಗಳಿಗೆ ಅಂಚೆ ಇಲಾಖೆಯು ಮೊದಲ ಬ್ಯಾಚ್ ಪ್ಯಾಕೆಟ್‌ಗಳನ್ನು ವಿತರಿಸಿದೆ. ಈ ವ್ಯವಹಾರವನ್ನು ಕರ್ನಾಟಕ ಮತ್ತು ಇತರ ರಾಜ್ಯಗಳಾದ್ಯಂತ ವಿಸ್ತರಿಸಿದರೆ ಭವಿಷ್ಯದಲ್ಲಿ ಇಲಾಖೆಯು (Post Office Services) ದೊಡ್ಡ ಆದಾಯ ಗಳಿಸಲಿದೆ ಎಂದೇ ಹೇಳಲಾಗಿದೆ. ದೋಸೆ ಹಿಟ್ಟಿನ ಜೊತೆ ಬಿಸಿಬೇಳೆ ಬಾತ್, ಖಾರಾಬಾತ್, ಕೇಸರಿಬಾತ್ ಮಿಕ್ಸ್ಚರ್​ಗಳು, ತುಪ್ಪದ ಪೊಂಗಲ್‌ನ ರೆಡಿ ಟು ಈಟ್ ಮಿಕ್ಸ್‌ಗಳು, ಚಟ್ನಿ ಪುಡಿಯನ್ನು ಇದುವರೆಗೆ ವಿತರಿಸಲಾಗಿದೆ. 


    ಸೋಮವಾರ ಕಾಯ್ದಿರಿಸಿದ 22 ಪಾರ್ಸೆಲ್‌ಗಳಲ್ಲಿ ಗ್ರಾಹಕರು ಲಭ್ಯವಿಲ್ಲದ ಕಾರಣ ಒಂದನ್ನು ಮಾತ್ರ ತಲುಪಿಸಲು ಸಾಧ್ಯವಾಗಲಿಲ್ಲ. ಉಳಿದವ ಪಾರ್ಸೆಲ್​ಗಳನ್ನು ಪೂರ್ವ ಬೆಂಗಳೂರು, ದಕ್ಷಿಣ ಬೆಂಗಳೂರು ಮತ್ತು ಪಶ್ಚಿಮ ಬೆಂಗಳೂರಿನ ಮನೆಗಳಲ್ಲಿ ಹಸ್ತಾಂತರಿಸಲಾಗಿದೆ.


    ಪ್ರಾಯೋಗಿಕವಾಗಿ ಆರಂಭ
    ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡಿದ ಕರ್ನಾಟಕ ಸರ್ಕಲ್ ಚೀಫ್ ಪೋಸ್ಟ್‌ಮಾಸ್ಟರ್ ಜನರಲ್ (CPMG) ಎಸ್ ರಾಜೇಂದ್ರ ಕುಮಾರ್, ಜನಪ್ರಿಯವಾದ ಖಾಸಗಿ ಸಂಸ್ಥೆಯೊಂದರ ಉತ್ಪನ್ನಗಳ ವಿತರಣೆಯನ್ನು ಬೆಂಗಳೂರಿನಲ್ಲಿ ಪ್ರಾಯೋಗಿಕ ಆಧಾರದ ಮೇಲೆ ಪ್ರಾರಂಭಿಸಿರುವುದಾಗಿ ತಿಳಿಸಿದ್ದಾರೆ.


    ಬೇರೆ ಬೇರೆ ಸಂಸ್ಥೆಗಳು ಸಂಪರ್ಕಿಸಿ!
    ನಾವು ಆಹಾರ ವ್ಯವಹಾರದಲ್ಲಿ ತೊಡಗಿರುವ ವಿವಿಧ ಸಂಸ್ಥೆಗಳಿಂದ ದೊಡ್ಡ ಪ್ರಮಾಣದ ಆರ್ಡರ್‌ಗಳು ಸ್ವೀಕರಿಸುವುದಕ್ಕಾಗಿ ಕಾಯುತ್ತಿದ್ದೇವೆ. ಈ ವ್ಯವಹಾರವು ಅಂಚೆ ಇಲಾಖೆಗೆ ಅತ್ಯುತ್ತಮ ಆದಾಯದ ಮೂಲವೂ ಸಹ ಆಗುವ ಸಾಧ್ಯತೆ ಇದೆ ಎಂದು ಕರ್ನಾಟಕ ಸರ್ಕಲ್ ಚೀಫ್ ಪೋಸ್ಟ್‌ಮಾಸ್ಟರ್ ಜನರಲ್ ಎಸ್ ರಾಜೇಂದ್ರ ಕುಮಾರ್ ವ್ಯಾಖ್ಯಾನಿಸಿದ್ದಾರೆ.


    ಭಾರೀ ಜನಪ್ರಿಯವಾಗಬಹುದು
    ಬೆಂಗಳೂರಿನಲ್ಲಿ ಚಿಕ್ಕದಾಗಿ ತ್ವರಿತ ಆಹಾರ ವಿತರಣೆ ಸೇವೆಗೆ ಕೈಹಾಕಿದೆ ಅಂಚೆ ಇಲಾಖೆ. ಮುಂದಿನ ದಿನಗಳಲ್ಲಿ ಭಾರೀ ಜನಪ್ರಿಯತೆಯನ್ನು ಪಡೆದುಕೊಳ್ಳುವ ಸಾಧ್ಯತೆಯೂ ಇದೆ ಎನ್ನಲಾಗಿದೆ.


    ಇದನ್ನೂ ಓದಿ: Film Subsidy: ಸಿನಿಮಾ ನಿರ್ಮಿಸಿದ್ದೀರೇ? ಈಗಲೇ ಸಬ್ಸಿಡಿಗಾಗಿ ಅಪ್ಲೈ ಮಾಡಿ


    ಡೆಲಿವರಿ ನೀಡುವವರು ಯಾರು?
    ಸಾಮಾನ್ಯ ಅಂಚೆ ವಿತರಣಾ ಸಿಬ್ಬಂದಿಯೇ ಸದ್ಯ ಈ ಸೇವೆ ಒದಗಿಸುತ್ತಾರೆ. ಭವಿಷ್ಯದಲ್ಲಿ ಇದಕ್ಕೆ ಉತ್ತಮ ಸಾರ್ವಜನಿಕ ಬೇಡಿಕೆ ಕಂಡುಬಂದರೆ ಆಹಾರ ವಿತರಣೆಗೆ ಎಂದೇ ಪ್ರತ್ಯೇಕ ತಂಡವನ್ನು ಸ್ಥಾಪಿಸಬಹುದು ಎಂದು ಎಸ್ ರಾಜೇಂದ್ರ ಕುಮಾರ್ ತಿಳಿಸಿದ್ದಾರೆ.


    ಇತರ ಫುಡ್ ಡೆಲಿವರಿ ಸಂಸ್ಥೆಗಳಿಗಿಂತ ಹೇಗೆ ಭಿನ್ನ?
    ಆಹಾರ ವಿತರಣಾ ಅಪ್ಲಿಕೇಶನ್ ಏಜೆಂಟ್‌ಗಳ ಜೊತೆ ಸ್ಪರ್ಧೆಯನ್ನು ಅವರು ತಳ್ಳಿಹಾಕಿದ್ದಾರೆ. "ರೆಸ್ಟೋರೆಂಟ್‌ಗಳಿಂದ ರೆಡಿಮೇಡ್ ಆಹಾರವನ್ನು ತಲುಪಿಸುವ ಆಹಾರ ವಿತರಣಾ ಅಪ್ಲಿಕೇಶನ್‌ಗಳಿಗಿಂತ ಭಿನ್ನವಾಗಿ, ನಮ್ಮ ಇಲಾಖೆಯು ಆಹಾರವನ್ನು ತಯಾರಿಸಲು ಅಗತ್ಯವಾದ ಪದಾರ್ಥಗಳನ್ನು ಮಾತ್ರ ಪೂರೈಸುತ್ತದೆ.


    ಇದನ್ನೂ ಓದಿ: Mysuru News: ಮೈಸೂರು ಟು ಉತ್ತರ ಭಾರತ; ಪ್ರಯಾಣ ಇನ್ನಷ್ಟು ಸಲೀಸು!


    ಸದ್ಯ ಹಳ್ಳಿಮನೆ ಅಥವಾ ಇತರ ಸಂಸ್ಥೆಗಳು ಟೆಟ್ರಾ ಪ್ಯಾಕ್‌ಗಳಲ್ಲಿ ಹಾಳಾಗುವ ಉತ್ಪನ್ನವನ್ನು ಪ್ಯಾಕೇಜ್ ಮಾಡಲು ಸಾಧ್ಯವಾದರೆ ಮಾತ್ರ ಅದು ತಾಜಾ ಉಳಿಯುತ್ತದೆ. ಅದನ್ನು ನಾವು  ಕರ್ನಾಟಕದಾದ್ಯಂತ ಅಲ್ಲದೇ ಇತರ ರಾಜ್ಯಗಳಿಗೆ, ವಿದೇಶಗಳಿಗೂ ತಲುಪಿಸಲು ಪ್ರಯತ್ನಿಸಬಹುದು ಎಂದು ಎಸ್ ರಾಜೇಂದ್ರ ಕುಮಾರ್ ತಿಳಿಸಿದ್ದಾರೆ.

    Published by:guruganesh bhat
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು