HOME » NEWS » State » INDIAN CULTURE AND TRADITION IS OUR IDENTITY SAYS DK SHIVAKUMAR RH

ಹಿಂದೂತ್ವ ಯಾರ ಆಸ್ತಿಯೂ ಅಲ್ಲ, ಭಾರತದ ಸಂಸ್ಕೃತಿ ಪರಂಪರೆ ನಮ್ಮ ಅಸ್ತಿತ್ವ; ಡಿ.ಕೆ.ಶಿವಕುಮಾರ್

ನಮ್ಮದು ಮಹಾತ್ಮ ಗಾಂಧಿ, ವಿವೇಕಾನಂದರ ಹಿಂದುತ್ವ. ಹಿಂದೂತ್ವ ಯಾರ ಆಸ್ತಿಯೂ ಅಲ್ಲ. ಭಾರತದ ಸಂಸ್ಕೃತಿ ಪರಂಪರೆ ನಮ್ಮ ಅಸ್ತಿತ್ವ. ಸಂವಿಧಾನದ ರಕ್ಷಣೆ ಕಾಂಗ್ರೆಸ್ ಬದ್ಧತೆ ಎಂದು ಹೇಳಿದರು.

news18-kannada
Updated:November 30, 2020, 6:17 PM IST
ಹಿಂದೂತ್ವ ಯಾರ ಆಸ್ತಿಯೂ ಅಲ್ಲ, ಭಾರತದ ಸಂಸ್ಕೃತಿ ಪರಂಪರೆ ನಮ್ಮ ಅಸ್ತಿತ್ವ; ಡಿ.ಕೆ.ಶಿವಕುಮಾರ್
ಡಿಕೆ ಶಿವಕುಮಾರ್
  • Share this:
ದೇವನಹಳ್ಳಿ; ಹಲವು ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. 60 ನಾಯಕರಿಗೆ ಆಹ್ವಾನ ನೀಡಿದ್ದೆವು. ರಾಜ್ಯ ರಾಕಾರಣದಲ್ಲಿ ಏನಾಗುತ್ತಿದೆ ಎಂಬುದರ ಬಗ್ಗೆ ಚರ್ಚೆ ಆಗಿದೆ.  ಇನ್ನು ಹಲವು ವಿಷಯಗಳ ಬಗ್ಗೆ ತೀರ್ಮಾನ ಆಗಿಲ್ಲ, ಸಭೆ ಮುಂದುವರೆದಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಹೇಳಿದರು.

ದೇವನಹಳ್ಳಿಯ ಖಾಸಗಿ ರೆಸಾರ್ಟ್​ನಲ್ಲಿ ಕಾಂಗ್ರೆಸ್ ಮುಖಂಡರ ಸಭೆಯ ಬಳಿಕ ಮಾತನಾಡಿದ ಡಿಕೆಶಿ, ಗ್ರಾ.ಪಂ. ಚುನಾವಣೆಗಾಗಿ ಕಾಂಗ್ರೆಸ್ ಕೋರ್ಟ್ ಮೊರೆ ಹೋಗಿತ್ತು.  ಕೋರ್ಟ್ ಆದೇಶ ನೀಡಿದ್ದು ಸಂತಸವಾಗಿದೆ. ಪಕ್ಷದ ಸಂಘಟನೆ ಬಗ್ಗೆ ಚರ್ಚೆ ನಡೆಯುತ್ತಿದೆ.  ಪಂಚಾಯತಿ, ಬೂತ್ ಮಟ್ಟದಲ್ಲಿ ಸಮಿತಿ ರಚನೆ ಮಾಡಿ, ಸಮಿತಿಗೆ ಪ್ರಜಾ ಪ್ರತಿನಿಧಿ ಎಂಬ ಹೆಸರು ನೀಡಲಾಗಿದೆ. ಎಲ್ಲಾ ವರ್ಗದ ಜನರು ಸಮಿತಿಯಲ್ಲಿ ಇರುತ್ತಾರೆ ಎಂದು ತಿಳಿಸಿದರು.

ಉಪಚುನಾವಣೆ ನಡೆದ ಕ್ಷೇತ್ರದ ಬಗ್ಗೆ ಆತ್ಮಾವಲೊಕನ ಮಾಡಲಾಗಿದೆ. ಬೆಳಗಾವಿ, ಬಸವ ಕಲ್ಯಾಣ, ಮಸ್ಕಿ ಕ್ಷೇತ್ರಕ್ಕೆ ಸಮಿತಿ ರಚನೆ ಮಾಡಲಾಗಿದೆ. ಸಮಿತಿ ಶಿಫಾರಸ್ಸಿನ ವರದಿ ಆಧರಿಸಿ ಪಟ್ಟಿಯನ್ನು ದೆಹಲಿಗೆ ರವಾನೆ ಮಾಡಲಾಗುತ್ತದೆ. ಗ್ರಾ ಪಂ ಚುನಾವಣೆಗೆ ರಾಜ್ಯದ ಎಲ್ಲಾ ಹಿರಿಯ 9 ನಾಯಕರ ತಂಡ ರಚನೆ ಮಾಡಲಾಗಿದೆ. ಎಲ್ಲಾ ನಾಯಕರು ರಾಜ್ಯಾದ್ಯಂತ ಪ್ರವಾಸ ಮಾಡಲಿದ್ದಾರೆ. ಈ ಚುನಾವಣೆ ಯಶಸ್ವಿಗೊಳಿಸಲು ತಳಮಟ್ಟದ ಪ್ರಯತ್ನ ನಡೆಯುತ್ತಿದೆ. ಸರ್ಕಾರದ ಲೋಪದೋಷಗಳನ್ನು ಜನರಿಗೆ ಮುಟ್ಟಿಸಲು ಪ್ರಯತ್ನ ಮಾಡುತ್ತೇವೆ ಎಂದರು.

ಇದನ್ನು ಓದಿ: ಏನ್ ಕಾಯಿಲೆ ಇದೆ ಅಂತ ರಿಪೋರ್ಟ್ ಕೊಡಿ ಎಂದು ಕೋರ್ಟ್ ಕೇಳಿದ ಬೆನ್ನಲ್ಲೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ರೋಷನ್ ಬೇಗ್

ಉತ್ತರ ಭಾರತದ ರೈತಪರ ಹೊರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದೆ. ಕೆಂದ್ರ ಸರ್ಕಾರ, ಪ್ರಧಾನಮಂತ್ರಿಗಳು ರೈತರ ಸಮಸ್ಯೆ ಬಗೆಹರಿಸಬೇಕು. ಎಲ್ಲಾ ತಿದ್ದುಪಡಿ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ನಮ್ಮದು ಮಹಾತ್ಮ ಗಾಂಧಿ, ವಿವೇಕಾನಂದರ ಹಿಂದುತ್ವ. ಹಿಂದೂತ್ವ ಯಾರ ಆಸ್ತಿಯೂ ಅಲ್ಲ. ಭಾರತದ ಸಂಸ್ಕೃತಿ ಪರಂಪರೆ ನಮ್ಮ ಅಸ್ತಿತ್ವ. ಸಂವಿಧಾನದ ರಕ್ಷಣೆ ಕಾಂಗ್ರೆಸ್ ಬದ್ಧತೆ ಎಂದು ಹೇಳಿದರು.
Published by: HR Ramesh
First published: November 30, 2020, 6:17 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading