ಗೃಹಪ್ರವೇಶ ಬಿಟ್ಟು ಪಾಕ್​ ವಿರುದ್ದ ಹೋರಾಡಿದ ಸೈನಿಕನಿಗೀಗ ಕೈ ಕಳೆದುಕೊಳ್ಳುವ ಭೀತಿ!


Updated:September 25, 2018, 2:09 PM IST
ಗೃಹಪ್ರವೇಶ ಬಿಟ್ಟು ಪಾಕ್​ ವಿರುದ್ದ ಹೋರಾಡಿದ ಸೈನಿಕನಿಗೀಗ ಕೈ ಕಳೆದುಕೊಳ್ಳುವ ಭೀತಿ!
  • Share this:
ವೀರೇಶ್ ಜಿ ಹೊಸೂರ್, ನ್ಯೂಸ್ 18 ಕನ್ನಡ

ಚಿಕ್ಕಮಗಳೂರು(ಸೆ.25): ಶತ್ರು ದೇಶ ಪಾಕಿಸ್ತಾನದ ಕಿತಾಪತಿ ಮಿತಿ ಮೀರಿದೆ. ನಮ್ಮ ದೇಶ ಕಾಯೋ ವೀರ ಸೈನಿಕರ ಮೇಲೆ ಒಂದಲ್ಲಾ ಒಂದೂ ರೀತಿ ದಾಳಿ ನಡೆಸುತ್ತಲೇ ಇರುತ್ತಾರೆ. ಈ ಮಧ್ಯೆ ತಮ್ಮ ಪ್ರಾಣವನ್ನು ಲೆಕ್ಕಿಸದೆ ಸಾವು ಬದುಕಿನ ನಡುವೆ ಹೋರಾಟ ಮಾಡುವ ನಮ್ಮ ಸೈನಿಕರು ನಿಜಕ್ಕೂ ಶ್ಲಾಘನೀಯ. ಅದೇ ರೀತಿ ಇಲ್ಲೊಬ್ಬ ಯೋಧ ತನ್ನ ಮನೆ ಗೃಹಪ್ರವೇಶಕ್ಕೆ ಹೋಗದೇ ಪಾಕ್ ವಿರುದ್ಧ ಹೋರಾಡಿ ಇಂದು ತನ್ನ ಕೈಯನ್ನೇ ಕಳೆದುಕೊಳ್ಳುವ ಪರಿಸ್ಥಿತಿ ತಲುಪಿದ್ದಾರೆ.

ಅದು ಜನವರಿ 19 2018. ಇಡೀ ದೇಶವೇ ಜನವರಿ 26 ರಂದು ಆಚರಿಸೋ ಗಣರಾಜ್ಯೋತ್ಸವವನ್ನ ವೆಲ್ಕಮ್ ಮಾಡಲು ಸಿದ್ದವಾಗತ್ತಿತ್ತು.ಜಮ್ಮುಯಿಂದ ಕಾಶ್ಮೀರದವರೆಗೂ ಭಾರತದ ಸೈನಿಕರು ಸಹ ಸಿದ್ಧತೆ ಮಾಡಿಕೊಂಡಿದ್ದರು. ಆದರೆ ನೋಡ ನೋಡುತ್ತಿದಂತೆ ಜಮ್ಮು ರಾಜ್ಯದ ಸಾಂಬಾ ಜಿಲ್ಲೆಯ ರಾಮ್ ಘಡ್ ಬಾರ್ಡರ್ ನಲ್ಲಿ ಪಾಕಿಸ್ತಾನದಿಂದ ಬಾಂಬ್ ದಾಳಿ ನಡೆದೆ ಬಿಡುತ್ತದೆ. ಪಾಕಿಸ್ತಾನದಿಂದ ಭಾರತದ ಗಡಿಗೆ ಕೇವಲ ಮೂರೇ ಕಿ. ಮೀ ದೂರ ಇರುವ ರಾಮ್ ಘಡ್ ಕ್ಯಾಂಪ್ ಮೇಲೆ ನಿರಂತರ ಮೂರು ದಿನಗಳ ಕಾಲ ಫೈರಿಂಗ್ ಹಾಗೂ ಬಾಂಬ್ ದಾಳಿ ನಡೆಯುತ್ತದೆ ಭಾರತದ ಸೈನಿಕರ ಪ್ರತಿ ದಾಳಿ ಮಾಡುತ್ತಾರೆ. ಈ ವೇಳೆ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಸೀಗದಾಳ್ ಗ್ರಾಮ ಮೂಲದ ಸೈನಿಕ ಆದರ್ಶ್ ಸಹ ಸ್ಪಾಟ್ ನಲ್ಲಿ ಇರುತ್ತಾರೆ.ಕಮ್ಯುನಿಕೇಷನ್ ಕಮಾಂಡರ್ ಆಗಿ ಕೆಲಸ ಮಾಡುತ್ತಿದ್ದ ಆದರ್ಶ್ ಇದ್ದ ಟೆಂಟ್ ಮೇಲೆ ಬಾಂಬ್ ದಾಳಿ ಆಗುತ್ತದೆ. ನೋಡ ನೋಡುತ್ತಿದಂತೆ ಚಾವಣಿಗೆ ಹಾಕಿದ್ದ ಕಬ್ಬಿಣ ಆದರ್ಶ್ ಅವರ ಎಡಗೈ ಮೇಲೆ ಬಿದ್ದು ಎರಡು ತುಂಡಾಗಿ ನೆಲಕ್ಕೆ ಬೀಳುತ್ತೆ,ಪಾಕ್ ಹಾರಿಸಿದ್ದ ಬುಲೆಟ್ ಬೆನ್ನಿಗೆ ಹೊಕ್ಕುತ್ತದೆ. ಕೂಡಲೇ ಅಲ್ಲೇ ಇದ್ದ ಸೈನಿಕರು ಬುಲೆಟ್ ಪ್ರೂಫ್ ವಾಹನದಲ್ಲಿ ಆದರ್ಶ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಡಾಕ್ಟರ್ ಇವರ ಕೈಯನ್ನೇ ತಗಿಬೇಕು ಅಂತಾ ಹೇಳಿದ್ದರಾದರೂ ತುಂಡಾದ ಕೈಯನ್ನು ಮತ್ತೆ ಜೋಡಿಸಿ ಹೊಲಿದು ಚಿಕಿತ್ಸೆ ನೀಡಿದ್ದಾರೆ,ಆದ್ರೀಗ ಘಟನೆ ನಡೆದು 7 ತಿಂಗಳಾದ್ರೂ ಆದರ್ಶ್ ಅವರ ಎಡಗೈ ನಿಂದ ಏನೇ ಕೆಲಸ ಮಾಡಲು ಆಗದೇ ಯಮ ಯಾತನೆ ಪಡುತ್ತಿದ್ದಾರೆ.ಹೌದು ಘಟನೆ ನಡೆಯುವ ಅರ್ಧ ಗಂಟೆ ಮುನ್ನ ಪತ್ನಿ ರಶ್ಮಿ ಬಳಿ ಮಾತನಾಡಿದ್ದಾರೆ. ನಾನು ಬಾರ್ಡರ್ ನಲ್ಲಿ ನಡೆಯುತ್ತಿರುವ ಪಾಕ್ ದಾಳಿ ವಿರುದ್ಧ ಹೋಗುತ್ತಿದ್ದೇನೆ ಎಂದು ಹೇಳಿದ್ದಾರೆ. ಬಾರ್ಡರ್ ನಲ್ಲಿ ಆದರ್ಶ್ ಅವರ ಜವಾಬ್ದಾರಿ ಹೆಚ್ಚಾಗಿರುತ್ತೆ ಏಕೆಂದರೇ ಎದುರಾಳಿಗಳು ಎಲ್ಲಿಂದ ದಾಳಿ ಮಾಡುತ್ತಿದ್ದಾರೆ. ನಾವು ಎಲ್ಲಿಂದ ದಾಳಿ ಮಾಡಬೇಕು, ಎಲ್ಲಿ ನಿಂತು ಫೈರಿಂಗ್ ಮಾಡಿದ್ರೆ ಶತ್ರುಗಳ ಹುಟ್ಟಡಗಿಸಬಹುದು ಎಂದು ಮಾಹಿತಿ ನೀಡುವ ಕೆಲಸ ಇವರದಾಗಿರುತ್ತದೆ. ಆದರೆ ಪಾಕ್ ದಾಳಿಯಿಂದ ಮಾಹಿತಿ ನೀಡಬೇಕಾಡ ರೆಡಾರ್ ಉಪಕರಣದ ಮೇಲೆ ಬಾಂಬ್ ದಾಳಿ ಆಗಿ ಸುಟ್ಟು ಹೋಗುತ್ತದೆ. ಕೊನೆಗೆ ಟವರ್ ಮಾನಿಟರಿಂಗೆ ನಿಂತೆ ಹೋಗುತ್ತದೆ. ವೈರ್ ಲೆಸ್ ನಲ್ಲಿ ಫೈರಿಂಗ್ ಮಾಡುವವರಿಗೆ ಮಾಹಿತಿ ನೀಡಿದರೆ ಪಾಕಿಸ್ತಾನದವರು ಟ್ರಾಪ್ ಮಾಡಿ ಮತ್ತಷ್ಟು ಅಪಾಯಕಾರಿ ದಾಳಿ ಮಾಡಬಹುದು ಅನ್ನೋ ದೃಷ್ಟಿಯಿಂದ ದಾಳಿ ನಡೆಯುತ್ತಿದ್ದ ಜಾಗಕ್ಕೆ ಆದರ್ಶ್ ಬಂದಿದ್ದಾರೆ ಆದ್ರೆ ಇವರು ಇದ್ದ ಜಾಗದಲ್ಲೇ ಬಾಂಬ್ ಸಿಡಿದು ಈ ರೀತಿ ಅನಾಹುತವಾಗಿದೆ. ಆದ್ರೂ ನಮ್ಮ ವೀರ ಯೋಧರು ನಿರಂತರವಾಗಿ ದಾಳಿ ನಡೆಸಿ ಪಾಕ್ ನ ಬಂಕರ್ ಮೇಲೆ ಪ್ರತಿ ದಾಳಿ ನಡೆಸಿ ನಾಶ ಮಾಡಿದರು. ಕೊನೆಗೆ ಭಯಗೊಂಡ ಪಾಕ್ ಭಾರತದ ಮುಂದೆ ಶರಣಾಗತಿ ಆಗುತ್ತೆ. ಆದ್ರೇ ಇಷ್ಟೆಲ್ಲಾ ನಡೆದ್ರು ಮನೆಗೆ ತಿಳಿಸದೆ ಆದರ್ಶ್ ತಮ್ಮ ದೇಶ ಪ್ರೇಮ ಮೆರೆದಿದ್ದಾರೆ,ಆದರ್ಶ್ ನನ್ನು ಪಡೆದ ನಾವು ಪುಣ್ಯವಂತರು ಅಂತಾರೆ ಸ್ಥಳೀಯರು..

ಒಟ್ಟಾರೆ ತನ್ನ ಮನೆಯ ಗೃಹಪ್ರವೇಶಕ್ಕೆ ಹೋಗಬೇಕಾಗಿದ್ದ ಯೋದ ನನಗೆ ದೇಶನೇ ಮೊದಲು ಅಂತ ಹೋರಾಡಿ ಇವತ್ತು ತನ್ನ ಕೈಯನ್ನೇ ಕಳೆದುಕೊಳ್ಳುವ ಪರಿಸ್ಥಿತಿ ತಲಿಪಿದ್ದಾರೆ. ಎಲ್ಲಿ ಗೃಹಪ್ರವೇಶ ನಿಂತು ಹೋಗುತ್ತದೋ ಎಂದು ಜ್ವರ ಬಂದಿದೆ ಅಂತಾ ಮನೆಯವರಿಗೆ ಆದರ್ಶ್ ಸುಳ್ಳು ಹೇಳಿದ್ದಾರೆ,ಎರಡು ತಿಂಗಳ ತಿಂಗಳ ಬಳಿಕ ಮನೆಗೆ ಬಂದ್ಮೇಲೆ ಸಂಬಂಧಿಕರಿಗೆ ಆಘಾತವಾಗಿದೆ. ಡಾಕ್ಟರ್ ಕೈಯನ್ನೇ ತಗಿಬೇಕು ಇಲ್ಲಾ ಮತ್ತೊಂದು ಆಪರೇಷನ್ ಮಾಡಬೇಕು ಎಂದು ಹೇಳಿರೋದು ಸಂಬಂಧಿಕರ ನಿದ್ದೆ ಕೆಡಿಸಿದೆ.ಆದ್ರೇ ನನಗೇನು ಆಗಿಲ್ಲ ಪ್ರಾಣ ಇರೋ ವರೆಗೂ ದೇಶ ಸೇವೆ ಮಾಡುತ್ತೇನೆ ಅನ್ನುತ್ತಿದ್ದಾರೆ.ನಿಜವಾದ ಹೀರೋಗಳು ಅಂದ್ರೆ ಇಂತಹ ವೀರ ಯೋಧರು ಅಲ್ಲದೆ ಮತ್ತಿನೇನು,ಆದಷ್ಟು ಬೇಗ ಗುಣಮುಖರಾಗಿ ದೇಶ ಸೇವೆ ಮುಂದುವರೆಸಲಿ ಅನ್ನೋದೆ ನಮ್ಮ ಆಶಯ.
First published:September 25, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ