ಭೀಮಾ ನದಿ ತೀರದಲ್ಲಿ ಪ್ರವಾಹ; ಜನರ ರಕ್ಷಣೆಗೆ ಯಾದಗಿರಿಗೆ ಬಂದಿಳಿದ ಸೇನಾ ತಂಡ

North Karnataka Flood: ಭೀಮಾ ನದಿಗೆ 8 ಲಕ್ಷ ಕ್ಯೂಸೆಕ್ಸ್​ ನೀರು  ಬಿಡುಗಡೆ ಮಾಡಿದ ಪರಿಣಾಮ ಭೀಮಾ ನದಿ ತೀರದ ಗ್ರಾಮಗಳು ಮುಳುಗಡೆಯಾಗುವ ಸಾಧ್ಯತೆ ಇದೆ. ನದಿ ತೀರದ ಜನರ ಸ್ಥಳಾಂತರ ಮಾಡುವ ಕಾರ್ಯ ನಡೆದಿದ್ದು ಜಿಲ್ಲೆಗೆ ಮೂರು ಎನ್ ಡಿ ಆರ್ ಎಫ್ ಹಾಗೂ ಭಾರತೀಯ ಸೇನಾ ತಂಡ ಆಗಮಿಸಿವೆ. 

ಯಾದಗಿರಿಗೆ ಬಂದಿಳಿದ ಸೇನಾ ತಂಡ

ಯಾದಗಿರಿಗೆ ಬಂದಿಳಿದ ಸೇನಾ ತಂಡ

  • Share this:
ಯಾದಗಿರಿ: ಯಾದಗಿರಿ ಜಿಲ್ಲೆಯಲ್ಲಿ ಭೀಮಾನದಿ ಪ್ರವಾಹ ಹೆಚ್ಚಳವಾಗಿದ್ದು, ಈಗ ಭೀಮಾ ನದಿಗೆ 8 ಲಕ್ಷ ಕ್ಯೂಸೆಕ್ಸ್​ ನೀರು  ಬಿಡುಗಡೆ ಮಾಡಿದ ಪರಿಣಾಮ ಭೀಮಾ ನದಿ ತೀರದ ಗ್ರಾಮಗಳು ಮುಳುಗಡೆಯಾಗುವ ಸಾಧ್ಯತೆ ಇದೆ. ಈಗಾಗಲೇ ಜಿಲ್ಲಾಡಳಿತ ನದಿ ತೀರದ ಕೆಲ  ಗ್ರಾಮಸ್ಥರನ್ನು ಸ್ಥಳಾಂತರ ಮಾಡಿದ್ದು, ಇನ್ನೂ ಸ್ಥಳಾಂತರ ಮಾಡುವ ಕಾರ್ಯ ಮುಂದುವರೆಸಿದ್ದಾರೆ. ಖುದ್ದು ತಡರಾತ್ರಿ ಅಪರ ಜಿಲ್ಲಾಧಿಕಾರಿ ಪ್ರಕಾಶ್ ರಜಪೂತ್, ಸಹಾಯಕ ಆಯುಕ್ತ ಶಂಕರ ಗೌಡ ಸೋಮನಾಳ ಅವರ ತಂಡ ನದಿ ತೀರಕ್ಕೆ ತೆರಳಿ ಪ್ರವಾಹ ಸ್ಥಿತಿ ಎದುರಿಸುವ ಬಗ್ಗೆ ಸ್ಥಳ ಪರಿಶೀಲನೆ ಮಾಡಿದರು. ಜನರ ರಕ್ಷಣೆ ಮಾಡಲು ಜಿಲ್ಲೆಗೆ ಎನ್ ಡಿಆರ್ ಎಫ್ ಹಾಗೂ ಭಾರತೀಯ ಸೇನಾ ತಂಡ ಆಗಮಿಸಿದೆ.

ಈ ಬಗ್ಗೆ ನ್ಯೂಸ್ 18 ಕನ್ನಡಕ್ಕೆ ಸಹಾಯಕ ಆಯುಕ್ತ ಶಂಕರಗೌಡ ಸೋಮನಾಳ ಮಾತನಾಡಿ, ನದಿ ತೀರಕ್ಕೆ ತೆರಳಿ ಪರಿಶೀಲನೆ ಮಾಡುವ ಜೊತೆ ನದಿ ತೀರದ ಜನರ ಸ್ಥಳಾಂತರ ಮಾಡುವ ಕಾರ್ಯ ನಡೆದಿದ್ದು ಜಿಲ್ಲೆಗೆ ಮೂರು ಎನ್ ಡಿ ಆರ್ ಎಫ್ ಹಾಗೂ ಭಾರತೀಯ ಸೇನಾ ತಂಡ ಆಗಮಿಸಿವೆ.  ಜನರ ರಕ್ಷಣೆಗೆ ಬದ್ದರಾಗಿ ಕೆಲಸ ಮಾಡುತ್ತೇವೆ. ದಯವಿಟ್ಟು ಯಾರೂ ನದಿ ತೀರಕ್ಕೆ ಹೋಗದೆ ಜಾನುವಾರುಗಳ ಜೊತೆ ಸುರಕ್ಷತಾ ಸ್ಥಳಕ್ಕೆ ತೆರಳಬೇಕೆಂದು ತಿಳಿಸಿದ್ದಾರೆ.

ಇದನ್ನೂ ಓದಿ: ಮೂಡಿಗೆರೆಯಲ್ಲಿ ಕಾಡಾನೆ ಕಾಟಕ್ಕೆ ಬೇಸತ್ತ ರೈತರು; ಆನೆಗಳನ್ನು ಕಾಡಿಗಟ್ಟಲು ಅರಣ್ಯಾಧಿಕಾರಿಗಳ ಹರಸಾಹಸ

ಯಾದಗಿರಿ ಜಿಲ್ಲೆಯಲ್ಲಿ ಭೀಮಾ ನದಿ ಪ್ರವಾಹ ಪರಿಸ್ಥಿತಿ ಎದುರಿಸಲು ಹಾಗೂ ಪ್ರವಾಹದಲ್ಲಿ ಜನರು ಸಿಲುಕಿದ್ದರೆ ಜನರ ಜೀವ ರಕ್ಷಣೆ ಮಾಡಲು ಯಾದಗಿರಿ ಜಿಲ್ಲೆಗೆ ಭಾರತೀಯ ಸೇನಾ ತಂಡವು ಮೂರು ತಂಡದಲ್ಲಿ ಆಗಮಿಸಿದೆ. ಸಿಕಂದರಾಬಾದ್​ನಿಂದ 70 ಜನರ ಭಾರತೀಯ ಸೇನಾ ತಂಡವು ಯಾದಗಿರಿಗೆ ಆಗಮಿಸಿದೆ. ಇಂದು ಬೆಳಿಗ್ಗೆ ಭಾರತೀಯ ಸೇನಾ ತಂಡವು ನಾಯ್ಕಲ್ ಗ್ರಾಮ ಹಾಗೂ ಭೀಮಾ ನದಿ ತೀರಕ್ಕೆ ತೆರಳಿ ಪ್ರವಾಹ ಪರಿಸ್ಥಿತಿ ಎದುರಿಸುವ ಕಾರ್ಯಾಚರಣೆ ಹೇಗೆ ಮಾಡಬೇಕೆಂದು ಸೇನಾ ತಂಡದ ಜೊತೆ ಚರ್ಚೆ ನಡೆಸಲಾಗಿದೆ. 202 ಇಂಜಿನಿಯರ್ ರೆಜ್ಮೆಂಟ್ ಕ್ಯಾಪ್ಟನ್ ಪವಾನ್ ತಿವಾರಿ ತಂಡವು ತಮ್ಮ ತಂಡದೊಂದಿಗೆ ಭೀಮಾ ನದಿ ತೀರ ಪರಿಶೀಲನೆ ಮಾಡಿತು. ಬೋಟ್ ಹಾಗೂ ಅಗತ್ಯ ಸಿದ್ದತೆಯೊಂದಿಗೆ ಸೇನಾ ತಂಡ ಆಗಮಿಸಿದೆ. ಭಾರತೀಯ ಸೇನಾ ಜೊತೆ ಮೂರು ಎನ್ ಡಿ ಆರ್ ಎಫ್ ತಂಡವು ಜಿಲ್ಲೆಗೆ ಆಗಮಿಸಿದೆ.

ಈ ಬಗ್ಗೆ ನ್ಯೂಸ್ 18 ಕನ್ನಡಕ್ಕೆ ಭಾರತೀಯ ಸೇನಾ ತಂಡದ ಕ್ಯಾಪ್ಟನ್ ಪವಾನ್ ತಿವಾರಿ ಮಾತನಾಡಿ, ಜಿಲ್ಲೆಗೆ ಮೂರು ತಂಡಗಳು ಬಂದಿದ್ದು, ಪ್ರವಾಹ ಪರಿಸ್ಥಿತಿ ಎದುರಿಸುವ ಸ್ಥಳ ಪರಿಶೀಲನೆ ಮಾಡಿದ್ದೇವೆ. ನಾವು ನಮ್ಮ ಕರ್ತವ್ಯ ಪಾಲನೆ ಮಾಡುತ್ತೇವೆ ಎಂದರು. ಜೀವದ ಹಂಗು ತೊರೆದು ಗಡಿಯಲ್ಲಿ ದೇಶ ಕಾಯುವ ಹೆಮ್ಮೆಯ ಸೈನಿಕರು ಈಗ ಜನರ ಜೀವ ಉಳಿಸಲು ಯಾದಗಿರಿ ಜಿಲ್ಲೆಗೆ ಬಂದಿದ್ದಾರೆ. ಆದರೆ, ಜನರು ನದಿ ತೀರಕ್ಕೆ ಹೋಗದೆ ಸುರಕ್ಷಿತ ಸ್ಥಳಗಳಿಗೆ ತೆರಳಿ ತಮ್ಮ ಪ್ರಾಣವನ್ನು ತಾವೇ ರಕ್ಷಿಸಿಕೊಳ್ಳುವುದು ಕೂಡ ಅವಶ್ಯವಾಗಿದೆ.
Published by:Sushma Chakre
First published: