Operation Kaveri: ಸುಡಾನ್​ನಿಂದ ಬೆಂಗಳೂರಿಗೆ ಬಂದಿಳಿದ 362 ಮಂದಿ ಸಂತ್ರಸ್ತರು

ಆಪರೇಷನ್ ಕಾವೇರಿ

ಆಪರೇಷನ್ ಕಾವೇರಿ

ಸುಡಾನ್ ನಿಂದ ಬೆಂಗಳೂರಿಗೆ ಆಗಮಿಸಿದ ಅನಿವಾಸಿ ಕನ್ನಡಿಗ, ಬೆಂಗಳೂರಿನ‌ ಥಣಿಸಂದ್ರ ಮೂಲದ ಚಂದ್ರಶೇಖರ್, ಸುಡಾನ್ ನಲ್ಲಿ ನಡೆಯುತ್ತಿರುವ ಆಂತರಿಕ ಸಂಘರ್ಷದ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

  • Share this:

ಬೆಂಗಳೂರು: ಸುಡಾನ್ (Sudan)​ ದೇಶದಲ್ಲಿ ಆಂತರಿಕ ಯುದ್ಧದಲ್ಲಿ (War) ಸಿಲುಕಿ ಕಂಗಾಲಾಗಿದ್ದ ಕನ್ನಡಿಗರನ್ನು ವಾಪಸ್​​ ಆಪರೇಷನ್ ಕಾವೇರಿ (Operation Kaveri) ಮೂಲಕ ಕರೆತರಲಾಗುತ್ತಿದೆ. ಬೆಂಗಳೂರಿನ (Bengaluru) ಕೆಂಪೇಗೌಡ ಏರ್ಪೋರ್ಟ್​ (Kempegowda Airport)ಗೆ ಆಪರೇಷನ್​ ಕಾವೇರಿ 4ನೇ ಬ್ಯಾಚ್​ ಬಂದಿಳಿದಿದೆ. ಸುಡಾನ್ ಉದ್ವಿಗ್ನ ಪರಿಸ್ಥಿತಿಯಿಂದ ಭಾರತೀಯರನ್ನು (Indians) ಸೌದಿ ಅರೇಬಿಯಾದ (Saudi Arabia ) ಜೆದ್ದಾ ಶಿಬಿರದಲ್ಲಿ ಇರಿಸಲಾಗಿತ್ತು. ಇದೀಗ ಜೆದ್ದಾದಿಂದ ನಾಲ್ಕನೇ ಬ್ಯಾಚ್ ಅನ್ನು ಯಶಸ್ವಿಯಾಗಿ ಭಾರತ ಸರ್ಕಾರ ವಾಪಾಸ್ ಕರೆತಂದಿದೆ.


ಇಂದು 362 ಮಂದಿ ಬಂದಿಳಿದಿದ್ದು, ಈ ಪೈಕಿ 241 ಪುರುಷರು, 109 ಮಹಿಳೆಯರು, 12 ಮಕ್ಕಳು ಸೇರಿದ್ದಾರೆ. ಈ ಪೈಕಿ 114 ಮಂದಿ ಕನ್ನಡಗಿರನ್ನು ಸುಡಾನ್​ನಿಂದ ತಾಯ್ನಾಡಿಗೆ ವಾಪಸ್ ಆಗಿದ್ದಾರೆ.


ಇದನ್ನೂ ಓದಿ: Vote from Home: 80 ವರ್ಷ ಮೇಲ್ಪಟ್ಟವರಿಗೆ ಮನೆಯಲ್ಲೇ ಮತದಾನ; ನಾಳೆಯಿಂದ ಬ್ಯಾಲೆಟ್ ಪೇಪರ್ ವೋಟಿಂಗ್ ಶುರು


ರಾಜ್ಯದ ವಿವಿಧ ಜಿಲ್ಲೆಗಳಿಗೆ ಕೆಎಸ್​​ಆರ್​ಟಿಸಿ ಮೂಲಕ ಪ್ರಯಾಣದ ವ್ಯವಸ್ಥೆ ಮಾಡಲಾಗಿದೆ. ಈ ಮೂಲಕ ಆಪರೇಷನ್ ಕಾವೇರಿಯ 4ನೇ ಬ್ಯಾಚ್​ ಕಾರ್ಯಾಚರಣೆ ಯಶಸ್ವಿಯಾಗಿದೆ. ಈ ಮೊದಲು ಎರಡು ಬ್ಯಾಚ್ ದೆಹಲಿ ಹಾಗೂ ಮೂರನೇ ಬ್ಯಾಚ್ ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿಳಿದಿತ್ತು.




ಸುಡಾನ್ ನಿಂದ ಬೆಂಗಳೂರಿಗೆ ಆಗಮಿಸಿದ ಅನಿವಾಸಿ ಕನ್ನಡಿಗ, ಬೆಂಗಳೂರಿನ‌ ಥಣಿಸಂದ್ರ ಮೂಲದ ಚಂದ್ರಶೇಖರ್, ಸುಡಾನ್ ನಲ್ಲಿ ನಡೆಯುತ್ತಿರುವ ಆಂತರಿಕ ಸಂಘರ್ಷದ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ನಾವು ಇದ್ದ ಪಕ್ಕದ ಬಿಲ್ಡಿಂಗ್​ನಲ್ಲೇ ಬಾಂಬ್​ ದಾಳಿ ಆಗಿತ್ತು. ಯುದ್ಧದಲ್ಲಿ ಎಷ್ಟೋ ಜನ ಸಾವನ್ನಪ್ಪಿದ್ದಾರೆ.


ಸರ್ಕಾರ ನಮಗೆ ನೆರವು ನೀಡಿ ಅಲ್ಲಿಂದ ಕರೆಯಿಸಿಕೊಂಡಿದೆ. ಮೊದಲು ಕರೆಂಟ್ ಕಟ್ ಆಯ್ತು, ಆ ಬಳಿಕ ನೀರು ಕಟ್ ಆಯ್ತು. ಮತ್ತೆ ಹೋಗಿ ಬರುವ ದಾರಿಯನ್ನು ಕ್ಲೋಸ್ ಮಾಡಿದ್ದರು. ಅಲ್ಲಿನ ನಮ್ಮ ಸ್ಥಿತಿ ನೆನಪು ಮಾಡಿಕೊಂಡರೆ ಮತ್ತೆ ಅಲ್ಲಿಗೆ ಹೋಗೋದು ಬೇಡ, ನಮ್ಮ ದೇಶವೇ ಎಷ್ಟೋ ಚೆಂದ ಎನಿಸುತ್ತಿದೆ ಎಂದು ವಿವರಿಸಿದ್ದಾರೆ. ಚಂದ್ರಶೇಖರ್​​ಗೆ ಕುಟುಂಬಸ್ಥರು ಸಿಹಿ ತಿನ್ನಿಸಿ ಸ್ವಾಗತಕೋರಿದ್ದಾರೆ. ಅಲ್ಲದೆ, ಮತ್ತಷ್ಟು ಜನ ಅಲ್ಲೇ ಸಿಲುಕಿದ್ದು, ಪ್ರಯಾಣ ಮಾಡುವುದು ಕಷ್ಟಕರವಾಗಿದೆ ಎಂದು ಹೇಳಿದ್ದಾರೆ.

top videos
    First published: