IND vs SA: ಬೆಂಗಳೂರಲ್ಲಿ ಭಾರತ - ದಕ್ಷಿಣ ಆಫ್ರಿಕಾ ಮುಖಾಮುಖಿ, ಚಿನ್ನಸ್ವಾಮಿ ಸುತ್ತ ಸಂಚಾರ ನಿರ್ಬಂಧ

ನಾಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬರೋಬ್ಬರಿ ಎರಡು ವರ್ಷಗಳ ಬಳಿಕ ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯ ನಡೆಯುವ ಹಿನ್ನೆಲೆ ಚಿನ್ನಸ್ವಾಮಿ ಸ್ಟೇಡಿಎಂ ಸುತ್ತ ಮುತ್ತ ಸಂಚಾರ ನಿರ್ಬಂಧಿಸಲಾಗಿದೆ.

IND vs SA

IND vs SA

  • Share this:
ಭಾರತ ಮತ್ತು ದಕ್ಷಿಣ ಆಫ್ರಿಕಾ (IND vs SA) ನಡುವಿನ ಐದನೇ ಟಿ20 (5th T20) ಪಂದ್ಯವು ನಾಳೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (M Chinnaswamy Stadium) ನಡೆಯಲಿದೆ. ಈಗಾಗಲೇ ಟೂರ್ನಿಯಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ಈಗಾಗಲೇ 5 ಪಂದ್ಯಗಳ ಟೂರ್ನಿಯಲ್ಲಿ 2-2 ರ ಸಮಬಲ ಸಾಧಿಸಿದೆ. ಹೀಗಾಗಿ ನಾಳೆ ಬೆಂಗಳೂರಿನಲ್ಲಿ (Bengaluru) ನಡೆಯುವ ಪಂದ್ಯ ನಿರ್ಣಾಯಕವಾಗಿದ್ದು, ಕೊನೆಯ ಪಂದ್ಯದಲ್ಲಿ ಗೆಲ್ಲುವ ತಂಡ ಟ್ರೋಫಿಯನ್ನು ಗೆಲ್ಲಲಿದೆ. ಹೀಗಾಗಿ ನಾಳಿನ ಪಂದ್ಯದ ಮೇಲೆ ಹೆಚ್ಚಿನ ನಿರೀಕ್ಷೆಗಳಿವೆ. ಇನ್ನು, ನಾಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬರೋಬ್ಬರಿ ಎರಡು ವರ್ಷಗಳ ಬಳಿಕ ಅಂತರಾಷ್ಟ್ರೀಯ ಪಂದ್ಯ ನಡೆಯುವ ಹಿನ್ನೆಲೆ ಚಿನ್ನಸ್ವಾಮಿ ಸ್ಟೇಡಿಎಂ ಸುತ್ತ ಮುತ್ತ ಸಂಚಾರ ನಿರ್ಬಂಧಿಸಲಾಗಿದೆ. ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 12 ಗಂಟೆವರೆಗೂ ಸ್ಟೇಡಿಯಂ ಸುತ್ತ-ಮುತ್ತ ವಾಹನ ನಿಲುಗಡೆಗೆ ನಿಷೇಧಿಸಲಾಗುವುದೆಂದು ಪೊಲೀಸ್ ಆಯಕ್ತರಿಂದ ಆದೇಶ ಹೊರಡಿಸಲಾಗಿದೆ.

ನಾಳೆ ಎಲ್ಲೆಲ್ಲಿ ವಾಹನ‌ ನಿಲುಗಡೆಗೆ ನಿರ್ಬಂಧ?:

- ಕ್ವೀನ್ ರಸ್ತೆಯಲ್ಲಿ, ಬಾಳೇಕುಂದ್ರಿ ವೃತ್ತದಿಂದ ಕ್ವೀನ್ಸ್ ಸರ್ಕಲ್ ವರೆಗೆ ಎರಡೂ ಕಡೆಯಲ್ಲೂ ಪಾರ್ಕಿಂಗ್ ನಿಷೇಧ
- ಎಂಜಿ ರಸ್ತೆಯಲ್ಲಿ ಕ್ವೀನ್ಸ್ ವೃತ್ತದಿಂದ ಕಾವೇರಿ ಎಂಪೋರಿಯಂ ಜಂಕ್ಷನ್ ವರೆಗೂ ಎರಡೂ ಕಡೆ
- ಲಿಂಕ್ ರಸ್ತೆಯಲ್ಲಿ ಎಂಜಿ ರಸ್ತೆಯಿಂದ ಕಬ್ಬನ್ ರಸ್ತೆವರೆಗೆ
- ರಾಜಭವನ ರಸ್ತೆ, ಟಿ ಚೌಡಯ್ಯ ರಸ್ತೆ, ರೇಸ್ ಕೋರ್ಸ್ ರಸ್ತೆ
- ಸೆಂಟ್ರಲ್ ಸ್ಟ್ರೀಟ್, ಅನೀಲ್ ಕುಂಬ್ಳೆ ವೃತ್ತದಿಂದ ಶಿವಾಜಿ ನಗರ ಬಸ್ ನಿಲ್ದಾಣದವರೆಗೆ ರಸ್ತೆಯ ಎರಡೂ ಕಡೆ
- ಕಬ್ಬನ್ ರಸ್ತೆಯಲ್ಲಿ ಸಿಟಿಓ ವೃತ್ತದಿಂದ ಕಾಮರಾಜ ರಸ್ತೆ ಜಂಕ್ಷನ್‌ ವರೆಗೂ ನಿಷೇಧ
- ಕಬ್ಬನ್ ರಸ್ತೆಯಲ್ಲಿ ಕಾಮರಾಜ ರಸ್ತೆ ಜಂಕ್ಷನ್ ನಿಂದ ಡಿಕೆನ್ಸನ್ ರಸ್ತೆ ಜಂಕ್ಷನ್ ವರೆಗೆ (ಬಿಎಂಟಿಸಿ ವಾಹನಗಳನ್ನ ಹೊರತುಪಡಿಸಿ)
- ಸೆಂಟ್ ಮಾರ್ಕ್ಸ್ ರಸ್ತೆಯಲ್ಲಿ ಕ್ಯಾಶ್ ಫಾರ್ಮಸಿ ಜಂಕ್ಷನ್ ನಿಂದ ಅನೀಲ್ ಕುಂಬ್ಳೆ ವೃತ್ತದ ವರೆಗೆ
- ಮ್ಯೂಸಿಯಂ ರಸ್ತೆಯಲ್ಲಿ ಎಂಜಿ ರೋಡ್ ನಿಂದ ಸೆಂಟ್ ಮಾರ್ಕ್ಸ್ ರಸ್ತೆ ಹಾಗೂ ರೆಸಿಡೆನ್ಸಿ ರಸ್ತೆವರೆಗೆ
- ಕಸ್ತೂರ್ ಬಾ ರಸ್ತೆಯಲ್ಲಿ ಕ್ವೀನ್ಸ್ ರಸ್ತೆಯಿಂದ ಹಡ್ಸನ್ ಸರ್ಕಲ್ ವರೆಗೆ
- ಮಲ್ಯ ಆಸ್ಪತ್ರೆ ರಸ್ತೆಯಲ್ಲಿ ಸಿದ್ದಲಿಂಗಯ್ಯ ವೃತ್ತದಿಂದ ಆರ್ ಆರ್ ಎಮ್‌ಆರ್ ವೃತ್ತದ ವರೆಗೆ

ಇದನ್ನೂ ಓದಿ: Shah Rukh Khan: ಶಾರುಖ್ ಈಗ ಮಹಿಳಾ ಕ್ರಿಕೆಟ್ ತಂಡದ ಮಾಲೀಕ, ಕೆರಿಬಿಯನ್​ ಲೀಗ್​ಗೂ ಕಾಲಿಟ್ಟ SRK

- ಕಬ್ಬನ್ ಪಾರ್ಕ್ ಒಳಬಾಗದ ಪ್ರೆಸ್ ಕ್ಲಬ್ ಮುಂದೆ, ಬಾಲಭವನ ಫೌಂಟೇನ್ ರಸ್ತೆ
- ಲ್ಯಾವಲ್ಲಿ ರಸ್ತೆಯಲ್ಲಿ ಕ್ವೀನ್ ವೃತ್ತದಿಂದ ವಿಠಲ್ ಮಲ್ಯ ರಸ್ತೆ ಜಂಕ್ಷನ್‌ವರೆಗೆ ನಿಷೇಧ
- ವಿಠಲ್ ಮಲ್ಯ ರಸ್ತೆ, ಸಿದ್ದಲಿಂಗಯ್ಯ ವೃತ್ತದಿಂದ ಬಿಷಪ್ ಕಾಟನ್ ಬಾಲಕಿಯರ ಶಾಲೆವರೆಗೆ ಪಾರ್ಕಿಂಗ್ ನಿಷೇಧ ಹೊರಡಿಸಿ ಸಂಚಾರಿ ಪೊಲೀಸ್ ಆಯಕ್ತರಿಂದ ಆದೇಶ ಹೊರಡಿಸಿದ್ದಾರೆ.

ಎಲ್ಲೆಲ್ಲಿ ಪಾರ್ಕಿಂಗ್ ವ್ಯವಸ್ಥೆ:

ಇನ್ನು, ನಾಳಿನ ಭಾರತ ಮತ್ತು ಸೌತ್ ಆಫ್ರಿಕಾ ಪಂದ್ಯ ವೀಕ್ಷಿಸಲು ಬರುವ ಅಭಿಮಾನಿಗಳಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದ್ದು, ಪ್ರೇಕ್ಷಕರು ಸೆಂಟ್ ಜೋಸೆಫ್ ಇಂಡಿಯಾ ಸ್ಕೂಲ್ ಗ್ರೌಂಡ್, ಸೆಂಟ್ ಜೋಸೆಫ್ ಬಾಯ್ಸ್ ಸ್ಕೂಲ್ ಗ್ರೌಂಡ್ ಮತ್ತು ಯುಬಿ ಸಿಟಿ ಸುತ್ತಮುತ್ತ ಮತ್ತು ಶಿವಾಜಿ ನಗರ ಬಸ್ ಸ್ಟಾಂಡ್ ಮೊದಲನೇ ಮಹಡಿಯಲ್ಲಿ ವಾಹನ ನಿಲುಗಡೆಗೆ ಅವಕಾಶ ನೀಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Team India: ಧೋನಿ ನಂತರ ಆ ಸ್ಥಾನ ತುಂಬುವ ಆಟಗಾರ ಸಿಕ್ಕೇಬಿಟ್ಟ!

ಭಾರತ ಮತ್ತು ಆಫ್ರಿಕಾ ಸಂಭಾವ್ಯ ತಂಡ:

ಭಾರತ ತಂಡ: ಇಶಾನ್ ಕಿಶನ್, ರಿತುರಾಜ್ ಗಾಯಕ್ವಾಡ್/ವ್ಯಂಕಟೇಶ್ ಅಯ್ಯರ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಯುಜ್ವೇಂದ್ರ ಚಾಹಲ್/ರವಿ ಬಿಷ್ಣೋಯ್, ಅವೇಶ್ ಖಾನ್.

ದಕ್ಷಿಣ ಆಫ್ರಿಕಾ: ಕ್ವಿಂಟನ್ ಡಿ ಕಾಕ್, ಟೆಂಬಾ ಬವುಮಾ (ಸಿ), ಡ್ವೈನ್ ಪ್ರಿಟೋರಿಯಸ್, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಡೇವಿಡ್ ಮಿಲ್ಲರ್, ಟ್ರಿಸ್ಟಾನ್ ಸ್ಟಬ್ಸ್, ವೇಯ್ನ್ ಪಾರ್ನೆಲ್, ಕಗಿಸೊ ರಬಾಡ, ಅನ್ರಿಚ್ ನಾರ್ಟ್ಜೆ, ಲುಂಗಿ ಎನ್‌ಗಿಡಿ, ತಬ್ರೈಜ್ ಶಮ್ಸಿ.
Published by:shrikrishna bhat
First published: