ನವದೆಹಲಿ(ಡಿ.21): ಚೀನಾ, ಅಮೆರಿಕ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳಲ್ಲಿ ಕೊರೋನಾ ವೈರಸ್ (Coronavirus) ಪ್ರಕರಣಗಳು ದಿಢೀರ್ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಎಚ್ಚೆತ್ತುಕೊಂಡಿದೆ. ಕೋವಿಡ್ನ ಹೊಸ ಪ್ರಕರಣಗಳ ಜೀನೋಮ್ ಸೀಕ್ವೆನ್ಸಿಂಗ್ (Genome Sequencing) ಮಾಡುವಂತೆ ಸರ್ಕಾರವು ಎಲ್ಲಾ ರಾಜ್ಯಗಳಿಗೆ ಪತ್ರ ಬರೆದಿದೆ. ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ (Rajesh Bhushan) ಪರವಾಗಿ ಎನ್ಸಿಡಿಸಿ ಮತ್ತು ಐಸಿಎಂಆರ್ಗೆ ಪತ್ರ ಬರೆಯಲಾಗಿದೆ. ಆ ಪತ್ರದಲ್ಲಿ, ಕೊರೋನಾದ ಹೊಸ ರೂಪಾಂತರಗಳನ್ನು ಸಮಯಕ್ಕೆ ಗುರುತಿಸಲು ಜೀನೋಮ್ ಸೀಕ್ವೆನ್ಸಿಂಗ್ ಅಗತ್ಯ ಎಂದು ಅವರು ಹೇಳಿದ್ದಾರೆ.
ಪ್ರಸ್ತುತ ದೇಶದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾಗಿಲ್ಲ, ಸಾವಿನ ಸಂಖ್ಯೆಯೂ ಗಣನೀಯವಾಗಿ ಕಡಿಮೆಯಾಗಿದೆ ಎಂಬುವುದು ಉಲ್ಲೇಖನೀಯ. ಆದರೆ ಈ ವೈರಸ್ ಪ್ರಪಂಚದಾದ್ಯಂತ ಮತ್ತೆ ಹರಡುತ್ತಿರುವ ಕಾರಣ, ಅಂತಹ ಪರಿಸ್ಥಿತಿಯಲ್ಲಿ ಸರ್ಕಾರವೂ ನಿರ್ಲಕ್ಷ್ಯ ವಹಿಸಲು ಬಯಸುವುದಿಲ್ಲ. ಈ ನಡುವೆ ಕೊರೋನಾ ಪ್ರಕರಣಗಳ ಕುರಿತು ಕೇಂದ್ರ ಸರ್ಕಾರ ಬುಧವಾರ ಪರಿಶೀಲನಾ ಸಭೆಯನ್ನು ಕರೆದಿದೆ. ಜಪಾನ್, ಯುನೈಟೆಡ್ ಸ್ಟೇಟ್ಸ್, ಕೊರಿಯಾ, ಬ್ರೆಜಿಲ್ ಮತ್ತು ಚೀನಾದಲ್ಲಿ ಪ್ರಕರಣಗಳಲ್ಲಿ ಹಠಾತ್ ಹಡಚ್ಚಳವಾಗಿದೆ ಎಂಬುವುದು ಉಲ್ಲೇಖನೀಯ.
ಭಾರತದಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಸಂಖ್ಯೆ 3,490 ಕ್ಕೆ ಇಳಿಕೆ
ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 112 ಹೊಸ ಕೋವಿಡ್ -19 ಪ್ರಕರಣಗಳು ವರದಿಯಾಗುವುದರೊಂದಿಗೆ, ದೇಶದಲ್ಲಿ ಇದುವರೆಗೆ ಸೋಂಕಿತರ ಸಂಖ್ಯೆ 4,46,76,199 ಕ್ಕೆ ಏರಿಕೆಯಾಗಿದ್ದು, ಚಿಕಿತ್ಸೆಯಲ್ಲಿರುವ ರೋಗಿಗಳ ಸಂಖ್ಯೆ 3,490 ಕ್ಕೆ ಇಳಿದಿದೆ. . ಮಂಗಳವಾರ ಬೆಳಿಗ್ಗೆ 8 ಗಂಟೆಯವರೆಗೆ ಕೇಂದ್ರ ಆರೋಗ್ಯ ಸಚಿವಾಲಯ ನವೀಕರಿಸಿದ ಅಂಕಿಅಂಶಗಳ ಪ್ರಕಾರ, ಕಳೆದ 24 ಗಂಟೆಗಳಲ್ಲಿ ಸೋಂಕಿನಿಂದ ಇನ್ನೂ ಮೂರು ರೋಗಿಗಳು ಸಾವನ್ನಪ್ಪುವುದರೊಂದಿಗೆ ದೇಶದಲ್ಲಿ ಒಟ್ಟು ಸತ್ತವರ ಸಂಖ್ಯೆ 5,30,677 ಕ್ಕೆ ಏರಿದೆ. ಹೊಸ ಸಾವಿನ ಪ್ರಕರಣಗಳಲ್ಲಿ, ಕೇರಳದಲ್ಲಿ ಇಬ್ಬರು ಮತ್ತು ಮಹಾರಾಷ್ಟ್ರದಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: Life after COVID: ಕೊರೋನಾ ಬಳಿಕ ಟ್ರಿಪ್ ಹೋಗಲು ಈ ಸ್ಥಳಗಳೇ ಬೆಸ್ಟ್ ಅಂತಿದ್ದಾರೆ ಜನ!
ಸಚಿವಾಲಯದ ವೆಬ್ಸೈಟ್ ಪ್ರಕಾರ, ಚಿಕಿತ್ಸೆಯಲ್ಲಿರುವ ರೋಗಿಗಳ ಸಂಖ್ಯೆ ಒಟ್ಟು ಸೋಂಕಿನ ಪ್ರಕರಣಗಳಲ್ಲಿ ಶೇಕಡಾ 0.01 ರಷ್ಟಿದ್ದರೆ, ಕೋವಿಡ್ -19 ನಿಂದ ಚೇತರಿಸಿಕೊಳ್ಳುವ ಜನರ ಪ್ರಮಾಣವು ಶೇಕಡಾ 98.8 ಕ್ಕೆ ಏರಿದೆ. ಕಳೆದ 24 ಗಂಟೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಸಂಖ್ಯೆಯಲ್ಲಿ 69 ಇಳಿಕೆಯಾಗಿದೆ. ಅಂಕಿಅಂಶಗಳ ಪ್ರಕಾರ, ಕೋವಿಡ್ -19 ನಿಂದ ಚೇತರಿಸಿಕೊಳ್ಳುವವರ ಸಂಖ್ಯೆ 4,41,42,032 ಕ್ಕೆ ಏರಿದೆ, ಆದರೆ ಸಾವಿನ ಪ್ರಮಾಣವು ಶೇಕಡಾ 1.19 ರಷ್ಟಿದೆ. ಅದೇ ಸಮಯದಲ್ಲಿ, ರಾಷ್ಟ್ರವ್ಯಾಪಿ ಕೋವಿಡ್-19 ವಿರೋಧಿ ಲಸಿಕೆ ಅಭಿಯಾನದ ಅಡಿಯಲ್ಲಿ, ಇದುವರೆಗೆ 220 ಕೋಟಿ ಡೋಸ್ಗಳನ್ನು ನೀಡಲಾಗಿದೆ.
ಗಮನಾರ್ಹವಾಗಿ, ಆಗಸ್ಟ್ 7, 2020 ರಂದು, ಭಾರತದಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ 20 ಲಕ್ಷ ದಾಟಿದೆ, ಆಗಸ್ಟ್ 23, 2020 ರಂದು 30 ಲಕ್ಷ ಮತ್ತು ಸೆಪ್ಟೆಂಬರ್ 5, 2020 ರಂದು 40 ಲಕ್ಷಕ್ಕೂ ಹೆಚ್ಚು. ಸೋಂಕಿನ ಒಟ್ಟು ಪ್ರಕರಣಗಳು 16 ಸೆಪ್ಟೆಂಬರ್ 2020 ರಂದು 50 ಲಕ್ಷ, 28 ಸೆಪ್ಟೆಂಬರ್ 2020 ರಂದು 60 ಲಕ್ಷ, 11 ಅಕ್ಟೋಬರ್ 2020 ರಂದು 70 ಲಕ್ಷ, 29 ಅಕ್ಟೋಬರ್ 2020 ರಂದು 80 ಲಕ್ಷ ಮತ್ತು ನವೆಂಬರ್ 20 ರಂದು 90 ಲಕ್ಷವನ್ನು ದಾಟಿದೆ.
ಇದನ್ನೂ ಓದಿ: Coronavirus: ಹಿರಿಯರಲ್ಲಿ ಹೆಚ್ಚಾಗ್ತಿದೆ ಕೊರೋನಾ ಸೋಂಕು, ಹೊರಗೆ ಹೋಗದಂತೆ ತಜ್ಞರ ಎಚ್ಚರಿಕೆ
19 ಡಿಸೆಂಬರ್ 2020 ರಂದು, ಈ ಪ್ರಕರಣಗಳು ದೇಶದಲ್ಲಿ ಒಂದು ಕೋಟಿ ದಾಟಿದ್ದವು. ಕಳೆದ ವರ್ಷ ಮೇ 4 ರಂದು ಸೋಂಕಿತರ ಸಂಖ್ಯೆ ಎರಡು ಕೋಟಿ ದಾಟಿತ್ತು ಮತ್ತು ಜೂನ್ 23, 2021 ರಂದು ಮೂರು ಕೋಟಿ ದಾಟಿತ್ತು. ಈ ವರ್ಷದ ಜನವರಿ 25 ರಂದು ಒಟ್ಟು ಸೋಂಕಿತರ ಸಂಖ್ಯೆ ನಾಲ್ಕು ಕೋಟಿ ದಾಟಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ