ಬೆಂಗಳೂರಿನಲ್ಲಿ ಹಾಡಹಗಲೇ ಯುವಕನಿಗೆ ಚಾಕು ಇರಿದ ದುಷ್ಕರ್ಮಿಗಳು

ಹಲ್ಲೆಗೆ ಇನ್ನೂ ನಿಖರ ಕಾರಣ ತಿಳಿದು ಬಂದಿಲ್ಲ. ಕಲಾಸಿಪಾಳ್ಯ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ತನಿಖೆ ನಂತರ ಸಂಪೂರ್ಣವಾದ ವಿವರ ಸಿಗಲಿದೆ-ಡಿಸಿಪಿ ರಮೇಶ್ ಬಾನೋತ್

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

 • Share this:
  ಬೆಂಗಳೂರು(ಡಿ.22): ಟೌನ್ ಹಾಲ್ ಬಳಿ ಜನಜಾಗೃತಿ ಕಾರ್ಯಕ್ರಮ ಮುಗಿಸಿ ಹೊರಟ ಇಂಡಿಯಾ ಫಾರ್ ಸಿಎಎ ಕಾರ್ಯಕರ್ತನಿಗೆ ಚಾಕು ಇರಿದಿರುವ ಘಟನೆ ಬೆಂಗಳೂರಿನ ಜೆಸಿ ರಸ್ತೆಯಲ್ಲಿ ನಡೆದಿದೆ. 

  ವರುಣ್ ಎಂಬಾತನಿಗೆ ದುಷ್ಕರ್ಮಿಗಳು ಚಾಕುವಿನಿಂದ ಇರಿದಿದ್ದಾರೆ. ವರುಣ್​​ ಬೈಕ್​​​ನಲ್ಲಿ ತೆರಳುವಾಗ ದುಷ್ಕರ್ಮಿಗಳು ಅಡ್ಡಗಟ್ಟಿ ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.  ಕೂಡಲೇ ಸ್ಥಳೀಯರು ಗಾಯಾಳು ವರುಣ್​ನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ದುಷ್ಕರ್ಮಿಗಳು ವರುಣ್ ತಲೆ ಭಾಗ ಹಾಗೂ ಬೆನ್ನಿಗೆ ಇರಿದಿದ್ದಾರೆ ಎನ್ನಲಾಗಿದೆ.

  ಮುಟ್ಟಾಳ ಕಾಂಗ್ರೆಸ್​​​ ಹಾಗೂ ಮಮತಾ ಬ್ಯಾನರ್ಜಿಯ ಪ್ರಚೋದನೆಗೆ ಒಳಗಾಗಬೇಡಿ; ಸಚಿವ ಪ್ರಹ್ಲಾದ್​ ಜೋಶಿ ಕರೆ

  ವಿಕ್ಟೋರಿಯಾ ಆಸ್ಪತ್ರೆಗೆ ಸಂಸದ ತೇಜಸ್ವಿ ಸೂರ್ಯ, ಪಶ್ಚಿಮ ವಿಭಾಗದ ಡಿಸಿಪಿ ರಮೇಶ್ ಬಾನೋತ್ ತೆರಳಿದ್ದಾರೆ. ಘಟನೆ ಬಗ್ಗೆ ತೇಜಸ್ವಿ ಸೂರ್ಯ ಮತ್ತು ಡಿಸಿಪಿ ವರುಣ್​​ನಿಂದ  ಮಾಹಿತಿ ಪಡೆದಿದ್ದಾರೆ ಎಂದು ತಿಳಿದು ಬಂದಿದೆ. ವರುಣ್​ ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

  ಹಲ್ಲೆಗೊಳಗಾದ ವ್ಯಕ್ತಿ ವರುಣ್​


  ಈ ಬಗ್ಗೆ ಮಾಹಿತಿ ನೀಡಿರುವ ಡಿಸಿಪಿ ರಮೇಶ್ ಬಾನೋತ್, "ಜೆಸಿ ರಸ್ತೆಯಲ್ಲಿ ವರುಣ್ ಎಂಬಾತನಿಗೆ ಚಾಕುವಿನಿಂದ ಇರಿತವಾಗಿದೆ. ಸದ್ಯ ಪ್ರಾಥಮಿಕ ಚಿಕಿತ್ಸೆಗೆ ಒಳಪಡಿಸಲಾಗಿದೆ. ಬೌನ್ಸ್ ಬೈಕ್​​ನಲ್ಲಿ ತೆರಳುತ್ತಿದ್ದ ವ್ಯಕ್ತಿಗೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ಹಿಂಬದಿಯಿಂದ ಎರಡು ಬೈಕ್ ನಲ್ಲಿ ಬಂದಿದ್ದ ದುಷ್ಕರ್ಮಿಗಳು ಹಲ್ಲೆ ಮಾಡಿದ್ದಾರೆ. ಐದರಿಂದ ಆರು ಜನ ದುಷ್ಕರ್ಮಿಗಳು ಕೃತ್ಯ ಎಸಗಿದ್ದಾರೆ. ಹಲ್ಲೆಗೆ ಇನ್ನೂ ನಿಖರ ಕಾರಣ ತಿಳಿದು ಬಂದಿಲ್ಲ. ಕಲಾಸಿಪಾಳ್ಯ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ತನಿಖೆ ನಂತರ ಸಂಪೂರ್ಣವಾದ ವಿವರ ಸಿಗಲಿದೆ" ಎಂದು ಹೇಳಿದ್ಧಾರೆ.

  ‘ಸಿಎಎ’ ಜಾರಿಗೆ ಬಂದದ್ದು ತಪ್ಪು ಎಂಬ ಜನರನ್ನು ದೂರವಿಡಿ; ಪ್ರಧಾನಿ ನರೇಂದ್ರ ಮೋದಿ ಕರೆ
  Published by:Latha CG
  First published: