COVID-19 ವೇಳೆ ಶಾಲೆಯಿಂದ ದೂರ ಉಳಿದ ಮಕ್ಕಳು: ಭಾರತದ ಮುಂದಿದೆ ವಿದ್ಯಾರ್ಥಿಗಳನ್ನು ಶೈಕ್ಷಣಿಕ ಹಿಂಜರಿತದಿಂದ ಹೊರತರುವ ಸವಾಲು!

ಕಳೆದ ವರ್ಷ ಮಕ್ಕಳು ಶಿಕ್ಷಣ ಪಡೆಯದೇ ಇರುವುದರಿಂದ ಪ್ರಸಕ್ತ ಸಾಲಿನಲ್ಲಿ ಶಿಕ್ಷಕರಿಗೆ ಹೆಚ್ಚಿನ ಸವಾಲುಗಳಿವೆ. ಮಕ್ಕಳು ಮರೆತು ಹೋದ ವಿಷಯಗಳನ್ನು ನೆನಪಿಸಬೇಕು. ಹಾಜರಾತಿ ಸಂಖ್ಯೆ ಹೆಚ್ಚಿಸಬೇಕು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಭಾರತದಲ್ಲಿ 260 ಮಿಲಿಯನ್‌ಗಿಂತ ಹೆಚ್ಚು ಶಾಲಾ ಮಕ್ಕಳಿದ್ದಾರೆ. ಕಳೆದ 2020ರ ಮಾರ್ಚ್‌ ತಿಂಗಳಿನಿಂದ ಮಕ್ಕಳು ಶಾಲೆಗೆ ಹೋಗದಂತೆ ಆಗಿದೆ. ಆದರೆ, ಇತ್ತೀಚೆಗೆ ಕೆಲವು ರಾಜ್ಯಗಳಲ್ಲಿ ಮಾತ್ರ ಪ್ರೌಢ ಶಾಲಾ ಮಕ್ಕಳಿಗೆ ಮಾತ್ರ ಶಾಲೆ ತೆರೆದಿದೆ. ಆದರೆ, ಕಳೆದು ಹೋದ ಒಂದು ವರ್ಷದ ಅವಧಿಯಲ್ಲಿ ಮಕ್ಕಳಿಗೆ ಆನ್‌ಲೈನ್‌ ಶಿಕ್ಷಣ ಮತ್ತು ವಿದ್ಯಾಗಮ ಯೋಜನೆ ಮೂಲಕ ಮಕ್ಕಳು ಇರುವ ಸ್ಥಳದಲ್ಲಿಯೇ ಶಿಕ್ಷಣ ನೀಡಿದರೂ ಇದು ಪ್ರಯೋಜನಕಾರಿ ಆಗಿಲ್ಲ. ಆದರೆ, ಮುಚ್ಚಿದ ಶಾಲೆಗಳನ್ನು ತೆರೆಯುವಲ್ಲಿ ಇನ್ನು ಪ್ರಯತ್ನಗಳು ನಡೆಯುತ್ತಿವೆ. ಇನ್ನು, ಮಹಾಮಾರಿ ಕೊರೋನಾ ವೇಳೆ ಶಾಲೆಗಳನ್ನು ಮುಚ್ಚಿದರಿಂದಾಗಿ ಆನ್‌ಲೈನ್‌ ಶಿಕ್ಷಣಕ್ಕೆ ಸರ್ಕಾರ ಮುಂದಾಯಿತು. ಆವರಣದಲ್ಲಿ ಆಟ-ಪಾಠಗಳ ಜೊತೆಗೆ ಕಲಿಕೆ ಮಾಡುತ್ತಿದ್ದ ಮಕ್ಕಳಿಗೆ ಆನ್‌ಲೈನ್‌ ಕ್ಲಾಸಿಗೆ ಹೊಂದಿಕೊಳ್ಳಲು ಕಷ್ಟವಾಯಿತು. ಹಾಗಾಗಿ ಆನ್‌ಲೈನ್‌ ಕ್ಲಾಸ್‌ ಯಶಸ್ವಿ ಆಗಲಿಲ್ಲ. ಆನ್‌ಲೈನ್‌ ಶಿಕ್ಷಣ ಪಡೆಯಲು ಹೆಚ್ಚಿನ ಮಕ್ಕಳಿಗೆ ಸಾಧ್ಯ ಆಗದೇ ಇರುವುದರಿಂದ ವಿದ್ಯಾಗಮ ಯೋಜನೆ ಮೂಲಕ ಮಕ್ಕಳು ಇರುವ ಕಡೆಗಳಲ್ಲಿ ತೆರಳಿ ವಟಾರ (ಓಣಿ) ಶಾಲೆ ಆರಂಭಿಸಲಾಯಿತು. ಮಕ್ಕಳು ಇರುವ ಸ್ಥಳದಲ್ಲಿಯೇ ಹೋಗಿ ಶಿಕ್ಷಕರು ಪಾಠ ಮಾಡುತ್ತಿರುವುದರಿಂದ ಹೆಚ್ಚಿನ ಮಕ್ಕಳು ವಿದ್ಯಾಗಮ ಯೋಜನೆ ಮೂಲಕ ಶಿಕ್ಷಣ ಪಡೆದುಕೊಳ್ಳಲು ಶಕ್ತರಾದರು.

    ಆದರೆ, ಸಾಮಾನ್ಯ ದಿನದಲ್ಲಿ 6ರಿಂದ 8 ಗಂಟೆಗಳ ವರೆಗೆ ಶಾಲೆಗಳು ತೆರೆದಿರುತ್ತವೆ. ವಿದ್ಯಾಗಮ ಯೋಜನೆಯಲ್ಲಿ ವಾರಕ್ಕೆ 4-6 ಗಂಟೆಗಳಿಗಿಂತ ಹೆಚ್ಚು ಮಕ್ಕಳಿಗೆ ಶಿಕ್ಷಣ ನೀಡಲು ಸಾಧ್ಯವಾಗಲಿಲ್ಲ. ಮಾರ್ಚ್‌ ತಿಂಗಳು ಶಾಲೆ ಬಾಗಿಲು ಮುಚ್ಚಿದರೂ ಸರ್ಕಾರ ಮಾತ್ರ ನವೆಂಬರ್‌ ಮತ್ತು ಡಿಸೆಂಬರ್‌ ತಿಂಗಳಿನಲ್ಲಿ ವಿದ್ಯಾಗಮ ಯೋಜನೆ ಆರಂಭಿಸಿತು. ಇದರಿಂದಾಗಿ ಶಿಕ್ಷಣದ ಬಗ್ಗೆ ಮಕ್ಕಳಿಗೆ ಇದ್ದ ಆಸಕ್ತಿ ಕಡಿಮೆ ಆಗಿತ್ತು. ವಿದ್ಯಾಗಮ ಯೋಜನೆ ಶಿಕ್ಷಣ ಕೂಡ ಮಕ್ಕಳಿಗೆ ಪರಿಣಾಮಕಾರಿ ಆಗಲಿಲ್ಲ.

    ವರ್ಷಗಟ್ಟಲೇ ಶಿಕ್ಷಣ ಇಲ್ಲದಿದ್ದರೇ ಮಕ್ಕಳಿಗೆ ಶೈಕ್ಷಣಿಕ ತೊಂದರೆ!

    ವರ್ಷಗಟ್ಟಲೇ ಮಕ್ಕಳು ಶಾಲೆ ಮುಖ ನೋಡದೇ ಇರುವುದರಿಂದ ಮಕ್ಕಳಿಗೆ ಶಿಕ್ಷಣದ ಬಗ್ಗೆ ಇರುವ ಆಸಕ್ತಿ ಕಡಿಮೆ ಆಯಿತು. ಇನ್ನು, ನಾಲ್ಕನೇ ತರಗತಿ ಓದುತ್ತಿರುವ ವಿದ್ಯಾರ್ಥಿಯೂ ಆ ವರ್ಷದಲ್ಲಿ ಯಾವುದೇ ಶಿಕ್ಷಣ ಪಡೆಯದೇ ಇದ್ದರೇ ಆ ವಿದ್ಯಾರ್ಥಿಯೂ ನಾಲ್ಕನೇ ತರಗತಿಯ ಪಠ್ಯಗಳನ್ನು ಅಭ್ಯಾಸ ಮಾಡಲು ಮತ್ತು ನಾಲ್ಕನೇ ತರಗತಿಯ ಶಿಕ್ಷಣ ಪಡೆಯಲು ವಿಫಲನ್ನಾಗುತ್ತಾನೆ.

    ಸಂಶೋಧನೆಯಲ್ಲಿ ಬಯಲಾಯ್ತು ಮಕ್ಕಳ ಸಮಸ್ಯೆ

    ಇನ್ನು, ಕೊರೋನಾ ಸೋಂಕಿನ ಹಿನ್ನೆಲೆ ಶಾಲಾ ಮುಚ್ಚಿದರಿಂದಾಗಿ ಮಕ್ಕಳ ಮೇಲಾದ ಪರಿಣಾಮವನ್ನು ಅಧ್ಯಯನ ಮಾಡಲು ದೇಶದ 44 ಜಿಲ್ಲೆಗಳಲ್ಲಿ ಸಂಶೋಧನಾ ಅಧ್ಯಯನ ನಡೆಸಲಾಯಿತು. 2020ರ ಮಾರ್ಚ್‌ರಲ್ಲಿ ಮಕ್ಕಳು ಕಲಿತಿರುವುದನ್ನು ಮೌಲ್ಯಮಾಪನ ಮಾಡಲು 2,000ಕ್ಕೂ ಹೆಚ್ಚು ಶಿಕ್ಷಕರು ಮತ್ತು 400 ಸದಸ್ಯರ ತಂಡವೊಂದು ಸೇರಿ 16,067 ಮಕ್ಕಳ ಮೌಲ್ಯಮಾಪನ ನಡೆಸಲಾಯಿತು. ಈ ವೇಳೆ 82 ಪ್ರತಿಶತದಷ್ಟು ಮಕ್ಕಳು ಗಣಿತ ವಿಷಯದ ಸೂತ್ರಗಳನ್ನು ಮರೆತಿದ್ದಾರೆ ಎಂಬ ಆತಂಕಕಾರಿ ವಿಷಯ ತಿಳಿದುಬಂತು. 92 ಪ್ರತಿಶತದಷ್ಟು ಮಕ್ಕಳು ಭಾಷೆಯಲ್ಲಿನ ಪ್ಯಾರಾಗ್ರಾಫ್ ಓದುವ ಸಾಮರ್ಥ್ಯ ಕಳೆದುಕೊಂಡಿದ್ದರು.

    ಶಿಕ್ಷಕರ ಮುಂದಿವೆ ಹಲವು ಸವಾಲು!

    ಕಳೆದ ವರ್ಷ ಮಕ್ಕಳು ಶಿಕ್ಷಣ ಪಡೆಯದೇ ಇರುವುದರಿಂದ ಪ್ರಸಕ್ತ ಸಾಲಿನಲ್ಲಿ ಶಿಕ್ಷಕರಿಗೆ ಹೆಚ್ಚಿನ ಸವಾಲುಗಳಿವೆ. ಮಕ್ಕಳು ಮರೆತು ಹೋದ ವಿಷಯಗಳನ್ನು ನೆನಪಿಸಬೇಕು. ಹಾಜರಾತಿ ಸಂಖ್ಯೆ ಹೆಚ್ಚಿಸಬೇಕು. ಇನ್ನು, ಈ ಬಾರಿ ಮಕ್ಕಳಿಗೆ ಬೇಸಿಗೆ ರಜೆಯೂ ಸಿಗುವುದಿಲ್ಲ. ಸದ್ಯದ ಪರಿಸ್ಥಿತಿಗೆ ವಿದ್ಯಾರ್ಥಿ ಮತ್ತು ಶಿಕ್ಷಕರು ಹೊಂದಿಕ್ಕೊಂಡು ಕಲಿಕೆ ನಡೆಸಬೇಕಾಗಿದೆ. ಈ ವರ್ಷ ಮಕ್ಕಳಿಗೆ ಹೆಚ್ಚಿನ ಪಠ್ಯವನ್ನು ನೀಡದೆ ಕಡಿತಗೊಳಿಸಲಾಗಿತ್ತು. ಈ ವರ್ಷದ ಕೆಲವು ಪಠ್ಯವನ್ನು ಮುಂದಿನ ವರ್ಷಕ್ಕೆ ಸೇರಿಸಿಕೊಳ್ಳಲಾಗುತ್ತದೆ. ಕೊರೋನಾ ಸೋಂಕಿನಿಂದಾಗಿ ಮಕ್ಕಳ ಭವಿಷ್ಯಕ್ಕೆ ತೊಂದರೆ ಆಗಿದ್ದು, ಮಕ್ಕಳ ಭವಿಷ್ಯವನ್ನು ಎಂದಿನಂತೆ ರೂಪಿಸಬೇಕಾದ ಅನಿವಾರ್ಯತೆ ಶಿಕ್ಷಕರ ಮೇಲಿದೆ.

    -ಅನುರಾಗ್​ ಬೆಹರಾ, ಅಜ್ಮೀಂ ಪ್ರೇಮ್​ಜೀ ಫೌಂಡೇಷನ್​ ಸಿಇಒ
    Published by:Seema R
    First published: