Goa: ಮಮತಾ ಬ್ಯಾನರ್ಜಿ ಹೊಗಳಿದ ಗೋವಾ ಶಾಸಕ; ದೇಶದ ಸಣ್ಣ- ಪುಟ್ಟ ರಾಜ್ಯಗಳತ್ತ ಟಿಎಂಸಿ ಚಿತ್ತ

ನಾನು ಟಿಎಂಸಿಯನ್ನು ಬೆಂಬಲಿಸುತ್ತಿದ್ದೇನೆ. ಪಶ್ಚಿಮ ಬಂಗಾಳದಲ್ಲಿ ಮಮತಾ ದೀದಿ ಬಿಜೆಪಿ ವಿರುದ್ಧ ಹೇಗೆ ಹೋರಾಡಿದರು ಎಂಬುದನ್ನು ನಾವು ನೋಡಿದ್ದೇವೆ. ಅವರು ಮಹಿಳಾ ಸಬಲೀಕರಣವನ್ನು ಪ್ರತಿಬಿಂಬಿಸುತ್ತಾರೆ ಎಂದು ಗಾಂವ್ಕರ್ ಹೇಳಿದರು.

ಮಮತಾ ಬ್ಯಾನರ್ಜಿ

ಮಮತಾ ಬ್ಯಾನರ್ಜಿ

 • Share this:
  Goa: ಗೋವಾದ ಪಕ್ಷೇತರ ಶಾಸಕ ಪ್ರಸಾದ್ ಗಾಂವ್ಕರ್ (Prasad Gaonkar) ಬುಧವಾರ ಮಾಧ್ಯಮಗಳ ಎದುರು ಮಾತನಾಡುತ್ತಾ, ತೃಣಮೂಲ ಕಾಂಗ್ರೆಸ್ ಪಕ್ಷವನ್ನು (ಟಿಎಂಸಿ) ಶ್ಲಾಘಿಸಿದರು ಮತ್ತು ಪಶ್ಚಿಮ ಬಂಗಾಳ (West Bengal) ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಹೋರಾಡಿದ ಧೀರ ಹಾಗೂ ಅತ್ಯಂತ ಚಾಣಾಕ್ಷ ಮಹಿಳೆ ಮಮತಾ ಬ್ಯಾನರ್ಜಿ Mamata Banerjee   ಹೇಳಿದರು.

  ಟಿಎಂಸಿ ಸಂಸದ ಡೆರೆಕ್ ಒ'ಬ್ರೇನ್ ಸಮ್ಮುಖದಲ್ಲಿ ಗೋವಾದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಗಾಂವ್ಕರ್, ಸದ್ಯಕ್ಕೆ ತಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.


  "ಗೋವಾಕ್ಕೆ ಬದಲಾವಣೆಯ ಅಗತ್ಯವಿದೆ ಮತ್ತು ಅದಕ್ಕಾಗಿಯೇ ನಾನು ಮಮತಾ ಬ್ಯಾನರ್ಜಿ ನೇತೃತ್ವದ ಪಕ್ಷವನ್ನು ಬೆಂಬಲಿಸಲು ನಿರ್ಧರಿಸಿದ್ದೇನೆ" ಎಂದು ಸಂಗುಯೆಮ್ (Sanguem) ಎಂಎಲ್‌ಎ ಹೇಳಿದರು.

  ಮುಂದಿನ ಫೆಬ್ರವರಿಯಲ್ಲಿ ಗೋವಾದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಎಂಸಿ ನಿರ್ಧರಿಸಿದೆ.


  ಗಾಂವ್ಕರ್ ಆರಂಭದಲ್ಲಿ 2017 ರ ಚುನಾವಣೆಯ ನಂತರ ಅಧಿಕಾರಕ್ಕೆ ಬಂದ ಬಿಜೆಪಿ ಮನೋಹರ್ ಪರಿಕ್ಕರ್ (Manohar Parrikar) ನೇತೃತ್ವದ ಸರ್ಕಾರವನ್ನು ಬೆಂಬಲಿಸಿದ್ದರು, ನಂತರ ಅವರು ತಮ್ಮ ಬೆಂಬಲವನ್ನು ಹಿಂತೆಗೆದುಕೊಂಡರು.


  Also read: Uttar Pradesh: ಫ್ಲೆಕ್ಸ್​ನಲ್ಲಿ ಸೋನಿಯಾ ಗಾಂಧಿ ಜೊತೆ ಕಾಣಿಸಿಕೊಂಡ ವರುಣ್ ಗಾಂಧಿ: ಸ್ಪಷ್ಟನೆ ಕೇಳಿದ ಕಾಂಗ್ರೆಸ್

  ಕಳೆದ ಐದು ವರ್ಷಗಳಲ್ಲಿ ಗೋವಾದಲ್ಲಿ ನಾವು ನೋಡಿದ್ದು ಬಿಜೆಪಿಯ ಜನವಿರೋಧಿ ನೀತಿಗಳನ್ನು ಮಾತ್ರ . ನಮ್ಮ ಪುಟ್ಟ ರಾಜ್ಯದ ಜನರು ಎಲ್ಲಾ ರೀತಿಯಿಂದಲೂ ಶೋಷಣೆಗೆ ಒಳಗಾಗುತ್ತಿದ್ದಾರೆ. ಈ ಸರ್ಕಾರದ ಅಡಿಯಲ್ಲಿ ಜನರು ಬಳಲುತ್ತಿದ್ದಾರೆ ಎಂದು ಅವರು ಕಿಡಿಕಾರಿದರು ಮತ್ತು ದೇಶವು "ಮಮತಾ ಬ್ಯಾನರ್ಜಿ ಅವರ ಸ್ವರೂಪದಲ್ಲೇ ಧನಾತ್ಮಕ ಬದಲಾವಣೆಗಾಗಿ ಎದುರು ನೋಡುತ್ತಿದೆ’’ ಎಂದು ಹೇಳಿದರು.


  ನಾನು ಟಿಎಂಸಿಯನ್ನು ಬೆಂಬಲಿಸುತ್ತಿದ್ದೇನೆ. ಪಶ್ಚಿಮ ಬಂಗಾಳದಲ್ಲಿ ಮಮತಾ ದೀದಿ ಬಿಜೆಪಿ ವಿರುದ್ಧ ಹೇಗೆ ಹೋರಾಡಿದರು ಎಂಬುದನ್ನು ನಾವು ನೋಡಿದ್ದೇವೆ. ಅವರು ಮಹಿಳಾ ಸಬಲೀಕರಣವನ್ನು ಪ್ರತಿಬಿಂಬಿಸುತ್ತಾರೆ ಎಂದು ಗಾಂವ್ಕರ್ ಹೇಳಿದರು.


  Also read: Lakhimpur Kheri Massacre: ಯೂತ್ ಕಾಂಗ್ರೆಸ್ಸಿನಿಂದ ದೆಹಲಿಯಲ್ಲಿ ಪಂಜಿನ ಮೆರವಣಿಗೆ, ಕೇಂದ್ರ ಸಚಿವರ ವಜಾಕ್ಕೆ ಆಗ್ರಹ

  ಗೋವಾದ ಮಾಜಿ ಮುಖ್ಯಮಂತ್ರಿ (Former Goa chief ministe) ಮತ್ತು ಕಾಂಗ್ರೆಸ್ ಶಾಸಕ Luizinho Faleiro ಇತ್ತೀಚೆಗೆ ಟಿಎಂಸಿಗೆ ಸೇರಿಕೊಂಡರು. ತ್ರಿಪುರಾ ರಾಜ್ಯದ ಮೇಲೂ ಕಣ್ಣಿಟ್ಟಿರುವ ಮಮತಾ ಬ್ಯಾನರ್ಜಿ ದೇಶದಲ್ಲಿ ಮುಂಬರುವ ಎಲ್ಲಾ ವಿಧಾನಸಭಾ ಚುನಾವಣೆಗಳ ಮೇಲೂ ಗಮನ ಹರಿಸುತ್ತಿದ್ದಾರೆ.

  ಅಲ್ಲದೇ, ಮುಂದಿನ ಪ್ರಧಾನಿ ಹುದ್ದೆಯ ಮೇಲೂ ಕಣ್ಣಿಟ್ಟಿರುವ ಮಮತಾ ಬಿಜೆಪಿಯ ವಿರುದ್ದ ಎಲ್ಲಾ ವಿರೋಧ ಪಕ್ಷಗಳನ್ನು ಕಟ್ಟಿಕೊಂಡು ಮುನ್ನಡೆಯುವ ಒಂದು ಮುನ್ಸೂಚನೆ ಕಾಣಿಸುತ್ತಿದೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ವಿರುದ್ದ ಅಭೂತಪೂರ್ವ ಗೆಲುವು ದಾಖಲಿಸಿದ ಮಮತಾ ಇಡೀ ದೇಶದ ಗಮನ ಸೆಳೆದಿದ್ದರು.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಅನಗತ್ಯವಾಗಿ ಯಾರೂ ಮನೆಯಿಂದ ಹೊರಗೆ ಬಾರದೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಿದೆ. ಹಾಗೂ ಗುಂಪುಗೂಡುವುದನ್ನು ಆದಷ್ಟು ನಿಯಂತ್ರಿಸಬೇಕಿದೆ. ಸರ್ಕಾರ ಕಾಲಕಾಲಕ್ಕೆ ಹೊರಡಿಸುತ್ತಿರುವ ಕೊರೋನಾ ಮಾರ್ಗಸೂಚಿಗಳನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲಿಸಬೇಕಿದೆ.
  Published by:HR Ramesh
  First published: