ವಿಜಯನಗರಕ್ಕಾಗಿ ಕೈ-ಕಮಲ ನಾಯಕರ ಮತಬೇಟೆ; ಪ್ರಚಾರಕ್ಕೆ ಬಿಜೆಪಿ ಬಂಡಾಯ ಅಭ್ಯರ್ಥಿ ಮಾಡಿದ್ದೇನು ಗೊತ್ತಾ ?

ಇದೇ ಡಿಸೆಂಬರ್ 9ರಂದು ಫಲಿತಾಂಶ ನೋಡಿ ಮರುದಿನ ಸಿಎಂ ಯಡಿಯೂರಪ್ಪ ವಿಜಯನಗರ ಜಿಲ್ಲೆ ಘೋಷಣೆ ಮಾಡುವಂತ ರೀತಿ ಬಿಜೆಪಿಗೆ ಓಟು ಹಾಕಬೇಕೆಂದು ಹೇಳಿದರು

news18-kannada
Updated:November 29, 2019, 4:44 PM IST
ವಿಜಯನಗರಕ್ಕಾಗಿ ಕೈ-ಕಮಲ ನಾಯಕರ ಮತಬೇಟೆ; ಪ್ರಚಾರಕ್ಕೆ ಬಿಜೆಪಿ ಬಂಡಾಯ ಅಭ್ಯರ್ಥಿ ಮಾಡಿದ್ದೇನು ಗೊತ್ತಾ ?
ಆನಂದ್ ಸಿಂಗ್​ ಹಾಗೂ ಕವಿರಾಜ್ ಅರಸ್
  • Share this:
ಬಳ್ಳಾರಿ(ನ.29): ವಿಜಯನಗರ ಕ್ಷೇತ್ರಕ್ಕಾಗಿ ಕೈ-ಕಮಲ ನಾಯಕರು ಮತಬೇಟೆ ಮುಂದುವರೆದಿದೆ. ಹೋದಲ್ಲೆಲ್ಲ ವಿಜಯನಗರ ಜಿಲ್ಲೆ ಮಂತ್ರ ಪಠಿಸುತ್ತ ಆನಂದ್ ಸಿಂಗ್ ಪ್ರಚಾರ ಮಾಡುತ್ತಿದ್ದರೆ, ಕಾಂಗ್ರೆಸ್ ಅಭ್ಯರ್ಥಿ ಪರ ಮಾಜಿ ಸಚಿವ ಯು ಟಿ ಖಾದರ್ ಕಣಕ್ಕಿಳಿದಿದ್ದಾರೆ. ಇನ್ನು ಬಿಜೆಪಿ ಬಂಡಾಯ ಅಭ್ಯರ್ಥಿ ತಾನೇನು ಕಡಿಮೆಯಿಲ್ಲ ಎಂಬಂತೆ ಟ್ರಾಕ್ಟರ್ ನಡೆಸುವ ಮೂಲಕ ಪ್ರಚಾರಕಾರ್ಯದಲ್ಲಿ ಮಗ್ನರಾಗಿದ್ದಾರೆ.

ಗಣಿನಾಡು ಬಳ್ಳಾರಿ ಜಿಲ್ಲೆ ವಿಜಯನಗರ ಕ್ಷೇತ್ರದಲ್ಲಿ ಜರುಗುತ್ತಿರುವ ಉಪ ಚುನಾವಣೆ ಕಾವೇರಿದೆ. ಇಂಟರೆಸ್ಟಿಂಗ್ ವಿಚಾರವೆಂದರೆ ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್ ಚುನಾವಣೆಯುದ್ದಕ್ಕೂ ತಿಳಿ ಕೇಸರಿ ಬಣ್ಣದ ಶರ್ಟ್ ಧರಿಸುತ್ತಿದ್ದಾರೆ. ಜ್ಯೋತಿಷಿಗಳ ಸಲಹೆ ಮೇರೆಗೆ ನೆಗೆಟಿವ್ ಎನರ್ಜಿ ತಾಕದಿರಲೆಂದು ಈ ರೀತಿ ಒಂದೇ ರೀತಿ ಶರ್ಟ್ ಧರಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇಂಥ 20 ಶರ್ಟ್ ಖರೀದಿಸಿರುವ ಸಿಂಗ್ ಪ್ರಚಾರದುದ್ದಕ್ಕೂ ಇದೇ ಶರ್ಟ್, ಬಿಳಿ ಪ್ಯಾಂಟ್ ಧರಿಸಿನಲ್ಲಿರುವುದು ನೋಡಿ ಬಿಜೆಪಿ ಕಾರ್ಯಕರ್ತರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ನನಗೆ ಡ್ರೆಸ್ ಸೆನ್ಸ್ ಜಾಸ್ತಿಯಿದೆ. ಇಷ್ಟವಾಯಿತು. ಅದಕ್ಕೆ ಇಂಥದೇ ಶರ್ಟ್ ಧರಿಸಿದ್ದೇನೆ ಎನ್ನುತ್ತಾರೆ. ಇನ್ನು ಮತದಾರರ ಸೆಳೆಯಲು ಬಿಜೆಪಿ ಅಭ್ಯರ್ಥಿ ಪ್ರಚಾರಕ್ಕೆ ಹೋದ ಕಡೆಯಲ್ಲೆಲ್ಲ ವಿಜಯನಗರ ಜಿಲ್ಲೆ ಮಂತ್ರ ಪಠಿಸುತ್ತಿದ್ದಾರೆ. ಇಂದು ಹೊಸಪೇಟೆಯ ಮೃತ್ಯುಂಜಯನಗರದಲ್ಲಿ ಪ್ರಚಾರದ ವೇಳೆ ಮಾತನಾಡಿ, ಇದೇ ಡಿಸೆಂಬರ್ 9ರಂದು ಫಲಿತಾಂಶ ನೋಡಿ ಮರುದಿನ ಸಿಎಂ ಯಡಿಯೂರಪ್ಪ ವಿಜಯನಗರ ಜಿಲ್ಲೆ ಘೋಷಣೆ ಮಾಡುವಂತ ರೀತಿ ಬಿಜೆಪಿಗೆ ಓಟು ಹಾಕಬೇಕೆಂದು ಹೇಳಿದರು.

ಇನ್ನು ಕಾಂಗ್ರೆಸ್ ಅಭ್ಯರ್ಥಿ ವೆಂಕಟರಾವ್ ಘೋರ್ಪಡೆ ಪರ ಮುಸ್ಲಿಂ ಮತದಾರರನ್ನು ಸೆಳೆಯಲು ಮಾಜಿ ಸಚಿವ ಯು ಟಿ ಖಾದರ್ ಆಗಮಿಸಿದ್ದರು. ಹೊಸಪೇಟೆಯಲ್ಲಿಂದು ದರ್ಗಾ ಭೇಟಿ ನೀಡಿ, ಮುಸ್ಲಿಂ ಬಾಂಧವರ ಪ್ರದೇಶಗಳಿಗೆ ತೆರಳಿ ಪ್ರಚಾರ ಮಾಡಿದರು. ಕಾಂಗ್ರೆಸ್ ಕಚೇರಿಯಲ್ಲಿ ಮುಸ್ಲಿಂ ಸಮುದಾಯದ ನಾಯಕರು, ಕಾರ್ಯಕರ್ತರು ತೆರಳಿ ಮತದಾರರನ್ನು ಸೆಳೆಯುವ ಕಾರ್ಯ ಮಾಡಿದರು. ಮುಸ್ಲಿಂ ಸಮುದಾಯದ ನಾಯಕರು ಪ್ರಚಾರಕ್ಕೆ ಬಾರದಿರುವ ಬಗ್ಗೆ ಕಾಂಗ್ರೆಸ್ ಸಭೆಯಲ್ಲಿ ಚರ್ಚೆಯಾಯಿತು. ಹೊಸಪೇಟೆ ನಗರದಲ್ಲಿ ಪಾದಯಾತ್ರೆ ಮಾಡುವ ಮೂಲಕ ಪ್ರಚಾರ ಕಾರ್ಯ ಬಿರಿಸುಗೊಳಿಸಿದರು. ಅನರ್ಹ ಆನಂದ್ ಸಿಂಗ್ ವಿರುದ್ಧ ಸರಳ, ಸಜ್ಜನ ಹಿರಿಯ ರಾಜಕಾರಣಿ ವೆಂಕಟರಾವ್ ಘೋರ್ಪಡೆ ಗೆಲ್ಲಲ್ಲಿದ್ದಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಇದನ್ನೂ ಓದಿ : ಡಿ. 9ರ ನಂತರ ಸರ್ಕಾರ ಪತನ: ಮತ್ತೊಮ್ಮೆ ಭವಿಷ್ಯ ನುಡಿದ ಸಿದ್ದರಾಮಯ್ಯ

ಇನ್ನು ಬಿಜೆಪಿ ಬಂಡಾಯ ಅಭ್ಯರ್ಥಿ ಕವಿರಾಜ್ ಅರಸ್ ಹೊಸಪೇಟೆ ತಾಲೂಕಿನ ಬುಕ್ಕಸಾಗರ ಗ್ರಾಮದಲ್ಲಿ ತಾನೇ ಖುದ್ದು ಟ್ರಾಕ್ಟರ್ ಚಾಲನೆ ಮಾಡಿ ಪ್ರಚಾರ ಮಾಡಿದರು. ಇನ್ನು ಮತ್ತೊಬ್ಬ ಪಕ್ಷೇತರ ಅಭ್ಯರ್ಥಿ ಕೊಟ್ರೇಶ್ ಕಿಚಡಿ ಮೆಣಸಿನಕಾಯಿ ಹೊಲದಲ್ಲಿ ಹೋಗಿ ಕೆಲಸ ಮಾಡುತ್ತಿದ್ದ ಕಾರ್ಮಿಕರ ಜಾಗಕ್ಕೆ ಹೋಗಿ ಪ್ರಚಾರ ಮಾಡಿ ಮತದಾರರನ್ನು ಸೆಳೆಯುವ ಕೆಲಸ ಮಾಡಿದರು. ಒಟ್ಟಿನಲ್ಲಿ ವಿಜಯನಗರಕ್ಕಾಗಿ ವಿವಿಧ ಪಕ್ಷಗಳು ತಮ್ಮದೇ ಆದ ತಂತ್ರ-ಪ್ರತಿತಂತ್ರದ ಮೂಲಕ ವಿಜಯಕ್ಕಾಗಿ ಹಾತೊರೆಯುತ್ತಿದ್ದಾರೆ.
First published:November 29, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ