Azadi Ka Amrit Mahotsav: ನಾಳೆ ಬಿಎಂಟಿಸಿಯಲ್ಲಿ ಉಚಿತವಾಗಿ ಓಡಾಡಿ, ಮೆಟ್ರೋದಲ್ಲಿ ಎಲ್ಲೇ ಹೋದರೂ 30 ರೂಪಾಯಿ!

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ನೆನಪಲ್ಲಿ ಬಿಎಂಟಿಸಿ ಜನರಿಗೆ ಬಂಪರ್ ಗಿಫ್ಟ್ ಕೊಟ್ಟಿದೆ. ನಾಳೆ ಒಂದು ದಿನ ಪೂರ್ತಿ ಬೆಂಗಳೂರಿಗರು ಬಿಎಂಟಿಸಿ ಬಸ್ನಲ್ಲಿ ಎಲ್ಲಿಂದ ಎಲ್ಲಿಗೆ ಬೇಕಾದರೂ ಉಚಿತವಾಗಿ ಸಂಚಾರ ಮಾಡಬಹುದಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನಾಳೆ ನಾಡಿನೆಲ್ಲೆಡೆ 75ನೇ ಸ್ವಾತಂತ್ರ್ಯ ದಿನಾಚರಣೆಯ‌ ಸಂಭ್ರಮ. ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಹಿನ್ನೆಲೆ ಜನರಲ್ಲಿ ಸಡಗರ ಮತ್ತಷ್ಟು ಜೋರಾಗಿದೆ. ಆಜಾದಿ ಕಾ ಮಹೋತ್ಸವದ ನೆನಪನ್ನು ಮತ್ತಷ್ಟು ಅಜರಾಮರವಾಗಿಡಲು ಸರ್ಕಾರ ಒಂದಷ್ಟು ಘೋಷಣೆ ಮಾಡಿದೆ. ಬೆಂಗಳೂರಿನಲ್ಲಿ ಓಡಾಡುವ ಪ್ರಯಾಣಿಕರಿಗೆ ಬಿಎಂಟಿಸಿ ಹಾಗೂ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬಂಪರ್ ಗಿಫ್ಟ್​ ಕೊಟ್ಟಿದೆ. 75ನೇ ವರ್ಷದ ಸ್ವಾತಂತ್ರ್ಯ ಅಮೃತ ಮಹೋತ್ಸವ ಮತ್ತು ಬಿಎಂಟಿಸಿಗೆ 25 ವರ್ಷ ತುಂಬಿದ ಹಿನ್ನೆಲೆ ನಾಳೆ ಉಚಿತವಾಗಿ ಬಸ್​ನಲ್ಲಿ ಪ್ರಯಾಣ ಮಾಡಬಹುದಾಗಿದೆ. ದಿನ ಪೂರ್ತಿ ಬೆಂಗಳೂರಿಗರು ಒಂದು ರೂಪಾಯಿ ಬಸ್ ಚಾರ್ಜ್ ನೀಡದೆ ಪ್ರಯಾಣ ಮಾಡಬಹುದಾಗಿದೆ.

ನಮ್ಮ ಭಾರತ 75ನೇ ಸ್ವಾತಂತ್ರ್ಯದ ಸಂಭ್ರಮದಲ್ಲಿದೆ. ದೇಶದ ಮೂಲೆ ಮೂಲೆಯಲ್ಲೂ ಆಜಾದಿ ಕಾ ಅಮೃತ ಮಹೋತ್ಸವದ ಸಡಗರ ತುಂಬಿ ತುಳುಕುತ್ತಿದೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ತಿರಂಗಾ ರಾರಾಜಿಸ್ತಿದೆ. ಕರ್ನಾಟಕ ಸರ್ಕಾರವೂ ನಾಳಿನ ದಿನವನ್ನು ಮತ್ತಷ್ಟು ನೆನಪಿನಲ್ಲಿಡಲು ಒಂದಷ್ಟು ಘೋಷಣೆ ಮಾಡಿದೆ.

independence day tomorrow bmtc bus metro gift for passengers
ಸಾಂದರ್ಭಿಕ ಚಿತ್ರ


ನಾಳೆ ಇಡೀ ದಿನ ಬಿಎಂಟಿಸಿ ಸಂಚಾರ ಫ್ರೀ ಫ್ರೀ

ಬೆಂಗಳೂರಿಗರ ಜೀವನಾಡಿ ಅಂದ್ರೆ ಬಿಎಂಟಿಸಿ ಬಸ್. ಪ್ರತಿನಿತ್ಯ ಸಾವಿರಾರು ಜನ ಬಿಎಂಟಿಸಿ ಬಸ್​ನಲ್ಲಿ ಓಡಾಡ್ತಾರೆ. ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ನೆನಪಲ್ಲಿ ಬಿಎಂಟಿಸಿ ಜನರಿಗೆ ಬಂಪರ್ ಗಿಫ್ಟ್ ಕೊಟ್ಟಿದೆ. ನಾಳೆ ಒಂದು ದಿನ ಪೂರ್ತಿ ಬೆಂಗಳೂರಿಗರು ಬಿಎಂಟಿಸಿ ಬಸ್​​ನಲ್ಲಿ ಎಲ್ಲಿಂದ ಎಲ್ಲಿಗೆ ಬೇಕಾದರೂ ಉಚಿತವಾಗಿ ಸಂಚಾರ ಮಾಡಬಹುದಾಗಿದೆ.

ಇದನ್ನೂ ಓದಿ: ಕಲಾತಪಸ್ವಿಗೆ ತವರು ಜಿಲ್ಲೆಯ ಗೌರವ, ವರನಟ ರಾಜ್‌ಕುಮಾರ್ ಜಿಲ್ಲಾ ರಂಗಮಂದಿರ ನಾಳೆ ಲೋಕಾರ್ಪಣೆ

ಎಸಿ ಬಸ್​ನಲ್ಲೂ ಉಚಿತ ಓಡಾಟಕ್ಕೆ ಅವಕಾಶ

ನಾಳೆ ಬಿಎಂಟಿಸಿ ಬಸ್​​ ಸಂಚಾರಕ್ಕೆ ಯಾವುದೇ ಹಣ ಪಾವತಿ ಮಾಡಬೇಕಿಲ್ಲ. ನಾನ್ ಎಸಿ ಬಸ್ ಮಾತ್ರವಲ್ಲದೇ, ಹವಾನಿಯಂತ್ರಿತ ವಾಯುವಜ್ರ ಸಹಿತ ಯಾವುದೇ ಬಸ್ ಹತ್ತಿದರೂ ನಾಳೆ 24 ಗಂಟೆ ಉಚಿತವಾಗಿ ಓಡಾಟ ಮಾಡಬಹುದು.

ಇದನ್ನೂ ಓದಿ: ನಾಳೆ ಕೆಂಪುಕೋಟೆಯಲ್ಲಿ ಪ್ರಧಾನಿ ಮೋದಿ ಭಾಷಣ, ಬಂಪರ್ ಗಿಫ್ಟ್​ ನಿರೀಕ್ಷೆ

ಮೆಟ್ರೋ ಪ್ರಯಾಣ 30 ರೂಪಾಯಿ!

ಮೆಟ್ರೋ ಪ್ರಯಾಣಿಕರಿಗೆ ಸಹ BMRCL ಭರ್ಜರಿ ಗಿಫ್ಟ್ ನೀಡಿದೆ. ನಾಳೆ ಎಲ್ಲಿಂದ ಎಲ್ಲಿಗೆ ಬೇಕಾದರೂ ಓಡಾಡಿದರೆ ಮೆಟ್ರೋ ಟಿಕೆಟ್ ದರ ಕೇವಲ 30 ರೂಪಾಯಿ ಮಾತ್ರ ಇರಲಿದೆ.

ಲಾಲ್​ಬಾಗ್​​ ಫ್ಲವರ್ ಶೋ ನೋಡಲು ಹೋಗುವವರಿಗೆ ಪೇಪರ್ ಟಿಕೆಟ್ ವ್ಯವಸ್ಥೆ ಕೂಡ ಮಾಡಲಾಗಿದೆ. ಫ್ಲವರ್ ಶೋ ಮುಗಿಸಿಕೊಂಡು ಪೇಪರ್ ಟಿಕೆಟ್ ತೋರಿಸಿದರೆ ರಿಟರ್ನ್ ಜರ್ನಿ ಫ್ರೀ ಇರಲಿದೆ. ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆ ಈ ಆಫರ್​ ಕೊಡಲಾಗಿದೆ.

ಕಾಂಗ್ರೆಸ್ ಪಾದಯಾತ್ರೆಗೆ ಬರುವವರಿಗೆ ಮೆಟ್ರೋ ಕಾರ್ಡ್​

ಕಾಂಗ್ರೆಸ್ ಕೂಡ ತಮ್ಮ ಪಾದಯಾತ್ರೆ ಕಾರ್ಯಕ್ರಮಕ್ಕೆ ರಾಜ್ಯ ವಿವಿಧ ಜಿಲ್ಲೆಗಳಿಂದ ಆಗಮಿಸುವ  ಕಾರ್ಯಕರ್ತರಿಗೆ ಮೆಟ್ರೋ ಕಾರ್ಡ್ ಕೊಡಲಿದೆ. ಕಾರ್ಯಕ್ರಮದಲ್ಲಿ ಭಾಗಿಯಾಗುವ 10 ಸಾವಿರ ಜನರಿಗೆ ಟೀ ಶರ್ಟ್, ಕ್ಯಾಪ್ ನೀಡಲಾಗಿದೆ.

ಪಾದಯಾತ್ರೆಯಲ್ಲಿ ಒಂದೂವರೆಯಿಂದ 2 ಲಕ್ಷ ಜನರು ಭಾಗವಹಿಸುತ್ತಾರೆ. ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಮೈಸೂರು, ಕನಕಪುರ ಹಾಗೂ ಹೊಸೂರು ಎಂಟ್ರಿ ಪಾಯಿಂಟ್ ಇವೆ. ತುಮಕೂರು ಮೂಲಕ ಬರುವ 21 ಜಿಲ್ಲೆಗಳ ಜನರಿಗೆ ಇಂಟರ್‌ ನ್ಯಾಷನಲ್ ಎಗ್ಸಿಬಿಷನ್ ಮೈದಾನದಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ.

50 ಸಾವಿರ ಮೆಟ್ರೋ ಟಿಕೆಟ್ ಖರೀದಿ

ಅಲ್ಲಿಂದ ಮೆಟ್ರೋ ಮೂಲಕ ಸಂಗೊಳ್ಳಿ ರಾಯಣ್ಣ ಸರ್ಕಲ್‌ಗೆ ಬರಬೇಕಿದೆ. ಕಾರ್ಯಕ್ರಮಕ್ಕೆ ಭಾಗವಹಿಸುವವರಿಗೆ ಅನುಕೂಲ ಆಗಲಿ ಎಂದು ಐವತ್ತು ಸಾವಿರ ಮೆಟ್ರೋ ಟಿಕೆಟ್ ಖರೀದಿ ಮಾಡಲಾಗಿದೆ. ಇನ್ನು ಬೆಂಗಳೂರಿನಲ್ಲಿಯೇ ಇರುವ ಕಾಂಗ್ರೆಸ್ ಕಾರ್ಯಕರ್ತರು ಬಿಎಂಟಿಸಿ ಬಸ್ ಉಚಿತವಾಗಿ ಬಳಸಲಿದ್ದಾರೆ.

75ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಬೆಂಗಳೂರಿನ ಪ್ರಯಾಣಿಕರಿಗೆ ಬಿಎಂಟಿಸಿ ಒಂದು ದಿನ ಉಚಿತ ಪ್ರಯಾಣ ಸೌಲಭ್ಯ ನೀಡ್ತಿದೆ. ನಮ್ಮ ಮೆಟ್ರೋ ಕೂಡ ಕಡಿಮೆ ದರ ನಿಗದಿ ಮಾಡಿದೆ. ಪ್ರಯಾಣಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.
Published by:Thara Kemmara
First published: