• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Independence Day 2022: ಪುತ್ತೂರಿನಲ್ಲಿದೆ ಐತಿಹಾಸಿಕ ಬಾವಿ! ಇದಕ್ಕೂ, ಗಾಂಧೀಜಿಯವರಿಗೂ ಇದ್ಯಂತೆ ಸಂಬಂಧ!

Independence Day 2022: ಪುತ್ತೂರಿನಲ್ಲಿದೆ ಐತಿಹಾಸಿಕ ಬಾವಿ! ಇದಕ್ಕೂ, ಗಾಂಧೀಜಿಯವರಿಗೂ ಇದ್ಯಂತೆ ಸಂಬಂಧ!

ಗಾಂಧೀಜಿ ನೆನಪು ತರುವ ಬಾವಿ

ಗಾಂಧೀಜಿ ನೆನಪು ತರುವ ಬಾವಿ

ಕುಡಿಯಲು ಆಗಿನ ಜನಕಾಲನಿ ಪಕ್ಕದಲ್ಲೇ ಹರಿಯುವ ಚರಂಡಿಯ ನೀರನ್ನು ಕುಡಿಯುತ್ತಿದ್ದರಂತೆ. ಇದನ್ನು ಗಮನಿದ ಗಾಂಧೀಜಿ ತಮ್ಮ ಆಪ್ತರಿಗೆ ತಕ್ಷಣವೇ ಕಾಲನಿಯಲ್ಲಿ ಬಾವಿಯೊಂದನ್ನು ನಿರ್ಮಿಸಲು ಸೂಚಿಸಿದ್ದರು. ಆ ಸೂಚನೆಯಂತೆ ನಿರ್ಮಾಣಗೊಂಡ ಬಾವಿ ಇಂದಿಗೂ ರಾಗಿ ಕುಮೇರು ರಸ್ತೆ ಪಕ್ಕದಲ್ಲೇ ಇದೆ.

ಮುಂದೆ ಓದಿ ...
  • Share this:

ಪುತ್ತೂರು, ದಕ್ಷಿಣ ಕನ್ನಡ: ಇಡೀ ದೇಶ ಸ್ವಾತಂತ್ರ್ಯದ ಅಮೃತ ಮಹೋತ್ಸವದ (Amrit Mahotsav) ಸಂಭ್ರಮದಲ್ಲಿದೆ. 75 ವರ್ಷದ ಸ್ವಾತಂತ್ರ್ಯ (75th Independence Day) ಆಚರಣೆಗೆ ಕಾರಣಕರ್ತರಾದ ಹಲವು ಸ್ವಾತಂತ್ರ್ಯ ಸೇನಾನಿಗಳನ್ನು ಇಡೀ ದೇಶ ನೆನಪಿಸುತ್ತಿದೆ, ಗೌರವಿಸುತ್ತಿದೆ. ಕೇವಲ ದೇಶದಲ್ಲಿ ಮಾತ್ರವಲ್ಲದೆ ಇಡೀ ಜಗತ್ತಿನಲ್ಲಿ ಗೌರವಕ್ಕೆ ಪಾತ್ರರಾಗಿರುವ ಮಹಾತ್ಮಾ ಗಾಂಧಿ (Mahatma Gandhi) ದೇಶದ ಸ್ವಾತಂತ್ರ್ಯಕ್ಕಾಗಿ ಹಲವಾರು ಹೋರಾಟಗಳನ್ನು (Fights) ಸಂಘಟಿಸಿದವರು. ಇದೇ ರೀತಿಯ ಹೋರಾಟದ ಭಾಗವಾಗಿ ಮಹಾತ್ಮಾ ಗಾಂಧಿ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಗೂ ಭೇಟಿ ನೀಡಿದ್ದರು. ದಲಿತ ಸಮುದಾಯ ಎದುರಿಸುತ್ತಿರುವ ಅಸ್ಪೃಶ್ಯತೆಯಲ್ಲಿ (Untouchability) ತೊಲಗಿಸುವ ನಿಟ್ಟಿನಲ್ಲಿ ಗಾಂಧಿ ಕೈಗೊಂಡ ಯಾತ್ರೆಯ ಭಾಗವಾಗಿ ಗಾಂಧೀಜಿ ಪುತ್ತೂರಿಗೂ (Puttur) ಆಗಮಿಸಿದ್ದರು.


ಮಹಾತ್ಮಗಾಂಧೀಜಿ ಸ್ಮರಣೆ


ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಟ್ಟ ಹಲವಾರು ಕ್ರಾಂತಿಕಾರಿ ಹೋರಾಟಗಾರರ ಜೊತೆಗೆ ಅಹಿಂಸೆಯ ಮಾರ್ಗದಿಂದ ಸಾಗಿ ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮನ್ನು ತೊಡಗಿಸಿಕೊಂಡ ಮಹಾತ್ಮಾ ಗಾಂಧಿ ಕೂಡಾ ಸೇರಿಕೊಳ್ಳುತ್ತಾರೆ. ವಿದೇಶೀ ಶಕ್ತಿಗಳ ಜೊತೆಗಿನ ಹೋರಾಟದ ಜೊತೆಗೆ ದೇಶದಲ್ಲಿ ಆಳವಾಗಿ ಬೇರೂರಿದ್ದ ಹಲವು ರೀತಿಯ ಅನಿಷ್ಟ ಪದ್ಧತಿಗಳನ್ನೂ ತೊಲಗಿಸುವ ಜವಾಬ್ದಾರಿಯೂ ಗಾಂಧೀಜಿ ಮೇಲಿತ್ತು.


ಬ್ರಿಟಿಷರ ವಿರುದ್ಧ ಹೋರಾಟ


ದಂಡಿ ಸತ್ಯಾಗ್ರಹ ಸೇರಿದಂತೆ ಹಲವು‌ ಹೋರಾಟಗಳ ಮೂಲಕ ಬ್ರಿಟಿಷರನ್ನು ಭಾರತ ಬಿಟ್ಟು ತೊಲಗುವಂತೆ ಮಾಡಿದ್ದ ಗಾಂಧೀಜಿಗೆ  ದೇಶದ ದಲಿತ ಸಮುದಾಯ ಅನುಭವಿಸುತ್ತಿದ್ದ ಅಸ್ಪೃಶ್ಯತೆ ಎನ್ನುವ ಮಹಾಮಾರಿಯನ್ನೂ ಹೋಗಲಾಡಿಸಬೇಕೆಂಬ ಇಚ್ಛೆಯೂ ಇತ್ತು. ಈ ಕಾರಣಕ್ಕಾಗಿ ಗಾಂಧೀಜಿ ಜಗತ್ತಿನಾದ್ಯಂತ ಸುತ್ತಿ ದಲಿತ ಹಾಗೂ ದಮನಿತರ ಪರವಾಗಿಯೂ ಹೋರಾಟಗಳನ್ನು ಸಂಘಟಿಸುತ್ತಿದ್ದರು.


ಇದನ್ನೂ ಓದಿ: Independence Day: ಚಿತ್ರದುರ್ಗ ಈ ಗ್ರಾಮದಲ್ಲಿರೋ ಮಹಾತ್ಮ ಗಾಂಧೀಜಿ ದೇಗುಲದಲ್ಲಿ ನಿತ್ಯ ನಡೆಯುತ್ತೆ ಪೂಜೆ


 ದಕ್ಷಿಣ ಕನ್ನಡಕ್ಕೂ ಭೇಟಿ ನೀಡಿದ್ದ ಗಾಂಧೀಜಿ


ಇದೇ ಒಂದು ಹೋರಾಟದ ಫಲವಾಗಿ  ಗಾಂಧೀಜಿ ದಕ್ಷಿಣಕನ್ನಡ ಜಿಲ್ಲೆಗೂ ಭೇಟಿ ನೀಡಿದ್ದರು. 1934 ರಲ್ಲಿ ಗಾಂಧೀಜಿ ಸುಳ್ಯದ ಮೂಲಕ ಪುತ್ತೂರಿಗೆ ಕಾಲ್ನಡಿಗೆಯಲ್ಲಿ ಬಂದಿರುವುದನ್ನು ಪುತ್ತೂರಿನ ಹಿರಿಯರು ಈಗಲೂ ನೆನಪಿಸುತ್ತಾರೆ. ಪುತ್ತೂರಿಗೆ ಬಂದ ಗಾಂಧಿಯವರನ್ನು  ಸ್ವಾತಂತ್ರ್ಯ ಹೋರಾಟದಲ್ಲಿ ಗುರುತಿಸಿಕೊಂಡ ಎಂ.ಎಸ್.ಕಿಲ್ಲೆ, ಮಲ್ಯ, ಮೊಲಹಳ್ಳಿ ಶಿವರಾಯರು, ಡಾ. ಶಿವರಾಮ ಕಾರಂತ ಮೊದಲಾದ ದಿಗ್ಘಜರು ಬರಮಾಡಿಕೊಂಡಿದ್ದರು. ಪುತ್ತೂರಿನ ಈಗಿನ ಸರಕಾರಿ ಬಸ್ ನಿಲ್ದಾಣದಲ್ಲಿದ್ದ ಬೃಹತ್ ಅಶ್ವಥ ಮರದ ಕೆಳಗೆ ಕುಳಿತು ಗಾಂಧೀಜಿ ಸಣ್ಣ ಮಟ್ಟಿನ ಸಭೆಯನ್ನೂ ನಡೆಸಿದ್ದರು.


ಅಸ್ಪ್ರಶ್ಯತೆ ನಿವಾರಣೆಗೆ ಕರೆ ನೀಡಿದ್ದ ಗಾಂಧೀಜಿ


ಗಾಂಧೀಜಿಯ ಆ ಬರುವಿಕೆ ಸ್ವಾತಂತ್ರ್ಯ ಹೋರಾಟಕ್ಕಿಂತ ಅಸ್ಪೃಶ್ಯತೆ ನಿವಾರಣೆಗೇ ಹೆಚ್ಚು ಒತ್ತು ನೀಡಿತ್ತು. ಅಂದು ಗಾಂಧೀಜಿ ಪುತ್ತೂರಿನ ಎರಡು ದಲಿತ ಕಾಲನಿಗಳಿಗೆ ಭೇಟಿ ನೀಡಿದ್ದರು. ಅದರಲ್ಲಿ ಮುಖ್ಯವಾಗಿ ರಾಗಿಕುಮೇರು ಕಾಲನಿಗೆ ನೀಡಿದ‌ ಅವರ ಭೇಟಿಯ ಕುರುಹು ಈಗಲೂ ಕಾಣ ಸಿಗುತ್ತಿದೆ. ಗಾಂಧೀಜಿ ದಲಿತ ಕಾಲನಿಗೆ ಭೇಟಿ ನೀಡುವ ಸಂದರ್ಭದಲ್ಲಿ ರಾಗಿಕುಮೇರಿನ ಕುಟುಂಬಗಳಿಗೆ ಕುಡಿಯಲೂ ನೀರಿನ ವ್ಯವಸ್ಥೆ ಇರಲಿಲ್ಲ. ಕುಡಿಯಲು ಆಗಿನ  ಜನ ಕಾಲನಿ ಪಕ್ಕದಲ್ಲೇ ಹರಿಯುವ ಚರಂಡಿಯ ನೀರನ್ನು ಕುಡಿಯುತ್ತಿದ್ದರಂತೆ. ಇದನ್ನು ಗಮನಿದ ಗಾಂಧೀಜಿ ತಮ್ಮ ಆಪ್ತರಿಗೆ ತಕ್ಷಣವೇ ಕಾಲನಿಯಲ್ಲಿ ಬಾವಿಯೊಂದನ್ನು ನಿರ್ಮಿಸಲು ಸೂಚಿಸಿದ್ದರು. ಆ ಸೂಚನೆಯಂತೆ ನಿರ್ಮಾಣಗೊಂಡ ಬಾವಿ ಇಂದಿಗೂ ರಾಗಿ ಕುಮೇರು ರಸ್ತೆ ಪಕ್ಕದಲ್ಲೇ ಇದೆ.


ಗಾಂಧೀಜಿ ರಾಗಿಕುಮೇರು ಕಾಲನಿಗೆ ಅಂದು  ಭೇಟಿ ನೀಡಿದ ವಿಚಾರ ಇಂದಿನ ಯುವ ಪೀಳಿಗೆಗೂ ತಿಳಿದಿದೆ. ಗಾಂಧೀಜಿಯೊಂದಿಗೆ  ತಮ್ಮ ಹಿರಿಯರೊಂದಿಗೆ ಕಳೆದ ದಿನಗಳನ್ನು ಇಂದಿನ ಜನ ಮೆಲುಕು ಹಾಕುತ್ತಿದ್ದಾರೆ. ಆಹಾರ‌ ಸೇರಿದಂತೆ ಎಲ್ಲದಕ್ಕೂ ಕೊರತೆಯಿದ್ದ ಆಗಿನ ಸಮಯದಲ್ಲಿ ಶುದ್ಧ ಕುಡಿಯುವ ನೀರಿಗಾಗಿ ಬಾವಿ ವ್ಯವಸ್ಥೆಯನ್ನು ಮಾಡಿದ್ದರು.


ಇದನ್ನೂ ಓದಿ: Independence Day: ವಿಜಯಪುರದಲ್ಲಿ ಹಾರಾಡಿದ ವಿಶೇಷ ಧ್ವಜ: 1947, ಆಗಸ್ಟ್ 14 ರ ಮಧ್ಯರಾತ್ರಿ ಹಾರಿತ್ತು ಈ ತಿರಂಗಾ!

top videos


    ಇದೀಗ ಈ ಬಾವಿ ಪುತ್ತೂರು ನಗರಸಭೆ ವ್ಯಾಪ್ತಿಯಲ್ಲಿದೆ‌ ನಗರಸಭೆ ವತಿಯಿಂದ ಕುಡಿಯುವ ನೀರಿನ ಪೈಪ್ ಲೈನ್ ಎಲ್ಲಾ ಮನೆಗಳಿಗೂ ಜೋಡಣೆಯಾದ ಹಿನ್ನೆಲೆಯಲ್ಲಿ ಬಾವಿಯ ನೀರನ್ನು ಹೆಚ್ಚಾಗಿ ಉಪಯೋಗಿಸಲಾಗುತ್ತಿಲ್ಲ. ಆದರೂ ಈ ಬಾವಿ ಮಾತ್ರ ಪುತ್ತೂರಿಗರಿಗೆ ಗಾಂಧೀಜಿಯ ನೆನಪುಗಳನ್ನು ಮತ್ತೆ ಮತ್ತೆ ಕೆದಕುವಂತೆ ಮಾಡುತ್ತಿದೆ.
    ಗಾಂಧೀಜಿ ಕಂಡ ಕನಸಿನಂತೆ ರಾಗಿಕುಮೇರು ಕಾಲನಿ ನಿವಾಸಿಗಳ ಕೊಂಚ ಸುಧಾರಿಸಿದೆ. ಇನ್ನಷ್ಟು ಕೆಲಸಗಳು ಇಲ್ಲಿ ನಡೆಯಬೇಕಿದೆ.

    First published: