Independence day: ಬೆಂಗಳೂರಿನಲ್ಲಿ ತಾಳಿ ಕಟ್ಟುವ ಮುನ್ನ ನೂತನ ದಂಪತಿಯಿಂದ ಧ್ವಜಾರೋಹಣ!

ಇಂದು 75ನೇ ಸ್ವಾತಂತ್ರ್ಯೋತ್ಸವ. ಹಾಗಾಗಿ ದೇಶದ ಜನರಲ್ಲಿ ವಿಶೇಷವಾದ ಸಂತಸ, ಸಡಗರ ಮನೆಮಾಡಿದೆ. ಬೆಂಗಳೂರಿನಲ್ಲಿ ನೂತನ ದಂಪತಿ ತಾಳಿಕಟ್ಟುವ ಮೊದಲೇ ಕಲ್ಯಾಣಮಂಟಪದಲ್ಲಿ ಧ್ವಜಾರೋಹಣ ಮಾಡಿದ್ದಾರೆ.

ನೂತನ ದಂಪತಿಯಿಂದ ಧ್ವಜಾರೋಹಣ

ನೂತನ ದಂಪತಿಯಿಂದ ಧ್ವಜಾರೋಹಣ

  • Share this:
ಭಾರತ ದೇಶ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು (Azadi Ka Amrit Mahotsav) ಆಚರಿಸುತ್ತಿದೆ. ಕಾಶ್ಮೀರದಿಂದ (Kashmir) ಕನ್ಯಾಕುಮಾರಿಯವರೆಗೆ ದೇಶದ ಮೂಲೆ ಮೂಲೆಗಳಲ್ಲಿ ತ್ರಿವರ್ಣ ಯಾತ್ರೆಯನ್ನು ಆಚರಿಸಲಾಗುತ್ತಿದೆ. ಮಕ್ಕಳಿಂದ (Children) ಹಿಡಿದು ವಯೋವೃದ್ಧರವರೆಗೆ ಎಲ್ಲರೂ ಸ್ವಾತಂತ್ರ್ಯ ಹಬ್ಬದಲ್ಲಿ (Independence Day) ಭಾಗಿಯಾಗಿದ್ದಾರೆ. ಕಾಶ್ಮೀರದ ಶ್ರೀನಗರದ ಲಾಲ್ ಚೌಕ್‌ನಲ್ಲಿ (Lal Chowk), ಬೆಂಗಳೂರಿನ ಚಾಮರಾಜಪೇಟೆಯ ಮೈದಾನದಲ್ಲಿ ಅತ್ಯಂತ ಉತ್ಸಾಹದಿಂದ ತ್ರಿವರ್ಣ ಧ್ವಜ (Flag) ಹಾರಿಸಲಾಗಿದೆ. ಆದರೆ ಇಲ್ಲೊಂದು ಕಡೆ ಸ್ವಾತಂತ್ರ್ಯೋತ್ಸವವನ್ನು ವಿಭಿನ್ನವಾಗಿ ಆಚರಿಸಲಾಗಿದೆ. ನವದಂಪತಿ (New couple) ತಾಳಿ ಕಟ್ಟುವುದಕ್ಕೂ ಮೊದಲು ಧ್ವಜಾರೋಹಣ ಮಾಡಿದ್ದಾರೆ. ಈ ಮೂಲಕ ತಮ್ಮ ಮದುವೆಯ ದಿನವನ್ನು ನೆನಪಿನಲ್ಲಿ ಇಡೋ ತರಾ ಮಾಡಿದ್ದಾರೆ.

ಇಂದು 75ನೇ ಸ್ವಾತಂತ್ರ್ಯೋತ್ಸವ. ಹಾಗಾಗಿ ದೇಶದ ಜನರಲ್ಲಿ ವಿಶೇಷವಾದ ಸಂತಸ, ಸಡಗರ ಮನೆಮಾಡಿದೆ. ಇಂದಿನ ಈ ಉತ್ಸಾಹ ಪ್ರತಿಯೊಬ್ಬ ಭಾರತೀಯನ ಎದೆಯನ್ನು ಹೆಮ್ಮೆಯಿಂದ ಹಿಗ್ಗುವಂತೆ ಮಾಡಿದೆ. ಬೆಂಗಳೂರಿನಲ್ಲಿ ನೂತನ ದಂಪತಿ ಧ್ವಜಾರೋಹಣ ಮಾಡಿದ್ದಾರೆ.

ತಾಳಿಕಟ್ಟುವ ಮುನ್ನ ಧ್ವಜಾರೋಹಣ!

ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂಭ್ರಮ‌‌‌ ಹಿನ್ನಲೆ ಬೆಂಗಳೂರಿನ ಕೆಂಗೇರಿಯಲ್ಲಿ ನವದಂಪತಿ ಧ್ವಜಾರೋಹಣ ಮಾಡಿ ಸಂಭ್ರಮಿಸಿದ್ದಾರೆ. ಪ್ರೀತಾ ಹಾಗೂ ರಾಘವೇಂದ್ರ ಅನ್ನುವವರೇ ಧ್ವಜಾರೋಹಣ ಮಾಡಿ ಸಪ್ತಪದಿ ತುಳಿದ ನೂತನ ದಂಪತಿ. ತಾಳಿ ಕಟ್ಟುವ ಮುನ್ನ ಪ್ರೀತಾ ಮತ್ತು ರಾಘವೇಂದ್ರ ದಂಪತಿ ಹೆತ್ತವರ ಸಮ್ಮುಖದಲ್ಲಿ ಧ್ವಜಾರೋಹಣ ಮಾಡಿದ್ದಾರೆ.

Independence day special Flag hoisting by the new couple in Bangalore
ಪ್ರೀತಾ-ರಾಘವೇಂದ್ರ ಜೋಡಿ


ಕಲ್ಯಾಣ ಮಂಟಪದ ಹೊರಭಾಗದಲ್ಲಿ ನೂತನ ದಂಪತಿ ಧ್ವಜಾರೋಹಣ ಮಾಡಿದ್ದಾರೆ. ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂಭ್ರಮ‌‌‌ ಹಿನ್ನಲೆ ಬೆಂಗಳೂರಿನ ಕೆಂಗೇರಿಯಲ್ಲಿ ನವದಂಪತಿ ಧ್ವಜಾರೋಹಣ ಮಾಡಿ ಗೌರವ ಸಲ್ಲಿಸಿದ್ದಾರೆ.

ಇದನ್ನೂ ಓದಿ: ಶ್ರೀನಗರದ ಲಾಲ್​ಚೌಕ್​ನಲ್ಲಿ ಮೊಳಗಿದ ವಂದೇ ಮಾತರಂ, ಭಯೋತ್ಪಾದಕರಿಗೆ ತಕ್ಕ ಉತ್ತರ!

ಇಂದು ಮದುವೆಯಾಗಿದ್ದಕ್ಕೆ ಖುಷಿಯಾಗಿದೆ

ಸ್ವಾತಂತ್ರ್ಯ ದಿನಾಚರಣೆಯಂದೇ ವಿವಾಹವಾಗಿದ್ದಕ್ಕೆ ತುಂಬಾ ಖುಷಿಯಾಗಿದೆ ಅಂತಾ ಮದುಮಗ- ಮದುಮಗಳು ಹೇಳಿದ್ದಾರೆ. ಇಂದು ಮದುವೆ ಆಗಿದ್ದಕ್ಕೆ ಸಂತೋಷವಾಗಿದೆ. ತಾಳಿ ಕಟ್ಟುವ ಮೊದಲು ಧ್ವಜಾರೋಹಣ ನಡೆಸಿದ್ವಿ ಅಂತಾ ನೂತನ ವಧು-ವರ ಹೇಳಿದ್ದಾರೆ.

Independence day special Flag hoisting by the new couple in Bangalore
ನೂತನ ದಂಪತಿಯಿಂದ ಧ್ವಜಾರೋಹಣ


ಮದುವೆಯಲ್ಲಿ 600 ಮಂದಿ ಭಾಗಿ

ಈ ಮದುವೆ ಸಂಭ್ರಮದಲ್ಲಿ 600ರಿಂದ 700 ಮಂದಿ ಭಾಗಿಯಾಗಿದ್ದರು. ಮದುವೆಯಲ್ಲಿ ಭಾಗಿಯಾದವರು ಸ್ವಾತಂತ್ರ್ಯ ದಿನಾಚರಣೆ ಆಚರಿಸಿದರು. ನಾವು ಹ್ಯಾಪಿ ಆಗಿದ್ದೇವೆ ಅಂತಾ ಪ್ರೀತಾ ಮತ್ತು ರಾಘವೇಂದ್ರ ಹೇಳಿದರು.

ಇದನ್ನೂ ಓದಿ: ಅಮೃತ ಮಹೋತ್ಸವಕ್ಕೆ ANF ಸಿಬ್ಬಂದಿಯಿಂದ ಸಾರ್ಥಕ‌ ಕಾರ್ಯ; ಅರಣ್ಯವಾಸಿಗೆ ಸೂರು ನಿರ್ಮಾಣ

ರಾಷ್ಟ್ರಧ್ವಜ ಹಿಡಿದು ಆರ್​.ಅಶೋಕ್ ಡ್ಯಾನ್ಸ್​

ಸ್ವಾತಂತ್ರ್ಯ ದಿನಾಚರಣೆಯನ್ನು ಕಂದಾಯ ಸಚಿವ ಆರ್.ಅಶೋಕ್ ಆಚರಿಸಿದರು. ಅಮೃತ ಭಾರತಿಗೆ ಕರುನಾಡ ಜಾತ್ರೆ ಕಾರ್ಯಕ್ರಮದಲ್ಲಿ ಅಶೋಕ್ ಭಾಗಿಯಾದರು. ಇದೇ ವೇಳೆ ಸಂತೋಷಕ್ಕೆ ಹಾಡು ಸಂತೋಷಕ್ಕೆ ಸಾಂಗ್​ಹೆ ಸ್ಟೆಪ್ ಹಾಕಿದ್ದಾರೆ. ಕಾರ್ಯಕರ್ತರೊಂದಿಗೆ ರಾಷ್ಟ್ರಧ್ವಜ ಹಿಡಿದು ಡ್ಯಾನ್ಸ್ ಮಾಡಿದರು.

ರಾಷ್ಟ್ರಧ್ವಜ ಹಿಡಿದ ಅಳಿಲು!

ಶಿವಮೊಗ್ಗದಲ್ಲಿ ಅಳಿಲು ಒಂದು ಸ್ವಾತಂತ್ರ್ಯ ದಿನಾಚರಣೆ ಆಚರಿಸಿದೆ. ಮುದ್ದಾದ ಅಳಿಲೊಂದು ತ್ರಿವರ್ಣ ಧ್ವಜ ಹಿಡಿದು ಅಮೃತ ಮಹೋತ್ಸವ ಆಚರಿಸಿದೆ. ಟೇಬಲ್ ಮೇಲಿಟ್ಟಿದ್ದ ಧ್ವಜ ಎತ್ತಿ ಹಿಡಿದು ಆಶ್ಚರ್ಯ ಮೂಡಿಸಿದೆ.

Independence day special Flag hoisting by the new couple in Bangalore
ತ್ರಿವರ್ಣಧ್ವಜ ಹಿಡಿದ ಅಳಿಲು


ಶಿವಮೊಗ್ಗದ ಭದ್ರಾವತಿಯ ಭೂತನಗುಡಿಯ 5ನೇ ಕ್ರಾಸ್​​ನಲ್ಲಿರುವ ಅಶೋಕ್ ಜಿ. ಶೇಟ್ ಎಂಬುವವರ ಮನೆಯ ಅಳಿಲು ರಾಷ್ಟ್ರಪ್ರೇಮ ಮೆರೆದಿದೆ. 5 ತಿಂಗಳಿಂದ ಸಾಕಿರುವ ಅಳಿಲಿನ ರಾಷ್ಟ್ರಪ್ರೇಮ ಕಂಡು ಅಕ್ಕಪಕ್ಕದ ಮನೆಯವರು ಆಶ್ಚರ್ಯ ಚಕಿತರಾಗಿದ್ದಾರೆ.

ದೇವರ ಮೂರ್ತಿಗೆ ತ್ರಿವರ್ಣ ರೂಪ!

ಈಶ್ವರ ಲಿಂಗಕ್ಕೆ ತ್ರಿವರ್ಣ ರೂಪದಲ್ಲಿ ಅಲಂಕಾರ ಮಾಡಲಾಗಿದೆ. ವಿಜಯಪುರದ ಜಾಡರ ಗಲ್ಲಿಯಲ್ಲಿನ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ವಿಶೇಷ ಅಲಂಕಾರ ಮಾಡಲಾಗಿದೆ. ಕೇಸರಿ, ಬಿಳಿ, ಹಸಿರು ಬಣ್ಣಗಳ ಮಧ್ಯದಲ್ಲಿ ಅಶೋಕಚಕ್ರದ ಅಲಂಕಾರ ಮಾಡಲಾಗಿದೆ.

ಮಲ್ಲಿಕಾರ್ಜುನ ದೇವಸ್ಥಾನದ ಪೂಜಾರಿ ಈರಯ್ಯ ಸ್ವಾಮಿ ಹಾಗೂ ಸ್ಥಳೀಯರು ಸೇರಿ ಈ ವಿಶೇಷ ಅಲಂಕಾರ ಮಾಡಿದ್ದಾರೆ. ಗಲ್ಲಿಯ ಜನರೆಲ್ಲ ಸೇರಿ ರಾಷ್ಟ್ರಾಭಿಮಾನ ಮೆರೆದಿದ್ದು ಮೆಚ್ಚುಗೆಗೆ ಕಾರಣವಾಗಿದೆ.
Published by:Thara Kemmara
First published: