• Home
  • »
  • News
  • »
  • state
  • »
  • Independence day: ಧ್ವಜಾರೋಹಣಕ್ಕೆ ತೆರಳಿದ್ದ ವೇಳೆ ಕಳ್ಳತನ, ಮತ್ತೊಂದೆಡೆ ಸೈನಿಕ ಸಾವು!

Independence day: ಧ್ವಜಾರೋಹಣಕ್ಕೆ ತೆರಳಿದ್ದ ವೇಳೆ ಕಳ್ಳತನ, ಮತ್ತೊಂದೆಡೆ ಸೈನಿಕ ಸಾವು!

ಧ್ವಜಾರೋಹಣಕ್ಕೆ ತೆರಳಿದ್ದಾಗ ಕಳ್ಳತನ

ಧ್ವಜಾರೋಹಣಕ್ಕೆ ತೆರಳಿದ್ದಾಗ ಕಳ್ಳತನ

ದೇಶಾದ್ಯಂತ ಸ್ವಾಂತ್ರ್ಯದ ಅಮೃತ ಮಹೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಹಳ್ಳಿಯಿಂದ ದಿಲ್ಲಿವರೆಗೂ, ಅಷ್ಟದಿಕ್ಕುಗಳಲ್ಲೂ ತ್ರಿವರ್ಣ ಪತಾಕೆ ರಾರಾಜಿಸುತ್ತಾ ಇತಿಹಾಸವನ್ನು ಮೆಲುಕು ಹಾಕಲಾಯಿತು. ಆದರೆ ಸ್ವಾತಂತ್ರ್ಯ ಬಂದ ಶುಭದಿನದಂದು ಕೂಡ ಹಲವೆಡೆ ಕುಕೃತ್ಯ ನಡೆದಿದೆ.

  • Share this:

ಬೋಲೋ ಭಾರತ್ ಮಾತಾಕಿ ಜೈ, ವಂದೇ ಮಾತರಂ, ಮುಗಿಲುಮುಟ್ಟಿದ ಉದ್ಘೋಷ.. ಎಲ್ಲಿ ನೋಡಿದ್ರೂ ಕೇಸರಿ, ಬಿಳಿ, ಹಸಿರು.. ಭಾರತದ ಬಾವುಟ (Flag) ಹಾರಿಸುವ ಉತ್ಸಾಹ. ಮನೆಮನೆಗಳಲ್ಲಿ ಮನಮನಗಳಲ್ಲೂ ತ್ರಿವರ್ಣದ ರಂಗು!  75ನೇ ಸ್ವಾತಂತ್ರ್ಯ ದಿನಾಚರಣೆಯಂದು (Independence day 2022) ಎಲ್ಲೆಲ್ಲೂ ಬೆಳಗ್ಗೆಯಿಂದ ಉತ್ಸಾಹ, ಹಬ್ಬದ (Festival) ದೃಶ್ಯ ಕಂಡುಬಂತು. ಜಿಲ್ಲೆಯ ಮೂಲೆ ಮೂಲೆಯಲ್ಲಿ ಮಕ್ಕಳು ಬೇಗನೆ ಎದ್ದು ಶಾಲೆಗಳಿಗೆ (School) ಬಂದಿದ್ದರು. ಧ್ವಜಸ್ತಂಭ ಸಜ್ಜುಗೊಳಿಸಿ ಧ್ವಜಾರೋಹಣ (Flag Hoisting) ನಡೆಸಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ರು. ಜನಗಣಮನ ಮೊಳಗಿಸಿದ್ರು. ರಾಜ್ಯದ ಮೂಲೆಮೂಲೆಯಲ್ಲೂ ಸಂಭ್ರಮ (Celebration) ಜೋರಾಗಿತ್ತು. ಆದರೆ ಇದನ್ನೇ ನೋಡ್ತಿದ್ದ ಕಳ್ಳರು ಗದಗದಲ್ಲಿ ಕೈಚಳಕ ತೋರಿದ್ದಾರೆ. ಇನ್ನೊಂದು ಕಡೆ ಒಬ್ಬರು ಪ್ರಾಣ ಬಿಟ್ಟಿದ್ದಾರೆ.


ದೇಶಾದ್ಯಂತ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಹಳ್ಳಿಯಿಂದ ದಿಲ್ಲಿವರೆಗೂ, ಅಷ್ಟದಿಕ್ಕುಗಳಲ್ಲೂ ತ್ರಿವರ್ಣ ಪತಾಕೆ ರಾರಾಜಿಸುತ್ತಾ ಇತಿಹಾಸವನ್ನು ಮೆಲುಕು ಹಾಕಲಾಯಿತು. ಆದರೆ ಸ್ವಾತಂತ್ರ್ಯ ಬಂದ ಶುಭದಿನದಂದು ಕೂಡ ಹಲವೆಡೆ ಕುಕೃತ್ಯ ನಡೆದಿದೆ.


ಗದಗದಲ್ಲಿ ಧ್ವಜಾರೋಹಣಕ್ಕೆ ಹೋಗಿದ್ದಾಗ ಕಳ್ಳತನ


ಗದಗದಲ್ಲಿ ಸ್ವಾತಂತ್ರ್ಯ ದಿನದಂದೇ ಕಳ್ಳರು ಕೈಚಳಕ ತೋರಿದ್ದಾರೆ. ನಗರದಲ್ಲಿ ಹಾಡಹಗಲೇ ಕಳ್ಳರು ಮನೆ ದೋಚಿದ್ದಾರೆ. ಮನೆಯ ದಂಪತಿ ಧ್ವಜಾರೋಹಣಕ್ಕೆ ಹೋಗಿದ್ದಾಗ ಕಳ್ಳರು ಕೃತ್ಯ ಎಸಗಿ ಪರಾರಿಯಾಗಿದ್ದಾರೆ. ಗದಗ ನಗರದ ಹುಡ್ಕೋ ಕಾಲೋನಿಯ ಸಿದ್ದಲಿಂಗ ನಗರದಲ್ಲಿ ಘಟನೆ ನಡೆದಿದೆ.


Independence day On the way to hoisting the flag theft another side a soldier died
ಗದಗದ ಮನೆಯಲ್ಲಿ ಕಳ್ಳತನ


ಇದನ್ನೂ ಓದಿ: ಮನೆಮುಂದೆ ನಿಂತಿದ್ದ ಯುವಕನಿಗೆ ಚಾಕು ಇರಿತ, ಶಿವಮೊಗ್ಗದಲ್ಲಿ ಉದ್ವಿಗ್ನ ಪರಿಸ್ಥಿತಿ


ಚಿನ್ನ, 5 ಕೆಜಿ ಚಿನ್ನ ಕಳ್ಳತನ


ಗದಗದಲ್ಲಿ ಕ್ರಷರ್ ಮಾಲೀಕ ಬಸವರಾಜ್ ರಾಯಪುರ ಎನ್ನುವವರ ಮನೆಯಲ್ಲಿ ಕಳ್ಳತನವಾಗಿದೆ. 250 ಗ್ರಾಂ ಚಿನ್ನಾಭರಣ ಹಾಗೂ 5 ಲಕ್ಷ ರೂಪಾಯಿ ನಗದು ಕಳ್ಳತನ ಮಾಡಿದ್ದಾರೆ. ಕಳ್ಳರು ಮಾಂಗಲ್ಯ ಸರ, ಕಿವಿಯೋಲೆ, ಬಳೆ ಸೇರಿ ಚಿನ್ನಾಭರಣ ದೋಚಿದ್ದಾರೆ.


ಇದನ್ನೂ ಓದಿ: ಬೆಂಗಳೂರಿನಲ್ಲಿ ತಾಳಿ ಕಟ್ಟುವ ಮುನ್ನ ನೂತನ ದಂಪತಿಯಿಂದ ಧ್ವಜಾರೋಹಣ!


ಧ್ವಜಾರೋಹಣಕ್ಕೆ ಹೋಗುವುದನ್ನು ನೋಡಿ, ಕಳ್ಳರು ಮನೆಗೆ ನುಗ್ಗಿ ಕಳ್ಳತನ ಮಾಡಿದ್ದಾರೆ. ಮನೆಯ ಹಿಂದಿನ ಬಾಗಿಲು ಮುರಿದು ದೋಚಿದ್ದಾರೆ. ಗದಗ ಶಹರ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಆರೋಪಿಗಳಿಗೆ ಪೊಲೀಸರು ಬಲೆ ಬೀಸಿದ್ದಾರೆ.


ಧ್ವಜಾರೋಹಣ ವೇಳೆ ಸೈನಿಕ ಸಾವು!


ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿದ್ದಾಗಲೇ ಅವಘಡ ಸಂಭವಿಸಿದೆ. ಧ್ವಜಾರೋಹಣ ವೇಳೆ ಮಾಜಿ ಸೈನಿಕ ಕುಸಿದು‌ ಬಿದ್ದು ಸಾವನ್ನಪ್ಪಿದ್ದಾರೆ. ಗಂಗಾಧರ ಗೌಡ ಕುಸಿದು ಸಾವನ್ನಪ್ಪಿದ ನಿವೃತ್ತ ಸೈನಿಕ. ದಕ್ಷಿಣ ಕನ್ನಡದ ಜಿಲ್ಲೆಯ ಕಡಬ ತಾಲೂಕಿನ ಕುಟ್ರುಪಾಡಿ ಎಂಬಲ್ಲಿ ಘಟನೆ ಸಂಭವಿಸಿದೆ.


Independence day On the way to hoisting the flag theft another side a soldier died
ಧ್ವಜಾರೋಹಣ ವೇಳೆ ಮಾಜಿ ಸೈನಿಕ ಗಂಗಾಧರ ಸಾವು


ಯಾದಗಿರಿಯಲ್ಲಿ ಉಚಿತ ಪೆಟ್ರೋಲ್​ಗೆ ಮುಗಿಬಿದ್ದ ಯುವಕರು!


ಯಾದಗಿರಿಯಲ್ಲಿ ಆಜಾದಿ ಕಾ ಅಮೃತ ಮಹೋತ್ಸವ ಹಿನ್ನಲೆ ರ್ಯಾಲಿ ಆಯೋಜಿಸಲಾಗಿತ್ತು. ಯಾದಗಿರಿ ನಗರದ ಬಸವೇಶ್ವರ ಸರ್ಕಲ್​ನಿಂದ ಶಾಸ್ತ್ರೀ ವೃತ್ತದವರೆಗೆ ಯಾತ್ರೆ ಆಯೋಜಿಸಲಾಗಿತ್ತು. ಈ ವೇಳೆ ಬೈಕ್ ರ್ಯಾಲಿಯಲ್ಲಿ ಭಾಗವಹಿಸಿದವರಿಗೆ ಬಿಜೆಪಿ ಶಾಸಕ ವೆಂಕಟರಡ್ಡಿ ಮುದ್ನಾಳ್ ಉಚಿತ ಪೆಟ್ರೋಲ್ ನೀಡಿದ್ರು.


ಆಗ ಬೈಕ್ ಯಾತ್ರೆ ತೆರಳುವವರು ಉಚಿತ ಪೆಟ್ರೋಲ್​ಗೆ ಮುಗಿಬಿದ್ದರು. ಯಾದಗಿರಿ ನಗರದ ಮುದ್ನಾಳ ಪೆಟ್ರೋಲ್ ಬಂಕ್​ನಲ್ಲಿ ಜನ ಪೆಟ್ರೋಲ್​ಗೆ ಮುಗಿಬಿದ್ದರು. ಬೈಕ್ ರ್ಯಾಲಿ ಭಾಗವಹಿಸಿದವರಿಗೆ ಟೋಕನ್ ವಿತರಿಸಿ, ಟೋಕನ್ ತೋರಿಸಿದ್ದವರಿಗೆ ಶಾಸಕರ ಸಹೋದರ ಸಂಬಂಧಿ ಬಂಕ್​​ನಲ್ಲಿ ಉಚಿತ ಪೆಟ್ರೋಲ್ ನೀಡಲಾಯ್ತು.


ಯಾತ್ರೆ ಬಿಟ್ಟು ಪೆಟ್ರೋಲ್​ಗೆ ಕ್ಯೂ!


ಆಗ ಬೈಕ್ ರ್ಯಾಲಿ ಅರ್ಧಕ್ಕೆ ಬಿಟ್ಟು ಯುವಕರೆಲ್ಲಾ ಪೆಟ್ರೋಲ್ ತುಂಬಿಸಲು ಮುಗಿಬಿದ್ದರು. ನೂರಾರು ಯುವಕರು ಮುಗಿಬಿದ್ದ ಹಿನ್ನೆಲೆ ಬಂಕ್​​ನಲ್ಲಿ ನೂಕುನುಗ್ಗಲು ಉಂಟಾಗಿತ್ತು.


ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ರಾಜ್ಯದಲ್ಲಿ ಸಂಭ್ರಮ ಮನೆಮಾಡಿದ್ದರೆ ಕೆಲವೆಡೆ ಅವಾಂತರ ಉಂಟಾಗಿತ್ತು. ಸೈನಿಕರೊಬ್ಬರು ಸಾವನ್ನಪ್ಪಿದರೆ, ಗದಗದಲ್ಲಿ ಮನೆಯಲ್ಲಿ ಕಳ್ಳತನ ನಡೆದಿದೆ.

Published by:Thara Kemmara
First published: