ಇಂದು ದೇಶದೆಲ್ಲೆಡೆ ಸ್ವಾತಂತ್ರ್ಯ ದಿನಾಚರಣೆ (Independence day) ಸಂಭ್ರಮ ಮನೆ ಮಾಡಿತ್ತು. ಪುಟಾಣಿ ಮಕ್ಕಳು (Children) ಧ್ವಜಾರೋಹಣದಲ್ಲಿ ಭಾಗಿಯಾಗಿದ್ರು. ನಾಡಿನೆಲ್ಲೆಡೆ ತಿರಂಗಾ ಹಾರಾಡಿತು. ಕಚೇರಿ (Office), ಶಾಲೆಗಳಲ್ಲಿ ಕೇಸರಿ, ಬಿಳಿ, ಹಸಿರು ಬಣ್ಣದ ಧ್ವಜ ಹಾರಾಡಿತು. ಎಲ್ಲಾ ಕಡೆ ಮಕ್ಕಳು ಧ್ವಜಸ್ತಂಭ ಸಜ್ಜುಗೊಳಿಸಿ ಧ್ವಜಾರೋಹಣ (Flag Hoisting) ನಡೆಸಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ರು. ರಾಜ್ಯದ ಮೂಲೆಮೂಲೆಯಲ್ಲೂ ಸಂಭ್ರಮ (Celebration) ಜೋರಾಗಿತ್ತು. ಆದರೆ ಕೆಲವು ಕಡೆ ಗಲಾಟೆಗಳು ಕೂಡ ನಡೆದಿದೆ. ದಾವಣಗೆರೆಯಲ್ಲಿ ಪಾಕಿಸ್ತಾನ (Pakistan) ಧ್ವಜ ಹಾಕಿದ್ದಾರೆ ಅಂತಾ ಕೆಲ ಹೊತ್ತು ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ನಂತರ ಪೊಲೀಸರು (Police) ಪಾಕ್ ಧ್ವಜ ಹಿಡಿದಿದ್ದ ಯುವಕನನ್ನು ವಶಕ್ಕೆ ಪಡೆದಿದ್ದಾರೆ.
ಕರ್ನಾಟಕದಾದ್ಯಂತ ಆಜಾದಿ ಕಾ ಅಮೃತ ಮಹೋತ್ಸವ ಸಂಭ್ರಮದಿಂದ ನಡೆಯಿತು. ತಿರಂಗಾ ಹಾರಿಸಿ ಎಲ್ಲರೂ ಸಂಭ್ರಮಿಸಿದರು. ಆದರೆ ದಾವಣಗೆರೆಯಲ್ಲಿ ಧ್ವಜ ಕುರಿತೇ ವಿವಾದ ಆರಂಭವಾಗಿದೆ. ಪೊಲೀಸ್ ಠಾಣೆಯ ಎದುರು ಜನ ಜಮಾಯಿಸಿದ್ದಾರೆ.
ತಿರಂಗಾಕ್ಕೆ ಅಪಮಾನ ಅಂತಾ ಕಿಡಿ
ದಾವಣಗೆರೆಯಲ್ಲಿ ತ್ರಿವರ್ಣಧ್ವಜಕ್ಕೆ ಅಪಮಾನ ಆಗಿದೆ. ಭಾರತ ಧ್ವಜಕ್ಕೆ ಅಪಮಾನಿಸಿದ್ದಾರೆ ಅಂತ ಜನ ಪೊಲೀಸ್ ಠಾಣೆ ಮುಂದೆ ಜಮಾಯಿಸಿದ ಘಟನೆ ನಡೆದಿದೆ. ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಮಲೆಬೆನ್ನೂರು ಪಟ್ಟಣದಲ್ಲಿ ಘಟನೆ ನಡೆದಿದೆ. ಅನ್ಯಕೋಮಿನ ಯುವಕರು ಭಾರತ ಧ್ವಜದಲ್ಲಿ ಪಾಕಿಸ್ತಾನ ಧ್ವಜದ ಚಿತ್ರ ಹಾಕಿದ್ದಾರೆ ಅಂತ ಜನ ಪೊಲೀಸ್ ಠಾಣೆ ಮುಂದೆ ಜಮಾಯಿಸಿದರು.
ಇದನ್ನೂ ಓದಿ: ಮನೆಮುಂದೆ ನಿಂತಿದ್ದ ಯುವಕನಿಗೆ ಚಾಕು ಇರಿತ, ಶಿವಮೊಗ್ಗದಲ್ಲಿ ಉದ್ವಿಗ್ನ ಪರಿಸ್ಥಿತಿ
ಪಾಕ್ ಧ್ವಜ ಹಿಡಿದ ಓರ್ವ ವ್ಯಕ್ತಿ ವಶಕ್ಕೆ
ಭಾರತದ ಧ್ವಜದಲ್ಲಿ ಪಾಕ್ ಬಾವುಟ ಹಾಕಿ ವಿರೂಪಗೊಳಿಸಿದ ಘಟನೆ ನಡೆದಿದೆ. ವಿರೂಪಗೊಳಿಸಿದ ಬಾವುಟ ಹಿಡಿದು ಅನ್ಯಕೋಮಿನ ಯುವಕರು ಓಡಾಡುತಿದ್ದರು. ಈ ವೇಳೆ ಕೆಲ ಹಿಂದೂ ಪರ ಸಂಘಟನೆ ಮುಖಂಡರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಪೊಲೀಸರು ರಾಷ್ಟ್ರ ಧ್ವಜ ವಿರೂಪಗೊಳಿಸಿದ ವ್ಯಕ್ತಿಯನ್ನ ವಶಕ್ಕೆ ಪಡೆದಿದ್ದಾರೆ.
ಆರೋಪಿಗಳ ಬಂಧಿಸಲು ಹಿಂದೂಮುಖಂಡರ ಆಗ್ರಹ
ರಾಷ್ಟ್ರ ಧ್ವಜ ವಿರೂಪಗೊಳಿಸಿದ ಯುವಕರ ಗುಂಪನ್ನ ಬಂಧಿಸಬೇಕು ಅಂತ ಹಿಂದೂ ಮುಖಂಡರು ಒತ್ತಾಯ ಮಾಡಿದ್ದಾರೆ. ಮಲೆಬೆನ್ನೂರು ಪೊಲೀಸ್ ಠಾಣೆ ಮುಂದೆ ಜನ ಜಮಾಯಿಸಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ KSRP ತುಕಡಿ ನಿಯೋಜಿಸಲಾಗಿದೆ.
ಇದನ್ನೂ ಓದಿ: ಧ್ವಜಾರೋಹಣಕ್ಕೆ ತೆರಳಿದ್ದ ವೇಳೆ ಕಳ್ಳತನ, ಮತ್ತೊಂದೆಡೆ ಸೈನಿಕ ಸಾವು!
ಶಿವಮೊಗ್ಗ ಮತ್ತೆ ಧಗಧಗ
ಮಲೆನಾಡು ಶಿವಮೊಗ್ಗದಲ್ಲಿ ವೀರ ಸಾವರ್ಕರ್ ಗಲಾಟೆಯ ಬೆನ್ನಲ್ಲೇ ಮತ್ತಷ್ಟು ಗಲಾಟೆ ನಡೆಯುತ್ತಿದೆ. ಶಿವಮೊಗ್ಗದ ಬಜಾರ್‌ನಲ್ಲಿ ಓರ್ವನಿಗೆ ಚಾಕು ಇರಿಯಲಾಗಿದೆ. ಅಮೃತ ಮಹೋತ್ಸವದ ಆಚರಣೆ ದಿನದಂದೇ ಶಿವಮೊಗ್ಗದಲ್ಲಿ ವೀರ ಸಾವರ್ಕರ್ ಹಾಗೂ ಟಿಪ್ಪು ಸುಲ್ತಾನ್ ಭಾವಚಿತ್ರ ವಿವಾದ ತೀವ್ರ ಸ್ವರೂಪ ಪಡೆದುಕೊಂಡಿದೆ.
ಶಿವಮೊಗ್ಗದ ಅಮೀರ್ ಅಹ್ಮದ್ ಸರ್ಕಲ್ ನಲ್ಲಿ ಹಿಂದೂಪರ ಸಂಘಟನೆ ಕಾರ್ಯ ಕಾರ್ಯಕರ್ತರು ವೀರ ಸಾವರ್ಕರ್ ಭಾವಚಿತ್ರ ಹಾಕಿದ್ದರು. ಇದಕ್ಕೆ ವಿರೋಧವಾಗಿ ಮುಸ್ಲಿಂ ಸಮುದಾಯದವರು ಟಿಪ್ಪು ಭಾವಚಿತ್ರ ಹಾಕಿದ್ದರು. ಆಗ ಗಲಾಟೆ ಶುರುವಾಗಿತ್ತು. ಇದೇ ಗಲಾಟೆಯ ಮುಂದುವರೆದ ಭಾಗವಾಗಿ ಮನೆ ಮುಂದೆ ನಿಂತಿದ್ದ ಯುವಕನಿಗೆ ಚಾಕು ಇರಿಯಲಾಗಿದೆ ಅಂತ ಹೇಳಲಾಗುತ್ತಿದೆ.
ಪ್ರೇಮ್ ಸಿಂಗ್ ಎಂಬಾತನಿಗೆ ಚಾಕುಇರಿತ
ಶಿವಮೊಗ್ಗದ ಬಜಾರ್‌ನಲ್ಲಿ 20 ವರ್ಷದ ಪ್ರೇಮ್ ಸಿಂಗ್ ಎಂಬ ಯುವಕನಿಗೆ ಚಾಕು ಇರಿಯಲಾಗಿದೆ. ಮನೆ ಮುಂದೆ ನಿಂತಿದ್ದಾಗ ದುಷ್ಕರ್ಮಿಗಳು ಪ್ರೇಮ್ ಸಿಂಗ್‌ಗೆ ಚಾಕು ಇರಿದಿದ್ದಾರೆ ಎನ್ನಲಾಗಿದೆ. ಚಾಕು ಇರಿತದಿಂದ ಯುವಕ ಪ್ರೇಮ್ ಸಿಂಗ್ ಗಾಯಗೊಂಡಿದ್ದಾನೆ.
ಗದಗದಲ್ಲಿ ಧ್ವಜಾರೋಹಣಕ್ಕೆ ಹೋಗಿದ್ದಾಗ ಕಳ್ಳತನ
ಗದಗದಲ್ಲಿ ಸ್ವಾತಂತ್ರ್ಯ ದಿನದಂದೇ ಕಳ್ಳರು ಕೈಚಳಕ ತೋರಿದ್ದಾರೆ. ನಗರದಲ್ಲಿ ಹಾಡಹಗಲೇ ಕಳ್ಳರು ಮನೆ ದೋಚಿದ್ದಾರೆ. ಮನೆಯ ದಂಪತಿ ಧ್ವಜಾರೋಹಣಕ್ಕೆ ಹೋಗಿದ್ದಾಗ ಕಳ್ಳರು ಕೃತ್ಯ ಎಸಗಿ ಪರಾರಿಯಾಗಿದ್ದಾರೆ. ಗದಗ ನಗರದ ಹುಡ್ಕೋ ಕಾಲೋನಿಯ ಸಿದ್ದಲಿಂಗ ನಗರದಲ್ಲಿ ಘಟನೆ ನಡೆದಿದೆ. 250 ಗ್ರಾಂ ಚಿನ್ನಾಭರಣ ಹಾಗೂ 5 ಲಕ್ಷ ರೂಪಾಯಿ ನಗದು ಕಳ್ಳತನ ಮಾಡಿದ್ದಾರೆ. ಕಳ್ಳರು ಮಾಂಗಲ್ಯ ಸರ, ಕಿವಿಯೋಲೆ, ಬಳೆ ಸೇರಿ ಚಿನ್ನಾಭರಣ ದೋಚಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ