Vegetable Price: ಮತ್ತೆ ಸೆಂಚೂರಿ ಬಾರಿಸಲಿದೆ ಟೊಮೆಟೊ ರೇಟ್; ತರಕಾರಿ ಈಗ ಫುಲ್ ದುಬಾರಿ

ಟೊಮೆಟೋ ಈ ಬಾರಿಯೂ ಕೂಡ ಸೆಂಚೂರಿ  ಬಾರಿಸಲು ಸಿದ್ಧವಾಗ್ತಿದೆ.  ರಾಜ್ಯದ ಹಲವೆಡೆ ಸುರಿಯುತ್ತಿರೋ ಅಕಾಲಿಕ ಮಳೆಯಿಂದಾಗಿ ಟೊಮ್ಯಾಟೊ ಬೆಳೆ ಬಹುತೇಕ ಹಾಳಾಗಿದ್ದು, ಮಾರುಕಟ್ಟೆಗೆ ಪೂರೈಕೆ ಇಲ್ಲದೆ ಕಳೆದೊಂದು ವಾರದಿಂದ ದರ ದಿನೇ ದಿನೆ ಏರುತ್ತಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು (ಮೇ 17): ರಾಜ್ಯದಲ್ಲಿ ಹಲವೆಡೆ ಮಳೆಯ (Rain) ಅಬ್ಬರ ಜೋರಾಗಿದೆ. ಇದ್ರಿಂದ ರೈತರು ಬೆಳೆದ ತರಕಾರಿ (Vegetable) ಬೆಳೆಗೆ ಭಾರೀ ಹಾನಿಯಾಗ್ತಿದೆ. ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ಕೂಡ ಗಗನಕ್ಕೇರಿದೆ. ಟೊಮೆಟೊ (Tomato) ಬೆಲೆಯಂತೂ ಮತ್ತೆ ನೂರರ ಗಡಿದಾಟಲಿದೆ. ರಾಜ್ಯದ ಹಲವೆಡೆ ಮಳೆಗೆ ಟೊಮೆಟೊ ಬೆಳೆ ಕೊಚ್ಚಿ ಹೋಗಿದೆ. ಇದ್ರಿಂದ ರೈತರಿಗೂ (Farmer) ಭಾರೀ ನಷ್ಟ ಉಂಟಾಗಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ಟೊಮೆಟೊ ಬೆಲೆ ಏರಿಕೆಯಾಗಿದ್ದು, ಗ್ರಾಹಕರ ಜೇಬುಗೆ ಮತ್ತೆ ಕತ್ತರಿ ಬಿದ್ದಿದೆ. ಟೊಮೆಟೊ ಪ್ರತಿಯೊಂದು ಅಡಿಗೆಗೂ ಅತ್ಯವಶ್ಯಕವಾಗಿದ್ದು, ಬೆಲೆ ಹೆಚ್ಚಳದಿಂದ ಮಹಿಳೆಯರಿಗೆ (Women) ತಲೆಬಿಸಿಯಾಗಿದೆ. ದಿನವೂ ಸುರಿಯುತ್ತಿರುವ ಮಳೆಯಿಂದಾಗಿ ತರಕಾರಿ ಬೆಳೆ ಹಾನಿಗೊಳಗಾಗಿದ್ದು, ಬೀನ್ಸ್, (Beans) ಟೊಮ್ಯಾಟೊ ಮತ್ತಿತರ ತರಕಾರಿ ಹಾಗೂ ಸೊಪ್ಪಿನ ದರ ಕೂಡ ತೀವ್ರ ಏರಿಕೆಯಾಗಿದೆ. ತರಕಾರಿ ಮಾತ್ರವಲ್ಲದೆ ಸೊಪ್ಪಿನ ದರದಲ್ಲೂ ತೀವ್ರ ಏರಿಕೆಯಾಗಿದೆ. 15- 20 ರೂ.ಗೆ ದೊರೆಯುತ್ತಿದ್ದ ಒಂದು ಕಟ್ಟು ಸೊಪ್ಪು 40-50 ರೂ. ಆಗಿದೆ.

ದಿನೇ  ದಿನೇ  ಏರ್ತಿದೆ ಟೊಮೆಟೊ ರೇಟ್​

ಮಳೆಯಾದ್ರೆ ಟೊಮೆಟೊ ರೇಟ್​​ ಗಗನಕ್ಕೇರುತ್ತೆ. ಕಳೆದ ಬಾರಿ,  100ರ ಗಡಿ ದಾಟಿದ್ದ ಟೊಮೆಟೋ ಈ ಬಾರಿಯೂ ಕೂಡ ಸೆಂಚೂರಿ  ಬಾರಿಸಲು ಸಿದ್ಧವಾಗ್ತಿದೆ.  ರಾಜ್ಯದ ಹಲವೆಡೆ ಸುರಿಯುತ್ತಿರೋ ಅಕಾಲಿಕ ಮಳೆಯಿಂದಾಗಿ ಟೊಮ್ಯಾಟೊ ಬೆಳೆ ಬಹುತೇಕ ಹಾಳಾಗಿದ್ದು, ಮಾರುಕಟ್ಟೆಗೆ ಪೂರೈಕೆ ಇಲ್ಲದೆ ಕಳೆದೊಂದು ವಾರದಿಂದ ದರ ದಿನೇ ದಿನೆ ಏರುತ್ತಿದೆ. ಕೆಲವೆಡೆ ಅಕಾಲಿಕ ಮಳೆ, ಮತ್ತೊಂದೆಡೆ ಬಿಸಿಲ ಬೇಗೆ ಹಿನ್ನೆಲೆಯಲ್ಲಿ ಟೊಮ್ಯಾಟೊ ಫಸಲು ಕುಸಿತಗೊಂಡಿದೆ. ಜತೆಗೆ ಬೀನ್ಸ್ನ ಹೂ ಮತ್ತು ಕಾಯಿ ಉದುರಿದ್ದು ತೀವ ನಷ್ಟವಾಗಿದೆ. ಪರಿಣಾಮ ದಿಢೀರ್ ಬೆಲೆ ಏರಿಕೆಯಾಗಿದೆ. ಬೇಡಿಕೆಗೆ ತಕ್ಕಂತೆ ತರಕಾರಿ

ತರಕಾರಿ ಬೆಲೆ ಏರಿಕೆ, ಬೀನ್ಸ್​ ಕೆ.ಜಿಗೆ 107ರೂ

ಹಾಪ್‌ಕಾಮ್ಸ್‌ನಲ್ಲಿಯೂ ಬೀನ್ಸ್ ಕೆ.ಜಿ.ಗೆ 107 ರೂ. ಇದ್ದು, ಸಗಟು ದರ 105- 110 ರೂ. ಇದೆ. ಟೊಮ್ಯಾಟೊ 75 ರೂ. ಇದ್ದು, ಹೊರಗೆ 80 ರೂ.ಗೆ ಮಾರಾಟವಾಗುತ್ತಿದೆ. ಮೇ- ಜೂನ್​ ತಿಂಗಳಂದ್ರೆ ಊರ ಹಬ್ಬ, ಜಾತ್ರೆ, ಮದುವೆ, ನಿಶ್ಚಿತಾರ್ಥ, ಗೃಹಪ್ರವೇಶ ಇನ್ನಿತರ ಸಮಾರಂಭಗಳು ನಡೆಯುತ್ತಿರುತ್ತೆ.  ಹಬ್ಬ- ಮದುವೆಗಳ ಸಮಯದಲ್ಲಿ ತರಕಾರಿ ಟೊಮೆಟೊ  ಬೆಲೆ ಏರಿಕೆ ಆಗಿರುವುದರಿಂದ ಜನರು ಪರಿತಪಿಸುವಂತೆ ಮಾಡಿದೆ.

ಇದನ್ನೂ ಓದಿ: Explained: ಬಜ್ಜಿ, ಬೋಂಡಾ ಇನ್ನು ನೆನಪು ಮಾತ್ರ! ಏ.28ರಿಂದಲೇ ಮತ್ತಷ್ಟು 'ಬಿಸಿ'ಯಾಗಲಿದೆ ಅಡುಗೆ ಎಣ್ಣೆ! ಇದಕ್ಕೆ ಕಾರಣವೇನು?

ಸೊಪ್ಪಿನ ಬೆಲೆಯೂ ಏರಿಕೆ

ತರಕಾರಿ ಮಾತ್ರವಲ್ಲದೆ ಸೊಪ್ಪಿನ ದರದಲ್ಲೂ ತೀವ್ರ ಏರಿಕೆಯಾಗಿದೆ. 15- 20 ರೂ.ಗೆ ದೊರೆಯುತ್ತಿದ್ದ ಒಂದು ಕಟ್ಟು ಸೊಪ್ಪು 40-50 ರೂ. ಆಗಿದೆ. ಹಾಪ್‌ಕಾಮ್ಸ್‌ನಲ್ಲೂ ಸೊಪ್ಪಿನ ದರ ಹೆಚ್ಚಿದ್ದು, ಕೊತ್ತಂಬರಿ ಸೊಪ್ಪು ಕೆ.ಜಿ.ಗೆ 74 ರೂ., ಮೆಂತ್ಯ 167 ರೂ. ಹಾಗೂ ಸಬ್ಬಸಿಗೆ ಸೊಪ್ಪು 124 ರೂ. ತಲುಪಿದೆ.ವ್ಯಾಪಾರಿಗಳು ಹಣ ಕೊಟ್ಟರೂ ಗುಣಮಟ್ಟವಿಲ್ಲ

ಟೊಮಾಟೊ ದರ ಕೆ.ಜಿ.ಗೆ 70 ರೂ. ದಾಟಿದ್ದರೂ ಗುಣಮಟ್ಟದ ಹಣ್ಣು ದೊರಕುತ್ತಿಲ್ಲ ಎನ್ನುವುದು ಗ್ರಾಹಕರ ಬೇಸರ. ಆನ್‌ಲೈನ್‌ನಲ್ಲಿ ಸಾಮಾನ್ಯ ಗುಣಮಟ್ಟದ ಟೊಮ್ಯಾಟೊ ಬೆಲೆ 70 ರೂ.ರವರೆಗೆ ಇದೆ. ಉತ್ತಮ ಗುಣಮಟ್ಟದ ಟೊಮ್ಯಾಟೊಗೆ 80-90 ರೂ. ಕೊಟ್ಟು ಖರೀದಿಸಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ. ಇದಲ್ಲದೆ ಕ್ಯಾರೆಟ್, ಹಸಿ ಮೆಣಸಿನಕಾಯಿ, ಬಜ್ಜಿ ಮೆಣಸಿನಕಾಯಿ, ನುಗ್ಗೇಕಾಯಿ, ಹೀರೇಕಾಯಿ ಸೇರಿ ಹಲವು ತರಕಾರಿಗಳ ದರದಲ್ಲಿ ತೀವ್ರ ಏರಿಕೆಯಾಗಿದೆ.

ಇದನ್ನೂ ಓದಿ: Explained: ಪ್ರತಿ ಮಳೆಗಾಲದಲ್ಲೂ ಬೆಂಗಳೂರು ಮುಳುಗುವುದೇಕೆ? ಈ ಬಾರಿಯೂ ತಪ್ಪೋದಿಲ್ವ ಜನರಿಗೆ ಸಂಕಷ್ಟ?

ಹಾಪ್‌ಕಾಮ್‌ನಲ್ಲಿ ತರಕಾರಿ ಬೆಲೆ

ದರ ಪಟ್ಟಿ ಹಾಪ್‌ಕಾಮ್‌ನಲ್ಲಿ ತರಕಾರಿ (ಪ್ರತಿ ಕೆ.ಜಿ.ಗೆ) ಬೀನ್ಸ್ 107, ಟೊಮ್ಯಾಟೊ 75, ದಪ್ಪ ಮೆಣಸಿನಕಾಯಿ 68, ಹಸಿಮೆಣಸಿನಕಾಯಿ 53, ಬಜ್ಜಿ ಮೆಣಸಿನಕಾಯಿ 54, ಎಲೆಕೋಸು 20, 87 ನುಗ್ಗೇಕಾಯಿ 87,  ಮೂಲಂಗಿ 34, ಹೀರೇಕಾಯಿ 60, ಕೊತ್ತಂಬರಿ ಸೊಪ್ಪು 74, ಮೆಂತ್ಯ ಸೊಪ್ಪು 167 ಸಬ್ಬಸಿಗೆ ಸೊಪ್ಪು 124 ರೂಪಾಯಿ ಆಗಿದೆ
Published by:Pavana HS
First published: