HOME » NEWS » State » INCREASING CORONA DEATH IN BANGALORE BBMP FACE CREMATION DIFFICULTIES MAK

Corona Death: ಬೆಂಗಳೂರಿನಲ್ಲಿ ಕೊರೋನಾ ಮರಣ ಮೃದಂಗ; ಶವ ಸಂಸ್ಕಾರಕ್ಕೆ ಸೌದೆ ಅಭಾವ!

ಈಗಾಗಲೇ ಸ್ಮಶಾನಗಳ ಎದುರು ಹೆಣಗಳ ರಾಶಿ ಸಾಲು ಸಾಲಾಗಿದ್ದು, ಈ ನಡುವೆ ಬೆಂಗಳೂರಿನಲ್ಲಿ ಕೊರೋನಾ ಹೆಣಗಳನ್ನು ಸುಡಲು ಸೌದೆ ಅಭಾವ ಸೃಷ್ಟಿಯಾಗಿರುವುದು ಹಾಗೂ ನಿತ್ಯ ಸೌದೆ ಸಂಗ್ರಹ ಮಾಡುವುದು ಬಿಬಿಎಂಪಿಗೆ ಭಾರಿ ತಲೆನೋವಿಗೆ ಕಾರಣವಾಗಿದೆ ಎನ್ನಲಾಗುತ್ತಿದೆ.

news18-kannada
Updated:May 6, 2021, 4:56 PM IST
Corona Death: ಬೆಂಗಳೂರಿನಲ್ಲಿ ಕೊರೋನಾ ಮರಣ ಮೃದಂಗ; ಶವ ಸಂಸ್ಕಾರಕ್ಕೆ ಸೌದೆ ಅಭಾವ!
ಸೋಂಕಿತರ ಅಂತ್ಯಕ್ರಿಯೆ
  • Share this:
ಬೆಂಗಳೂರು (ಮೇ 06); ರಾಜ್ಯ ರಾಜಧಾನಿ ಬೆಂಗಳೂರು ಕೊರೋನಾ ಭೀಕರತೆಯಿಂದಾಗಿ ಅಕ್ಷರಶಃ ಸ್ಮಶಾನದಂತೆ ಭಾಸವಾಗುತ್ತಿದೆ. ಪ್ರತಿದಿನ ಸಾವಿರಾರು ಜನ ಸೋಂಕಿಗೆ ತುತ್ತಾಗುತ್ತಿದ್ದರೆ, ನೂರಾರು ಜನ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ಬೆಂಗಳೂರಿನ ಎಲ್ಲಾ ವಾರ್ಡ್​​ ಸ್ಮಶಾನಗಳು ಇದೀಗ 24 ಗಂಟೆ ಹೆಣ ಸುಡುವ ಕೆಲಸದಲ್ಲಿ ಬ್ಯುಸಿ ಆಗಿವೆ. ಬೆಂಗಳೂರಿನಲ್ಲಿ ವಿದ್ಯುತ್​ ಚಿತಾಗಾರಗಳಿಗಿಂತ ಸೌದೆಯಲ್ಲಿ ಅಂತ್ಯ ಸಂಸ್ಕಾರ ಮಾಡುವ ಚಿತಾಗಾರಗಳ ಸಂಖ್ಯೆಯೇ ಅಧಿಕ. ಹೀಗಾಗಿ, ಹೆಣಗಳ ಅಂತ್ಯ ಸಂಸ್ಕಾರಕ್ಕೆ ಇದೀಗ ಸೌದೆಗಳ ಅಭಾವ ಎದುರಾಗಿದ್ದು, ಸೌದೆಯನ್ನು ಹೊಂಚುವುದೇ ಇದೀಗ ಬಿಬಿಎಂಪಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ ಎನ್ನಲಾಗುತ್ತಿದೆ.

ಲೆಕ್ಕಾಚಾರದಂತೆ ಪ್ರತಿ ವ್ಯಕ್ತಿಯ ಮೃತದೇಹವನ್ನು ಸುಡಲು ಸುಮಾರು 1500 ಕೆಜಿ ಸೌದೆ ಅಗತ್ಯವಿದೆ. ಇದೀಗ ಬೆಂಗಳೂರಿನಲ್ಲಿ ಹೆಣ ಸುಡಲೆಂದು ಸಂಗ್ರಹಿಸಿದ್ದ ಎಲ್ಲಾ ಸೌದೆಗಳು ಖಾಲಿಯಾಗಿದೆ. ಈಗಾಗಲೇ ಸ್ಮಶಾನಗಳ ಎದುರು ಹೆಣಗಳ ರಾಶಿ ಸಾಲು ಸಾಲಾಗಿದ್ದು, ಈ ನಡುವೆ ಬೆಂಗಳೂರಿನಲ್ಲಿ ಕೊರೋನಾ ಹೆಣಗಳನ್ನು ಸುಡಲು ಸೌದೆ ಅಭಾವ ಸೃಷ್ಟಿಯಾಗಿರುವುದು ಹಾಗೂ ನಿತ್ಯ ಸೌದೆ ಸಂಗ್ರಹ ಮಾಡುವುದು ಬಿಬಿಎಂಪಿಗೆ ಭಾರಿ ತಲೆನೋವಿಗೆ ಕಾರಣವಾಗಿದೆ ಎನ್ನಲಾಗುತ್ತಿದೆ.

ಪ್ರತಿ ಶವಗಾರದಲ್ಲಿ ನಿತ್ಯ 40ಕ್ಕಿಂತ ಹೆಚ್ಚು ಶವಗಳನ್ನು ಸುಡಲಾಗುತ್ತಿದೆ. ಅಲ್ಲದೆ, ಈ ಸಂಖ್ಯೆ ದಿನದಿಂದ ದಿನಕ್ಕೆ ಅಧಿಕವಾಗುತ್ತೇ ಇದೆ. ಹೀಗಾಗಿ  ಶವ ಸುಡಲು ಸೌದೆಗೂ  ಹಾಹಾಕಾರ ಶುರುವಾಗುತ್ತಾ? ಪರಿಸ್ಥಿತಿ ನಿಭಾಯಿಸಲು ಬಿಬಿಎಂಪಿ ಹೆಚ್ಚು ಮರಗಳನ್ನು ಕಡಿಯುತ್ತಾ? ಎಂಬ ಪ್ರಶ್ನೆಗಳು ಇದೀಗ ಉದ್ಭವವಾಗಿದೆ.ಭಾರತದಲ್ಲಿ ದಾಖಲೆ ಬರೆದ ಕೊರೋನಾ:

ದೇಶದಲ್ಲಿ ಎರಡನೇ ಸುತ್ತಿನಲ್ಲಿ ಮಾರಕ‌ ಕಾಯಿಲೆ ಕೊರೋನಾ ಅಲೆ ವ್ಯಾಪಕವಾಗಿ ಹರಡುತ್ತಿದ್ದು ಆತಂಕವನ್ನು ಸೃಷ್ಟಿಸುತ್ತಿದೆ. ಕೊರೋನಾ ಸೋಂಕು ಹರಡುವಿಕೆ ಶರವೇಗವನ್ನು ಪಡೆದುಕೊಂಡಿದೆ.‌ ಹಲವು ನಿರ್ಬಂಧಗಳ ನಡುವೆಯೂ ಇಷ್ಟು ದೊಡ್ಡ ಪ್ರಮಾಣದಲ್ಲಿ ಕೊರೋನಾ ಸೋಂಕಿತರು ಪತ್ತೆ ಆಗುತ್ತಿದ್ದಾರೆ‌.‌ ಏಪ್ರಿಲ್ 4ರಿಂದ ದಿನ ಒಂದರಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರು, ಏಪ್ರಿಲ್ 14ರಿಂದ ದಿನ ಒಂದರಲ್ಲಿ ಎರಡು ಲಕ್ಷಕ್ಕೂ ‌ಹೆಚ್ಚು‌ ಜನರು ಹಾಗೂ ಏಪ್ರಿಲ್ 17ರಿಂದ ದಿನ‌ ಒಂದರಲ್ಲಿ ಎರಡೂವರೆ ಲಕ್ಷಕ್ಕೂ ಹೆಚ್ಚು ಜನರು ಕೊರೊನಾ ಸೋಂಕು ಪೀಡಿತರಾಗುತ್ತಿದ್ದರು. ಈಗ ದೇಶದ ಕೊರೊನಾ ಪೀಡಿತರ ಸಂಖ್ಯೆ ಎರಡು ಕೋಟಿಯನ್ನೂ ದಾಟಿದೆ. ಅಲ್ಲದೆ ಇದೇ ಮೊದಲ ಬಾರಿಗೆ ನಾಲ್ಕು ಲಕ್ಷಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ಗೋಚರಿಸಲು ಆರಂಭಿಸಿವೆ.

ಇದನ್ನೂ ಓದಿ: ಬೆಡ್​ ಬ್ಲಾಕಿಂಗ್ ಹೆಸರಲ್ಲಿ ಕೋಮು ದ್ವೇಷ; ಸಂಸದ ತೇಜಸ್ವಿ ಸೂರ್ಯ ಶಾಸಕರವಿ ಸುಬ್ರಹ್ಮಣ್ಯ ಸೇರಿ ನಾಲ್ವರ ವಿರುದ್ಧ ದೂರು

ಬುಧವಾರ 4,12,262 ಹೊಸ ಪ್ರಕರಣಗಳು ಪತ್ತೆಯಾಗಿದ್ದು ಈ ಪೈಕಿ ಗುಣ ಆಗಿರುವವರು 3,29,113 ಜನ ಮಾತ್ರ. ಇದರಿಂದ ದೇಶದಲ್ಲಿ ಈವರೆಗೆ ಕೊರೋನಾ ಸೋಂಕು ಪೀಡಿತರಾದವರ ಸಂಖ್ಯೆ ಎರಡು ಕೋಟಿ ದಾಟಿದ್ದು 2,10,77,410ಕ್ಕೆ ಏರಿಕೆ ಆಗಿದೆ.‌ ಇದಲ್ಲದೆ ದಿನದಿಂದ ದಿನಕ್ಕೆ ಕೊರೋನಾ ರೋಗಕ್ಕೆ ಬಲಿ ಆಗುತ್ತಿರುವವರ ಸಂಖ್ಯೆ ಕೂಡ‌ ಹೆಚ್ಚಾಗಿದ್ದು ದೇಶದಲ್ಲಿ ಇದೀಗ ದಿನ ಒಂದರಲ್ಲಿ ಮೂರು ಸಾವಿರಕ್ಕೂ ಹೆಚ್ಚು ಜನ‌ ಸಾವನ್ನಪ್ಪುತ್ತಿದ್ದಾರೆ. ಬುಧವಾರ 3,980 ಜನರು ಬಲಿ ಆಗಿದ್ದು ಈವರೆಗೆ ಮಹಾಮಾರಿ ಕೊರೋನಾಗೆ ಬಲಿ ಆದವರ ಸಂಖ್ಯೆ 23,01,68ಕ್ಕೆ ಏರಿಕೆ ಆಗಿದೆ.
Youtube Video

ದೇಶದಲ್ಲಿ ಮೊತ್ತ ಮೊದಲ ಬಾರಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು 2020ರ ಜನವರಿ 30ರಂದು; ಕೇರಳದಲ್ಲಿ. ಅದಾದ ಬಳಿಕ ಅದು ಲಕ್ಷದ ಗಡಿ ಬಳಿ ಬರಲು ಹೆಚ್ಚು ಕಡಿಮೆ ಎಂಟು ತಿಂಗಳು ಹಿಡಿದವು. ಆಗಲೂ ದಿನ ಒಂದರಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ ಒಂದು ಲಕ್ಷ ದಾಟಿರಲಿಲ್ಲ. 2020ರ ಸೆಪ್ಟೆಂಬರ್ 17ರಂದು 98,795 ಕೇಸ್ ಕಂಡುಬಂದಿದ್ದೇ ಈವರೆಗಿನ ದಾಖಲೆ ಆಗಿತ್ತು.
Published by: MAshok Kumar
First published: May 6, 2021, 4:56 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories