• Home
  • »
  • News
  • »
  • state
  • »
  • Sea Erosion: ಕರಾವಳಿಯಲ್ಲಿ ಹೆಚ್ಚುತ್ತಿರುವ ಕಡಲ್ಕೊರೆತ, ಶಾಶ್ವತ ಪರಿಹಾರ ನೀಡುವಂತೆ ಭರವಸೆ

Sea Erosion: ಕರಾವಳಿಯಲ್ಲಿ ಹೆಚ್ಚುತ್ತಿರುವ ಕಡಲ್ಕೊರೆತ, ಶಾಶ್ವತ ಪರಿಹಾರ ನೀಡುವಂತೆ ಭರವಸೆ

ಕಡ್ಕೊರೆತ

ಕಡ್ಕೊರೆತ

ಕರಾವಳಿಯಲ್ಲಿ ಸಮುದ್ರ ಕೊರೆತದ ಅಪಾಯದ ಭೀತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕರಾವಳಿ ಭಾಗದ ಸಮುದ್ರದ ಅಂಚಿನಲ್ಲಿ ಪ್ರತಿವರ್ಷ ಕಡಲ್ಕೊರೆತ ಸಾಮಾನ್ಯವಾಗಿ ಬಿಟ್ಟಿದೆ. ಅದರಲ್ಲೂ ಈ ಮಳೆಗಾಲದಲ್ಲಿ ಸಮುದ್ರದಲ್ಲಿ ಅಲೆಗಳ ಅಬ್ಬರ ಜೋರಾಗಿರುವುದರಿಂದ ಈ ಅವಧಿಯಲ್ಲಿ ಮತ್ತಷ್ಟು ಕಡಲ್ಕೊರೆತ ಉಂಟಾಗುತ್ತದೆ.

ಮುಂದೆ ಓದಿ ...
  • News18 Kannada
  • Last Updated :
  • Karnataka, India
  • Share this:

ಕರಾವಳಿಯಲ್ಲಿ ಸಮುದ್ರ ಕೊರೆತದ ಅಪಾಯದ ಭೀತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕರಾವಳಿ ಭಾಗದ ಸಮುದ್ರದ (Sea) ಅಂಚಿನಲ್ಲಿ ಪ್ರತಿವರ್ಷ ಕಡಲ್ಕೊರೆತ (Coastal Erosion) ಸಾಮಾನ್ಯವಾಗಿ ಬಿಟ್ಟಿದೆ. ಅದರಲ್ಲೂ ಈ ಮಳೆಗಾಲದಲ್ಲಿ (Monsoon) ಸಮುದ್ರದಲ್ಲಿ ಅಲೆಗಳ ಅಬ್ಬರ ಜೋರಾಗಿರುವುದರಿಂದ ಈ ಅವಧಿಯಲ್ಲಿ ಮತ್ತಷ್ಟು ಕಡಲ್ಕೊರೆತ ಉಂಟಾಗುತ್ತದೆ. ಭೂ ವಿಜ್ಞಾನ ಸಚಿವಾಲಯದ ರಾಷ್ಟ್ರೀಯ ಕರಾವಳಿ ಸಂಶೋಧನಾ ಕೇಂದ್ರವು (National Coastal Research Centre) 1990 ರಿಂದ 2016ರ ನಡುವಿನ ಕರಾವಳಿಯ ವಿಶ್ಲೇಷಣೆಯನ್ನು ಆಧರಿಸಿದ ಸ್ಥಿತಿ ವರದಿಯು ರಾಜ್ಯದ 300 ಕಿ.ಮೀ ಕರಾವಳಿಯಲ್ಲಿ 22% ಸಮುದ್ರ ಸವೆತಕ್ಕೆ ಬಲಿಯಾಗಿದೆ ಮತ್ತು ಇದು ಕಳೆದ ಆರು ವರ್ಷಗಳಿಂದ ಉಲ್ಬಣವಾಗುತ್ತಿದೆ.


ಹಾಗಾಗಿ ತಕ್ಷಣ ಸಂಬಂಧಪಟ್ಟ ಅಧಿಕಾರಿಗಳು, ಇಲಾಖೆಗಳು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ತಜ್ಞರು ವರದಿ ಸಲ್ಲಿಸುವ ಮೂಲಕ ಎಚ್ಚರಿಸಿದ್ದಾರೆ. ಕಡಲ್ಕೊರೆತ ಒಂದು ಅನಿರೀಕ್ಷಿತ ಅನಾಹುತವಾಗಿದ್ದು ಕಡಲ ತೀರದ ಮನೆಗಳಿಗಂತೂ ಅಪಾಯ ಕಟ್ಟಿಟ್ಟಬುತ್ತಿ ಎನ್ನಬಹುದು.


ಕಡ್ಕೊರೆತದ ಬಗ್ಗೆ ತಜ್ಞರು ಹೇಳಿದ್ದು ಹೀಗೆ
ಇನ್ನೂ ಕಾರವಾರದ ಪ್ರಸಿದ್ಧ ರವೀಂದ್ರನಾಥ ಟ್ಯಾಗೋರ್ ಬೀಚ್‌ನಲ್ಲಿನ ಸವೆತವು ಕೇವಲ 30 ಗಜಗಳಷ್ಟು ದೂರದಲ್ಲಿದ್ದು, ಬೀಚ್‌ಗೆ ಸಮಾನಾಂತರವಾಗಿರುವ ರಾಷ್ಟ್ರೀಯ ಹೆದ್ದಾರಿ 66 ಮುಳುಗುವ ಅಪಾಯದ ಮುನ್ಸೂಚನೆಯನ್ನು ತಜ್ಞರು ನೀಡಿದ್ದಾರೆ.


ಅಭಿವೃದ್ಧಿಯ ಅನ್ವೇಷಣೆಯಲ್ಲಿ ಮಾನವ ಚಟುವಟಿಕೆಗಳ ಮೇಲೆ ಹೆಚ್ಚುತ್ತಿರುವ ಸಮುದ್ರದ ಸವೆತವನ್ನು ತಜ್ಞರು ಬೆಟ್ಟು ಮಾಡಿ ತೋರಿಸಿದ್ದಾರೆ. ಹವಾಮಾನ ಬದಲಾವಣೆ ಮತ್ತು ಜಾಗತಿಕ ತಾಪಮಾನ ಏರಿಕೆಯಿಂದಾಗಿ ಸಮುದ್ರ ಮಟ್ಟಗಳು ಹೆಚ್ಚಾಗುತ್ತವೆ. ಹಾನಿಯಾದ ಸಂದರ್ಭದಲ್ಲೂ ಸಹ ಜನರಿಗೆ ಸರಿಯಾದ ಪರಿಹಾರ ನೀಡದೆ ಅಧಿಕಾರಿಗಳು ನಿರ್ಲಕ್ಷ್ಯಿಸುತ್ತಾರೆ.


ಇದನ್ನೂ ಓದಿ: Karnataka Weather Report: ಇಂದು ಮತ್ತು ನಾಳೆ ರಾಜ್ಯದ ಈ ಭಾಗದಲ್ಲಿ ಮಳೆ, ಕೆಲವು ಕಡೆ ಒಣಹವೆ


ಸಮುದ್ರದ ಉಬ್ಬರವಿಳಿತ ರಭಸವಾಗುತ್ತಿದ್ದಂತೆ ಕಡಲ ತೀರಕ್ಕೆ ಅಳವಡಿಸಿದ ಕಲ್ಲುಗಳು ಸಮುದ್ರ ಪಾಲಾಗುತ್ತವೆ. ಇದಕ್ಕೆ ಪರಿಹಾರ ಎನ್ನುವಂತೆ ಐಪೋಮಿಯಾ ಕ್ರೀಪರ್‌ಗಳ ನಂತರ ಸವೆತವನ್ನು ತಡೆಗಟ್ಟಲು ಸಮುದ್ರಗಳಲ್ಲಿ ಬೃಹತ್ ಕಲ್ಲುಗಳನ್ನು ಇರಿಸಲಾಯಿತು. ಆದರೆ ಸಮುದ್ರದ ಭಾರಿ ಅಬ್ಬರಕ್ಕೆ ಮರಳನ್ನು ಒಟ್ಟಿಗೆ ಹಿಡಿದಿಡುವ ಗೋಡೆ ರೀತಿ ಅಥವಾ ಬಂಡೆಗಳ ರೀತಿ ಇದು ಕೆಲಸ ಮಾಡುವಲ್ಲಿ ವಿಫಲವಾಯಿತು.


ಹವಾಮಾನ ಬದಲಾವಣೆ ಕರಾವಳಿಯ ಸುಸ್ಥಿರ ನಿರ್ವಹಣೆಗೆ ಸವಾಲಾಗಿರುವುದು ಹೇಗೆ? 
ಕರ್ನಾಟಕದ ಕರಾವಳಿಯು ಸಂವಹನ ಮತ್ತು ಸಾರಿಗೆಯ ಜೊತೆಗೆ ಕೃಷಿ, ಮೀನುಗಾರಿಕೆ, ಪ್ರವಾಸೋದ್ಯಮ ಮತ್ತು ಬಂದರುಗಳನ್ನು ಒಳಗೊಂಡಂತೆ ನಿರ್ಣಾಯಕ ಕ್ಷೇತ್ರಗಳನ್ನು ಒಳಗೊಂಡಿದೆ. ಹವಾಮಾನ ಬದಲಾವಣೆಗಳಿಂದ ಕರಾವಳಿ ರಕ್ಷಣೆಯು ಕೇವಲ ಅಭಿವೃದ್ಧಿಗೆ ಮಾತ್ರವಲ್ಲದೆ ಕರಾವಳಿಯ ಸುಸ್ಥಿರ ನಿರ್ವಹಣೆಗೆ ಸವಾಲಾಗಿ ಹೊರಹೊಮ್ಮಿದೆ.


2017ರಲ್ಲಿ, ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ ಮತ್ತು ಕೇಂದ್ರ ಸರ್ಕಾರವು ಸಮುದ್ರ ಕೊರೆತವನ್ನು ತಡೆಗಟ್ಟಲು ಬೆಂಗಳೂರಿನಲ್ಲಿ 300 ಕೋಟಿ ರೂಪಾಯಿಗಳ ಒಪ್ಪಂದಕ್ಕೆ ಸಹಿ ಹಾಕಿತು. ಆದರೆ ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಕಾರ್ಯಕ್ರಮದಿಂದ ಯಾವುದೇ ಪ್ರಯೋಜನವಾಗಿಲ್ಲ ಎಂದು ವಿವರಿಸಿದ್ದರು. ನಂತರ ಕಡಲೊರೆತಕ್ಕೆ ತಾತ್ಕಾಲಿಕ ಹಾಗೂ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಅಧಿಕಾರಿಗಳ ಜತೆ ಸುದೀರ್ಘ ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳಲು ಮುಖ್ಯಮಂತ್ರಿ ‘ಸೀ ವೇವ್ ಬ್ರೇಕರ್’ ತಂತ್ರಜ್ಞಾನವನ್ನು ಪ್ರಯತ್ನಿಸಲು ಪ್ರಸ್ತಾಪಿಸಿದ್ದಾರೆ.


ಶಾಶ್ವತ ಪರಿಹಾರ ನೀಡುವುದಾಗಿ ಸಿಎಂ ಬಸವರಾಜ್ ಬೊಮ್ಮಾಯಿ ಭರವಸೆ
ಈ ‘ಸೀ ವೇವ್ ಬ್ರೇಕರ್’ ತಂತ್ರಜ್ಞಾನ ಭೂ ಸವೆತವನ್ನು ತಪ್ಪಿಸಲು, ಕಲ್ಲಿಗೆ ಬಂದು ಬಡಿಯುವ ಅಲೆಗಳ ತೀವ್ರತೆಯನ್ನು ಕಡಿಮೆ ಮಾಡುವ ಕಾರ್ಯ ನಿರ್ವಹಿಸುತ್ತದೆ. ಇದನ್ನು ಮೊದಲಿಗೆ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದಲ್ಲಿ ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಪ್ರಯೋಗಿಸಲಾಗುವುದು. ನಂತರ ತಂತ್ರಜ್ಞಾನ ಯಶಸ್ವಿಯಾದರೆ ಇಡೀ ಕರ್ನಾಟಕದ ಕರಾವಳಿಗೆ ವಿಸ್ತರಿಸಲಾಗುವುದು ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಉಳ್ಳಾಲ ಕಳೆದ ಕೆಲವು ವರ್ಷಗಳಿಂದ ವರ್ಷಕ್ಕೆ 1.3 ಮೀಟರ್ ನಷ್ಟು ಸವೆತವಾಗುತ್ತಿದೆ. ಹೀಗಾಗಿ ಮುಂದಿನ ಮೂರು ತಿಂಗಳಲ್ಲಿ ಶಾಶ್ವತ ಪರಿಹಾರ ನೀಡುವುದಾಗಿ ಸಿಎಂ ಬಸವರಾಜ್ ಬೊಮ್ಮಾಯಿ ಭರವಸೆ ನೀಡಿದ್ದಾರೆ.


ಇದನ್ನೂ ಓದಿ:  Kodagu: ಜಲಸ್ಫೋಟ, ಭೂಕುಸಿತಕ್ಕೆ ಕಾರಣವೇನು? ವಿಜ್ಞಾನಿಗಳಿಂದ ವೈಜ್ಞಾನಿಕ ಅಧ್ಯಯನ


ಕಡಲ ತೀರದಲ್ಲಿ ವಾಸವಾಗಿರುವ ಕುಟುಂಬಗಳ ಹಿತದೃಷ್ಠಿಯಿಂದ ಸರ್ಕಾರ, ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ತಕ್ಷಣವೇ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವುದು ಒಳಿತು.

Published by:Ashwini Prabhu
First published: