• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ದೇಶ-ವಿದೇಶಕ್ಕೆ ಅಕ್ಕಿ ರಫ್ತು ಮಾಡುವ ರಾಯಚೂರಿನಲ್ಲಿ ಅಪೌಷ್ಟಿಕತೆಯಿಂದ ಹೆಚ್ಚಾದ ಶಿಶುಮರಣ ಪ್ರಮಾಣ

ದೇಶ-ವಿದೇಶಕ್ಕೆ ಅಕ್ಕಿ ರಫ್ತು ಮಾಡುವ ರಾಯಚೂರಿನಲ್ಲಿ ಅಪೌಷ್ಟಿಕತೆಯಿಂದ ಹೆಚ್ಚಾದ ಶಿಶುಮರಣ ಪ್ರಮಾಣ

ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಗು

ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಗು

2019 ಎಪ್ರಿಲ್ ನಿಂದ ಡಿಸೆಂಬರ್ ಅಂತ್ಯದವರೆಗೆ ಜಿಲ್ಲೆಯಲ್ಲಿ 602 ಮಕ್ಕಳು ಮರಣ ಹೊಂದಿವೆ, ಅದರಲ್ಲಿ ಅತಿ ಕಡಿಮೆ ತೂಕದ ಮಕ್ಕಳು 121 ಹುಟ್ಟಿನ ಸಂದರ್ಭದಲ್ಲಿ ಉಸಿರಾಟ ತೊಂದರೆ ಮತ್ತು ಶಸ್ತ್ರ ಚಿಕಿತ್ಸೆಯ ಸಂದರ್ಭದಲ್ಲಿ 125 ಮಕ್ಕಳು ಸಾವನ್ನಪ್ಪಿವೆ.

  • Share this:

ರಾಯಚೂರು(ಜ.30) : ಜಿಲ್ಲೆಯಲ್ಲಿ ಅಪೌಷ್ಟಿಕತೆ ಎಂಬುವುದು ಸಾಮಾನ್ಯವಾಗಿದೆ, ಇಲ್ಲಿಯ ಪ್ರದೇಶ ಸಮೃದ್ಧವಾಗಿದೆ, ದೇಶ ವಿದೇಶಕ್ಕೆ ಅಕ್ಕಿ ರಫ್ತು ಮಾಡುತ್ತಿದೆ, ಇಲ್ಲಿ ಜೋಳ. ಮೆಣಸಿನಕಾಯಿ ಹತ್ತಿ ಬೆಳೆಯುತ್ತಿದೆ. ಎರಡು ನದಿಗಳ ಮಧ್ಯೆ ಇದೆ. ಆದರೂ, ಈ ಪ್ರದೇಶದಲ್ಲಿ ಮಕ್ಕಳಲ್ಲಿ ಅಪೌಷ್ಟಿಕತೆ ತಾಂಡವಾಡುತ್ತಿದೆ. ಇತ್ತೀಚೆಗೆ ಸ್ವಲ್ಪ ಕಡಿಮೆಯಾಗಿದ್ದರೂ , ಇನ್ನೂ ಸದೃಡವಾದ ಮಕ್ಕಳು ಇಲ್ಲ. ತುಂಗಭದ್ರಾ ಹಾಗೂ ಕೃಷ್ಣಾ ನದಿ ಮಧ್ಯೆ ಇರುವ ರಾಯಚೂರು ಜಿಲ್ಲೆಯು ದೇಶದಲ್ಲಿಯೇ ಅತ್ಯಂತ ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟೆಯನ್ನು ಕಟ್ಟಿಕೊಂಡಿದೆ.


ಈ ಜಿಲ್ಲೆಯನ್ನು ಕೇಂದ್ರದ ಸರಕಾರ ನೀತಿ ಆಯೋಗವು ಮಹತ್ವಾಕಾಂಕ್ಷಿ ಯೋಜನೆಗೆ ಒಳಪಡಿಸಿದ ಜಿಲ್ಲೆಯನ್ನಾಗಿ ಮಾಡಿದೆ, ಇದಕ್ಕೆ ಕಾರಣ ಇಲ್ಲಿ ಕಾಡುತ್ತಿರುವ ಅಪೌಷ್ಟಿಕತೆ, ಇಲ್ಲಿಯ ಮಕ್ಕಳಲ್ಲಿ ಅಪೌಷ್ಟಿಕತೆಯಿಂದಾಗಿಯೇ ರಾಯಚೂರು ಜಿಲ್ಲೆಯನ್ನು ಗುರುತಿಸುವ ಮಟ್ಟಕ್ಕೆ ಇದೆ. ರಾಜ್ಯದಲ್ಲಿ ಅಪೌಷ್ಟಿಕತೆ ಹೊಂದಿರುವ ಜಿಲ್ಲೆಗಳಲ್ಲಿ ಮೊದಲು ಸ್ಥಾನದಲ್ಲಿತ್ತು, ಆದರೆ, ಈಗ ಸ್ವಲ್ಪ ಸುಧಾರಿಸಿದ್ದು ಜಿಲ್ಲೆಯಲ್ಲಿ ಈಗ ಅಪೌಷ್ಟಿಕ ಮಕ್ಕಳ ಸಂಖ್ಯೆಯು ಶೇ 37 ರಷ್ಟಿದೆ, ಕಲ್ಯಾಣ ಕರ್ನಾಟಕ ಪ್ರದೇಶವನ್ನು ಹೊಲಿಸಿದರೆ ಈ ಜಿಲ್ಲೆಯಲ್ಲಿ ಅಪೌಷ್ಟಿಕ ಮಕ್ಕಳ ಸಂಖ್ಯೆ ಇಳಿಕೆಯಾಗಿದೆ.


ಜಿಲ್ಲೆಯಲ್ಲಿ ಒಟ್ಟು 2,18,7596 ಜನಸಂಖ್ಯೆ ಇದ್ದರೆ, 0-6 ವರ್ಷದ ಮಕ್ಕಳ ಸಂಖ್ಯೆ 2,17,196 ಇದೆ. ಇದರಲ್ಲಿ ಅಪೌಷ್ಟಿಕತೆ ಇಲ್ಲದ ಮಕ್ಕಳ ಸಂಖ್ಯೆ 1,55,796, ಶೇ. 77.02 ರಷ್ಟು ಮಕ್ಕಳಿದ್ದಾರೆ. ಇನ್ನೂ ಸಾಧಾರಣಾ ಅಪೌಷ್ಟಿಕ ಮಕ್ಕಳು 45,690 ಮಕ್ಕಳಿದ್ದು, ಶೇ. 22.59 ರಷ್ಟಿದ್ದಾರೆ. ಅತೀ ಕಡಿಮೆ ತೂಕದ ಮಕ್ಕಳು 794 ಇದ್ದು, ಶೇ. 0.39 ರಷ್ಟು ಮಕ್ಕಳಿದ್ದಾರೆ. ಈ ಮೊದಲು ಅತಿ ಕಡಿಮೆ ತೂಕದ ಮಕ್ಕಳ ಸಂಖ್ಯೆ ಶೇ. 0.5 ರಷ್ಟಿತ್ತು, ಈಗ ಕಡಿಮೆಯಾಗಿದೆ, ಆದರೂ, ಜಿಲ್ಲೆಯಲ್ಲಿ ಅಪೌಷ್ಟಿಕ ಮಕ್ಕಳ ಸಂಖ್ಯೆ ಅಧಿಕವಾಗಿದ್ದು ಅಪೌಷ್ಟಿಕ ಹೊಂದಿರುವ ಮಕ್ಕಳ ಸ್ಥಿತಿ ಚಿಂತಾಜನಕವಾಗಿದೆ.


ಇನ್ನೂ ಜಿಲ್ಲೆಯಲ್ಲಿ ಶಿಶು ಮರಣಗಳ ಸಂಖ್ಯೆಯೂ ಅಧಿಕವಾಗಿದೆ, 2019 ಎಪ್ರಿಲ್ ನಿಂದ ಡಿಸೆಂಬರ್ ಅಂತ್ಯದವರೆಗೆ ಜಿಲ್ಲೆಯಲ್ಲಿ 602 ಮಕ್ಕಳು ಮರಣ ಹೊಂದಿವೆ, ಅದರಲ್ಲಿ ಅತಿ ಕಡಿಮೆ ತೂಕದ ಮಕ್ಕಳು 121 ಹುಟ್ಟಿನ ಸಂದರ್ಭದಲ್ಲಿ ಉಸಿರಾಟ ತೊಂದರೆ ಮತ್ತು ಶಸ್ತ್ರ ಚಿಕಿತ್ಸೆಯ ಸಂದರ್ಭದಲ್ಲಿ 125 ಮಕ್ಕಳು ಸಾವನ್ನಪ್ಪಿವೆ. ರಕ್ತಹೀನತೆಯಿಂದ 47 ಮಕ್ಕಳು, ವಿವಿಧ ಕಾರಣಕ್ಕಾಗಿ 286 ಮಕ್ಕಳ ಸಾವನ್ನಪ್ಪಿದ್ದು, ಇನ್ನೂ ಬಾಣಂತಿಯರಲ್ಲಿ 36 ತಾಯಂದಿರು ಸಾವನ್ನಪ್ಪಿದ್ದಾರೆ.


ಶಿಶು ಮರಣ ಹಾಗು ತಾಯಂದಿರ ಸಾವನ್ನು ಕಡಿಮೆ ಮಾಡುವ ಹಿನ್ನೆಲೆಯಲ್ಲಿ ಸರಕಾರ ಹಲವಾರು ಯೋಜನೆಗಳನ್ನು ರೂಪಿಸಿದೆ. ಇದರಿಂದ ಹಂತ ಹಂತವಾಗಿ ಶಿಶು ಹಾಗೂ ತಾಯಂದಿರ ಮರಣ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.


ಇದನ್ನೂ ಓದಿ : ಆಂಧ್ರ ಶಾಲೆಗಳಲ್ಲಿ ಕನ್ನಡ ಉಳಿಸಿ: ಸಿಎಂ ಜಗನ್​​​​ಗೆ ಸಚಿವ ಸುರೇಶ್ ಕುಮಾರ್ ಪತ್ರ


ಅಪೌಷ್ಟಿಕತೆ ನಿವಾರಣೆಗಾಗಿ ಮಾತೃಪೂರ್ಣ ಯೋಜನೆ, ಅಂಗನವಾಡಿಗಳಲ್ಲಿ ತಾಯಿ ಹಾಗೂ ಮಕ್ಕಳಿಗೆ ಪೌಷ್ಠಿಕ ಆಹಾರ ನೀಡುವುದು. ಅವಶ್ಯವಿರುವ ಮಕ್ಕಳಿಗೆ ಚಿಕಿತ್ಸೆಗಾಗಿ ತಾಲೂಕಾ ಹಾಗೂ ಜಿಲ್ಲಾ ಮಟ್ಟದಲ್ಲಿ ಎನ್ಆರ್ ಸಿ ಕೇಂದ್ರಗಳನ್ನು ಆರಂಭಿಸಲಾಗಿದೆ. ಆದರೂ, ರಾಜ್ಯದ ಇತರ ಜಿಲ್ಲೆಗಳನ್ನು ಹೊಲಿಸಿದರೆ ರಾಯಚೂರು ಜಿಲ್ಲೆ ಸ್ವಲ್ಪ ಹೆಚ್ಚಿದೆ , ಈ ಜಿಲ್ಲೆಯಲ್ಲಿ ಈಗ ಮಹಾತ್ವಾಕಾಂಕ್ಷಿ ಯೋಜನೆಯಿಂದಾದರೂ ಸದೃಡ ಮಕ್ಕಳು ಬೆಳೆಯಲಿ ಎಂಬುವುದು ಜನತೆ ಆಶಯವಾಗಿದೆ.

First published: